Riyan Parag controversy : ಮತ್ತೆ ಬೇಡದ ವಿಚಾರಕ್ಕೆ ಸುದ್ದಿಯಾದ ಐಪಿಎಲ್ ಸ್ಟಾರ್! ನಿನಗಿದು ಬೇಕಿತ್ತಾ ಮಗನೇ?

Riyan Parag controversy : ರಾಜಸ್ಥಾನ್ ರಾಯಲ್ಸ್ (Rajasthan Royals) ತಂಡದ ಮಧ್ಯಮ ಕ್ರಮಾಂಕದ ಸ್ಟಾರ್ ಬ್ಯಾಟ್ಸ್’ಮನ್, ಅಸ್ಸಾಂ ಕ್ರಿಕೆಟಿಗ ರಿಯಾನ್ ಪರಾಗ್ (Riyan Parag) ಮತ್ತೊಮ್ಮೆ ಬೇಡದ ವಿಚಾರಕ್ಕೆ ಸುದ್ದಿಯಾಗಿದ್ದಾರೆ.

Riyan Parag controversy : ರಾಜಸ್ಥಾನ್ ರಾಯಲ್ಸ್ (Rajasthan Royals) ತಂಡದ ಮಧ್ಯಮ ಕ್ರಮಾಂಕದ ಸ್ಟಾರ್ ಬ್ಯಾಟ್ಸ್’ಮನ್, ಅಸ್ಸಾಂ ಕ್ರಿಕೆಟಿಗ ರಿಯಾನ್ ಪರಾಗ್ (Riyan Parag) ಮತ್ತೊಮ್ಮೆ ಬೇಡದ ವಿಚಾರಕ್ಕೆ ಸುದ್ದಿಯಾಗಿದ್ದಾರೆ. ಐಪಿಎಲ್-2024 ಟೂರ್ನಿಗೂ (IPL 2024) ಮುನ್ನ ರಿಯಾನ್ ಪರಾಗ್ ಕ್ರಿಕೆಟ್ ಮೈದಾನದಲ್ಲಿ ತಮ್ಮ ಅತಿರೇಕ, ಅಶಿಸ್ತು, ಶೋಕಿಯ ನಡವಳಿಕೆಗಳಿಂದ ಗಮನ ಸೆಳೆದಿದ್ದರು. ಈ ವಿಚಾರವಾಗಿ ರಿಯಾನ್ ಪರಾಗ್ ಸಾಕಷ್ಟು ಬಾರಿ ಕ್ರಿಕೆಟ್ ಅಭಿಮಾನಿಗಳಿಂಗ ಟೀಕೆಗೆ ಗುರಿಯಾಗಿದ್ದೂ ಇದೆ.

IPL 2024 Rajasthan Royals Player Riyan Parag controversy
Image Credit to Original Source

ಆದರೆ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಅಮೋಘ ಆಟವಾಡಿದ್ದ ರಿಯಾನ್ ಪರಾಗ್ ಟೀಕಾಕಾರಿಗೆ ಆಟದಿಂದಲೇ ಉತ್ತರಿಸುವಲ್ಲಿ ಯಶಸ್ವಿ ಯಾಗಿದ್ದರು. ಪ್ರಸಕ್ತ ಐಪಿಎಲ್ ಟೂರ್ನಿಯಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಮಧ್ಯಮ ಕ್ರಮಾಂಕದಲ್ಲಿ ಮಿಂಚಿದ್ದ ಪರಾಗ್, ಆಡಿದ 16 ಪಂದ್ಯಗಳಿಂದ 52.09ರ ಅತ್ಯುತ್ತಮ ಸರಾಸರಿಯಲ್ಲಿ 149.21ರ ಸ್ಟ್ರೈಕ್’ರೇಟ್’ನೊಂದಿಗೆ 40 ಬೌಂಡರಿ ಹಾಗೂ 33 ಸಿಕ್ಸರ್’ಗಳ ಸಹಿತ 573 ರನ್ ಗಳಿಸಿ ಐಪಿಎಲ್-2024ರಲ್ಲಿ ಅತೀ ಹೆಚ್ಚು ರನ್ ಗಳಿಸಿದವರ ಸಾಲಿನಲ್ಲಿ ಮೂರನೇ ಸ್ಥಾನ ಪಡೆದಿದ್ದರು. ರಾಜಸ್ಥಾನ್ ರಾಯಲ್ಸ್ ತಂಡ 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಸೋತು ನಿರಾಸೆಗೊಳಗಾಗಿತ್ತು.

ಇದನ್ನೂ ಓದಿ : Yuvraj Singh 2.0 Loading: ಯುವರಾಜ್‌ ಸಿಂಗ್ ತಯಾರು ಮಾಡಿದ ಹುಡುಗ‌ ಅಭಿಷೇಕ್‌ ಶರ್ಮಾ ಐಪಿಎಲ್’ನಲ್ಲಿ ಧೂಳೆಬ್ಬಿಸಿದ!

ಐಪಿಎಲ್ ಟೂರ್ನಿ ಮುಗಿದ ಬೆನ್ನಲ್ಲೇ 22 ವರ್ಷದ ರಿಯನ್ ಪರಾಗ್ ಮತ್ತೊಮ್ಮೆ ಬೇಡದ ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ. ರಿಯಾನ್ ಪರಾಗ್ ಅವರದ್ದು ಎನ್ನಲಾಗುತ್ತಿರುವ ಯೂಟ್ಯೂಬ್ ಸರ್ಚ್ ಹಿಸ್ಟರಿ (YouTube search history) ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅದರಲ್ಲಿ ಕೆಲ ಬಾಲಿವುಡ್ ನಟಿಯರ ಹಸಿ ಬಿಸಿ ಫೋಟೋಗಳನ್ನು ಹುಡುಕಿರುವುದು ಕಂಡು ಬಂದಿದೆ. ಅನನ್ಯಾ ಪಾಂಡೆ ಹಾಟ್ (Ananya Pandey hot), ಸಾರಾ ಅಲಿ ಖಾನ್ ಹಾಟ್ (Sara Ali Khan hot) ಎಂದು ರಿಯಾನ್ ಪರಾಗ್ ಯೂಟ್ಯೂಬ್’ನಲ್ಲು ಸರ್ಚ್ ಮಾಡಿರುವುದು ಗೊತ್ತಾಗಿದೆ.

IPL 2024 Rajasthan Royals Player Riyan Parag controversy
Image Credit to Original Source

ಇದನ್ನೂ ಓದಿ : Shreyas Iyer : ಅವಮಾನಿಸಿದ ಬಿಸಿಸಿಐ ಮುಂದೆ ಐಪಿಎಲ್ ಕಪ್ ಗೆದ್ದು ಎದೆಯುಬ್ಬಿಸಿ ನಿಂತ ಶ್ರೇಯಸ್ ಅಯ್ಯರ್!

https://x.com/dausawale29/status/1795320865669939592?s=46

IPL 2024 Rajasthan Royals Player Riyan Parag controversy

Comments are closed.