Suryakumar Yadav: 26 ದಿನಗಳಲ್ಲಿ 4 ಗೋಲ್ಡನ್ ಡಕ್, ವೈಟ್ ಬಾಲ್ ಕ್ರಿಕೆಟ್’ನಲ್ಲಿ ಶಾಕ್ ಮೇಲೆ ಶಾಕ್; ಏನಾಗಿದೆ ಸೂರ್ಯನಿಗೆ..?

ಮುಂಬೈ: “ಟೈಮ್ ಸರಿ ಇಲ್ಲದೇ ಇದ್ರೆ, ಹಗ್ಗವೂ ಹಾವಾಗಿ ಕಚ್ಚುತ್ತದೆ” ಎಂಬ ಮಾತಿದೆ. ಮುಂಬೈ ಇಂಡಿಯನ್ಸ್ (Mumbai Indians) ಬ್ಯಾಟ್ಸ್’ಮನ್ ಸೂರ್ಯಕುಮಾರ್ ಯಾದವ್ (Suryakumar Yadav golden ducks) ವಿಚಾರದಲ್ಲಿ ಈ ಮಾತು ಅಕ್ಷರಶಃ ನಿಜವಾಗಿದೆ. ಟಿ20 ಕ್ರಿಕೆಟ್’ನಲ್ಲಿ ಜಗತ್ತಿನ ನಂ.1 ಬ್ಯಾಟ್ಸ್’ಮನ್ ಆಗಿರುವ ಸೂರ್ಯಕುಮಾರ್ ಯಾದವ್ ಅವರ ಟೈಮ್ ಯಾಕೋ ಇತ್ತೀಚೆಗೆ ಸರಿಯಿಲ್ಲ. ವೈಟ್ ಬಾಲ್ ಕ್ರಿಕೆಟ್’ನಲ್ಲಿ ಆಡಿದ ಕಳೆದ ಆರು ಇನ್ನಿಂಗ್ಸ್’ಗಳಲ್ಲಿ ಸೂರ್ಯಕುಮಾರ್ ನಾಲ್ಕು ಬಾರಿ ಗೋಲ್ಡನ್ ಡಕ್’ಗೆ (Suryakumar Yadav golden ducks) ಔಟಾಗಿದ್ದಾರೆ. ಅಂದ್ರೆ ಎದುರಿಸಿದ ಮೊದಲ ಎಸೆತದಲ್ಲೇ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದಾರೆ.

ಐಪಿಎಲ್’ಗೂ ಮೊದಲು ನಡೆದ ಆಸ್ಟ್ರೇಲಿಯಾ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿ ಮೂರೂ ಪಂದ್ಯಗಳಲ್ಲಿ ಸೂರ್ಯಕುಮಾರ್ ಯಾದವ್ ಗೋಲ್ಡನ್ ಡಕ್’ಗೆ ಔಟಾಗಿದ್ದರು. ಇದೀಗ ಐಪಿಎಲ್’ನಲ್ಲೂ ಸೂರ್ಯ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಎದುರಿಸಿದ ಮೊದಲ ಎಸೆತದಲ್ಲೇ ಔಟಾಗಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಸೂರ್ಯಕುಮಾರ್, ಮಧ್ಯಮ ವೇಗಿ ಮುಕೇಶ್ ಕುಮಾರ್’ಗೆ ವಿಕೆಟ್ ಒಪ್ಪಿಸಿದ್ದರು.

6 ವೈಟ್ ಬಾಲ್ ಇನ್ನಿಂಗ್ಸ್’ಗಳಲ್ಲಿ ಸೂರ್ಯಕುಮಾರ್ ಯಾದವ್ (Suryakumar Yadav golden ducks) ಗಳಿಸಿರುವ ರನ್

0 (1) Vs ಆಸ್ಟ್ರೇಲಿಯಾ
0 (1) Vs ಆಸ್ಟ್ರೇಲಿಯಾ
0 (1) Vs ಆಸ್ಟ್ರೇಲಿಯಾ
15 (16) Vs ರಾಯಲ್ ಚಾಲೆಂಜರ್ಸ್ ಬೆಂಗಳೂರು
1 (2) Vs ಚೆನ್ನೈ ಸೂಪರ್ ಕಿಂಗ್ಸ್
0 (10) Vs ಡೆಲ್ಲಿ ಕ್ಯಾಪಿಟಲ್ಸ್

32 ವರ್ಷದ ಸೂರ್ಯಕುಮಾರ್ ಯಾದವ್ ಕಳೆದ 26 ದಿನಗಳಲ್ಲಿ 4 ಬಾರಿ ಗೋಲ್ಡನ್ ಡಕ್’ಗೆ ಔಟಾಗಿದ್ದಾರೆ. ಸೂರ್ಯಕುಮಾರ್ ಸತತ ವೈಫಲ್ಯ ಕಾಣುತ್ತಿದ್ದರೂ ಆಸ್ಟ್ರೇಲಿಯಾ ತಂಡದ ಮಾಜಿ ನಾಯಕರೂ ಆಗಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಹೆಡ್ ಕೋಚ್ ರಿಕಿ ಪಾಂಟಿಂಗ್, ಸೂರ್ಯನ ಬೆಂಬಲಕ್ಕೆ ನಿಂತಿದ್ದಾರೆ. ಇದನ್ನೂ ಓದಿ : India’s domestic season for 2023-24 : 1846 ಪಂದ್ಯಗಳಿಗೆ ಸಾಕ್ಷಿಯಾಗಲಿದೆ 2023-24ನೇ ಸಾಲಿನ ದೇಶಿಯ ಕ್ರಿಕೆಟ್, ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

“ವೈಟ್ ಬಾಲ್ ಕ್ರಿಕೆಟ್’ನಲ್ಲಿ ಸೂರ್ಯಕುಮಾರ್ ಯಾದವ್ ಏನು ಮಾಡಬಲ್ಲರು ಎಂಬುದು ಜಗತ್ತಿಗೇ ಗೊತ್ತು. ವೈಫಲ್ಯದ ಮಧ್ಯೆಯೂ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಸೂರ್ಯನ ಬೆಂಬಲಕ್ಕೆ ನಿಲ್ಲಬೇಕು. ಯಾಕಂದ್ರೆ ಸೂರ್ಯಕುಮಾರ್ ಯಾದವ್ ವಿಶ್ವಕಪ್ ಗೆಲ್ಲಿಸಿಕೊಡಬಲ್ಲ ಸಾಮರ್ಥ್ಯವಿರುವ ಆಟಗಾರ. ಈಗ ಸೂರ್ಯ ಸ್ಥಿರ ಪ್ರದರ್ಶನ ತೋರುವಲ್ಲಿ ವಿಫಲರಾಗುತ್ತಿದ್ದಾರೆ ನಿಜ. ಆದರೆ ಆತ ಔಟ್ & ಔಟ್ ಮ್ಯಾಚ್ ವಿನ್ನರ್” ಎಂದು ರಿಕಿ ಪಾಂಟಿಂಗ್ ಹೇಳಿದ್ದಾರೆ. ಇದನ್ನೂ ಓದಿ : 10 ವರ್ಷಗಳ ಹಿಂದೆ ಚಿನ್ನಸ್ವಾಮಿಯಲ್ಲಿ ಕಿತ್ತಾಟ, ಅದೇ ಚಿನ್ನಸ್ವಾಮಿಯಲ್ಲೀಗ ಮುದ್ದಾಟ

Comments are closed.