ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಮುಖ್ಯ ತರಬೇತುದಾರರಾಗಿರುವ ಬ್ರೆಂಡನ್ ಮೆಕಲಮ್ (Brendon McCullum) ಇದೀಗ ಇಂಗ್ಲೆಂಡ್ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದಾರೆ. ಈ ಕುರಿತು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ದೃಢಪಡಿಸಿದೆ. ಜೊತೆಗೆ ಪ್ಲೇ ಆಫ್ ಕನಸು ಕಾಣುತ್ತಿರುವ ಕೋಲ್ಕತ್ತಾ ತಂಡವನ್ನು ಮೆಕಲಮ್ ತೊರೆಯುತ್ತಾರಾ ಅನ್ನೋ ನಿರೀಕ್ಷೆ ಹುಟ್ಟುಹಾಕಿದೆ.
ಮೆಕಲಮ್ ಪ್ರಸ್ತುತ ಕೋಲ್ಕತ್ತಾ ನೈಟ್ ರೈಡರ್ಸ್‌ನ ಮುಖ್ಯ ತರಬೇತುದಾರರಾಗಿ ಭಾರತದಲ್ಲಿದ್ದಾರೆ. KKR IPL 2022 ರ ಪ್ಲೇಆಫ್‌ಗೆ ಅರ್ಹತೆ ಪಡೆಯುವ ಸಾಧ್ಯತೆಗಳನ್ನು ಅವಲಂಬಿಸಿ ಅವರು ಇಂಗ್ಲೆಂಡ್‌ಗೆ ತೆರಳುವ ಸಾಧ್ಯತೆಯಿದೆ. ಬ್ರೆಂಡನ್ ಮೆಕಲಮ್ ಅವರನ್ನು ಇಂಗ್ಲೆಂಡ್ ಪುರುಷರ ತಂಡಕ್ಕೆ ಮುಖ್ಯ ಕೋಚ್ ಆಗಿ ನೇಮಕ ಮಾಡಿರುವುದು ಸಂತಸವನ್ನು ತಂಇದೆ. ಅನುಭವಿ ಕೋಚ್ ನೇಮಕದಿಂದ ಇಂಗ್ಲೆಂಡ್ ಟೆಸ್ಟ್ ತಂಡಕ್ಕೆ ಸಹಕಾರಿಯಾಗಲಿದೆ ಎಂದು ಇಂಗ್ಲೆಂಡ್‌ನ ಪುರುಷರ ಕ್ರಿಕೆಟ್ ನಿರ್ದೇಶಕ ರಾಬ್ ಕೀ ಹೇಳಿದ್ದಾರೆ.
ಇಂಗ್ಲೆಂಡ್‌ನ ಟೆಸ್ಟ್ ಕ್ರಿಕೆಟ್ ಸೆಟ್-ಅಪ್‌ಗೆ ಧನಾತ್ಮಕವಾಗಿ ಕೊಡುಗೆ ನೀಡಲು ಮತ್ತು ತಂಡವನ್ನು ಹೆಚ್ಚು ಯಶಸ್ವಿ ಯುಗಕ್ಕೆ ಮುನ್ನಡೆಸಲು ಈ ಅವಕಾಶವನ್ನು ನೀಡಿದ್ದಕ್ಕಾಗಿ ನನಗೆ ಎಷ್ಟು ಸಂತೋಷವಾಗಿದೆ ಎಂದು ಹೇಳಲು ನಾನು ಬಯಸುತ್ತೇನೆ ಎಂದು ಮೆಕಲಮ್ ಹೇಳಿದ್ದಾರೆ. ಅಲ್ಲದೇ ಕೋಚ್ ಹುದ್ದೆ ವಹಿಸಿಕೊಳ್ಳುವಲ್ಲಿ, ಪ್ರಸ್ತುತ ತಂಡವು ಎದುರಿಸುತ್ತಿರುವ ಮಹತ್ವದ ಸವಾಲುಗಳ ಬಗ್ಗೆ ನನಗೆ ಚೆನ್ನಾಗಿ ತಿಳಿದಿದೆ. ನಾವು ಅವರನ್ನು ಮುಖಾಮುಖಿಯಾಗಿ ಎದುರಿಸಿದ ನಂತರ ತಂಡವು ಪ್ರಬಲ ಶಕ್ತಿಯಾಗಿ ಹೊರಹೊಮ್ಮಲು ಸಹಾಯ ಮಾಡುವ ನನ್ನ ಸಾಮರ್ಥ್ಯವನ್ನು ನಾನು ಬಲವಾಗಿ ನಂಬುತ್ತೇನೆ ಎಂದಿದ್ದಾರೆ.
ಬ್ರೆಂಡನ್ ಮೆಕಲಮ್ ನ್ಯೂಜಿಲೆಂಡ್ ತಂಡವನ್ನು ಸುದೀರ್ಘ ಅವಧಿಯ ವರೆಗೆ ಪ್ರತಿನಿಧಿಸಿದ್ದಾರೆ. ಅಲ್ಲದೇ ನಾಯಕನಾಗಿಯೂ ತಂಡವನ್ನು ಮುನ್ನೆಡೆಸಿದ್ದಾರೆ. ಇದುವರೆಗೆ ಮೆಕಲಮ್ ಒಟ್ಟು 101 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 6453 ರನ್ ಬಾರಿಸಿದ್ದಾರೆ. ಇದರಲ್ಲಿ 12 ಶತಕ ಹಾಗೂ 31 ಅರ್ಧ ಶತಕ ಒಳಗೊಂಡಿದೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಅತ್ಯಧಿಕ 302 ರನ್ ಬಾರಿಸಿದ ಸಾಧನೆಯನ್ನು ಮಾಡಿದ್ದಾರೆ. ಇನ್ನು 260 ಏಕದಿನ ಪಂದ್ಯಗಳನ್ನು ಆಡಿರುವ ಮೆಕಲಮ್ 6,08 3ರನ್ ಬಾರಿಸಿದ್ದಾರೆ. 5ಶತಕ ಹಾಗೂ 32 ಅರ್ಧ ಶತಕಗಳನ್ನು ಒಳಗೊಂಡಿದೆ. ಇನ್ನು ಚುಟುಕು ಕ್ರಿಕೆಟ್‌ನಲ್ಲಿಯೂ ಮೆಕಲಮ್ ಸ್ಪೋಟಕ ಆಟವನ್ನಾಡಿದ್ದಾರೆ. ಇದುವರೆಗೆ ಒಟ್ಟು 71 ಟಿ20 ಪಂದ್ಯಗಳನ್ನು ಆಡಿರುವ ಮೆಕಲಮ್ 2,180 ರನ್ ಬಾರಿಸಿದ್ದಾರೆ. ಇದರಲ್ಲಿ 2 ಶತಕ ಹಾಗೂ 13 ಅರ್ಧ ಶತಕ ಒಳಗೊಂಡಿದೆ.
Say hello to our new boss! 👋@Bazmccullum | #EnglandCricket pic.twitter.com/T6CiX5OgE5
— England Cricket (@englandcricket) May 12, 2022
ಐಪಿಎಲ್ ನಲ್ಲಿಯೂ ಮೆಕಲಮ್ ಹಲವು ತಂಡಗಳನ್ನು ಪ್ರತಿನಿಧಿಸಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್, ಕೊಚ್ಚಿ ಟಸ್ಕರ್ಸ್ ಕೇರಳ, ಕೋಲ್ಕತ್ತಾ ನೈಟ್ ರೈಡರ್ಸ್, ಗುಜರಾತ್ ಲಯನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸಿದ್ದಾರೆ. ಸದ್ಯ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಮುಖ್ಯ ಕೋಚ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
"I'm no stranger to bringing about change within a team environment, and I can't wait to get started."
— England Cricket (@englandcricket) May 12, 2022
ಇದನ್ನೂ ಓದಿ : ಚೆನ್ನೈ ಸೂಪರ್ ಕಿಂಗ್ಸ್ ನಾಯಕ ರವೀಂದ್ರ ಜಡೇಜಾ ಐಪಿಎಲ್‌ನಿಂದ ಔಟ್
ಇದನ್ನೂ ಓದಿ : MS Dhoni : ಸಿನಿಮಾ ನಿರ್ಮಾಣಕ್ಕೆ ಮುಂದಾದ್ರು ಮಹೇಂದ್ರ ಸಿಂಗ್ ಧೋನಿ
Brendon McCullum IPL 2022 KKR Coach named England new Test coach