Bangalore Bulls vs Telugu Titans 2022 : ಹ್ಯಾಟ್ರಿಕ್ ಜಯದೊಂದಿಗೆ ಅರ್ಧಶತಕ ಬಾರಿಸಿದ ಬುಲ್ಸ್, ಅಗ್ರಸ್ಥಾನ ಮತ್ತೆ ಕೈವಶ

ಪುಣೆ : ಅಮೋಘ ಫಾರ್ಮ್’ನಲ್ಲಿರುವ (Bangalore Bulls vs Telugu Titans 2022) ಬೆಂಗಳೂರು ಬುಲ್ಸ್ ತಂಡ ಪ್ರೊ ಕಬಡ್ಡಿ ಲೀಗ್ 9ನೇ (Pro Kabaddi League) ಆವೃತ್ತಿಯಲ್ಲಿ ಮತ್ತೊಂದು ಹ್ಯಾಟ್ರಿಕ್ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಮತ್ತೆ ಕೈವಶ ಮಾಡಿಕೊಂಡಿದೆ.

ಪುಣೆಯ ಬಾಳೇವಾಡಿಯಲ್ಲಿರುವ ಛತ್ರಪತಿ ಶಿವಾಜಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್’ನಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಅಮೋಘ ಆಟವಾಡಿದ ಬುಲ್ಸ್ ಪಡೆ, ತೆಲುಗು ಟೈಟನ್ಸ್ ವಿರುದ್ಧ 49-38ರ ಅಂತರದಲ್ಲಿ ಭರ್ಜರಿ ಗೆಲುವು ದಾಖಲಿಸಿತು. ಇದು ಲೀಗ್’ನಲ್ಲಿ ಕೆಂಪುಗೂಳಿಗಳು ದಾಖಲಿಸಿದ 9ನೇ ಗೆಲುವು. ಇದರೊಂದಿಗೆ ಪ್ರಸಕ್ತ ಪ್ರೊ ಕಬಡ್ಡಿ ಲೀಗ್’ನಲ್ಲಿ 50 ಅಂಕಗಳ ಗಡಿ ದಾಟಿದ ಮೊದಲ ತಂಡ ಎನ್ನುವ ಹಿರಿಮೆಗೆ ಪಾತ್ರವಾಯಿತು. ಆಡಿರುವ ಒಟ್ಟು 14 ಪಂದ್ಯಗಳಲ್ಲಿ 9 ಗೆಲುವು 4 ಸೋಲು ಹಾಗೂ ಒಂದು ಟೈನೊಂದಿಗೆ ಒಟ್ಟು 51 ಅಂಕ ಕಲೆ ಹಾಕಿರುವ ಬೆಂಗಳೂರು ಬುಲ್ಸ್, ಪುಣೇರಿ ಪಲ್ಟನ್ ತಂಡವನ್ನು ಹಿಂದಕ್ಕೆ ತಳ್ಳಿ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. 14 ಪಂದ್ಯಗಳಿಂದ 8 ಗೆಲುವುಗಳ ಸಹಿತ 49 ಅಂಕ ಗಳಿಸಿರುವ ಪಲ್ಟನ್ ಪಡೆ 2ನೇ ಸ್ಥಾನದಲ್ಲಿದೆ.

ಕಳೆದೆರಡು ಪಂದ್ಯಗಳಲ್ಲಿ ಬೆಂಗಳೂರು ಬುಲ್ಸ್ ತಮಿಳ್ ತಲೈವಾಸ್ (40-34) ಮತ್ತು ಹರ್ಯಾಣ ಸ್ಟೀಲರ್ಸ್ (36-33) ವಿರುದ್ಧ ಗೆಲುವು ಸಾಧಿಸಿತ್ತು. ಶುಕ್ರವಾರ ನಡೆಯುವ ತನ್ನ 15ನೇ ಲೀಗ್ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತಂಡ, ಗುಜರಾತ್ ಜೈಂಟ್ಸ್ ತಂಡವನ್ನು ಎದುರಿಸಲಿದೆ. ಮಂಗಳವಾರ ನಡೆದ ಮತ್ತೊಂದು ಪಂದ್ಯದಲ್ಲಿ ಯು ಮುಂಬಾ ತಂಡವನ್ನು 10 ಅಂಕಗಳಿಂದ (32-22) ಬಗ್ಗು ಬಡಿದ ಜೈಪುರ ಪಿಂಕ್ ಪ್ಯಾಂಥರ್ಸ್ ಬಳಗ ಲೀಗ್’ನಲ್ಲಿ 9ನೇ ಗೆಲುವು ಪಡೆಯಿತು. ಆಡಿರುವ 14 ಪಂದ್ಯಗಳಲ್ಲಿ 9 ಗೆಲುವು ದಾಖಲಿಸಿರುವ ಜೈಪುರ ಪಡೆ, 5 ಸೋಲು ಕಂಡಿದ್ದು 48 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ.

ಪ್ರೊ ಕಬಡ್ಡಿ ಲೀಗ್-9: ಬುಧವಾರದ ಪಂದ್ಯಗಳು

  1. ಪಾಟ್ನಾ ಪೈರೇಟ್ಸ್ Vs ತಮಿಳ್ ತಲೈವಾಸ್
  2. ದಬಾಂಗ್ ಡೆಲ್ಲಿ ಕೆ.ಸಿ Vs ಯು.ಪಿ ಯೋಧಾ

ಇದನ್ನೂ ಓದಿ : Pro Kabaddi League: ದಕ್ಷಿಣ ಭಾರತ ಡರ್ಬಿಯಲ್ಲಿ ತಲೈವಾಸ್ ವಿರುದ್ಧ ಗೆದ್ದರೆ ಬೆಂಗಳೂರು ಬುಲ್ಸ್ ಟೇಬಲ್ ಟಾಪರ್

ಇದನ್ನೂ ಓದಿ : Pro Kabaddi League : ಬೆಂಗಾಲ್ ವಾರಿಯರ್ಸ್ ವಿರುದ್ಧ ಗೆದ್ದ ಪುಣೇರಿ ಪಲ್ಟನ್ ಮತ್ತೆ ಪಾಯಿಂಟ್ ಪಟ್ಟಿಯಲ್ಲಿ ನಂ.1

ಇದನ್ನೂ ಓದಿ : Pro Kabaddi League : ಬುಲ್ಸ್‌ಗೆ ಸ್ಟೀಲರ್ಸ್ ಸವಾಲ್, ಅಗ್ರಸ್ಥಾನದ ಮೇಲೆ ಕೆಂಪುಗೂಳಿಗಳ ಕಣ್ಣು

ಸ್ಥಳ: ಛತ್ರಪತಿ ಶಿವಾಜಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್, ಬಾಳೇವಾಡಿ; ಪುಣೆ (ಮಹಾರಾಷ್ಟ್ರ)
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್
ಲೈವ್ ಸ್ಟ್ರೀಮಿಂಗ್: ಡಿಸ್ನಿ+ಹಾಟ್ ಸ್ಟಾರ್

Bangalore Bulls vs Telugu Titans 2022: Bulls hit a half-century with a hat-trick win, top spot again

Comments are closed.