Virat Kohli – RCB : IPL ಬೆನ್ನಲ್ಲೇ ಆರ್‌ಸಿಬಿ ನಾಯಕತ್ವಕ್ಕೆ ಕೊಯ್ಲಿ ರಾಜೀನಾಮೆ

ದುಬೈ : ಟೀಂ ಇಂಡಿಯಾದ ಟಿ20 ತಂಡಕ್ಕೆ ರಾಜೀನಾಮೆ ಘೋಷಣೆ ಮಾಡಿದ ಬೆನ್ನಲ್ಲೇ ವಿರಾಟ್‌ ಕೊಯ್ಲಿ, ಆರ್‌ಸಿಬಿ ಅಭಿಮಾನಿಗಳಿಗೆ ಶಾಕ್‌ ಕೊಟ್ಟಿದ್ದಾರೆ. ಪ್ರಸಕ್ತ ಸಾಲಿನ ಐಪಿಎಲ್‌ ಮುಕ್ತಾಯದ ಬಳಿಕ ರಾಯಲ್‌ ಚಾಲೆಂಜರ್ಸ್‌ ತಂಡದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಖುದ್ದು ಘೋಷಣೆಯನ್ನು ಮಾಡಿದ್ದಾರೆ.

ಆರ್‌ಸಿಬಿಯ ನಾಯಕನಾಗಿ ಇದು ನನ್ನ ಕೊನೆಯ ಐಪಿಎಲ್. ನನ್ನ ಕೊನೆಯ ಐಪಿಎಲ್ ಪಂದ್ಯವನ್ನು ಆಡುವವರೆಗೂ ನಾನು ಆರ್‌ಸಿಬಿ ಆಟಗಾರನಾಗಿ ಮುಂದುವರಿಯುತ್ತೇನೆ. ನನ್ನನ್ನು ನಂಬಿದ್ದಕ್ಕಾಗಿ ಮತ್ತು ನನ್ನನ್ನು ಬೆಂಬಲಿಸಿದ ಎಲ್ಲಾ ಆರ್‌ಸಿಬಿ ಅಭಿಮಾನಿಗಳಿಗೆ ನಾನು ಧನ್ಯವಾದ ಹೇಳುತ್ತೇನೆ “ಎಂದು ಕೊಹ್ಲಿ ಹೇಳಿದರು.

2008 ರಿಂದಲೂ ವಿರಾಟ್‌ ಕೊಯ್ಲಿ ರಾಯಲ್‌ ಚಾಲೆಂಜರ್ಸ್‌ ತಂಡದ ಪರವಾಗಿ ಆಟವಾಡುತ್ತಿದ್ದಾರೆ. ಡೇನಿಯಲ್‌ ವೆಟ್ಟೋರಿ ರಾಜೀನಾಮೆಯ ಬೆನ್ನಲ್ಲೇ ವಿರಾಟ್‌ ಕೊಯ್ಲಿ ಅವರನ್ನು 2013ರಲ್ಲಿ ನಾಯಕನನ್ನಾಗಿ ನೇಮಕ ಮಾಡಲಾಗಿತ್ತು. ವಿರಾಟ್‌ ಕೊಯ್ಲಿ ನಾಯಕತ್ವದಲ್ಲಿ ಆರ್‌ಸಿಬಿ ತಂಡ ಒಟ್ಟು 132 ಪಂದ್ಯಗಳನ್ನು ಆಡಿದ್ದು, ಈ ಪೈಕಿ 62 ಪಂದ್ಯಗಳಲ್ಲಿ ಗೆಲುವು ಕಂಡಿದ್ದು, 66 ಪಂದ್ಯಗಳಲ್ಲಿ ಸೋಲನ್ನು ಕಂಡಿದೆ. 2016ರಲ್ಲಿ ಆರ್‌ಸಿಬಿ ಫೈನಲ್‌ ಪ್ರವೇಶಿಸಿತ್ತು.

ಇದನ್ನೂ ಓದಿ : T20 ನಾಯಕತ್ವಕ್ಕೆ ರಾಜೀನಾಮೆ : ವಿರಾಟ್‌ ಕೊಯ್ಲಿ ಅಧಿಕೃತ ಘೋಷಣೆ

ಪ್ರಸಕ್ತ ಸಾಲಿನಲ್ಲಿ ಆರ್‌ ಸಿಬಿ ಒಟ್ಟು ಏಳು ಪಂದ್ಯಗಳನ್ನು ಆಡಿದ್ದು, ಇದರಲ್ಲಿ ಐದು ಪಂದ್ಯಗಳಲ್ಲಿ ಗೆಲುವು ದಾಖಲಿಸಿದೆ. ಇತ್ತೀಚಿಗಷ್ಟೇ ವಿರಾಟ್‌ ಕೊಯ್ಲಿ ಟಿ20 ತಂಡಕ್ಕೆ ರಾಜೀನಾಮೆ ನೀಡುವುದಾಗಿ ಘೋಷಣೆಯನ್ನು ಮಾಡಿದ್ದರು. ಕಳೆದ ಏಳೆಂಟು ವರ್ಷದಿಂದಲೂ ಮೂರು ಮಾದರಿಯಲ್ಲಿಯೂ ಆಟವಾಡುವುದು ಹಾಗೂ ನಾಯಕನಾಗಿ ಕಾರ್ಯನಿರ್ವಹಿಸುವುದು ಕಷ್ಟಕರವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಕೇವಲ ಆಟಗಾರನಾಗಿ ಮಾತ್ರವೇ ಮುಂದುವರಿಯುವುದಾಗಿ ಘೋಷಣೆಯನ್ನು ಮಾಡಿದ್ದರು.

ಇದನ್ನೂ ಓದಿ : Anil Kumble : ಟೀಂ ಇಂಡಿಯಾಕ್ಕೆ ಕನ್ನಡಿಗ ಅನಿಲ್‌ ಕುಂಬ್ಳೆ ಕೋಚ್‌

ಇದೀಗ ಆರ್‌ಸಿಬಿ ತಂಡ ನಾಯಕತ್ವಕ್ಕೆ ಕೂಡ ರಾಜೀನಾಮೆ ನೀಡುವುದಾಗಿ ಘೋಷಣೆಯನ್ನು ಮಾಡಿದ್ದಾರೆ. ಕೊಯ್ಲಿ ವಿಡಿಯೋವನ್ನು ಖುದ್ದು ಆರ್‌ಸಿಬಿ ತನ್ನ ಅಧಿಕೃತ ಟ್ವೀಟರ್‌ ಖಾತೆಯಲ್ಲಿ ಪೋಸ್ಟ್‌ ಮಾಡಿದೆ. ಕೊಯ್ಲಿ ಮುಂದಿನ ಸಾಲಿನಲ್ಲಿ ಆರ್‌ಸಿಬಿ ಪರವಾಗಿಯೇ ಆಡ್ತಾರಾ, ಇಲ್ಲಾ ಇತರ ಫ್ರಾಂಚೈಸಿ ಕಡೆಗೆ ಮುಖ ಮಾಡ್ತಾರಾ ಅನ್ನೋದನ್ನು ಕಾದುನೋಡಬೇಕಾಗಿದೆ.

ಇದನ್ನೂ ಓದಿ : ಕ್ರಿಕೆಟ್ ಪ್ರಿಯರಿಗೆ ಶಾಕ್: ಟಿ20 ವಿಶ್ವಕಪ್ ಬಳಿಕ ಕೋಚ್ ಸ್ಥಾನ ತೊರೆಯಲಿದ್ದಾರೆ ರವಿಶಾಸ್ತ್ರಿ

(Virat Kohli To Step Down As RCB Captain After Completion Of IPL 2021 )

Comments are closed.