Virat Kohli complets 15 years : ವಿರಾಟ್ ಕೊಹ್ಲಿ ಅಂತರಾಷ್ಟ್ರೀಯ ಕರಿಯರ್’ಗೆ 15 ವರ್ಷ, ಕ್ರಿಕೆಟ್ ಪಿಚ್’ನಲ್ಲಿ 500 ಕಿ.ಮೀ ಓಡಿದ್ದಾರೆ ರನ್ ಮಷಿನ್

ಬೆಂಗಳೂರು: Virat Kohli complets 15 years : ಆಧುನಿಕ ಕ್ರಿಕೆಟ್’ನ ದಿಗ್ಗಜ ಬ್ಯಾಟ್ಸ್’ಮನ್ ವಿರಾಟ್ ಕೊಹ್ಲಿ (Virat Kohli) ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ 15 ವರ್ಷಗಳನ್ನು ಪೂರ್ತಿಗೊಳಿಸಿದ್ದಾರೆ. 15 ವರ್ಷಗಳಲ್ಲಿ ವಿರಾಟ್ ಕೊಹ್ಲಿ ಬೌಂಡರಿ ಹೊರತಾಗಿ ಕೇವಲ ಓಟದಿಂದಲೇ ಗಳಿಸಿರುವ ರನ್’ಗಳಿಗಾಗಿ ವಿಕೆಟ್ ಮಧ್ಯೆ ಸುಮಾರು 277 ಕಿ.ಮೀ ಓಡಿದ್ದಾರೆ. ಇದೇ ವೇಳೆ ಕ್ರೀಸ್’ನಲ್ಲಿದ್ದಾಗ ಜೊತೆಗಾರರು ಗಳಿಸಿದ ರನ್’ಗಳಿಗಾಗಿ 233 ಕಿ.ಮೀ ಓಡಿದ್ದಾರೆ. ಒಟ್ಟಾರೆ ತಮ್ಮ 15 ವರ್ಷಗಳ ಅಂತರಾಷ್ಟ್ರೀಯ ಕ್ರಿಕೆಟ್ ಬದುಕಿನಲ್ಲಿ ರನ್ ಮಷಿನ್ ವಿರಾಟ್ ಕೊಹ್ಲಿ ವಿಕೆಟ್ ಮಧ್ಯೆ ಒಟ್ಟು 510 ಕಿ.ಮೀ ದೂರ ಕ್ರಮಿಸಿದ್ದಾರೆ.

ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ಕೊಹ್ಲಿ (Virat Kohli) ಸಾಧನೆ :

ವಿರಾಟ್ ಕೊಹ್ಲಿ ಗಳಿಸಿರುವ ರನ್: 13,748
ವಿಕೆಟ್ ನಡುವಿನ ಓಟ: 276.57 ಕಿ.ಮೀ.

ಕೊಹ್ಲಿ ಜೊತೆಗಾರರು ಗಳಿಸಿರುವ ರನ್: 11,606
ವಿಕೆಟ್ ನಡುವಿನ ಓಟ: 233.48 ಕಿ.ಮೀ

ಒಟ್ಟು ರನ್: 25,354
ವಿಕೆಟ್ ನಡುವಿನ ಓಟ: 510.04 ಕಿ.ಮೀ

2008ರ ಆಗಸ್ಟ್ 18ರಂದು ಶ್ರೀಲಂಕಾದ ದಾಂಬುಲದಲ್ಲಿ ಲಂಕಾ ವಿರುದ್ಧ ನಡೆದ ಏಕದಿನ ಪಂದ್ಯದ ಮೂಲಕ ವಿರಾಟ್ ಕೊಹ್ಲಿ ಅಂತರಾಷ್ಟ್ರೀಯ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ್ದರು. ತಮ್ಮ ಚೊಚ್ಚಲ ಅಂತರಾಷ್ಟ್ರೀಯ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದು ಕೇವಲ 12 ರನ್ ಗಳಿಸಿ ಔಟಾಗಿದ್ದ ಕೊಹ್ಲಿ, ನಂತರದ 15 ವರ್ಷಗಳಲ್ಲಿ 275 ಏಕದಿನ ಪಂದ್ಯಗಳನ್ನಾಡಿದ್ದು 46 ಶತಕಗಳನ್ನು ಬಾರಿಸಿದ್ದಾರೆ. ಇದುವರೆಗೆ 111 ಟೆಸ್ಟ್ ಪಂದ್ಯಗಳನ್ನಾಡಿರುವ ಕಿಂಗ್ ಕೊಹ್ಲಿ 29 ಶತಕ ಸಿಡಿಸಿದ್ದಾರೆ.

115 ಟಿ20 ಅಂತರಾಷ್ಟ್ರೀಯ ಪಂದ್ಯಗಳನ್ನಾಡಿರುವ ಕೊಹ್ಲಿ ಒಂದು ಶತಕ ಹಾಗೂ 37 ಅರ್ಧಶತಗಳನ್ನು ಬಾರಿಸಿದ್ದಾರೆ. ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ 76 ಶತಕಗಳನ್ನು ಸಿಡಿಸಿರುವ 34 ವರ್ಷದ ವಿರಾಟ್ ಕೊಹ್ಲಿ, ಮೂರೂ ಫಾರ್ಮ್ಯಾಟ್’ಗಳಲ್ಲಿ ಒಟ್ಟು 25,582 ರನ್ ಕಲೆ ಹಾಕಿದ್ದಾರೆ. 15 ವರ್ಷಗಳ ಅಂತರಾಷ್ಟ್ರೀಯ ವೃತ್ತಿಜೀವನದಲ್ಲಿ ವಿರಾಟ್ ಕೊಹ್ಲಿ ಒಟ್ಟು 82 ಮೈದಾನಗಳಲ್ಲಿ ಆಡಿದ್ದಾರೆ. ಈ ಪೈಕಿ 46 ಮೈದಾನಗಳಲ್ಲಿ ಶತಕ ಸಿಡಿಸಿದ್ದಾರೆ. ಆಸ್ಟ್ರೇಲಿಯಾದ ಅಡಿಲೇಡ್ ಓವಲ್ ಮೈದಾನ ವಿರಾಟ್ ಕೊಹ್ಲಿ ಅವರ ಫೇವರಿಟ್ ಕ್ರೀಡಾಂಗಣವಾಗಿದ್ದು, ಅಲ್ಲಿ 5 ಶತಕಗಳನ್ನು ಬಾರಿಸಿದ್ದಾರೆ. ಇದನ್ನೂ ಓದಿ : IND vs IRE Jasprit Bumrah : 11 ತಿಂಗಳ ನಂತರ ಬೌಲಿಂಗ್‌ ಮಾಡಿದ ಜಸ್ಪ್ರೀತ್ ಬುಮ್ರಾ

Virat Kohli complets 15 years in International cricket

Comments are closed.