IPL 2024 : ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಕ್ಕೆ ರುತುರಾಜ್‌ ಗಾಯಕ್ವಾಡ್‌ ನಾಯಕ

Indian Premier League CSK Team Captain Ruturaj Gaikwad : ಐಪಿಎಲ್ 2014 ರ ಆವೃತ್ತಿಯ ಮಧ್ಯದಲ್ಲಿ ಎಂಎಸ್ ಧೋನಿ ನಾಯಕತ್ವದಲ್ಲಿಯೇ ಕಣಕ್ಕೆ ಇಳಿಯಲಿದೆ. ಆದರೆ ರುತುರಾಜ್‌ ಗಾಯಕ್ವಾಡ್‌ ಸಿಎಸ್‌ಕೆ ತಂಡ ನಾಯಕರಾಗ್ತಾರೆ ಅನ್ನೋ ಕುರಿತು ಸುದ್ದಿಗಳು ಹರಿದಾಡುತ್ತಿವೆ.

Indian Premier League CSK Team Captain Ruturaj Gaikwad : ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಈ ಬಾರಿಯೂ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಗೆಲ್ಲುವ ಕನಸು ಕಾಣುತ್ತಿದೆ. ಐಪಿಎಲ್ 2024 (IPL 2024) ರ ಆವೃತ್ತಿಯ ಮಧ್ಯದಲ್ಲಿ ಎಂಎಸ್ ಧೋನಿ (MS Dhoni) ನಾಯಕತ್ವದಲ್ಲಿಯೇ ಕಣಕ್ಕೆ ಇಳಿಯಲಿದೆ. ಆದರೆ ರುತುರಾಜ್‌ ಗಾಯಕ್ವಾಡ್‌ (Ruturaj Gaikwad) ಸಿಎಸ್‌ಕೆ ತಂಡ (CSK) ನಾಯಕರಾಗ್ತಾರೆ ಅನ್ನೋ ಕುರಿತು ಸುದ್ದಿಗಳು ಹರಿದಾಡುತ್ತಿವೆ.

IPL 2024 Big Update Ruturaj Gaikwad CSK Captain For IPL 2024
Image Credit to Original Source

ಮಹೇಂದ್ರ ಸಿಂಗ್‌ ಧೋನಿ ಭಾರತ ಕ್ರಿಕೆಟ್‌ ಶ್ರೇಷ್ಟ ನಾಯಕ. ಅಂತರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರೂ ಕೂಡ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಕಳೆದ ಬಾರಿ ಧೋನಿ ನೇತೃತ್ವದಲ್ಲಿಯೇ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಪ್ರಶಸ್ತಿಯನ್ನು ಜಯಿಸಿತ್ತು.

ಈ ಬಾರಿಯೂ ಐಪಿಎಲ್‌ ಪ್ರಶಸ್ತಿ ಗೆಲ್ಲುವ ನಿಟ್ಟಿನಲ್ಲಿ ಮಹೇಂದ್ರ ಸಿಂಗ್‌ ಧೋನಿ ನೇತೃತ್ವದ ತಂಡ ಸಜ್ಜಾಗುತ್ತಿದೆ. ಮಹೇಂದ್ರ ಸಿಂಗ್‌ ಧೋನಿ ಈ ಬಾರಿಯ ಐಪಿಎಲ್‌ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ನಾಯಕರಾಗಿ ಇರುತ್ತಾರೆ. ಆದರೆ ಟೂರ್ನಿಯ ನಡುವಲ್ಲೇ ಸಿಎಸ್‌ಕೆ ತಂಡದ ನಾಯಕತ್ವವನ್ನು ರುತುರಾಜ್‌ ಗಾಯಕ್ವಾಡ್‌ ಅವರಿಗೆ ಹಸ್ತಾಂತರ ಮಾಡಲಿದ್ದಾರೆ ಎಂಬ ಕುರಿತು ಮಾಧ್ಯಮಗಳು ವರದಿ ಮಾಡಿವೆ.

ಇದನ್ನೂ ಓದಿ:  IPL 2024 : ಡೆಲ್ಲಿ ಕ್ಯಾಪಿಟಲ್ಸ್‌ಗೆ ರಿಷಬ್‌ ಪಂತ್‌ ನಾಯಕ

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮೊದಲ 17 ದಿನಗಳ ಐಪಿಎಲ್ 2024 ವೇಳಾಪಟ್ಟಿಯನ್ನು ಪ್ರಕಟಿಸಿದೆ. ಎಂಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡ ತನ್ನ ಮೊದಲ ಪಂದ್ಯವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವಿರುದ್ಧ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಆಡಲಿದೆ.

IPL 2024 Big Update Ruturaj Gaikwad CSK Captain For IPL 2024
Image Credit to Original Source

ಈ ನಡುವಲ್ಲೇ ಭಾರತ ಕ್ರಿಕೆಟ್‌ ತಂಡದ ಮಾಜಿ ಆಟಗಾರ ಆಕಾಶ್‌ ಚೋಪ್ರಾ ಅವರು ಐಪಿಎಲ್‌ ತಂಡಗಳ ಯಾವುದೇ ನಾಯಕರು ಟೂರ್ನಿ ನಡುವಲ್ಲೇ ನಾಯಕತ್ವವನ್ನು ತೊರೆಯಬಹುದು ಎಂದಿದ್ದಾರೆ. ಇದು ಧೋನಿ ನಾಯಕತ್ವ ತೊರೆಯುವ ಕುರಿತು ಆಕಾಶ ಚೋಪ್ರಾ ಸೂಚನೆ ನೀಡಿದ್ದಾರೆಯೇ ಅನ್ನೋ ಅನುಮಾನವನ್ನು ಹುಟ್ಟುಹಾಕಿದೆ.

ಇದನ್ನೂ ಓದಿ : T20 ವಿಶ್ವಕಪ್‌ನಲ್ಲಿ ಭಾರತ ಕ್ರಿಕೆಟ್‌ ತಂಡಕ್ಕೆ ರೋಹಿತ್‌ ಶರ್ಮಾ ನಾಯಕ : ಭಗ್ನವಾಯ್ತು ಹಾರ್ದಿಕ್‌ ಪಾಂಡ್ಯ ಕನಸು

ಮಹೇಂದ್ರ ಸಿಂಗ್‌ ಧೋನಿ ಅವರಿಗೆ ಸದ್ಯ 42 ವರ್ಷ ವಯಸ್ಸು. ಇನ್ನು ಹೆಚ್ಚು ವರ್ಷಗಳ ಕಾಲ ಅವರು ಕ್ರಿಕೆಟ್‌ನಲ್ಲಿ ಮುಂದುವರಿಯಲು ಸಾಧ್ಯವಿಲ್ಲ. ಹೀಗಾಗಿ ಧೋನಿ ಈ ಬಾರಿ ನಾಯಕತ್ವವನ್ನು ಯುವ ಕ್ರಿಕೆಟಿಗನಿಗೆ ಹಸ್ತಾಂತರ ಮಾಡುತ್ತಾರೆ ಎನ್ನಲಾಗುತ್ತಿದೆ. ಅಷ್ಟೇ ಅಲ್ಲದೇ ಧೋನಿ ಕ್ರಿಕೆಟ್‌ನಿಂದ ನಿವೃತ್ತರಾದ ಬಳಿಕ ಸಿಎಸ್‌ಕೆ ತಂಡದ ಮೆಂಟರ್‌ ಆಗಿ ಕಾರ್ಯನಿರ್ವಹಿಸಲಿದ್ದಾರೆಂಬ ಮಾತುಗಳು ಕೇಳಿಬರುತ್ತಿದೆ.

ಕಳೆದ ಐಪಿಎಲ್‌ ನಂತರದಲ್ಲಿ ಮಹೇಂದ್ರ ಸಿಂಗ್‌ ಧೋನಿ ಅವರು ಮೊಣಕಾಲಿನ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಐಪಿಎಲ್ 2022 ರಲ್ಲಿ ಸಿಎಸ್‌ಕೆ ತಂಡ ರವೀಂದ್ರ ಜಡೇಜಾ ಅವರಿಗೆ ನಾಯಕತ್ವವನ್ನು ಹಸ್ತಾಂತರ ಮಾಡಿತ್ತು. ಆದರೆ ಟೂರ್ನಿಯಲ್ಲಿ ಸಿಎಸ್‌ಕೆ ತಂಡ ಹೀನಾಯ ಪ್ರದರ್ಶನವನ್ನು ನೀಡಿದ್ದು, ರವೀಂದ್ರ ಜಡೇಜಾ ಅರ್ಧದಲ್ಲಿಯೇ ನಾಯಕತ್ವವನ್ನು ತೊರೆದಿದ್ದರು.

ಇದನ್ನೂ ಓದಿ : ಐಪಿಎಲ್‌ 2024ಗೆ ಹಾರ್ದಿಕ್‌ ಪಾಂಡ್ಯ ಎಂಟ್ರಿ ಫಿಕ್ಸ್ : ಎನ್‌ಸಿಎನಲ್ಲಿ ಅಭ್ಯಾಸ ಪಂದ್ಯವಾಡಿದ ಮುಂಬೈ ಇಂಡಿಯನ್ಸ್ ನಾಯಕ

ಇದೇ ಕಾರಣದಿಂದಲೇ MS ಧೋನಿ 15 ನೇ ಆವೃತ್ತಿಯಲ್ಲಿ ಮತ್ತೆ ನಾಯಕರಾಗಿ ಕಾಣಿಸಿಕೊಂಡಿದ್ರು. ಅಷ್ಟೇ ಅಲ್ಲದೇ ಐಪಿಎಲ್‌ ಟ್ರೋಫಿಯನ್ನು ಜಯಿಸುವ ಮೂಲಕ ಹಿಂದಿನ ಋತುವಿನ ಕಹಿ ಘಟನೆಗಳನ್ನು ಮರೆಯುವಂತೆ ಮಾಡಿದ್ದರು. ಇದೀಗ ಈ ಬಾರಿಯೂ ಅದೇ ಹುಮ್ಮಸ್ಸಿನೊಂದಿಗೆ ಸಿಎಸ್‌ಕೆ ತಂಡ ಕಣಕ್ಕೆ ಇಳಿಯುತ್ತಿದೆ.

IPL 2024 Big Update: Ruturaj Gaikwad CSK Captain For IPL 2024

Comments are closed.