ಬೆಂಗಳೂರು: (BCCI mahendra Dhoni) ಮಹೇಂದ್ರ ಸಿಂಗ್ ಧೋನಿಗೆ ದೇಶಕ್ಕೆ ಎರಡು ವಿಶ್ವಕಪ್’ಗಳನ್ನು ಗೆದ್ದು ಕೊಟ್ಟ ದಿಗ್ಗಜ ನಾಯಕ. ಭಾರತೀಯ ಕ್ರಿಕೆಟ್’ನ ಸಾರ್ವಕಾಲಿಕ ಶ್ರೇಷ್ಠ ನಾಯಕರ ಸಾಲಿನಲ್ಲಿ ಧೋನಿಯವರೇ ಅಗ್ರಗಣ್ಯ. ದೇಶಕ್ಕೆ 2 ವಿಶ್ವಕಪ್, ಐಸಿಸಿ ಚಾಂಪಿಯನ್ಸ್ ಟ್ರೋಫಿ, ಏಷ್ಯಾ ಕಪ್’ಗಳನ್ನು ಗೆದ್ದುಕೊಟ್ಟಿರುವ ಎಂ.ಎಸ್ ಧೋನಿಯವರಿಗೆ (MS Dhoni) ಬಿಸಿಸಿಐ ಶಾಕ್ ಕೊಟ್ಟಿದೆ. ಅಷ್ಟಕ್ಕೂ ಆಗಿದ್ದೇನಂದ್ರೆ, ಐಪಿಎಲ್’ನ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಕ್ರಿಕೆಟ್ ಸೌತ್ ಆಫ್ರಿಕಾ ಟಿ20 ಲೀಗ್’ನಲ್ಲಿ (SA T20 League) ಜೋಹಾನ್ಸ್’ಬರ್ಗ್ ತಂಡದ ಫ್ರಾಂಚೈಸಿಯನ್ನು ತನ್ನದಾಗಿಸಿಕೊಂಡಿದೆ.
ತಂಡಕ್ಕೆ ನಾಯಕ ಮತ್ತು ಕೋಚ್ ಕೂಡ ಆಯ್ಕೆಯಾಗಿದ್ದು, ಈ ಹಿಂದೆ ಚೆನ್ನೈ ಸೂಪರ್ ಕಿಂಗ್ಸ್ ಪರ 11 ವರ್ಷಗಳ ಕಾಲ ಆಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕ್ಯಾಪ್ಟನ್ ಫಾಫ್ ಡು’ಪ್ಲೆಸಿಸ್ (Faf du Plessis), CSA ಟಿ20 ಲೀಗ್’ನಲ್ಲಿ ಜೋಹಾನ್ಸ್’ಬರ್ಗ್ ಸೂಪರ್ ಕಿಂಗ್ಸ್ ತಂಡವನ್ನು (Johannesburg Super Kings) ಮುನ್ನಡೆಸಲಿದ್ದಾರೆ. CSK ತಂಡದ ಕೋಚ್ ಸ್ಟೀಫನ್ ಫ್ಲೆಮಿಂಗ್ (Stephen Fleming) ಜೋಹಾನ್ಸ್’ಬರ್ಗ್ ತಂಡಕ್ಕೂ ಕೋಚ್ ಆಗಲಿದ್ದಾರೆ.
CSA ಟಿ20 ಲೀಗ್’ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂ.ಎಸ್ ಧೋನಿಯವರನ್ನು ಜೊಹಾನ್ಸ್’ಬರ್ಗ್ ತಂಡಕ್ಕೆ ಮೆಂಟರ್ ಆಗಿ ಬಳಸಿಕೊಳ್ಳಲು CSK ಫ್ರಾಂಚೈಸಿ ಮುಂದಾಗಿತ್ತು. ಇದಕ್ಕೆ ಬಿಸಿಸಿಐ (BCCI) ಅನುಮತಿಯನ್ನೂ ಕೇಳಿತ್ತು. ಆದರೆ ಬಿಸಿಸಿಐ ಅನುಮತಿ ನಿರಾಕರಿಸಿದ್ದು, ಅದಕ್ಕೆ ತನ್ನದೇ ಕಾರಣಗಳನ್ನೂ ನೀಡಿದೆ. “ಭಾರತದ ಯಾವೊಬ್ಬ ಆಟಗಾರನೂ ಕೂಡ ಐಪಿಎಲ್, ದೇಶೀಯ ಕ್ರಿಕೆಟ್ ಸಹತಿ ಕ್ರಿಕೆಟ್’ನ ಎಲ್ಲಾ ಪ್ರಕಾರಗಳಿಂದ ನಿವೃತ್ತಿಯಾಗದ ಹೊರತು ಜಗತ್ತಿನ ಯಾವುದೇ ಲೀಗ್’ಗಳಲ್ಲಿ ಭಾಗವಹಿಸುವಂತಿಲ್ಲ. ಯಾವುದೇ ಆಟಗಾರ ಇತರ ಟಿ20 ಲೀಗ್’ಗಳಲ್ಲಿ ಭಾಗವಹಿಸಲು ಇಚ್ಛಿಸಿದರೆ ಆತ ಬಿಸಿಸಿಐ ಜೊತೆಗೆ ಎಲ್ಲಾ ರೀತಿಯ ಸಂಬಂಧಗಳನ್ನು ಕಡಿದುಕೊಳ್ಳಬೇಕು” ಎಂದು ಬಿಸಿಸಿಐ ಪದಾಧಿಕಾರಿಯೊಬ್ಬರು ಹೇಳಿದ್ದಾರೆ.
ಬಿಸಿಸಿಐನ ಈ ಸ್ಪಷ್ಟ ನಿರ್ದೇಶನದ ಹಿನ್ನೆಲೆಯಲ್ಲಿ ಕ್ರಿಕೆಟ್ ಸೌತ್ ಆಫ್ರಿಕಾ ಲೀಗ್’ನಲ್ಲಿ ಜೋಹಾನ್ಸ್’ಬರ್ಗ್ ಸೂಪರ್ ಕಿಂಗ್ಸ್ ತಂಡಕ್ಕೆ ಎಂ.ಎಸ್ ಧೋನಿ ಅವರನ್ನು ಮೆಂಟರ್ ಆಗಿ ನೇಮಕ ಮಾಡುವ ನಿರ್ಧಾರವನ್ನು CSK ಫ್ರಾಂಚೈಸಿ ಕೈಬಿಟ್ಟಿದೆ. ದಿಗ್ಗಜ ನಾಯಕರಾಗಿರುವ ಧೋನಿ 4 ಬಾರಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಐಪಿಎಲ್’ನಲ್ಲಿ ಚಾಂಪಿಯನ್ ಪಟ್ಟಕ್ಕೇರಿಸಿದ್ದಾರೆ. ಅಲ್ಲದೆ ಎರಡು ಬಾರಿ ಚಾಂಪಿಯನ್ಸ್ ಲೀಗ್ ಟ್ರೋಫಿಗಳನ್ನೂ ಗೆದ್ದು ಕೊಟ್ಟಿದ್ದಾರೆ. ಐಪಿಎಲ್ ಮಾದರಿಯಲ್ಲೇ ಕ್ರಿಕೆಟ್ ಸೌತ್ ಆಫ್ರಿಕಾ ಟಿ20 ಲೀಗ್ ನಡೆಸಲು ಮುಂದಾಗಿದ್ದು, ಆರು ತಂಡಗಳನ್ನು ಐಪಿಎಲ್ ಫ್ರಾಂಚೈಸಿಗಳೇ ಖರೀದಿಸಿವೆ.
ಇದನ್ನೂ ಓದಿ : Rishabh Pant brand ambassador : ದೆಹಲಿಯ ರಿಷಭ್ ಪಂತ್ ಉತ್ತರಾಖಂಡ್ ಸರ್ಕಾರದ ಬ್ರಾಂಡ್ ಅಂಬಾಸಿಡರ್
ಇದನ್ನೂ ಓದಿ : India Tour of Zimbabwe : ಜಿಂಬಾಬ್ವೆಯಲ್ಲಿ ಅಭ್ಯಾಸ ಆರಂಭಿಸಿದ ಕೆ.ಎಲ್ ರಾಹುಲ್ ಬಳಗ
BCCI shocked mahendra dhoni, the captain who won 2 World Cups for the country