ಸೋಮವಾರ, ಏಪ್ರಿಲ್ 28, 2025
HomeSportsCricket1983 World Cup victory : ಭಾರತ ಮೊದಲ ಕ್ರಿಕೆಟ್ ವಿಶ್ವಕಪ್ ಗೆದ್ದು ಇಂದಿಗೆ 39...

1983 World Cup victory : ಭಾರತ ಮೊದಲ ಕ್ರಿಕೆಟ್ ವಿಶ್ವಕಪ್ ಗೆದ್ದು ಇಂದಿಗೆ 39 ವರ್ಷ, ದಿಗ್ಗಜರು ಹೇಳಿದ್ದೇನು ?

- Advertisement -

ಬೆಂಗಳೂರು : ಜೂನ್ 25 ಭಾರತೀಯ ಕ್ರಿಕೆಟ್’ನಲ್ಲಿ ಸ್ಮರಣೀಯ ದಿನ. ಯಾಕಂದ್ರೆ ಅದು ಭಾರತ ಮೊದಲ ವಿಶ್ವಕಪ್ ಮುಡಿಗೇರಿಸಿಕೊಂಡ ಐತಿಹಾಸಿಕ ದಿನ (1983 World Cup victory). ಆ ಸ್ಮರಣೀಯ ಐತಿಹಾಸಿಕ ಸಾಧನೆಗೆ ಇವತ್ತು 39 ವರ್ಷ ತುಂಬಿದೆ (On this day in 1983, India clinched World Cup title).ಮೊದಲ ವಿಶ್ವಕಪ್ ವಿಕ್ರಮಕ್ಕೆ 29 ವರ್ಷ ತುಂಬಿದ ಹಿನ್ನೆಲೆಯಲ್ಲಿ ಮಾಜಿ ಕ್ರಿಕೆಟಿಗರು ಸಂಭ್ರಮ ಹಂಚಿಕೊಂಡಿದ್ದಾರೆ (India Vs West Indies world Cup Final 1983).

“ಭಾರತ ಟೆಸ್ಟ್ ಕ್ರಿಕೆಟ್ ಆಡಲು ಶುರು ಮಾಡಿದ್ದು 1932ರಲ್ಲಿ. 52 ವರ್ಷಗಳ ನಂತರ 1983ರ ಜೂನ್ 25ರಂದು ಕಪಿಲ್ ಪಾಜಿ ಮತ್ತವರ ತಂಡ ವಿಶ್ವಕಪ್ ಗೆದ್ದರು. ಅದು ತುಂಬಾ ಮಂದಿ ಕ್ರಿಕೆಟಿಗರ ಉದಯಕ್ಕೆ ಕಾರಣವಾಯಿತು”.

  • ವೀರೇಂದ್ರ ಸೆಹ್ವಾಗ್, ಮಾಜಿ ಕ್ರಿಕೆಟಿಗ.

ಜೂನ್ 25, 1983.. ಕೋಟ್ಯಂತರ ಭಾರತೀಯರ ಕನಸು ನನಸಾದ ದಿನ. ಅದು ನಮ್ಮನ್ನು ಸದಾ ಕಾಲ ಹೆಮ್ಮೆ ಪಡುವಂತೆ ಮಾಡಿದ ಕ್ಷಣ. ಈ ಗೆಲುವು ನನಗೆ ಸೇರಿದಂತೆ ಹಲವಾರು ಕ್ರಿಕೆಟಿಗರಿಗೆ ಸ್ಫೂರ್ತಿ. ನಮ್ಮೆಲ್ಲರಿಗೂ ಆ ಗೆಲುವು ಭಾರತ ಪರ ಆಡುವ ಕನಸು ಬಿತ್ತಿತ್ತು”.

  • ವಿವಿಎಸ್ ಲಕ್ಷ್ಮಣ್, ಮಾಜಿ ಕ್ರಿಕೆಟಿಗ.

1983ರ ಜೂನ್ 25ರಂದು ಕ್ರಿಕೆಟ್ ಕಾಶಿ ಇಂಗ್ಲೆಂಡ್”ನ ಲಾರ್ಡ್ಸ್ ಮೈದಾನದಲ್ಲಿ ನಡೆದಿದ್ದ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಕಪಿಲ್ ದೇವ್ ನಾಯಕತ್ವದ ಭಾರತ, ಬಲಾಢ್ಯ ವೆಸ್ಟ್ ಇಂಡೀಸ್ ತಂಡವನ್ನು 43 ರನ್”ಗಳಿಂದ ಸೋಲಿಸಿ ಮೊದಲ ಬಾರಿ ಕ್ರಿಕೆಟ್ ವಿಶ್ವಕಪ್ ಗೆದ್ದಿತ್ತು. ಫೈನಲ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ, 54.4 ಓವರ್”ಗಳಲ್ಲಿ ಕೇವಲ 183 ರನ್’ಗಳಿಗೆ ಆಲೌಟಾಗಿತ್ತು. ಭಾರತ ಪರ ಆರಂಭಿಕ ಬ್ಯಾಟ್ಸ್’ಮನ್ ಕೃಷ್ಣಮಾಚಾರಿ ಶ್ರೀಕಾಂತ್ 38 ರನ್ ಗಳಿಸಿದ್ರೆ, ಸಂದೀಪ್ ಪಾಟೀಲ್ 27 ಮತ್ತು ಮೊಹಿಂದರ್ ಅಮರನಾಥ್ 26 ರನ್ ಗಳಿಸಿದ್ದರು.

184 ರನ್”ಗಳ ಸುಲಭ ಗುರಿ ಬೆನ್ನಟ್ಟಿದ್ದ ವೆಸ್ಟ್ ಇಂಡೀಸ್, ಕಪಿಲ್ ದೇವ್ (Kapil Dev) ಸೇನೆಯ ಸಂಘಟಿತ ಬೌಲಿಂಗ್ ದಾಳಿಗೆ ತತ್ತರಿಸಿ ಕೇವಲ 140 ರನ್ನಿಗೆ ಆಲೌಟಾಗಿ ಭಾರತಕ್ಕೆ ಶರಣಾಗಿತ್ತು. ಭಾರತ ಪರ ಮಧ್ಯಮ ವೇಗಿಗಳಾದ ಮದನ್ ಲಾಲ್ (3/31) ಮತ್ತು ಮೊಹಿಂದರ್ ಅಮರನಾಥ್ (3/12) ತಲಾ ಮೂರು ವಿಕೆಟ್ ಉರುಳಿಸಿ ಭಾರತದ ಐತಿಹಾಸಿಕ ಗೆಲುವಿನಲ್ಲಿ ಪ್ರಧಾನ ಪಾತ್ರ ವಹಿಸಿದ್ದರು. ಪಂದ್ಯದಲ್ಲಿ ತೋರಿದ್ದ ಆಲ್ರೌಂಡ್ ಪ್ರದರ್ಶನದಿಂದ ಮೊಹಿಂದರ್ ಅಮರನಾಥ್ ಅವರನ್ನು ಪಂದ್ಯಶ್ರೇಷ್ಠರಾಗಿ ಮೂಡಿ ಬಂದಿದ್ರು.

ಇದನ್ನೂ ಓದಿ : Murali Vijay : ಡಿಕೆ ಕಂಬ್ಯಾಕ್ ಮಾಡಿದ್ದನ್ನು ನೋಡಿ ರೊಚ್ಚಿಗೆದ್ದ ಮುರಳಿ ವಿಜಯ್ ಮಾಡಿದ್ದೇನು ಗೊತ್ತಾ?

ಇದನ್ನೂ ಓದಿ : Dinesh Karthik : 18 ವರ್ಷ 10 ಮಂದಿಯ ನಾಯಕತ್ವದಲ್ಲಿ ಆಡಿದ ದಿನೇಶ್‌ ಕಾರ್ತಿಕ್

1983 World Cup victory India Vs West Indies world Cup Final what says Cricketers

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular