Pro Kabaddi League: ಕೆಂಪುಗೂಳಿಗಳನ್ನು ಹಿಂದಿಕ್ಕಿ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದ ಜೈಪುರ ಪಿಂಕ್ ಪ್ಯಾಂಥರ್ಸ್

ಹೈದರಾಬಾದ್: ಚೊಚ್ಚಲ ಆವೃತ್ತಿಯ Pro Kabaddi League ಚಾಂಪಿಯನ್ ಜೈಪುರ ಪಿಂಕ್ ಪ್ಯಾಂಥರ್ಸ್ ಪಡೆ (Bengaluru bulls vs Jaipur pink panthers) , ಪ್ರೊ ಕಬಡ್ಡಿ ಲೀಗ 9ನೇ ಆವೃತ್ತಿಯ ಅಂಕಪಟ್ಟಿಯಲ್ಲಿ ಬೆಂಗಳೂರು ಬುಲ್ಸ್ ತಂಡವನ್ನು ಹಿಂದಿಕ್ಕಿ 2ನೇ ಸ್ಥಾನಕ್ಕೇರಿದೆ. ಹೈದರಾಬಾದ್’ನ ಗಚ್ಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ಬುಧವಾರ ನಡೆದ 99ನೇ ಲೀಗ್ ಪಂದ್ಯದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡ, ತಮಿಳ್ ತೈಲವಾಸ್ ಪಡೆಯನ್ನು 41-26ರಿಂದ ಭರ್ಜರಿಯಾಗಿ ಮಣಿಸಿ ಲೀಗ್’ನಲ್ಲಿ 11ನೇ ಗೆಲುವನ್ನು ತನ್ನದಾಗಿಸಿಕೊಂಡಿತು. ಈ ಗೆಲುವಿನೊಂದಿಗೆ ಅಂಕಗಳಿಕೆಯನ್ನು 59ಕ್ಕೆ ಏರಿಸಿಕೊಂಡ ಜೈಪುರ, ಪಾಯಿಂಟ್ ಪಟ್ಟಿಯಲ್ಲಿ ಬೆಂಗಳೂರು ಬುಲ್ಸ್ ಬಳಗವನ್ನು ಹಿಂದಕ್ಕೆ ತಳ್ಳಿ 2ನೇ ಸ್ಥಾನಕ್ಕೆ ಲಗ್ಗೆ ಇಟ್ಟಿತು. ಬೆಂಗಳೂರು ಬುಲ್ಸ್ ತಂಡ 17 ಪಂದ್ಯಗಳಲ್ಲಿ 10 ಪಂದ್ಯಗಳನ್ನು ಗೆದ್ದಿದ್ದು 58 ಅಂಕಗಳೊಂದಿಗೆ 3ನೇ ಸ್ಥಾನಕ್ಕೆ ಕುಸಿದಿದೆ.

ತಮಿಳ್ ತಲೈವಾಸ್ ವಿರುದ್ಧದ ಪಂದ್ಯದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ ಪರ ಮತ್ತೆ ಮಿಂಚಿದ ಸ್ಟಾರ್ ಯುವ ರೇಡರ್ ಅರ್ಜುನ್ ದೇಶ್ವಾಲ್ 12 ರೇಡ್ ಪಾಯಿಂಟ್’ಗಳನ್ನು ಕಲೆ ಹಾಕಿ ಗೆಲುವಿನ ರೂವಾರಿಯಾಗಿ ಮೂಡಿ ಬಂದರು. ಜೊತೆಗೆ ಪ್ರಸಕ್ತ ಲೀಗ್’ನಲ್ಲಿ 200 ರೇಡ್ ಪಾಯಿಂಟ್ ಗಳಿಸಿದ ಮೊದಲ ರೇಡರ್ ಎಂಬ ಹಿರಿಮೆಗೆ ಅರ್ಜುನ್ ದೇಶ್ವಾಲ್ ಪಾತ್ರರಾದರು. ದಿನದ ಮತ್ತೊಂದು ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ಸವಾಲನ್ನು 50-47ರಲ್ಲಿ ಹಿಮ್ಮೆಟ್ಟಿಸಿದ ಹಾಲಿ ಚಾಂಪಿಯನ್ ದಬಾಂಗ್ ಡೆಲ್ಲಿ ತಂಡ, 9ನೇ ಗೆಲುವಿನೊಂದಿಗೆ ಪ್ಲೇ ಆಫ್ ಕನಸನ್ನು ಜೀವಂತವಾಗಿಟ್ಟುಕೊಂಡಿತು. ದಿನದ ಮೂರನೇ ಪಂದ್ಯದಲ್ಲಿ ಹರ್ಯಾಣ ಸ್ಟೀಲರ್ಸ್ ವಿರುದ್ಧ 23-33ರಲ್ಲಿ ಮುಗ್ಗರಿಸಿದ ಮೂರು ಬಾರಿಯ ಚಾಂಪಿಯನ್ಸ್ ಪಾಟ್ನಾ ಪೈರೇಟ್ಸ್ ಅಂಕಪಟ್ಟಿಯಲ್ಲಿ 8ನೇ ಸ್ಥಾನಕ್ಕೆ ಕುಸಿಯಿತು. ಇದನ್ನೂ ಓದಿ : 6 ಪಂದ್ಯ 5 ಶತಕ : ಸ್ಪೋಟಕ ಆಟಗಾರನನ್ನೇ ಕೈಬಿಟ್ಟ ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್

ಇದನ್ನೂ ಓದಿ : Bengaluru Bulls vs Bengal warriors : ಬೆಂಗಾಲ್ ವಿರುದ್ಧ ಬೆಂಗಳೂರು ಬುಲ್ಸ್‌ಗೆ ಸೋಲು, ಜೈಪುರ ವಿರುದ್ಧ ಗೆದ್ದ ಪುಣೇರಿ ಪಲ್ಟನ್

Pro Kabaddi League : ಪ್ರೊ ಕಬಡ್ಡಿ ಲೀಗ್-9: ಶನಿವಾರದ ಪಂದ್ಯಗಳು

  • ಯು ಮುಂಬಾ Vs ಬೆಂಗಾಲ್ ವಾರಿಯರ್ಸ್
  • ಪುಣೇರಿ ಪಲ್ಟನ್ Vs ತೆಲುಗು ಟೈಟನ್ಸ್
  • ಯು.ಪಿ ಯೋಧಾ Vs ಪಾಟ್ನಾ ಪೈರೇಟ್ಸ್

ಸ್ಥಳ: ಗಚ್ಚಿಬೌಲಿ ಒಳಾಂಗಣ ಕ್ರೀಡಾಂಗಣ, ಹೈದರಾಬಾದ್
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್
ಲೈವ್ ಸ್ಟ್ರೀಮಿಂಗ್: ಡಿಸ್ನಿ+ಹಾಟ್ ಸ್ಟಾರ್

ಇದನ್ನೂ ಓದಿ : 6 ಪಂದ್ಯ 5 ಶತಕ : ಸ್ಪೋಟಕ ಆಟಗಾರನನ್ನೇ ಕೈಬಿಟ್ಟ ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್

Bengaluru bulls vs Jaipur pink panthers PKL Jaipur Top Rank Pro Kabaddi League

Comments are closed.