ಭಾನುವಾರ, ಏಪ್ರಿಲ್ 27, 2025
HomeSportsCricketಹಾರ್ದಿಕ್‌ ಪಾಂಡ್ಯಗೆ ಬಿಸಿಸಿಐ ವಾರ್ನಿಂಗ್‌ : ದೇಶೀಯ ಕ್ರಿಕೆಟ್‌ ಆಡದಿದ್ರೆ ಒಪ್ಪಂದವೇ ರದ್ದು !

ಹಾರ್ದಿಕ್‌ ಪಾಂಡ್ಯಗೆ ಬಿಸಿಸಿಐ ವಾರ್ನಿಂಗ್‌ : ದೇಶೀಯ ಕ್ರಿಕೆಟ್‌ ಆಡದಿದ್ರೆ ಒಪ್ಪಂದವೇ ರದ್ದು !

- Advertisement -

BCCI warning to Hardik Pandya : ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ ಈಗಾಗಲೇ ಆಟಗಾರರ ಒಪ್ಪಂದವನ್ನು ನವೀಕರಿಸಿದೆ. ಶ್ರೇಯಸ್‌ ಅಯ್ಯರ್‌ ಹಾಗೂ ಇಶಾನ್‌ ಕಿಶನ್‌ ಅವರಿಗೆ ಕೋಕ್‌ ಕೊಟ್ಟಿದ್ದು, ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಹಾರ್ದಿಕ್‌ ಪಾಂಡ್ಯಗೆ  (Hardik Pandya) ಬಿಸಿಸಿಐ ಇದೀಗ ವಾರ್ನಿಂಗ್‌ ಕೊಟ್ಟಿದೆ.

BCCI warning to Hardik Pandya If he does not play domestic cricket, the contract will be cancelled
Image Credit to Original Source

ಬಿಸಿಸಿಐ ಪ್ರಕಟಿಸಿರುವ ಗ್ರೇಡ್‌ ಎ ಪಟ್ಟಿಯಲ್ಲಿ ಹಾರ್ದಿಕ್‌ ಪಾಂಡ್ಯ ಅವರಿಗೆ ಸ್ಥಾನ ಕಲ್ಪಿಸಲಾಗಿದೆ. ಈ ಒಪ್ಪಂದದಲ್ಲಿಯೇ ಹಾರ್ದಿಕ್‌ ಪಾಂಡ್ಯ ಮುಂದುವರಿಯಬೇಕಾದ್ರೆ ಕಡ್ಡಾಯವಾಗಿ ದೇಶೀಯ ಟೂರ್ನಿಯಲ್ಲಿ ಆಡಬೇಕಾಗಿದೆ. ಈಗಾಗಲೇ ಬಿಸಿಸಿಐ ಹಾರ್ದಿಕ್‌ ಪಾಂಡ್ಯ ಅವರಿಗೆ ದೇಶೀಯ ಟೂರ್ನಿಯಲ್ಲಿ ಆಡುವಂತೆ ಕೇಳಿಕೊಂಡಿದೆ. ಒಂದೊಮ್ಮೆ ರಣಜಿ ಟ್ರೋಫಿ ಸೇರಿದಂತೆ ದೇಶೀಯ ಟೂರ್ನಿಯಲ್ಲಿ ಆಡದೇ ಇದ್ರೆ ಒಪ್ಪಂದವನ್ನೇ ರದ್ದುಪಡಿಸುವ ಎಚ್ಚರಿಕೆ ನೀಡಿದೆ.

ಟೀಂ ಇಂಡಿಯಾದ ಖ್ಯಾತ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಅವರು 2024-25 ನೇ ಸಾಲಿಗೆ ಗ್ರೇಡ್ ಎ ನಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿಯ ಪ್ರಕಾರ, ರೆಡ್‌ ಬಾಲ್‌ ಕ್ರಿಕೆಟ್‌ನಲ್ಲಿ ಹಾರ್ದಿಕ್‌ ಪಾಂಡ್ಯ ಬೌಲಿಂಗ್‌ ಮಾಡಲು ಸಾಧ್ಯವಿಲ್ಲ. ಈ ಕುರಿತು ಬಿಸಿಸಿಐ ವೈದ್ಯಕೀಯ ತಂಡವೇ ತಿಳಿಸಿದೆ. ಇದೇ ಕಾರಣದಿಂದಲೇ ಅವರನ್ನು ದೇಶೀಯ ಟೂರ್ನಿಯಿಂದ ಹೊರಗಿಡಲಾಗಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ : ಐಪಿಎಲ್ 2024ರಲ್ಲಿ ಆಡ್ತಾರಾ ವಿರಾಟ್ ಕೊಹ್ಲಿ ? ಹೀಗೇ ಹೇಳಿದ್ಯಾಕೆ ಮಾಜಿ ಕ್ರಿಕೆಟಿಗ ಸುನಿಲ್‌ ಗವಾಸ್ಕರ್‌

ಅಂತರಾಷ್ಟ್ರೀಯ ಪಂದ್ಯಗಳನ್ನು ಆಡದೇ ಇರುವ ಸಂದರ್ಭದಲ್ಲಿ ಆಟಗಾರರು ದೇಶೀಯ ಟೂರ್ನಿಯಲ್ಲಿ ಆಡಬೇಕು ಅನ್ನೋದು ಬಿಸಿಸಿಐ ನಿಯಮ. ಬಿಸಿಸಿಐ ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ, ಹಾರ್ದಿಕ್‌ ಪಾಂಡ್ಯ ಅವರ ಜೊತೆಗೆ ಈಗಾಗಲೇ ಚರ್ಚೆ ನಡೆಸಲಾಇದೆ. ಅವರು ಲಭ್ಯವಿರುವ ದೇಶೀಯ ವೈಟ್‌ ಬಾಲ್‌ ಪಂದ್ಯಾವಳಿಯಲ್ಲಿ ಆಡುವಂತೆ ತಿಳಿಸಲಾಗಿದೆ ಎಂದಿದ್ದಾರೆ.

ಕಳೆದ ವಿಶ್ವಕಪ್‌ ಪಂದ್ಯಾವಳಿಯ ವೇಳೆಯಲ್ಲಿ ಹಾರ್ದಿಕ್‌ ಪಾಂಡ್ಯ ಗಾಯಗೊಂಡಿದ್ದರು. ಇದೇ ಕಾರಣದಿಂದಲೇ ಅವರು ವಿಶ್ವಕಪ್‌ ಟೂರ್ನಿಯನ್ನು ಅರ್ಧದಲ್ಲಿಯೇ ತೊರೆದಿದ್ದರು. ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿಯ ತರಬೇತಿಯನ್ನು ಪಡೆದುಕೊಳ್ಳುತ್ತಿರುವ ಹಾರ್ದಿಕ್‌ ಪಾಂಡ್ಯ ಈಗಾಗಲೇ ಎನ್‌ಸಿಎನಲ್ಲಿ ಒಂದೆರಡು ಪಂದ್ಯಗಳಲ್ಲಿಯೂ ಆಡಿದ್ದಾರೆ.

ಇದನ್ನೂ ಓದಿ : IPL 2024 KL Rahul : ಕೆಎಲ್‌ ರಾಹುಲ್‌ ಗಂಭೀರ, ಲಕ್ನೋ ಸೂಪರ್‌ಜೈಂಟ್ಸ್‌ ನಾಯಕ ಐಪಿಎಲ್‌ನಿಂದ ಔಟ್‌ ?

ಬಿಸಿಸಿಐ ವೈದ್ಯಕೀಯ ತಂಡ ಹಾರ್ದಿಕ್‌ ಪಾಂಡ್ಯ ಅವರು ಕೆಂಪು ಬಾಲ್‌ ಪಂದ್ಯಾವಳಿಯಲ್ಲಿ ಬೌಲಿಂಗ್‌ ಮಾಡುವ ಸ್ಥಿತಿಯಲ್ಲಿ ಇಲ್ಲ ಎಂದಿದೆ. ಆದರೂ ಅಂತರಾಷ್ಟ್ರೀಯ ಪಂದ್ಯಾವಳಿಯನ್ನು ಆಡದೇ ಇರುವ ಆಟಗಾರರು ದೇಶೀಯ ಟೂರ್ನಿಯಲ್ಲಿ ಭಾಗವಹಿಸದೇ ಇದ್ದರೆ ಬಿಸಿಸಿಐ ಒಪ್ಪಂದವನ್ನು ಕಳೆದುಕೊಳ್ಳಬೇಕಾಗುತ್ತದೆ.

BCCI warning to Hardik Pandya If he does not play domestic cricket, the contract will be cancelled
Image Credit to Original Source

ಹಾರ್ದಿಕ್‌ ಪಾಂಡ್ಯ ಅವರು ಡಿವೈ ಪಾಟೀಲ್ ಟಿ20 ಪಂದ್ಯಾವಳಿಯಲ್ಲಿ ಅವರು ಭಾಗವಹಿಸುವ ನಿರೀಕ್ಷೆಯಲ್ಲಿದೆ. ಜೊತೆಗೆ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಮತ್ತು ವಿಜಯ್ ಹಜಾರೆ ಟ್ರೋಫಿಯಲ್ಲಿ ಪಾಲ್ಗೊಳ್ಳಬಹುದು. ಈ ಟೂರ್ನಿಯು ಅಕ್ಟೋಬರ್- ಡಿಸೆಂಬರ್‌ನಲ್ಲಿ ಮಾತ್ರ ನಡೆಯಲಿದೆ. ಈ ಅವಧಿಯಲ್ಲಿ ಭಾರತ ಕ್ರಿಕೆಟ್‌ ತಂಡಕ್ಕೆ ಯಾವುದೇ ಅಂತರಾಷ್ಟ್ರೀಯ ಪಂದ್ಯಾವಳಿಗಳಿಲ್ಲ.

ಇದನ್ನೂ ಓದಿ : IPL 2024 : ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಕ್ಕೆ ರುತುರಾಜ್‌ ಗಾಯಕ್ವಾಡ್‌ ನಾಯಕ

ಹಾರ್ದಿಕ್‌ ಪಾಂಡ್ಯ ಸದ್ಯ ಟೀಂ ಇಂಡಿಯಾದ ಏಕದಿನ ಹಾಗೂ ಟಿ20I ತಂಡಗಳ ಉಪನಾಯಕರಾಗಿದ್ದಾರೆ. ಟಿ20 ವಿಶ್ವಕಪ್‌ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಹಾರ್ದಿಕ್‌ ಪಾಂಡ್ಯ ಮೈದಾನದಲ್ಲಿ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಬೇಕಾಗಿದೆ. ಇನ್ನು ಸದ್ಯ ಟೀಂ ಇಂಡಿಯಾಕ್ಕೆ ರೋಹಿತ್‌ ಶರ್ಮಾ ನಾಯಕರಾಗಿದ್ದಾರೆ. ರೋಹಿತ್‌ ಶರ್ಮಾ ನಂತರದಲ್ಲಿ ಹಾರ್ದಿಕ್‌ ಪಾಂಡ್ಯ ಟೀಂ ಇಂಡಿಯಾದ ನಾಯಕ ಎನ್ನಲಾಗುತ್ತಿದೆ. ಆದರೆ ಇದನ್ನು ಪಾಂಡ್ಯ ಸಾಬೀತು ಪಡಿಸಬೇಕಾಗಿದೆ.

BCCI warning to Hardik Pandya If he does not play domestic cricket, the contract will be cancelled

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular