Bengal Warriors : ವಾರಿಯರ್ಸ್ ವಿರುದ್ಧ ಯೋಧಾಗೆ ರೋಚಕ ಜಯ, ಪ್ಲೇ ಆಫ್‌ನತ್ತ ಪಿಂಕ್ ಪ್ಯಾಂಥರ್ಸ್

ಹೈದರಾಬಾದ್ : (Bengal Warriors) ಬೆಂಗಾಲ್ ವಾರಿಯರ್ಸ್ ವಿರುದ್ಧ ಒಂದು ಅಂಕದ ರೋಚಕ ಗೆಲುವು ದಾಖಲಿಸಿದ ಯು.ಪಿ ಯೋಧಾ ಪಡೆ ಪ್ರೊ ಕಬಡ್ಡಿ ಲೀಗ್ 9ನೇ (Pro Kabaddi League) ಆವೃತ್ತಿಯಲ್ಲಿ 10ನೇ ಗೆಲುವಿನೊಂದಿಗೆ ಪ್ಲೇ ಆಫ್’ನತ್ತ ದಾಪುಗಾಲಿಟ್ಟಿದೆ. ಹೈದರಾಬಾದ್’ನ ಗಚ್ಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಮೊದಲ ಪಂದ್ಯದಲ್ಲಿ ಪ್ರದೀಪ್ ನರ್ವಾಲ್ ನಾಯಕತ್ವದ ಯು.ಪಿ ಯೋಧಾ ಪಡೆ, ಮಣಿಂದರ್ ಸಿಂಗ್ ಸಾರಥ್ಯದ ಬೆಂಗಾಲ್ ವಾರಿಯರ್ಸ್ ಬಳಗವನ್ನು 33-32ರ ಅಂತರದಲ್ಲಿ ಅತ್ಯಂತ ರೋಚಕವಾಗಿ ಮಣಿಸಿತು.

ಯು.ಪಿ ಯೋಧಾ ಪರ ನಾಯಕ ಪ್ರದೀಪ್ ನರ್ವಾಲ್ 14 ರೇಡ್ ಪಾಯಿಂಟ್ಸ್ ಗಳಿಸಿದರೆ, ಬೆಂಗಾಲ್ ವಾರಿಯರ್ಸ್ ಪರ ಕ್ಯಾಪ್ಟನ್ ಮಣಿಂದರ್ ಸಿಂಗ್ ಸೂಪರ್-10 ಸಾಧನೆ ಮಾಡಿದರಾದರೂ ತಂಡವನ್ನು ಗೆಲ್ಲಿಸಲಾಗಲಿಲ್ಲ. ಈ ಸೋಲಿನೊಂದಿಗೆ ಲೀಗ್’ನಲ್ಲಿ 8ನೇ ಸೋಲು ಕಂಡ ಬೆಂಗಾಲ್ ಅಂಕಪಟ್ಟಿಯಲ್ಲಿ 7ನೇ ಸ್ಥಾನಕ್ಕೆ ಕುಸಿಯಿತು. ಸೋಮವಾರದ 2ನೇ ಪಂದ್ಯದಲ್ಲಿ ಮೊದಲ ಆವೃತ್ತಿಯ ಚಾಂಪಿಯನ್ ಜೈಪುರ ಪಿಂಕ್ ಪ್ಯಾಂಥರ್ಸ್, ಆತಿಥೇಯ ತೆಲುಗು ಟೈಟನ್ಸ್ ತಂಡವನ್ನು 48-28 ಅಂಕಗಳಿಂದ ಮಣಿಸಿ 12ನೇ ಗೆಲುವು ದಾಖಲಿಸಿತು. ಜೈಪುರ ಪರ ಯುವ ರೇಡರ್ ಅರ್ಜುನ್ ದೇಶ್ವಾಲ್ 18 ರೇಡ್ ಪಾಯಿಂಟ್’ಗಳೊಂದಿಗೆ ಮಿಂಚಿದದರು.

ಈ ಗೆಲುವಿನೊಂದಿಗೆ ಅಂಕ ಗಳಿಕೆಯನ್ನು 64ಕ್ಕೆ ಏರಿಸಿಕೊಂಡ ಪಿಂಕ್ ಪ್ಯಾಂಥರ್ಸ್ ಪಾಯಿಂಟ್ ಪಟ್ಟಿಯಲ್ಲಿ ಬೆಂಗಳೂರು ಬುಲ್ಸ್ ತಂಡವನ್ನು ಹಿಂದಕ್ಕೆ ತಳ್ಳಿ 2ನೇ ಸ್ಥಾನಕ್ಕೇರಿತು. 18 ಪಂದ್ಯಗಳಲ್ಲಿ 12ರಲ್ಲಿ ಗೆದ್ದಿರುವ ಜೈಪು 64 ಅಂಕ ಕಲೆ ಹಾಕಿದ್ದರೆ, ಬೆಂಗಳೂರು ಬುಲ್ಸ್ 18 ಪಂದ್ಯಗಳಿಂದ 11 ಗೆಲುವುಗಳ ಸಹಿತ 63 ಪಾಯಿಂಟ್ಸ್ ಗಳಿಸಿದೆ. ಮಂಗಳವಾರ ನಡೆಯುವ ಮೊದಲ ಪಂದ್ಯದಲ್ಲಿ ಟೇಬಲ್ ಟಾಪರ್ ಪುಣೇರಿ ಪಲ್ಟನ್, ಗುಜರಾತ್ ಜೈಂಟ್ಸ್ ತಂಡವನ್ನು ಎದುರಿಸಲಿದ್ದರೆ, 2ನೇ ಪಂದ್ಯದಲ್ಲಿ ಹರ್ಯಾಣ ಸ್ಟೀಲರ್ಸ್ ಮತ್ತು ಯು ಮುಂಬಾ ತಂಡಗಳು ಮುಖಾಮುಖಿಯಾಗಲಿವೆ.

Bengal Warriors : ಪ್ರೊ ಕಬಡ್ಡಿ ಲೀಗ್-9: ಮಂಗಳವಾರದ ಪಂದ್ಯಗಳು

  1. ಪುಣೇರಿ ಪಲ್ಟನ್ Vs ಗುಜರಾತ್ ಜೈಂಟ್ಸ್
  2. ಹರ್ಯಾಣ ಸ್ಟೀಲರ್ಸ್ Vs ಯು ಮುಂಬಾ

ಇದನ್ನೂ ಓದಿ : Pro Kabaddi League: ದಕ್ಷಿಣ ಭಾರತ ಡರ್ಬಿಯಲ್ಲಿ ತಲೈವಾಸ್ ವಿರುದ್ಧ ಗೆದ್ದರೆ ಬೆಂಗಳೂರು ಬುಲ್ಸ್ ಟೇಬಲ್ ಟಾಪರ್

ಇದನ್ನೂ ಓದಿ : Bengaluru Bulls : ಭರತ್ ಭರ್ಜರಿ ದಾಳಿ, ಗೂಳಿ ಗುದ್ದಿಗೆ ದಬಾಂಗ್ ಡೆಲ್ಲಿ ಢಮಾರ್; ಪ್ಲೇ ಆಫ್‌ಗೆ ಬೆಂಗಳೂರು ಬುಲ್ಸ್

ಇದನ್ನೂ ಓದಿ : Pro Kabaddi League : ಬುಲ್ಸ್‌ಗೆ ಸ್ಟೀಲರ್ಸ್ ಸವಾಲ್, ಅಗ್ರಸ್ಥಾನದ ಮೇಲೆ ಕೆಂಪುಗೂಳಿಗಳ ಕಣ್ಣು

ಸ್ಥಳ: ಗಚ್ಚಿಬೌಲಿ ಒಳಾಂಗಣ ಕ್ರೀಡಾಂಗಣ, ಹೈದರಾಬಾದ್
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್
ಲೈವ್ ಸ್ಟ್ರೀಮಿಂಗ್: ಡಿಸ್ನಿ+ಹಾಟ್ ಸ್ಟಾರ್

Bengal Warriors: Yoddha wins against Warriors, Pink Panthers to play off

Comments are closed.