ಹಾರ್ದಿಕ್‌ ಪಾಂಡ್ಯಗೆ ಬಿಸಿಸಿಐ ವಿಶೇಷ ಕಾಳಜಿ : ಏನಿದು 18 ವಾರಗಳ ವಿಶಿಷ್ಟ ಕಾರ್ಯಕ್ರಮ

ಭಾರತ ಕ್ರಿಕೆಟ್‌ ತಂಡದ (Indian Cricket Team) ಖ್ಯಾತ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ (Hardik Pandya) ವಿಶ್ವಕಪ್‌ ಪಂದ್ಯಾವಳಿಯಲ್ಲಿ ಬಾಂಗ್ಲಾದೇಶ ವಿರುದ್ದದ ಪಂದ್ಯದ ವೇಳೆಯಲ್ಲಿ ಗಾಯಗೊಂಡಿದ್ದರು. ಸದ್ಯ ಹಾರ್ದಿಕ್‌ ಪಾಂಡ್ಯ ಎನ್‌ಸಿಎನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.

ಭಾರತ ಕ್ರಿಕೆಟ್‌ ತಂಡದ (Indian Cricket Team) ಖ್ಯಾತ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ (Hardik Pandya) ವಿಶ್ವಕಪ್‌ ಪಂದ್ಯಾವಳಿಯಲ್ಲಿ ಬಾಂಗ್ಲಾದೇಶ ವಿರುದ್ದದ ಪಂದ್ಯದ ವೇಳೆಯಲ್ಲಿ ಗಾಯಗೊಂಡಿದ್ದರು. ಸದ್ಯ ಹಾರ್ದಿಕ್‌ ಪಾಂಡ್ಯ ಎನ್‌ಸಿಎನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಜೊತೆಗೆ ಬಿಸಿಸಿಐ ಪಾಂಡ್ಯ ಕುರಿತು ವಿಶೇಷ ಕಾಳಜಿ ವಹಿಸಿದ್ದು, 18 ವಾರಗಳ ವಿಶಿಷ್ಟ ಕಾರ್ಯಕ್ರಮ ರೂಪಿಸಿದೆ ಎಂದು ಇನ್‌ಸೈಡ್‌ ಸ್ಪೋರ್ಟ್ಸ್‌ ವರದಿ ಮಾಡಿದೆ.

ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ತ್ವರಿತವಾಗಿ ಚೇತರಿಕೆ ಆಗಬೇಕು ಎಂಬ ಕಾರಣಕ್ಕಾಗಿಯೇ ಬಿಸಿಸಿಐ, ಎನ್‌ಸಿಎ ವಿಶೇಷ 18 ವಾರಗಳ ಹೈ-ಪರ್ಫಾರ್ಮೆನ್ಸ್ ಯೋಜನೆ ಜಾರಿಗೊಳಿಸಿದೆ. ಗಾಯಗಳು ಆಟಗಾರರ ವೃತ್ತಿ ಜೀವನಕ್ಕೆ ಅಡ್ಡಿಯಾಗಬಾರದು ಅನ್ನೋ ಕಾರಣಕ್ಕೆ ಈ ಯೋಜನೆಯನ್ನು ಜಾರಿಗೆ ತಂದಿದೆ. ಆದಷ್ಟು ಶೀಘ್ರದಲ್ಲಿಯೇ ಚೇತರಿಕೆ ಕಾಣುತ್ತಾರೆ ಎನ್ನಲಾಗುತ್ತದೆ.

BCCI special concern for Hardik Pandya: What a unique 18-week programme in NCA
Image Credit to Original Source

ಬಿಸಿಸಿಐ ಹಾಗೂ ಎನ್‌ಸಿಎ ಕೈಗೊಂಡಿರುವ ಈ ಯೋಜನೆಯ ಅಡಿಯಲ್ಲಿ ನಿಖರವಾದ ದಿನಚರಿ, ಕಾರ್ಡಿಯೋ, ಶಕ್ತಿ ತರಬೇತಿ, ಕ್ರಿಯಾತ್ಮಕ ತರಬೇತಿ ಮತ್ತು ನಿರ್ಣಾಯಕವಾಗಿ ಸಾಕಷ್ಟು ವಿಶ್ರಾಂತಿ ಮತ್ತು ಚೇತರಿಕೆ ಸೇರಿದಂತೆ ಫಿಟ್‌ನೆಸ್‌ಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗುತ್ತಿದೆ. ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಆದಷ್ಟು ಶೀಘ್ರದಲ್ಲಿ ಅವರ ಆಗಮನಕ್ಕಾಗಿ ಈ ಯೋಜನೆ ಸಿದ್ದಗೊಂಡಿದೆ.

ಇದನ್ನೂ ಓದಿ : ಇಂಗ್ಲೆಂಡ್ ಟಿ20, ಟೆಸ್ಟ್‌ ಸರಣಿಗೆ ಟೀಂ ಇಂಡಿಯಾ ಮಹಿಳಾ ತಂಡ ಪ್ರಕಟಿಸಿದ ಬಿಸಿಸಿಐ

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮತ್ತು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ಅವರು ದೀರ್ಘಾವಧಿಯ ಯೋಜನೆ ಹೊಂದಿದೆ. ಮುಂದಿನ 2024ರ ಟಿ 20 ವಿಶ್ವಕಪ್‌ಗೆ ತಂಡವನ್ನು ಸಜ್ಜುಗೊಳಿಸುವ ಉದ್ದೇಶ ಹೊಂದಲಾಗಿದೆ. ಬಿಸಿಸಿಐ ಇಂತಹ ಯೋಜನೆಯನ್ನು ರೂಪಿಸುತ್ತಿರುವುದು ಇದೇ ಮೊದಲೇನಲ್ಲಾ.

ಬಿಸಿಸಿಐ ಮತ್ತು ಎನ್‌ಸಿಎ ತೆಗೆದುಕೊಂಡಿರುವ ವಿಧಾನವು ಈಗಾಗಲೇ ಸಕ್ಸಸ್‌ ಆಗಿದೆ. ಈ ಹಿಂದೆ ಜಸ್ಪ್ರೀತ್ ಬುಮ್ರಾ, ಕೆಎಲ್ ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಗಾಯಗೊಂಡ ಸಂದರ್ಭದಲ್ಲಿಯು ಅವರು ಗಾಯದ ಸಮಸ್ಯೆಯಿಂದ ಗುಣಮುಖರಾಗಿ ಕ್ರಿಕೆಟ್‌ಗೆ ಮರಳಿದ್ದರು. ಸದ್ಯ ಹಾರ್ದಿಕ್‌ ಪಾಂಡ್ಯ ಕಾಲಿನ ಗಾಯದ ಸಮಸ್ಯೆಗೆ ಒಳಗಾಗಿದ್ದಾರೆ.

ಇದನ್ನೂ ಓದಿ : ಐಪಿಎಲ್ 2024 : 10 ಓವರ್‌ 98 ರನ್‌, 18.50 ಕೋಟಿ ರೂ.ಗೆ ಖರೀದಿಸಿದ್ದ ಪಂಜಾಬ್‌ ಕಿಂಗ್ಸ್‌ ಬೌಲರ್‌ ದುಬಾರಿ ಬೌಲಿಂಗ್‌

ಹಾರ್ದಿಕ್‌ ಪಾಂಡ್ಯ ಈ ಹಿಂದೆ ಬೆನ್ನು ನೋವಿನ ಸಮಸ್ಯೆಯಿಂದ ಬಳಲಿದ್ದು, ಅವರು 2019 ರಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.30 ವರ್ಷ ವರ್ಷದ ಹಾರ್ದಿಕ್‌ ಪಾಂಡ್ಯ ಪುನರಾಗಮನದ ನಂತರ ಅತ್ಯುತ್ತಮ ಫಿಟ್‌ನೆಸ್ ಕಾಯ್ದುಕೊಂಡಿದ್ದರು. ಅಷ್ಟೇ ಅಲ್ಲದೇ ಗುಜರಾತ್‌ ಟೈಟಾನ್ಸ್‌ ತಂಡವನ್ನು ಮುನ್ನೆಡೆಸಿ ಸಕ್ಸಸ್‌ ಆಗಿದ್ದರು.

BCCI special concern for Hardik Pandya: What a unique 18-week programme in NCA
Image Credit to Original Source

ಐಪಿಎಲ್‌ 2022 ಮತ್ತು 2023 ಎರಡರಲ್ಲೂ ಅತ್ಯಧಿಕ ಪಂದ್ಯಗಳಲ್ಲಿ ಪಂದ್ಯಗಳಲ್ಲಿ ಹಾರ್ದಿಕ್‌ ಪಾಂಡ್ಯ ಆಡಿದ್ದಾರೆ. ಅಷ್ಟೇ ಅಲ್ಲದೇ ಶ್ರೀಲಂಕಾ, ನ್ಯೂಜಿಲೆಂಡ್ ಮತ್ತು ವೆಸ್ಟ್ ಇಂಡೀಸ್ ವಿರುದ್ಧದ T20I ಸರಣಿಗಳಲ್ಲಿ ತಂಡವನ್ನು ಮುನ್ನಡೆಸಿದ್ದಾರೆ. ಮುಂದಿನ ಅಫ್ಘಾನಿಸ್ತಾನ ವಿರುದ್ಧ ಸರಣಿಯಿಂದಲೂ ಹಾರ್ದಿಕ್‌ ಪಾಂಡ್ಯ ದೂರ ಉಳಿಯುವ ಸಾಧ್ಯತೆಯಿದೆ.

ಇದನ್ನೂ ಓದಿ : IPL 2024 : ಮುಂಬೈ ಇಂಡಿಯನ್ಸ್‌ ತಂಡಕ್ಕೆ ರೋಹಿತ್‌ ಶರ್ಮಾ ಅಲ್ಲಾ, ಸೂರ್ಯಕುಮಾರ್‌ ಯಾದವ್‌ ನಾಯಕ ?

2022 ರಿಂದ ಭಾರತವು ಒಟ್ಟು 55 T20I ಪಂದ್ಯಗಳನ್ನು ಆಡಿದೆ, ಇದರಲ್ಲಿ ಹಾರ್ದಿಕ್‌ ಪಾಂಡ್ಯ 38 ಪಂದ್ಯಗಳಲ್ಲಿ ಆಡಿದ್ದಾರೆ. 50 ಏಕದಿನ ಪಂದ್ಯಗಳ ಪೈಕಿ ಅವರು 23 ಪಂದ್ಯಗಳನ್ನು ಆಡಿದ್ದಾರೆ. ಕಳೆದ ಎರಡು ವರ್ಷಗಳ ಅವಧಿಯಲ್ಲಿ ಹಾರ್ದಿಕ್‌ ಪಾಂಡ್ಯ ಟೀಂ ಇಂಡಿಯಾದ ಖಾಯಂ ಸದಸ್ಯರಾಗಿದ್ದರು. ಅಲ್ಲದೇ ಅತ್ಯುತ್ತಮ ಫಿಟ್‌ಸೆಟ್‌ ಕಾಯ್ದುಕೊಂಡಿದ್ದರು.

ಇದೀಗ 18 ವಾರಗಳ ಕಾರ್ಯಕ್ರಮದ ಮೂಲಕ ಹಾರ್ದಿಕ್‌ ಪಾಂಡ್ಯ ಬಹುಬೇಗನೇ ಕ್ರಿಕೆಟ್‌ಗೆ ಮರಳಲಿದ್ದಾರೆ. ಟೀಂ ಇಂಡಿಯಾದ ಖ್ಯಾತ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಅವರ ಸೇವೆ ಭಾರತ ತಂಡಕ್ಕೆ ಅಗತ್ಯವಿದೆ. ದೀರ್ಘಾವಧಿಯ ಉದ್ದೇಶದಿಂದಲೇ ಬಿಸಿಸಿಐ ಪಾಂಡ್ಯವನ್ನು ಸಜ್ಜುಗೊಳಿಸುವ ಕಾರ್ಯಕ್ಕೆ ಮುಂದಾಗಿದೆ.

BCCI special concern for Hardik Pandya: What a unique 18-week programme in NCA

Comments are closed.