KL Rahul : ರಾಹುಲ್‌ ಅಬ್ಬರದ ಅರ್ಧ ಶತಕ : ವಿಶ್ವಕಪ್‌ನಲ್ಲಿ ವಿಶಿಷ್ಟ ದಾಖಲೆ ಬರೆದ ಕನ್ನಡಿಗ

ದುಬೈ : ಟಿ 20ವಿಶ್ವಕಪ್‌ನಲ್ಲಿ ಭಾರತ ಫೈನಲ್‌ ಪ್ರವೇಶಿಸುವಲ್ಲಿ ಎಡವಿದೆ. ಆದರೆ ಕನ್ನಡಿಗ ಕೆ.ಎಲ್.ರಾಹುಲ್‌ ಅಬ್ಬರ ಬ್ಯಾಟಿಂಗ್‌ ಪ್ರದರ್ಶಿಸಿದ್ದಾರೆ. ಭರ್ಜರಿ ಫಾರ್ಮ್‌ನಲ್ಲಿರುವ ಕೆ.ಲೆ. ರಾಹುಲ್‌ (KL Rahul) ನಮೀಬಿಯಾ ವಿರುದ್ದವೂ ಆಕರ್ಷಕ ಅರ್ಧ ಶತಕ ಸಿಡಿಸುವ ಮೂಲಕ ಹ್ಯಾಟ್ರಿಕ್‌ ಸಾಧನೆಯನ್ನು ಮಾಡಿದ್ದಾರೆ.

ಐಪಿಎಲ್‌ ಪಂದ್ಯಾವಳಿಯಲ್ಲಿ ರನ್‌ ಹೊಳೆಯನ್ನೇ ಹರಿಸಿದ್ದ ರಾಹುಲ್‌ ವಿಶ್ವಕಪ್‌ ಆರಂಭದಲ್ಲಿ ಕೊಂಚ ಮಂಕಾಗಿದ್ದರು. ಪಾಕಿಸ್ತಾನ ವಿರುದ್ದ ಪಂದ್ಯದಲ್ಲಿ ಶೂನ್ಯಕ್ಕೆ ವಿಕೆಟ್‌ ಒಪ್ಪಿಸಿದ್ದ ರಾಹುಲ್‌ ನ್ಯೂಜಿಲೆಂಡ್‌ ವಿರುದ್ದದ ಪಂದ್ಯದಲ್ಲಿ ಕೇವಲ 18ರನ್‌ ಗಳಿಸಲು ಮಾತ್ರವೇ ಶಕ್ತರಾದರು. ಆದ್ರೆ ಅಫ್ಘಾನಿಸ್ತಾನ ವಿರುದ್ದ ಪಂದ್ಯದಲ್ಲಿ ಆರ್ಭಟಿಸಿದ್ದ ರಾಹುಲ್‌ ಕೇವಲ 48 ಎಸೆತಗಳಲ್ಲಿ ಬರೋಬ್ಬರಿ 69 ರನ್‌ ಸಿಡಿಸುವ ಮೂಲಕ ತಮ್ಮ ಫಾರ್ಮ್‌ಗೆ ಮರಳಿದ್ದರು. ನಂತರ ಸ್ಕಾಟ್ಲೆಂಡ್‌ ವಿರುದ್ದ ಪಂದ್ಯದಲ್ಲಿ ಕೇವಲ 19 ಎಸೆತಗಳಲ್ಲಿ ಬರೋಬ್ಬರಿ 50 ರನ್‌ ಸಿಡಿಸಿದ್ದ ರಾಹುಲ್‌ ಇದೀಗ ನಮೀಬಿಯಾ ತಂಡದ ವಿರುದ್ದವೂ ತಮ್ಮ ಆರ್ಭಟವನ್ನು ಮುಂದುವರಿಸಿದ್ದಾರೆ. ಕೇವಲ 35 ಎಸೆತಗಳಲ್ಲಿ 50ರನ್‌ ಬಾರಿಸುವ ಮೂಲಕ ಟೀಂ ಇಂಡಿಯಾವನ್ನು ಗೆಲುವಿನ ದಡ ಸೇರಿದ್ದಾರೆ.

ಭಾರತ ತಂಡ ಟೆಸ್ಟ್‌, ಏಕದಿನ, ಟಿ20 ಸೇರಿದಂತೆ ಮೂರು ಮಾದರಿಯಲ್ಲಿಯೂ ಭರವಸೆಯ ಆಟಗಾರನಾಗಿ ಗುರುತಿಸಿಕೊಂಡಿರುವ ಕೆ.ಎಲ್.ರಾಹುಲ್‌ ಇದುವರೆಗೆ ಒಟ್ಟು 53 ಟಿ20 ಪಂದ್ಯಾವಳಿಗಳನ್ನು ಆಡಿದ್ದು, 1697 ರನ್‌ ಸಿಡಿಸಿದ್ದಾರೆ. ಅಲ್ಲದೇ ಐಪಿಎಲ್‌ ಪಂದ್ಯಾವಳಿಯಲ್ಲಿ ರಾಹುಲ್‌ 94 ಪಂದ್ಯಗಳಲ್ಲಿ 3273 ರನ್‌ ಸಿಡಿಸುವ ಮೂಲಕ ಸತತ ಮೂರು ಋತುವಿನಲ್ಲಿಯೂ ಅತ್ಯಧಿಕ ಸ್ಕೋರರ್‌ ಆಗಿ ಮೂಡಿ ಬಂದಿದ್ದಾರೆ.

ಸದ್ಯ ರಾಹುಲ್‌ ಭರ್ಜರಿ ಫಾರ್ಮ್‌ನಲ್ಲಿದ್ದು ನ್ಯೂಜಿಲೆಂಡ್‌ ಸರಣಿಯಲ್ಲಿಯೂ ತಂಡವನ್ನು ಪ್ರತಿನಿಧಿಸಲಿದ್ದಾರೆ. ಅಲ್ಲದೇ ಟೀಂ ಇಂಡಿಯಾ ನಾಯಕನ ಸ್ಥಾನಕ್ಕೆ ಕೆ.ಎಲ್.ರಾಹುಲ್‌ ಅವರ ಹೆಸರು ಬಲವಾಗಿ ಕೇಳಿಬರುತ್ತಿದ್ದು, ಶೀಘ್ರದಲ್ಲಿಯೇ ಬಿಸಿಸಿಐ ನೂತನ ನಾಯಕ ಆಯ್ಕೆಯನ್ನು ಮಾಡಲಿದೆ.

ಇದನ್ನೂ ಓದಿ : ವಿಶ್ವಕಪ್‌ ಗೆಲ್ಲುವ ಭಾರತದ ಕನಸು ಭಗ್ನ : ಸೆಮಿಫೈನಲ್‌ ಪ್ರವೇಶಿಸಿದ ನ್ಯೂಜಿಲೆಂಡ್‌

ಇದನ್ನೂ ಓದಿ : ಕೋಚ್‌ ರವಿಶಾಸ್ತ್ರಿ ಯುಗಾಂತ್ಯ : ಐಪಿಎಲ್‌ನಲ್ಲಿ ಈ ತಂಡ ಕೋಚ್‌ ಆಗ್ತಾರಂತೆ

(KL Rahul, who scored a half-century in hat-trick)

Comments are closed.