BCCI WPL 2024 : ಇಂಡಿಯನ್ ಪ್ರೀಮಿಯರ್ ಲೀಗ್ ಸಕ್ಸಸ್ ಕಾಣುವುದರ ಜೊತೆಗೆ ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಎಂದು ಕರೆಯಿಸಿಕೊಳ್ಳುತ್ತಿದೆ. ಇದರ ಬೆನ್ನಲ್ಲೇ ಇದೀಗ ಮಹಿಳಾ ಪ್ರೀಮಿಯರ್ ಲೀಗ್‌ಗೆ ಹೆಚ್ಚಿನ ಆದ್ಯತೆ ನೀಡಲು ಬಿಸಿಸಿಐ ಮುಂದಾಗಿದೆ. ಇದಕ್ಕಾಗಿ ಬಿಸಿಸಿಐ (BCCI) ಅಧ್ಯಕ್ಷ ರೋಹಿತ್ ಬಿನ್ನಿ ನೇತೃತ್ವದಲ್ಲಿ WPL ಸಮಿತಿಯನ್ನು ರಚಿಸಿದೆ.
ಮಹಿಳಾ ಪ್ರೀಮಿಯರ್ ಲೀಗ್ ಹರಾಜು( WPL 2024) ನಡೆಯುವ ಮೊದಲೇ ಹೊಸ ರೂಪದಲ್ಲಿ ಮಹಿಳಾ ಪ್ರೀಮಿಯರ್ ಲೀಗ್ ಆಯೋಜನೆಗೆ ಬಿಸಿಸಿಐ ಯೋಜನೆ ರೂಪಿಸಿದೆ. ಈ ಕುರಿತು ಹೊಸ ಸ್ವರೂಪದಲ್ಲಿ WPL ನಡೆಸಲು ರೋಜರ್ ಬಿನ್ನಿ ನೇತೃತ್ವದ ಹೊಸ ಸಮಿತಿ ಯೋಜನೆಯನ್ನು ರೂಪಿಸಲಿದೆ. ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರನ್ನು ಸಮಿತಿಯ ಸಂಚಾಲಕರನ್ನಾಗಿ ನೇಮಕ ಮಾಡಲಾಗಿದೆ.

ಮಹಿಳಾ ಪೀಮಿಯರ್ ಲೀಗ್ ಹರಾಜು ಪ್ರಕ್ರಿಯೆಗೆ ಇನ್ನು ಕೇವಲ ಎರಡು ದಿನಗಳಷ್ಟೇ ಬಾಕಿ ಉಳಿದೆ. ಇದೇ ಹೊತ್ತಲ್ಲೇ ಬಿಸಿಸಿಐ ಸಮಿತಿಯನ್ನು ರಚಿಸಿರುವುದು ಸಹಜವಾಗಿಯೇ ಕುತೂಹಲ ಮೂಡಿಸಿದೆ. ಸಮಿತಿಯಲ್ಲಿ ಐಪಿಎಲ್ ಅಧ್ಯಕ್ಷರಿಗೂ ಕೂಡ ಸ್ಥಾನ ನೀಡಲಾಗಿದೆ. ಕಳೆದ ಬಾರಿ ಮಹಿಳಾ ಪ್ರೀಮಿಯರ್ ಲೀಗ್ ಸಕ್ಸಸ್ ಕಂಡಿತ್ತು.
ಇದನ್ನೂ ಓದಿ : ಹಾರ್ದಿಕ್ ಪಾಂಡ್ಯಗೆ ಬಿಸಿಸಿಐ ವಿಶೇಷ ಕಾಳಜಿ : ಏನಿದು 18 ವಾರಗಳ ವಿಶಿಷ್ಟ ಕಾರ್ಯಕ್ರಮ
ಮಹಿಳಾ ಪ್ರೀಮಿಯರ್ ಲೀಗ್‌ನ ಸಮಿತಿ:
ರೋಜರ್ ಬಿನ್ನಿ – ಅಧ್ಯಕ್ಷರು
ಜಯ್ ಶಾ – ಸಂಚಾಲಕರು
ಅರುಣ್ ಧುಮಾಲ್ – ಐಪಿಎಲ್ ಅಧ್ಯಕ್ಷರು
ರಾಜೀವ್ ಶುಕ್ಲಾ – ಬಿಸಿಸಿಐ ಉಪಾಧ್ಯಕ್ಷ
ಆಶಿಶ್ ಶೇಲಾರ್ – ಬಿಸಿಸಿಐ ಗೌರವ ಖಜಾಂಚಿ
ದೇವಜಿತ್ ಸೈಕಿಯಾ – ಬಿಸಿಸಿಐ ಗೌರವ ಜೆಟಿ. ಕಾರ್ಯದರ್ಶಿ
ಮಧುಮತಿ ಲೇಲೆ
ಪ್ರಭತೇಜ್ ಭಾಟಿಯಾ
ಮಹಿಳಾ ಪ್ರೀಮಿಯರ್ ಲೀಗ್ ಅನ್ನು ಇನ್ನಷ್ಟು ಉತ್ತಮವಾಗಿ ಆಯೋಜನೆ ಮಾಡುವುದು ಹಾಗೂ ಹೆಚ್ಚಿನ ಒತ್ತು ನೀಡುವ ಈ ಸಮಿತಿಯ ಮುಖ್ಯ ಕಾರ್ಯವಾಗಿದೆ. ಐಪಿಎಲ್ ರೀತಿಯಲ್ಲಿಯೇ ಮಹಿಳಾ ಪ್ರೀಮಿಯರ್ ಲೀಗ್ ಅನ್ನು ಅಭಿವೃದ್ದಿ ಪಡಿಸುವ ಕಾರ್ಯ ವನ್ನು ಈ ಸಮಿತಿ ಮಾಡಲಿದೆ. ಮಹಿಳಾ ಪ್ರೀಮಿಯರ್ ಲೀಗ್‌ನ ಬೆಳವಣಿಗೆ ಮತ್ತು ಯಶಸ್ಸಿಗೆ ಕೊಡುಗೆ ನೀಡಲು ಸಮಿತಿ ಸಿದ್ದವಾಗಿದೆ. ಮಹಿಳಾ ಕ್ರಿಕೆಟ್‌ನ ಮೂಲಕ ಇನ್ನಷ್ಟು ಪ್ರತಿಭೆಗಳಿಗೆ ಸ್ಪರ್ಧಾತ್ಮಕ ವಾತಾವರಣ ಸೃಷ್ಟಿಸಲು ತಂಡಗಳ ಮಾಲೀಕರು, ಆಟಗಾರರು ಹಾಗೂ ಅಭಿಮಾನಿಗಳು ಸಹಕಾರ ನೀಡಬೇಕು ಎಂದು ಬಿಸಿಸಿಐ ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನೂ ಓದಿ : IPL 2024 : ಮುಂಬೈ ಇಂಡಿಯನ್ಸ್ ತಂಡಕ್ಕೆ ರೋಹಿತ್ ಶರ್ಮಾ ಅಲ್ಲಾ, ಸೂರ್ಯಕುಮಾರ್ ಯಾದವ್ ನಾಯಕ ?
ಡಿಸೆಂಬರ್ 10 ರಂದು ಇಂಡಿಯನ್ ಪ್ರೀಮಿಯರ್ ಲೀಗ್ ಹಾಗೂ ಮಹಿಳಾ ಪ್ರೀಮಿಯರ್ ಆಟಗಾರರ ಮಿನಿ ಹರಾಜು ಪ್ರಕ್ರಿಯೆ ನಡೆಯಲಿದೆ. ದೇಶ, ವಿದೇಶದಲ್ಲಿನ ಖ್ಯಾತನಾಮ ಆಟಗಾರರು ಈ ಬಾರಿಯ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಕಾಣಿಸಿಕೊಂಡಿದ್ದಾರೆ. ಮುಂದಿನ ವರ್ಷದಿಂದ ಮಹಿಳಾ ಪ್ರೀಮಿಯರ್ ಲೀಗ್ ತಂಡಗಳ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆಯೂ ಇದೆ.

WPL Auction 2023: 5 ತಂಡಗಳು :
ಮುಂಬೈ ಇಂಡಿಯನ್ಸ್:
ಹರ್ಮನ್‌ಪ್ರೀತ್ ಕೌರ್ (ಭಾರತ), ನಟಾಲಿ ಸ್ಕಿವರ್ (ಇಂಗ್ಲೆಂಡ್), ಅಮೆಲಿಯಾ ಕೆರ್ (ನ್ಯೂಜಿಲೆಂಡ್), ಪೂಜಾ ವಸ್ತ್ರಾಕರ್ (ಭಾರತ) , ಯಾಸ್ತಿಕಾ ಭಾಟಿಯಾ (ಭಾರತ), ಹೀದರ್ ಗ್ರಹಾಂ (ಆಸ್ಟ್ರೇಲಿಯಾ) , ಇಸಾಬೆಲ್ಲೆ ವಾಂಗ್ (ಇಂಗ್ಲೆಂಡ್) , ಅಮನ್ಜೋತ್ ಕೌರ್ (ಭಾರತ) , ಧಾರಾ ಗುಜ್ಜರ್ (ಭಾರತ), ಸೈಕಾ ಇಶಾಕ್ (ಭಾರತ), ಹೇಲಿ ಮ್ಯಾಥ್ಯೂಸ್ (ವೆಸ್ಟ್ ಇಂಡಿಸ್), ಕ್ಲೋಯ್ ಟ್ರಯಾನ್ (SA), ಹುಮೈರಾ ಕಾಜಿ (ಭಾರತ), ಪ್ರಿಯಾಂಕಾ ಬಾಲಾ (ಭಾರತ), ಸೋನಮ್ ಯಾದವ್ (ಭಾರತ), ಜಿಂತಿಮಣಿ ಕಲಿತಾ (ಭಾರತ) , ನೀಲಂ ಬಿಷ್ಟ್ (ಭಾರತ)
ರಾಯಲ್ ಚಾಲೆಂಜರ್ಸ್ ಬೆಂಗಳೂರು:
ಸ್ಮೃತಿ ಮಂಧಾನ (ಭಾರತ), ಸೋಫಿ ಡಿವೈನ್ (ನ್ಯೂಜಿಲೆಂಡ್Z), ಎಲಿಸ್ ಪೆರ್ರಿ (ಆಸ್ಟ್ರೇಲಿಯಾ), ರೇಣುಕಾ ಸಿಂಗ್ (ಭಾರತ), ರಿಚಾ ಘೋಷ್ (ಭಾರತ) , ಎರಿನ್ ಬರ್ನ್ಸ್ (ಆಸ್ಟ್ರೇಲಿಯಾ), ದಿಶಾ ಕಸತ್ (ಭಾರತ), ಇಂದ್ರಾಣಿ ರಾಯ್ (ಭಾರತ) ), ಆಶಾ ಸೊಬ್ನಾ (ಭಾರತ) , ಕನಿಕಾ ಅಹುಜಾ (ಭಾರತ), ಡೇನ್ ವ್ಯಾನ್ ನೀಕರ್ಕ್ (ಎಸ್‌ಎ) , ಪ್ರೀತಿ ಬೋಸ್ (ಭಾರತ), ಪೂನಮ್ ಖೇಮ್ನಾರ್ (ಭಾರತ) , ಕೋಮಲ್ ಝಂಝಾದ್ (ಭಾರತ), ಮೇಗನ್ ಶುಟ್ (ಆಸ್) , ಸಹನಾ ಪವಾರ್ (ಭಾರತ) , ಹೀದರ್ ನೈಟ್ (ಇಂಗ್ಲೆಂಡ್), ಶ್ರೇಯಾಂಕ ಪಾಟೀಲ್ (ಭಾರತ)
ಡೆಲ್ಲಿ ಕ್ಯಾಪಿಟಲ್ಸ್ :
ಜೆಮಿಮಾ ರೋಡ್ರಿಗಸ್ (ಭಾರತ), ಮೆಗ್ ಲ್ಯಾನಿಂಗ್ (ಆಸ್) , ಶಫಾಲಿ ವರ್ಮಾ (ಭಾರತ) , ರಾಧಾ ಯಾದವ್ (ಭಾರತ) , ಶಿಖಾ ಪಾಂಡೆ (ಭಾರತ), ಮರಿಝನ್ನೆ ಕಪ್ (ದಕ್ಷಿಣ ಆಫ್ರಿಕಾ), ಟೈಟಾಸ್ ಸಾಧು (ಭಾರತ) , ಆಲಿಸ್ ಕ್ಯಾಪ್ಸೆ (ಇಂಗ್ಲೆಂಡ್) , ಲಾರಾ ಹ್ಯಾರಿಸ್ (ಆಸ್ಟ್ರೇಲಿಯಾ), ಜಸಿಯಾ ಅಖ್ತರ್ (ಭಾರತ), ಮಿನ್ನು ಮಣಿ (ಭಾರತ), ತಾರಾ ನಾರ್ರಿಸ್ (ಯುಎಸ್‌ಎ), ತಾನಿಯಾ ಭಾಟಿಯಾ (ಭಾರತ) , ಪೂನಮ್ ಯಾದವ್ (ಭಾರತ) , ಜೆಸ್ ಜೊನಾಸೆನ್ (ಆಸ್), ಸ್ನೇಹಾ ದೀಪ್ತಿ (ಭಾರತ), ಅಪರ್ಣಾ ಮೊಂಡಲ್ (ಭಾರತ), ಅರುಂಧತಿ ರೆಡ್ಡಿ (ಭಾರತ)
ಗುಜರಾತ್ ಜೈಂಟ್ಸ್:
ಆಶ್ಲೀಗ್ ಗಾರ್ಡ್ನರ್ (ಆಸ್), ಬೆತ್ ಮೂನಿ (ಆಸ್) , ಸೋಫಿಯಾ ಡಂಕ್ಲಿ (ಇಂಗ್ಲೆಂಡ್), ಅನ್ನಾಬೆಲ್ ಸದರ್ಲ್ಯಾಂಡ್ (ಆಸ್ಟ್ರೇಲಿಯಾ), ಹರ್ಲೀನ್ ಡಿಯೋಲ್ (ಭಾರತ), ಡಿಯಾಂಡ್ರಾ ಡಾಟಿನ್ (ವೆಸ್ಟ್ ಇಂಡಿಸ್), ಸ್ನೇಹ ರಾಣಾ (ಭಾರತ), ಸಬ್ಬಿನೇನಿ ಮೇಘನಾ (ಭಾರತ) , ಜಾರ್ಜಿಯಾ ವೇರ್ಹ್ಯಾಮ್ (ಆಸ್), ಮಾನ್ಸಿ ಜೋಶಿ (ಭಾರತ), ದಯಾಲನ್ ಹೇಮಲತಾ (ಭಾರತ), ಮೋನಿಕಾ ಪಟೇಲ್ (ಭಾರತ), ತನುಜಾ ಕನ್ವರ್ (ಭಾರತ) , ಸುಷ್ಮಾ ವರ್ಮಾ (ಭಾರತ), ಹರ್ಲಿ ಗಾಲಾ (ಭಾರತ), ಎಂ ಅಶ್ವನಿ ಕುಮಾರಿ (ಭಾರತ) , ಪರುನಿಕಾ ಸಿಸೋಡಿಯಾ (ಭಾರತ), ಶಬ್ಮಾನ್ ಶಕಿಲ್ (ಭಾರತ)
ಉತ್ತರ ಪ್ರದೇಶ ವಾರಿಯರ್ಸ್:
ಸೋಫಿ ಎಕ್ಲೆಸ್ಟೋನ್ (ಇಂಗ್ಲೆಂಡ್), ದೀಪ್ತಿ ಶರ್ಮಾ (ಭಾರತ), ತಹ್ಲಿಯಾ ಮೆಕ್‌ಗ್ರಾತ್ (ಆಸ್ಟ್ರೇಲಿಯಾ) , ಶಬ್ನಿಮ್ ಇಸ್ಮಾಯಿಲ್ (ಎಸ್‌ಎ), ಅಲಿಸ್ಸಾ ಹೀಲಿ (ಆಸ್ತ್ರೀ), ಅಂಜಲಿ ಸರ್ವಾಣಿ (ಭಾರತ), ರಾಜೇಶ್ವರಿ ಗಾಯಕ್ವಾಡ್ (ಭಾರತ), ಪಾರ್ಶವಿ ಚೋಪ್ರಾ (ಭಾರತ). ), ಶ್ವೇತಾ ಸೆಹ್ರಾವತ್ (ಭಾರತ), ಎಸ್ ಯಶಸ್ರಿ (ಭಾರತ) , ಕಿರಣ್ ನವಗಿರೆ (ಭಾರತ), ಗ್ರೇಸ್ ಹ್ಯಾರಿಸ್ (ಆಸ್), ದೇವಿಕಾ ವೈದ್ಯ (ಭಾರತ), ದೇವಿಕಾ ವೈದ್ಯ (ಭಾರತ), ಲಾರೆನ್ ಬೆಲ್ (ಇಂಗ್ಲೆಂಡ್), ಲಕ್ಷ್ಮಿ ಯಾದವ್ (ಭಾರತ), ಸಿಮ್ರಾನ್ ಶೇಖ್ (ಭಾರತ)
BCCI WPL 2024 New format for Women’s Premier League BCCI forms WPL committee