Moeen Ali Retires : ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ ಮೋಯಿನ್‌ ಆಲಿ

ದುಬೈ : ಇಂಗ್ಲೆಂಡ್‌ ತಂಡ ಆಲ್‌ರೌಂಡರ್‌ ಮೋಹಿನ್‌ ಆಲಿ ಟೆಸ್ಟ್‌ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಈ ಕುರಿತು ಇಂಗ್ಲೆಂಡ್‌ ಕ್ರಿಕೆಟ್‌ ಬೋರ್ಡ್‌ ಅಧಿಕೃತವಾಗಿ ಖಚಿತಪಡಿಸಿದೆ. ಆದರೆ ಏಕದಿನ ಹಾಗೂ ಟಿ೨೦ ಪಂದ್ಯಗಳನ್ನು ಆಡಲಿದ್ದಾರೆ ಎಂದು ತಿಳಿಸಿದೆ.

34 ವರ್ಷದ ಮೊಯಿನ್‌ ಆಲಿ ಇಂಗ್ಲೆಂಡ್‌ ತಂಡ ಖ್ಯಾತ ಆಲ್‌ರೌಂಡರ್‌. ಬೌಲಿಂಗ್‌ ಹಾಗೂ ಬ್ಯಾಟಿಂಗ್‌ ನಿಂದಲೂ ಖ್ಯಾತಿಯನ್ನು ಪಡೆದಿದ್ದಾರೆ. 2014ರಲ್ಲಿ ಶ್ರೀಲಂಕಾ ವಿರುದ್ದ ಕ್ರಿಕೆಟ್‌ ಸರಣಿಯಲ್ಲಿ ಲಾರ್ಡ್ಸ್‌ ಅಂಗಳದಲ್ಲಿ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಮೊಯಿಲ್‌ ಆಲಿ 64 ಟೆಸ್ಟ್‌ ಪಂದ್ಯಗಳನ್ನು ಆಡಿದ್ದು, 2914 ರನ್ ಗಳಿಸಿದ್ದಾರೆ. ಅಲ್ಲದೇ ಬೌಲಿಂಗ್‌ ನಲ್ಲಿಯೂ ಮಿಂಚು ಹರಿಸಿರುವ ಆಲಿ ಒಟ್ಟು 195 ವಿಕೆಟ್‌ಗಳನ್ನು ಪಡೆದುಕೊಂಡಿದ್ದಾರೆ.

2017 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸರಣಿಯಲ್ಲಿ ಹ್ಯಾಟ್ರಿಕ್ ವಿಕೆಟ್‌ ಪಡೆದುಕೊಂಡಿದ್ದರು. ಆದರೆ ಎರಡು ವರ್ಷಗಳ ಕಾಲ ಉತ್ತಮ ಆಟ ಪ್ರದರ್ಶನವನ್ನು ನೀಡಿದ್ದರೂ ಕೂಡ 2019 ರಲ್ಲಿ, ಅವರನ್ನು ಇಂಗ್ಲೆಂಡ್‌ನ ಕೇಂದ್ರ ಒಪ್ಪಂದದ ಟೆಸ್ಟ್ ಆಟಗಾರರ ಪಟ್ಟಿಯಿಂದ ಕೈಬಿಡಲಾಗಿದೆ. ಆ ನಂತರ ಮೊಯಿನ್‌ ಆಲಿ ಟೆಸ್ಟ್ ಕ್ರಿಕೆಟ್‌ನಿಂದ ವಿರಾಮ ತೆಗೆದುಕೊಂಡಿದ್ದಾರೆ.

ಟಿ20 ಪಂದ್ಯಾವಳಿಯಲ್ಲಿ ಬ್ಯಾಟಿಂಗ್‌ ಮೂಲಕ ಎಲ್ಲರ ಗಮನ ಸೆಳೆದಿರುವ ಮೊಯಿನ್‌ ಆಲಿ, ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಇದೀಗ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಿರುವುದು ಕ್ರಿಕೆಟ್‌ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.

ಇದನ್ನೂ ಓದಿ : ಟಿ20 ವಿಶ್ವಕಪ್ ಅಧಿಕೃತ ಗೀತೆ ರಿಲೀಸ್

ಇದನ್ನೂ ಓದಿ : ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ 20,000 ರನ್ : ಹೊಸ ದಾಖಲೆ ಬರೆದ ಮಿಥಾಲಿ ರಾಜ್

( All Rounder Moeen Ali Retires from test Cricket : confirm ECB )

Comments are closed.