IPL 2024 : ಮುಂಬೈ ಇಂಡಿಯನ್ಸ್‌ ತಂಡಕ್ಕೆ ರೋಹಿತ್‌ ಶರ್ಮಾ ಅಲ್ಲಾ, ಸೂರ್ಯಕುಮಾರ್‌ ಯಾದವ್‌ ನಾಯಕ ?

IPL 2024 : ಆಸ್ಟ್ರೇಲಿಯಾ ವಿರುದ್ದದ ಟಿ20 ಸರಣಿಯನ್ನು 4-1ರ ಅಂತರದಲ್ಲಿ ಜಯಿಸಿದ ಬೆನ್ನಲ್ಲೇ ಸೂರ್ಯಕುಮಾರ್‌ ಯಾದವ್‌ ( Suryakumar Yadav)  ನಾಯಕತ್ವದ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸದ್ಯ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌ (Mumbai Indians ) ತಂಡಕ್ಕೆ ರೋಹಿತ್‌ ಶರ್ಮಾ (Rohit Sharma)  ಬದಲು ಸೂರ್ಯ ಕುಮಾ

IPL 2024 : ವಿಶ್ವಕಪ್‌ ಸೋಲಿನ ಬೆನ್ನಲ್ಲೇ ನಡೆದ ಆಸ್ಟ್ರೇಲಿಯಾ ವಿರುದ್ದದ ಟಿ20 ಸರಣಿಯನ್ನು 4-1ರ ಅಂತರದಲ್ಲಿ ಜಯಿಸಿದ ಬೆನ್ನಲ್ಲೇ ಸೂರ್ಯಕುಮಾರ್‌ ಯಾದವ್ ( Suryakumar Yadav)  ನಾಯಕತ್ವದ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸದ್ಯ ಐಪಿಎಲ್‌ (Indian Premier League) ನಲ್ಲಿ ಮುಂಬೈ ಇಂಡಿಯನ್ಸ್‌ (Mumbai Indians ) ತಂಡಕ್ಕೆ ರೋಹಿತ್‌ ಶರ್ಮಾ (Rohit Sharma)  ಬದಲು ಸೂರ್ಯ ಕುಮಾರ್‌ ಯಾದವ್‌ ನಾಯಕ ಆಗಲಿದ್ದಾರೆಂಬ ಚರ್ಚೆ ಶುರುವಾಗಿದೆ.

ಗುಜರಾತ್‌ ಟೈಟಾನ್ಸ್‌ ತಂಡದ ನಾಯಕನಾಗಿದ್ದ ಹಾರ್ದಿಕ್‌ ಪಾಂಡ್ಯ ಸದ್ಯ ಮುಂಬೈ ಇಂಡಿಯನ್ಸ್‌ ಪಾಳಯ ಸೇರಿಕೊಂಡಿದ್ದಾರೆ. ಇದೀಗ ಐಪಿಎಲ್ 2024 ಮಿನಿ ಹರಾಜಿನ ಮೊದಲು ಮುಂಬೈ ಇಂಡಿಯನ್ಸ್‌ನಲ್ಲಿ ನಾಯಕತ್ವದ ಕೋಲಾಹಲವನ್ನು ಸೃಷ್ಟಿಸಿದೆ. ಒಂದೆಡೆ ರೋಹಿತ್‌ ಶರ್ಮಾ ಹಾಗೂ ಹಾರ್ದಿಕ್‌ ಪಾಂಡ್ಯ ನಡುವೆ ಪೈಪೋಟಿ ನಡೆಯುತ್ತಿದೆ.

IPL 2024 No Rohit Sharma, Suryakumar Yadav captain for Mumbai Indians
Image Credit to Original Source

ರೋಹಿತ್‌ ಶರ್ಮಾ ಮುಂದಿನ ಐಪಿಎಲ್‌ನಲ್ಲಿ ನಾಯಕರಾಗಿ ಮುಂದುವರಿಯಲಿ ಎಂದು ಹಾರ್ದಿಕ್‌ ಪಾಂಡ್ಯ ತಳಿಸಿದ್ದಾರೆ. ಆದರೆ ರೋಹಿತ್‌ ಶರ್ಮಾ ನಾಯಕತ್ವಕ್ಕೆ ಮತ್ತೋರ್ವ ಆಟಗಾರ ಕುತ್ತು ತಂದಿದ್ದಾನೆ. ಟೀಂ ಇಂಡಿಯಾದ ಮಾಜಿ ನಾಯಕ ಅಜಯ್‌ ಜಡೇಜಾ ಅವರು ರೋಹಿತ್‌ ಶರ್ಮಾ ಬದಲು ಸೂರ್ಯಕುಮಾರ್‌ ಯಾದವ್‌ ಮುಂಬೈ ಇಂಡಿಯನ್ಸ್‌ ತಂಡವನ್ನು ಮುನ್ನೆಡೆಸಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮುಂದಿನ ಜೂನ್‌ ತಿಂಗಳಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ಫಿಟ್‌ ಆಗಿರಬೇಕಾಗಿರುವ ಕಾರಣಕ್ಕೆ ರೋಹಿತ್‌ ಶರ್ಮಾ ಈ ಬಾರಿಯ ಐಪಿಎಲ್‌ನಿಂದ ವಿಶ್ರಾಂತಿ ಪಡೆಯಬೇಕು. ಐಪಿಎಲ್‌ ಸಂಪೂರ್ಣ ಋತುವನ್ನು ಆಡಬಾರದು. ಐಪಿಎಲ್ 2024 ರ ಋತುವಿನಲ್ಲಿ ರೋಹಿತ್ ಶರ್ಮಾ ವಿರಾಮ ತೆಗೆದುಕೊಳ್ಳಲು ನಿರ್ಧರಿಸಿದರೆ ಸೂರ್ಯಕುಮಾರ್ ಯಾದವ್ ನಾಯಕರಾಗಬಹುದು ಎಂದು ಅಜಯ್‌ ಜಡೇಜಾ ಸ್ಪೋರ್ಟ್ಸ್ ಟಾಕ್‌ ಜೊತೆ ಮಾತನಾಡಿದ್ದಾರೆ.

IPL 2024 No Rohit Sharma, Suryakumar Yadav captain for Mumbai Indians
Image Credit to Original Source

ಇದನ್ನೂ ಓದಿ : ಐಪಿಎಲ್ 2024 : 10 ಓವರ್‌ 98 ರನ್‌, 18.50 ಕೋಟಿ ರೂ.ಗೆ ಖರೀದಿಸಿದ್ದ ಪಂಜಾಬ್‌ ಕಿಂಗ್ಸ್‌ ಬೌಲರ್‌ ದುಬಾರಿ ಬೌಲಿಂಗ್‌

ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮ್ಮಿನ್ಸ್ ಮತ್ತು ಬೆನ್ ಸ್ಟೋಕ್ಸ್ ಅವರಂತಹ ಖ್ಯಾತ ವಿದೇಶಿ ಆಟಗಾರರು ತಮ್ಮ ರಾಷ್ಟ್ರೀಯ ಬದ್ದತೆಗಾಗಿ ಐಪಿಎಲ್‌ ಸೀಸನ್‌ಗಳಿಂದ ದೂರ ಉಳಿಯುತ್ತಿದ್ದಾರೆ. ಆದರೆ ಭಾರತೀಯ ಯಾವ ಆಟಗಾರರು ಕೂಡ ಐಪಿಎಲ್‌ ನಿಂದ ದೂರ ಉಳಿಯುತ್ತಿಲ್ಲ. ICC ಟೂರ್ನಮೆಂಟ್‌ ಗಳಿಗೆ ಫಿಟ್ ಆಗಿ ಮತ್ತು ಫ್ರೆಶ್ ಆಗಿರಲು ಭಾರತೀಯ ಆಟಗಾರರು IPL ವೇಳೆ ಕೆಲವು ಸಮಯವಾದ್ರೂ ವಿಶ್ರಾಂತಿ ಪಡೆಯಬೇಕು ಎಂದು ಜಡೇಜಾ ಹೇಳಿದ್ದಾರೆ.

ಭಾರತ ಕ್ರಿಕೆಟ್‌ ತಂಡದ ನಾಯಕನಾಗಿರುವ ರೋಹಿತ್‌ ಶರ್ಮಾ ಸದ್ಯ ವೈಟ್‌ ಬಾಲ್‌ ಪಂದ್ಯಾವಳಿಯಿಂದ ದೂರ ಉಳಿದಿದ್ದಾರೆ. ಆದರೆ ಮುಂದಿನ ವರ್ಷ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡವನ್ನು ರೋಹಿತ್‌ ಶರ್ಮಾ ಮುನ್ನೆಡೆಸುವ ಕುರಿತು ಯಾವುದೇ ಸ್ಪಷ್ಟನೆಯಿಲ್ಲ. ಜೊತೆಗೆ ಐಪಿಎಲ್ 2024ರಲ್ಲಿ ಮುಂಬೈ ಇಂಡಿಯನ್ಸ್‌ ತಂಡದ ನಾಯಕರಾಗುವ ಕುರಿತು ಇನ್ನೂ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

IPL 2024 No Rohit Sharma, Suryakumar Yadav captain for Mumbai Indians
Image Credit to Original Source

ಇದನ್ನೂ ಓದಿ : IPL 2024 : ಚೆನ್ನೈ ಸೂಪರ್‌ ಕಿಂಗ್ಸ್‌ಗೆ ರುತುರಾಜ್‌ ಗಾಯಕ್ವಾಡ್‌ ನಾಯಕ

ಆಸ್ಟ್ರೇಲಿಯಾ ವಿರುದ್ಧ 4-1 ಅಂತರದಿಂದ ಟಿ20 ಸರಣಿಯನ್ನು ಭಾರತ ಗೆಲ್ಲುವಲ್ಲಿ ಸೂರ್ಯಕುಮಾರ್‌ ಯಾದವ್‌ ಪ್ರಮುಖ ಪಾತ್ರವಹಿಸಿದ್ದರು. ಅಲ್ಲದೇ ಮುಂದಿನ ದಕ್ಷಿಣ ಆಫ್ರಿಕಾ ವಿರುದ್ದ ಟಿ20 ಸರಣಿಗೂ ಸೂರ್ಯಕುಮಾರ್‌ ಯಾದವ್‌ ನಾಯಕರಾಗಿ ಮುಂದುವರಿಯಲಿದ್ದಾರೆ. ಸದ್ಯ ಮುಂಬೈ ಇಂಡಿಯನ್ಸ್‌ ತಂಡದ ಉಪ ನಾಯಕರಾಗಿರುವ ಸೂರ್ಯಕುಮಾರ್‌ ಯಾದವ್‌ ನಾಯಕರಾಗುವ ಸಾಧ್ಯತೆಯಿದೆ.

ಪ್ರಸಕ್ತ ಐಪಿಎಲ್‌ ಋತುವಿನಲ್ಲಿ ರೋಹಿತ್‌ ಶರ್ಮಾ ಅನುಪಸ್ಥಿತಿಯಲ್ಲಿ ಸೂರ್ಯಕುಮಾರ್‌ ಯಾದವ್‌ ಅವರು ಮುಂಬೈ ಇಂಡಿಯನ್ಸ್‌ ತಂಡವನ್ನು ಮುನ್ನೆಡೆಸಿದ್ದರು. ಐದು ಬಾರಿ ಐಪಿಎಲ್‌ ಟ್ರೋಫಿಯನ್ನು ಗೆಲ್ಲಿಸಿಕೊಟ್ಟ ರೋಹಿತ್‌ ಶರ್ಮಾ ಅವರನ್ನು ಮುಂಬೈ ಇಂಡಿಯನ್ಸ್‌ ಈ ಬಾರಿ ದೂರ ಇಡುತ್ತಾ ? ಸೂರ್ಯಕುಮಾರ್‌ ಗೆ ನಾಯಕತ್ವ ನೀಡುತ್ತಾ ಅನ್ನೋದಕ್ಕೆ ಕಾಲವೇ ಉತ್ತರ ನೀಡಬೇಕಾಗಿದೆ.

ಇದನ್ನೂ ಓದಿ : ಐಪಿಎಲ್ 2024 : ಗುಜರಾತ್‌ ಟೈಟಾನ್ಸ್‌ಗೆ ಶುಭಮನ್‌ ಗಿಲ್‌ ನಾಯಕ

IPL 2024: No Rohit Sharma, Suryakumar Yadav captain for Mumbai Indians ?

Comments are closed.