India vs Newzealand : ನ್ಯೂಜಿಲೆಂಡ್‌ಗೆ ಹಿನಾಯ ಸೋಲು : ಸರಣಿ ಕ್ಲೀನ್‌ ಸ್ವೀಪ್‌ ಮಾಡಿದ ಭಾರತ

ಕೋಲ್ಕತ್ತಾ : ನ್ಯೂಜಿಲೆಂಡ್‌ ವಿರುದ್ದ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಮೂರು ಪಂದ್ಯಗಳನ್ನೂ ಗೆಲ್ಲುವ ಮೂಲಕ ಭಾರತ (India vs Newzealand) ಕ್ಲೀನ್‌ ಸ್ವೀಪ್‌ ಮಾಡಿದೆ. ರೋಹಿತ್‌ ಶರ್ಮಾ (56ರನ್ ) ಸ್ಪೋಟಕ ಬ್ಯಾಟಿಂಗ್‌ ಹಾಗೂ ಅಕ್ಷರ್‌ ಪಟೇಲ್‌ (9/3) ಸ್ಪಿನ್‌ ಮೋಡಿ ಮಂಕಾದ ನ್ಯೂಜಿಲೆಂಡ್‌ ತಂಡ ಕೇವಲ ರನ್‌ ಗಳಿಸಲಷ್ಟೇ ಶಕ್ತವಾಗಿದೆ. ಈ ಮೂಲಕ ಟೀಂ ಇಂಡಿಯಾ ಭರ್ಜರಿ 73 ರನ್‌ ಗೆಲುವು ದಾಖಲಿಸಿದೆ. ಈ ಮೂಲಕ ಸರಣಿಯನ್ನು ಕ್ಲೀನ್‌ ಸ್ವೀಪ್‌ ಮಾಡಿದೆ.

ಕೋಲ್ಕತ್ತಾದ ಈಡನ್‌ ಗಾರ್ಡನ್‌ನಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಟೀಂ ಇಂಡಿಯಾ ಪರ ರೋಹಿತ್‌ ಶರ್ಮ ಹಾಗೂ ಇಶನ್‌ ಕಿಶನ್‌ ಅದ್ಬುತ ಬ್ಯಾಟಿಂಗ್‌ ಪ್ರದರ್ಶನ ನೀಡಿದ್ದಾರೆ. ಕೆ.ಎಲ್.ರಾಹುಲ್‌ ಬದಲು ಸ್ಥಾನ ಪಡೆದಿದ್ದ ಇಶಾನ್‌ ಕಿಶನ್‌ 21 ಎಸೆತಗಳಲ್ಲಿ 29 ರನ್‌ ರನ್‌ ಸಿಡಿಸಿದ್ರೆ, ನಾಯಕ ರೋಹಿತ್‌ ಶರ್ಮಾ 31ಎಸೆತಗಳಲ್ಲಿ 3 ಸಿಕ್ಸರ್‌ ಹಾಗೂ 5 ಬೌಂಡರಿ ನೆರವಿನಿಂದ ಬರೋಬ್ಬರಿ 56 ರನ್‌ ಸಿಡಿಸಿದ್ದಾರೆ. ನಂತರ ಕ್ರೀಸ್‌ಗೆ ಬಂದ ಸೂರ್ಯ ಕುಮಾರ್‌ ಯಾದವ್‌ ಶೂನ್ಯಕ್ಕೆ ಔಟಾದ್ರೆ, ರಿಷಬ್‌ ಪಂತ್‌ ಆಟ 4 ರನ್‌ಗಳಿಗೆ ಕೊನೆಯಾಯ್ತು. ನಂತರ ಶ್ರೇಯಸ್‌ ಅಯ್ಯರ್‌ ಜೊತೆಯಾದ ವೆಂಕಟೇಶ್‌ ಅಯ್ಯರ್‌ ಉತ್ತಮ ಜೊತೆಯಾಟ ನೀಡಿದ್ರು. ಶ್ರೇಯಸ್‌ ಅಯ್ಯರ್‌ 20 ಎಸೆತಗಳಲ್ಲಿ 25 ರನ್‌ ಹಾಗೂ ವೆಂಕಟೇಶ್‌ ಅಯ್ಯರ್‌ 15 ಎಸೆತಗಳಲ್ಲಿ 20 ರನ್‌ ಬಾರಿಸಿದ್ದಾರೆ. ಈ ಮೂಲಕ ಟೀಂ ಇಂಡಿಯಾ 20 ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡು 184 ರನ್‌ ಗಳಿಸಿದೆ. ನ್ಯೂಜಿಲೆಂಡ್‌ ಪರ ಸಂತ್ನರ್‌ 3 ವಿಕೆಟ್‌ ಪಡೆದುಕೊಂಡಿದ್ರೆ, ಬೌಲ್ಟ್‌, ಮಿಲ್ನೆ, ಫರ್ಗುಸನ್‌ ಹಾಗೂ ಇಶಾ ಸೋದಿ ತಲಾ ಒಂದು ವಿಕೆಟ್‌ ಪಡೆದಿದ್ದಾರೆ.

ಭಾರತ ನೀಡಿದ್ದ ಸವಾಲಿನ ಮೊತ್ತವನ್ನು ಬೆನ್ನತ್ತಿದ ನ್ಯೂಜಿಲೆಂಡ್‌ ತಂಡಕ್ಕೆ ಆಲ್‌ರೌಂಡರ್‌ ಅಕ್ಷರ್‌ ಪಟೇಲ್‌ ಆಘಾತ ನೀಡಿದ್ದಾರೆ. 5 ರನ್‌ ಗಳಿಸಿದ್ದ ಡೆರಿಲ್‌ ಮಿಚೆಲ್‌ಗೆ ಫೆವಿಲಿಯನ್‌ ಹಾದಿ ತೋರಿಸಿದ್ದ ಅಕ್ಷರ್‌ ಪಟೇಲ್‌, ಮಾರ್ಕ್‌ ಚಾಪ್ಮನ್‌ ಹಾಗೂ ಗ್ಲೆನ್‌ ಫಿಲಿಫ್‌ ಅವರನ್ನು ಶೂನ್ಯಕ್ಕೆ ಔಟ್‌ ಮಾಡುವ ಮೂಲಕ ಆಘಾತ ನೀಡಿದ್ದಾರೆ. ಆಕರ್ಷಕ ಅರ್ಧಶತಕ ಸಿಡಿಸಿದ್ದ ಮಾರ್ಟಿನ್‌ ಗಫ್ಟಿಲ್‌ಗೆ ಚಹಲ್‌ ಫೆವಿಲಿಯನ್‌ ಹಾದಿ ತೋರಿಸಿದ್ದಾರೆ. ನಂತರದಲ್ಲಿ ಯಾವೊಬ್ಬ ಆಟಗಾರರು ಕೂಡ ಕ್ರೀಸ್‌ಗೆ ಅಂಟಿಕೊಂಡು ಆಡುವಲ್ಲಿ ವಿಫರಾಗಿದ್ದಾರೆ.

ಸಂಕ್ಷಿಪ್ತ ಸ್ಕೋರ್‌ :
ಭಾರತ : ರೋಹಿತ್‌ ಶರ್ಮಾ 56, ಇಶಾನ್‌ ಕಿಶನ್‌ 29, ಶ್ರೇಯಸ್‌ ಅಯ್ಯರ್‌ 25, ದೀಪಕ್‌ ಚಹರ್‌ 21, ವೆಂಕಟೇಶ್‌ ಅಯ್ಯರ್‌ 20, ಹರ್ಷಲ್‌ ಪಟೇಲ್‌ 18, ಮಿಚೆಲ್‌ ಸತ್ನರ್‌ 27/3, ಟ್ರೆಂಟ್‌ ಬೌಲ್ಟ್‌ 31/1, ಇಶಾ ಸೋದಿ 31/1, ಅಡಂ ಮಿಲ್ನೆ 47/1, ಲುಕಿ ಫರ್ಗುಸನ್‌45/1

ನ್ಯೂಜಿಲೆಂಡ್‌ : ಮಾರ್ಟಿನ್‌ ಗುಫ್ಟಿಲ್‌ 51, ಟೀಮ್‌ ಸೈಫರ್ಟ್‌ 17, ಅಕ್ಷರ್‌ ಪಟೇಲ್‌ 9/3, ಹರ್ಷಲ್‌ ಪಟೇಲ್‌ 26/2, ಯಜುವೇಂದ್ರ ಚಹಲ್‌ 26/1, ವೆಂಕಟೇಶ್‌ ಅಯ್ಯರ್‌ 12/1, ದೀಪಕ್‌ ಚಹರ್‌ 26/1

ಇದನ್ನೂ ಓದಿ : Syed Mushtaq Ali Trophy : ಮನೀಶ್‌ ಪಾಂಡೆ, ಕದಂ ಆರ್ಭಟ : ಫೈನಲ್‌ಗೆ ಲಗ್ಗೆ ಇಟ್ಟ ಕರ್ನಾಟಕ

ಇದನ್ನೂ ಓದಿ : ರೋಹಿತ್‌ ಶರ್ಮಾ ಅರ್ಧ ಶತಕ, ಅಕ್ಷರ್‌ ಪಟೇಲ್‌ ಸ್ಪಿನ್‌ ಮೋಡಿಗೆ ಕಂಗಾಲಾದ ನ್ಯೂಜಿಲೆಂಡ್‌

( India beat NewZealand by 73 runs and series clean sweep)

Comments are closed.