ODI World Cup final 2023: ನರೇಂದ್ರ ಮೋದಿ ಸ್ಟೇಡಿಯಂನಲ್ಲಿ 2023ರ ಏಕದಿನ ವಿಶ್ವಕಪ್ ಫೈನಲ್

ಅಹ್ಮದಾಬಾದ್: (ODI World Cup final 2023) 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ಭಾರತ ಆತಿಥ್ಯ ವಹಿಸಲಿದೆ. 2011ರಲ್ಲಿ ಭಾರತದಲ್ಲೇ ನಡೆದಿದ್ದ ವಿಶ್ವಕಪ್ ಟೂರ್ನಿಯಲ್ಲಿ ಚಾಂಪಿಯನ್ ಆಗಿದ್ದ ಭಾರತ, 12 ವರ್ಷಗಳ ನಂತರ ಮತ್ತೆ ಏಕದಿನ ವಿಶ್ವಕಪ್ ಟೂರ್ನಿಗೆ ಆತಿಥ್ಯ ವಹಿಸಲು ಸಜ್ಜಾಗಿದೆ. 13ನೇ ಆವೃತ್ತಿಯ ವಿಶ್ವಕಪ್ ಟೂರ್ನಿಯ ಪಂದ್ಯಗಳು ಭಾರತದಲ್ಲಿ ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ನಡೆಯಲಿವೆ. 1987, 1996 ಮತ್ತು 2011ರಲ್ಲಿ ವಿಶ್ವಕಪ್’ಗೆ ಆತಿಥ್ಯ ವಹಿಸಿದ್ದ ಭಾರತ, 4ನೇ ಬಾರಿ ಏಕದಿನ ವಿಶ್ವಕಪ್’ಗೆ ಆತಿಥ್ಯ ವಹಿಸಲಿದೆ.

2023ರ ವಿಶ್ವಕಪ್’ನ ಫೈನಲ್ ಪಂದ್ಯ (ODI World Cup final 2023) ಗುಜರಾತ್’ನ ಅಹ್ಮದಾಬಾದ್’ನಲ್ಲಿರುವ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ (Narendra Modi stadium in Ahmedabad is likely to host the 2023 ODI World Cup final). ಗುಜರಾತ್’ನವರೇ ಆದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪುತ್ರ ಜಯ್ ಶಾ ಬಿಸಿಸಿಐ (BCCI) ಕಾರ್ಯದರ್ಶಿಯಾಗಿರುವ ಕಾರಣ ವಿಶ್ವಕಪ್ ಫೈನಲ್ ಪಂದ್ಯವನ್ನು ತಮ್ಮದೇ ನಾಡಿನಲ್ಲಿ ಆಡಿಸಲು ಮುಂದಾಗಿದ್ದಾರೆ.

2023ರ ವಿಶ್ವಕಪ್ ಟೂರ್ನಿಯಲ್ಲಿ ಒಟ್ಟು 10 ತಂಡಗಳು ಭಾಗವಹಿಸಲಿದ್ದು, ಲೀಗ್ ಹಂತದಲ್ಲಿ ಪಂದ್ಯಗಳು ರೌಂಡ್ ರಾಬಿನ್ ಮಾದರಿಯಲ್ಲಿ ನಡೆಯಲಿವೆ. ಪ್ರತಿಯೊಂದು ತಂಡವೂ ಎಲ್ಲಾ ತಂಡಗಳ ವಿರುದ್ಧ ಲೀಗ್ ಪಂದ್ಯಗಳನ್ನಾಡಲಿವೆ. ಲೀಗ್ ಹಂತದಲ್ಲಿ ಅಗ್ರ ನಾಲ್ಕು ಸ್ಥಾನ ಪಡೆಯುವ ತಂಡಗಳು ಸೆಮಿಫೈನಲ್ ಪ್ರವೇಶಿಸಲಿವೆ. 2019ರಲ್ಲಿ ಇಂಗ್ಲೆಂಡ್’ನಲ್ಲಿ ನಡೆದ ವಿಶ್ವಕಪ್ ಟೂರ್ನಿ ಇದೇ ಫಾರ್ಮ್ಯಾಟ್’ನಲ್ಲಿ ನಡೆದಿತ್ತು. ಐಸಿಸಿ ಏಕದಿನ ವಿಶ್ವಕಪ್’ನಲ್ಲಿ ಇಂಗ್ಲೆಂಡ್ ಹಾಲಿ ಚಾಂಪಿಯನ್ ತಂಡವಾಗಿದೆ. 2019ರ ವಿಶ್ವಕಪ್ ಫೈನಲ್’ನಲ್ಲಿ ಇಂಗ್ಲೆಂಡ್ ತಂಡ ನ್ಯೂಜಿಲೆಂಡ್ ತಂಡವನ್ನು ಸೂಪರ್ ಓವರ್’ನಲ್ಲಿ ಸೋಲಿಸಿ ಚೊಚ್ಚಲ ಬಾರಿ ಟಾಂಪಿಯನ್ ಆಗಿತ್ತು. ಇತ್ತೀಚೆಗೆ ಆಸ್ಟ್ರೇಲಿಯಾದಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲೂ ಇಂಗ್ಲೆಂಡ್ ಪ್ರಶಸ್ತಿ ಮುಡಿಗೇರಿಸಿಕೊಂಡಿತ್ತು.

ಇದನ್ನೂ ಓದಿ : Vijay Hazare Trophy Karnataka : ಪಂಜಾಬ್ ವಿರುದ್ಧ ಸೇಡು ತೀರಿಸಿಕೊಂಡು ಸೆಮಿಫೈನಲ್’ಗೆ ಲಗ್ಗೆ ಇಟ್ಟ ಕರ್ನಾಟಕ

ಇದನ್ನೂ ಓದಿ : Ruturaj Gaikwad: ಒಂದೇ ಓವರ್‌ನಲ್ಲಿ 7 ಸಿಕ್ಸರ್ ಸಿಡಿಸಿ ವಿಶ್ವದಾಖಲೆ ಬರೆದ ರುತುರಾಜ್ ಗಾಯಕ್ವಾಡ್

ಐಸಿಸಿ ಏಕದಿನ ವಿಶ್ವಕಪ್’ನಲ್ಲಿ ಆಸ್ಟ್ರೇಲಿಯಾ ತಂಡ ಅತ್ಯಂತ ಯಶಸ್ವಿ ತಂಡ. ಆಸೀಸ್ ಒಟ್ಟು ಐದು ಬಾರಿ ಚಾಂಪಿಯನ್ ಪಟ್ಟಕ್ಕೇರಿದೆ. 1987ರಲ್ಲಿ ಅಲನ್ ಬಾರ್ಡರ್ ನಾಯಕತ್ವದಲ್ಲಿ ಮೊದಲ ಬಾರಿ ಚಾಂಪಿಯನ್ ಆಗಿದ್ದ ಆಸ್ಟ್ರೇಲಿಯಾ, 1999ರಲ್ಲಿ ಸ್ಟೀವ್ ವ್ಹಾ ನಾಯಕತ್ವದಲ್ಲಿ, 2003 ಮತ್ತು 2007ರಲ್ಲಿ ರಿಕಿ ಪಾಂಟಿಂಗ್ ನಾಯಕತ್ವದಲ್ಲಿ ಮತ್ತು 2015ರಲ್ಲಿ ಮೈಕೆಲ್ ಕ್ಲಾರ್ಕ್ ನಾಯಕತ್ವದಲ್ಲಿ ವಿಶ್ವಕಪ್ ಗೆದ್ದಿತ್ತು. ವೆಸ್ಟ್ ಇಂಡೀಸ್ ಮತ್ತು ಭಾರತ ತಂಡಗಳು 2 ಬಾರಿ ವಿಶ್ವಕಪ್ ಗೆದ್ದಿವೆ. 1983ರಲ್ಲಿ ಕಪಿಲ್ ದೇವ್ ನಾಯಕತ್ವದಲ್ಲಿ ಮೊದಲ ಬಾರಿ ಏಕದಿನ ವಿಶ್ವಕಪ್ ಗೆದ್ದಿದ್ದ ಭಾರತ 2011ರಲ್ಲಿ ಎಂ.ಎಸ್ ಧೋನಿ ಸಾರಥ್ಯದಲ್ಲಿ 2ನೇ ಬಾರಿ ಚಾಂಪಿಯನ್ ಆಗಿತ್ತು.

(ODI World Cup final 2023) India will host the 2023 ICC ODI World Cup tournament. India, which was the champion in the World Cup tournament held in India in 2011, is all set to host the ODI World Cup again after 12 years. The 13th edition of the World Cup tournament will be held in India in the months of October and November. Having hosted the World Cup in 1987, 1996 and 2011, India will be hosting the ODI World Cup for the 4th time.

Comments are closed.