Rohit Sharma – Axar Patel : ರೋಹಿತ್‌ ಶರ್ಮಾ ಅರ್ಧ ಶತಕ, ಅಕ್ಷರ್‌ ಪಟೇಲ್‌ ಸ್ಪಿನ್‌ ಮೋಡಿಗೆ ಕಂಗಾಲಾದ ನ್ಯೂಜಿಲೆಂಡ್‌

ಕೋಲ್ಕತ್ತಾ : ನ್ಯೂಜಿಲೆಂಡ್‌ ಹಾಗೂ ಟೀಂ ಇಂಡಿಯಾ ನಡುವಿನ ಮೂರು ಪಂದ್ಯಗಳ ಟಿ ೨೦ ಪಂದ್ಯದಲ್ಲಿ ಭಾರತ ಭರ್ಜರಿ ಆಟದ ಪ್ರದರ್ಶನ ನೀಡಿದೆ. ಟೀಂ ಇಂಡಿಯಾ ನಾಯಕ ರೋಹಿತ್‌ ಶರ್ಮಾ (Rohit Sharma)ಆಕರ್ಷಕ ಅರ್ಧ ಶತಕ ಹಾಗೂ ಆಲ್‌ರೌಂಡರ್‌ ಅಕ್ಷರ್‌ ಪಟೇಲ್‌ (Axar Patel) ಸ್ಪಿನ್‌ ಮೋಡಿಗೆ ನ್ಯೂಜಿಲೆಂಡ್‌ ಕಂಗಾಲಾಗಿದೆ.

ಕೋಲ್ಕತ್ತಾದ ಈಡನ್‌ ಗಾರ್ಡನ್‌ನಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಟೀಂ ಇಂಡಿಯಾ ಪರ ರೋಹಿತ್‌ ಶರ್ಮ ಹಾಗೂ ಇಶನ್‌ ಕಿಶನ್‌ ಅದ್ಬುತ ಬ್ಯಾಟಿಂಗ್‌ ಪ್ರದರ್ಶನ ನೀಡಿದ್ದಾರೆ. ಕೆ.ಎಲ್.ರಾಹುಲ್‌ ಬದಲು ಸ್ಥಾನ ಪಡೆದಿದ್ದ ಇಶಾನ್‌ ಕಿಶನ್‌ 21 ಎಸೆತಗಳಲ್ಲಿ 29 ರನ್‌ ರನ್‌ ಸಿಡಿಸಿದ್ರೆ, ನಾಯಕ ರೋಹಿತ್‌ ಶರ್ಮಾ 31ಎಸೆತಗಳಲ್ಲಿ 3 ಸಿಕ್ಸರ್‌ ಹಾಗೂ 5 ಬೌಂಡರಿ ನೆರವಿನಿಂದ ಬರೋಬ್ಬರಿ 56 ರನ್‌ ಸಿಡಿಸಿದ್ದಾರೆ. ನಂತರ ಕ್ರೀಸ್‌ಗೆ ಬಂದ ಸೂರ್ಯ ಕುಮಾರ್‌ ಯಾದವ್‌ ಶೂನ್ಯಕ್ಕೆ ಔಟಾದ್ರೆ, ರಿಷಬ್‌ ಪಂತ್‌ ಆಟ 4 ರನ್‌ಗಳಿಗೆ ಕೊನೆಯಾಯ್ತು. ನಂತರ ಶ್ರೇಯಸ್‌ ಅಯ್ಯರ್‌ ಜೊತೆಯಾದ ವೆಂಕಟೇಶ್‌ ಅಯ್ಯರ್‌ ಉತ್ತಮ ಜೊತೆಯಾಟ ನೀಡಿದ್ರು. ಶ್ರೇಯಸ್‌ ಅಯ್ಯರ್‌ 20 ಎಸೆತಗಳಲ್ಲಿ 25 ರನ್‌ ಹಾಗೂ ವೆಂಕಟೇಶ್‌ ಅಯ್ಯರ್‌ 15 ಎಸೆತಗಳಲ್ಲಿ 20 ರನ್‌ ಬಾರಿಸಿದ್ದಾರೆ. ಈ ಮೂಲಕ ಟೀಂ ಇಂಡಿಯಾ 20 ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡು 184 ರನ್‌ ಗಳಿಸಿದೆ. ನ್ಯೂಜಿಲೆಂಡ್‌ ಪರ ಸಂತ್ನರ್‌ 3 ವಿಕೆಟ್‌ ಪಡೆದುಕೊಂಡಿದ್ರೆ, ಬೌಲ್ಟ್‌, ಮಿಲ್ನೆ, ಫರ್ಗುಸನ್‌ ಹಾಗೂ ಇಶಾ ಸೋದಿ ತಲಾ ಒಂದು ವಿಕೆಟ್‌ ಪಡೆದಿದ್ದಾರೆ.

ಭಾರತ ನೀಡಿದ್ದ ಸವಾಲಿನ ಮೊತ್ತವನ್ನು ಬೆನ್ನತ್ತಿದ ನ್ಯೂಜಿಲೆಂಡ್‌ ತಂಡಕ್ಕೆ ಆಲ್‌ರೌಂಡರ್‌ ಅಕ್ಷರ್‌ ಪಟೇಲ್‌ ಆಘಾತ ನೀಡಿದ್ದಾರೆ. 5 ರನ್‌ ಗಳಿಸಿದ್ದ ಡೆರಿಲ್‌ ಮಿಚೆಲ್‌ಗೆ ಫೆವಿಲಿಯನ್‌ ಹಾದಿ ತೋರಿಸಿದ್ದ ಅಕ್ಷರ್‌ ಪಟೇಲ್‌, ಮಾರ್ಕ್‌ ಚಾಪ್ಮನ್‌ ಹಾಗೂ ಗ್ಲೆನ್‌ ಫಿಲಿಫ್‌ ಅವರನ್ನು ಶೂನ್ಯಕ್ಕೆ ಔಟ್‌ ಮಾಡುವ ಮೂಲಕ ಆಘಾತ ನೀಡಿದ್ದಾರೆ. ಆಕರ್ಷಕ ಅರ್ಧಶತಕ ಸಿಡಿಸಿದ್ದ ಮಾರ್ಟಿನ್‌ ಗಫ್ಟಿಲ್‌ಗೆ ಚಹಲ್‌ ಫೆವಿಲಿಯನ್‌ ಹಾದಿ ತೋರಿಸಿದ್ದಾರೆ.

ಇದನ್ನೂ ಓದಿ : Syed Mushtaq Ali Trophy : ಮನೀಶ್‌ ಪಾಂಡೆ, ಕದಂ ಆರ್ಭಟ : ಫೈನಲ್‌ಗೆ ಲಗ್ಗೆ ಇಟ್ಟ ಕರ್ನಾಟಕ

ಇದನ್ನೂ ಓದಿ : ರಾಹುಲ್‌ – ರೋಹಿತ್‌ ಆರ್ಭಟ, ಸರಣಿ ಕೈವಶ ಮಾಡಿಕೊಂಡ ಟೀಂ ಇಂಡಿಯಾ

(India Vs New Zealand 3rd T20 match Rohit Sharma Half century and Axar Patel gets 3 wickets)

Comments are closed.