CSK WIN IPL 2021 : 4ನೇ ಬಾರಿ ಐಪಿಎಲ್‌ ಟ್ರೋಫಿ ಗೆದ್ದ ಧೋನಿ ಪಡೆ : ಸಿಎಸ್‌ಕೆ ಎದುರು ಮುಗ್ಗರಿಸಿದ ಕೆಕೆಆರ್‌

ದುಬೈ : ಇಂಡಿಯನ್‌ ಪ್ರೀಮಿಯರ್‌ ಲೀಗ್‌ ( IPL 2021)ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಹೊಸ ಇತಿಹಾಸವನ್ನೇ ಬರೆದಿದೆ. ಕೊಲ್ಕತ್ತಾ ನೈಟ್‌ ರೈಡರ್ಸ್‌ ತಂಡವನ್ನು ಸೋಲಿಸುವ ಮೂಲಕ ಮಹೇಂದ್ರ ಸಿಂಗ್‌ ಧೋನಿ ಪಡೆದ ನಾಲ್ಕನೇ ಬಾರಿ ಐಪಿಎಲ್‌ ಟ್ರೋಫಿಗೆ ಮುತ್ತಿಕ್ಕಿದೆ. ಮೊದಲು ಬ್ಯಾಟಿಂಗ್‌ ನಡೆಸಿದ್ದ ಚೆನ್ನೈ ಸೂಪರ್‌ ಕಿಂಗ್ಸ್‌ ನೀಡಿದ್ದ 193 ರನ್‌ ಗೆಲುವಿನ ಗುರಿಯನ್ನು ಬೆನ್ನತ್ತಿದ ಕೋಲ್ಕತ್ತಾ ತಂಡ ಗೆಲುವನ್ನು ಕಾಣಲು ವಿಫಲವಾಗಿದೆ.

ಮೊದಲು ಬ್ಯಾಟಿಂಗ್‌ ನಡೆಸಿದ್ದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಕ್ಕೆ ಆರಂಭಿಕರಾದ ರುತುರಾಜ್‌ ಗಾಯಕ್ವಾಡ್‌ ಹಾಗೂ ಫಾಪ್‌ ಡು ಪ್ಲಸೀಸ್‌ ಉತ್ತಮ ಆರಂಭವೊದಗಿಸಿದ್ರು. ಮೊದಲ ವಿಕೆಟ್‌ಗೆ 61ರನ್‌ ಜೊತೆಯಾಟ ನೀಡಿದ್ರು 32 ರನ್‌ಗಳಿಸಿದ್ದ ರುತುರಾಜ್‌ ಗಾಯಕ್ವಾಡ್ ಸುನಿಲ್‌ ನರೆನ್‌ಗೆ ವಿಕೆಟ್‌ ಒಪ್ಪಿಸಿದ್ರೆ, ಒಂದನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದ ಕನ್ನಡಿಗ ರಾಬಿನ್‌ ಉತ್ತಮ 15 ಎಸೆತಗಳಲ್ಲಿ ಬರೋಬ್ಬರಿ 31 ರನ್‌ಗಳಿಸಿದ್ರು. ನಂತರದಲ್ಲಿ ಸ್ಪೋಟಕ ಬ್ಯಾಟಿಂಗ್‌ ನಡೆಸಿದ ಪಾಪ್‌ ಡುಪ್ಲಸೀಸ್‌ 59 ಎಸೆತಗಳಲ್ಲಿ 3 ಸಿಕ್ಸರ್‌ ಹಾಗೂ 7 ಬೌಂಡರಿ ನೆರವಿನಿಂದ ಬರೋಬ್ಬರಿ 86 ರನ್‌ ಗಳಿಸಿದ್ದಾರೆ. ಇನ್ನೊಂದೆಡೆ ಮೋಯಿನ್‌ ಅಲಿ ಕೂಡ ಅಬ್ಬರ ಬ್ಯಾಟಿಂಗ್‌ ನಡೆಸಿದ್ದು 37 ರನ್‌ ಕಲೆ ಹಾಕಿದ್ದಾರೆ. ಈ ಮೂಲಕ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ 20 ಓವರ್‌ಗಳಲ್ಲಿ ಮೂರು ವಿಕೆಟ್‌ ಕಳೆದುಕೊಂಡು 192 ರನ್‌ ಗಳಿಸಿತ್ತು. ಕೊಲ್ಕತ್ತಾ ಪರ ಸುನಿಲ್‌ ನರೇನ್‌ 2 ವಿಕೆಟ್‌ ಪಡೆದುಕೊಂಡ್ರೆ ಮಾವೆ 1 ವಿಕೆಟ್‌ ಕಬಳಿಸಿದ್ದಾರೆ.

ಚೆನ್ನೈ ಸೂಪರ್‌ ಕಿಂಗ್ಸ್‌ ನೀಡಿದ್ದ ಬೆನ್ನತ್ತಿದ ಕೋಲ್ಕತ್ತಾ ನೈಟ್ ರೈಡರ್ಸ್‌ ತಂಡಕ್ಕೆ ಆರಂಭಿಕರಾದ ಶುಭಮನ್‌ ಗಿಲ್‌ ಹಾಗೂ ವೆಂಕಟೇಶ್‌ ಅಯ್ಯರ್‌ ಉತ್ತಮ ಜೊತೆಯಾಟ ನೀಡಿದ್ರು. ಮೊದಲ ವಿಕೆಟ್‌ಗೆ ಈ ಜೋಡಿ ಬರೊಬ್ಬರಿ 91ರನ್‌ ಜೊತೆಯಾಟ ನೀಡಿತ್ತು. ಆದರೆ 32 ಎಸೆತಗಳನ್ನು ಎದುರಿಸಿದ್ದ ವೆಂಕಟೇಶ್‌ ಅಯ್ಯರ್‌ ಆಕರ್ಷಕ ಅರ್ಧಶತಕ ಗಳಿಸುತ್ತಿದ್ದಂತೆಯೇ ಶಾರ್ದೂಲ್‌ ಠಾಕೂರ್‌ಗೆ ವಿಕೆಟ್‌ ಒಪ್ಪಿಸಿದ್ರು. ನಂತರ ಕ್ರೀಸ್‌ಗೆ ಬಂದ ನಿತೀಶ್‌ ರಾಣಾಗೆ ಕೂಡ ಠಾಕೂರ್‌ ಮಾರಕವಾಗಿ ಕಾಡಿದ್ದಾರೆ. ಇದರಿಂದಾಗಿ ಒಂದು ಎಸೆತ ಎದುರಿಸಿದ್ದ ರಾಣಾ ಸೊನ್ನೆಗೆ ವಿಕೆಟ್‌ ಒಪ್ಪಿಸಿದ್ದಾರೆ. ಇನ್ನು ಶುಭಮನ್‌ ಗಿಲ್‌ ಜೊತೆಯಾದ ಸುನಿಲ್‌ ನರೇನ್‌ 2, ನಾಯಕ ಮಾರ್ಗನ್‌ ೪ರನ್‌ ಗಳಿಸಿ ಹಜಲ್‌ವುಡ್‌ಗೆ ವಿಕೆಟ್‌ ಒಪ್ಪಿಸಿದ್ರು. ನಂತರದಲ್ಲಿ ಜಡೆಜಾ ಕೊಲ್ಕತ್ತಾ ಆಟಗಾರರನ್ನು ಇನ್ನಿಲ್ಲದಂತೆ ಕಾಡಿದ್ದಾರೆ. ಇದರಿಂದಾಗಿ ದಿನೇಶ್‌ ಕಾರ್ತಿಕ್‌, ಶಕಿಬ್‌ ಅಲ್‌ ಹಸನ್‌ ಎರಡಂಕಿ ದಾಟುವ ಮೊದಲೇ ಫೆವಿಲಿಯನ್‌ ಹಾದಿ ಹಿಡಿದಿದ್ದರು. ಇನ್ನು ಕಳೆದ ಪಂದ್ಯದ ಹಿರೋ ರಾಹುಲ್‌ ತ್ರಿಪಾಠಿ ಆಟ ಕೇವಲ 2 ರನ್‌ಗಳಿಗೆ ಸೀಮಿತವಾಯ್ತು.

ನಂತರ ಬಂದ ಲುಕ್‌ ಫರ್ಗುಸನ್‌, ಹಾಗೂ ಶಿವಂ ಮಾವೆ ಉತ್ತಮ ಆಟವಾಡಿದ್ರೂ ಕೂಡ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ವಿಫಲರಾಗಿದ್ದಾರೆ. ಶಾರ್ದೂಲ್‌ ಠಾಕೂರ್‌ 3, ಜೋಸ್‌ ಹಜಲ್‌ವುಡ್‌ 2, ರವೀಂದ್ರ ಜಡೇಜಾ 2, ಡ್ವೇನ್‌ ಬ್ರಾವೋ 1 ಹಾಗೂ ದೀಪಕ್‌ ಚಹರ್‌ 1 ವಿಕೆಟ್‌ ಪಡೆದುಕೊಂಡಿದ್ದಾರೆ.

4 ಬಾರಿ IPL WINNERS, 5 ಬಾರಿ RUNNERS !

ಮಹೇಂದ್ರ ಸಿಂಗ್‌ ಧೋನಿ ನೇತೃತ್ವದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಐಪಿಎಲ್‌ ಪಂದ್ಯಾವಳಿಯುದ್ದಕ್ಕೂ ಭರ್ಜರಿ ಪ್ರದರ್ಶನವನ್ನು ನೀಡಿದೆ. ಬರೋಬ್ಬರಿ ಮೂರು ವರ್ಷಗಳ ತರುವಾಯ ಚೆನ್ನೈ ಸೂಪರ್‌ ಕಿಂಗ್‌ ತಂಡ ಐಪಿಎಲ್‌ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ. 2019ರಲ್ಲಿ ಫೈನಲ್‌ ಪ್ರವೇಶಿಸಿದ್ದರೂ ಕೂಡ ಅಂತಿಮ ಹಂತದಲ್ಲಿ ಮುಗ್ಗರಿಸಿತ್ತು. ಚೆನ್ನೈ ಸೂಪರ್‌ ಕಿಂಗ್ಸ್‌ ಇದುವರೆಗೆ ಒಟ್ಟು ನಾಲ್ಕು ಬಾರಿ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ. 2010, 2011 ಹಾಗೂ 2018ರಲ್ಲಿ ಐಪಿಎಲ್‌ ಟ್ರೋಫಿ ಜಯಿಸಿತ್ತು. ಅಲ್ಲದೇ 2008, 2012, 2013, 2015, 2019ರಲ್ಲಿ ರನ್ನರ್ಸ್‌ ಅಪ್‌ ಪ್ರಶಸ್ತಿ ಜಯಿಸಿದೆ. ಈ ಮೂಲಕ ಬರೋಬ್ಬರಿ 9 ನೇ ಐಪಿಎಲ್‌ ಪಂದ್ಯಾವಳಿಯಲ್ಲಿ 9ನೇ ಬಾರಿ ಫೈನಲ್‌ ಪ್ರವೇಶಿಸಿದ ಹೆಗ್ಗಳಿಕೆಗೆ ಚೆನ್ನೈ ಸೂಪರ್‌ ಕಿಂಗ್ಸ್‌ ಪಾತ್ರವಾಗಿದೆ.

Comments are closed.