Virat Kohli England tour : 6 ಇನ್ನಿಂಗ್ಸ್ 76 ರನ್, ಕೊಹ್ಲಿ ಇಂಗ್ಲೆಂಡ್ ಟೂರ್ ನಿರಾಶಾದಾಯಕ ಅಂತ್ಯ

ಮ್ಯಾಂಚೆಸ್ಟರ್: ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರ ಇಂಗ್ಲೆಂಡ್ ಪ್ರವಾಸ (Virat Kohli England tour) ನಿರಾಶಾದಾಯಕ ಅಂತ್ಯ ಕಂಡಿದೆ. ಆತಿಥೇಯ ಇಂಗ್ಲೆಂಡ್ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ವಿರಾಟ್ ಕೇವಲ 17 ರನ್ ಗಳಿಸಿ ಔಟಾಗಿದ್ದಾರೆ. ಮ್ಯಾಂಚೆಸ್ಟರ್’ನ ಓಲ್ಡ್ ಟ್ರಾಫೊರ್ಡ್ ಮೈದಾನದಲ್ಲಿ ಆತ್ಮವಿಶ್ವಾಸದಿಂದಲೇ ಆಟ ಆರಂಭಿಸಿದ ಕೊಹ್ಲಿ 3 ಆಕರ್ಷಕ ಬೌಂಡರಿಗಳನ್ನು ಬಾರಿಸಿ ದೊಡ್ಡ ಮೊತ್ತ ಗಳಿಸುವ ಸೂಚನೆ ನೀಡಿದರು. ಆದರೆ ಮತ್ತದೇ ಪ್ರಮಾದ ಎಸಗಿದ ಕೊಹ್ಲಿ ಎಡಗೈ ವೇಗಿ ಟೊಪ್ಲಿ ಎಸೆತವನ್ನು ಕೆಣಕಿ ವಿಕೆಟ್ ಕೀಪರ್’ಗೆ ಕ್ಯಾಚಿತ್ತರು. ಲಾರ್ಡ್ಸ್’ನಲ್ಲಿ ನಡೆದ 2ನೇ ಏಕದಿನ ಪಂದ್ಯದಲ್ಲೂ ಕೊಹ್ಲಿ ಇದೇ ರೀತಿ ಔಟಾಗಿದ್ದರು.

ಇದರೊಂದಿಗೆ ವಿರಾಟ್ ಕೊಹ್ಲಿ ಪ್ರಸಕ್ತ ಇಂಗ್ಲೆಂಡ್ ಪ್ರವಾಸವನ್ನು ಮತ್ತೊಂದು ವೈಫಲ್ಯದೊಂದಿಗೆ ಮುಗಿಸಿದ್ದಾರೆ. ಇಂಗ್ಲೆಂಡ್ ಪ್ರವಾಸದಲ್ಲಿ ಆಡಿದ 1 ಟೆಸ್ಟ್, 2 ಟಿ20, 2 ಏಕದಿನ ಪಂದ್ಯಗಳು ಸೇರಿ ಒಟ್ಟು 6 ಇನ್ನಿಂಗ್ಸ್’ಗಳಲ್ಲಿ ಕೊಹ್ಲಿ ಕೇವಲ 76 ರನ್ ಕಲೆ ಹಾಕಿದ್ದಾರೆ.

ಇಂಗ್ಲೆಂಡ್ ಪ್ರವಾಸ 2022: ವಿರಾಟ್ ಕೊಹ್ಲಿ ವೈಫಲ್ಯ
ಟೆಸ್ಟ್: 11 & 20
2ನೇ ಟಿ20: 01
3ನೇ ಟಿ20: 11
2ನೇ ಏಕದಿನ: 16
3ನೇ ಏಕದಿನ: 17

2018ರ ಇಂಗ್ಲೆಂಡ್ ಪ್ರವಾಸದ ಟೆಸ್ಟ್ ಸರಣಿಯಲ್ಲಿ ಅಮೋಘ ಪ್ರದರ್ಶನ ತೋರಿದ್ದ ಕೊಹ್ಲಿ 590ಕ್ಕೂ ಹೆಚ್ಚು ರನ್ ಗಳಿಸಿದ್ದರು. ಆದರೆ ಈ ಬಾರಿಯ ಇಂಗ್ಲೆಂಡ್ ಪ್ರವಾಸದಲ್ಲಿ ಕಿಂಗ್ ಕೊಹ್ಲಿ ದಯನೀಯ ವೈಫಲ್ಯ ಎದುರಿಸಿದ್ದಾರೆ. ಕಳೆದ 78 ಅಂತಾರಾಷ್ಟ್ರೀಯ ಇನ್ನಿಂಗ್ಸ್’ಗಳಲ್ಲಿ ವಿರಾಟ್ ಕೊಹ್ಲಿ ಶತಕ ಬಾರಿಸಿಲ್ಲ. ವೃತ್ತಿಜೀವನದ ಅತ್ಯಂತ ಕೆಟ್ಟ ಫಾರ್ಮ್’ನಲ್ಲಿರುವ ಕಾರಣ ವಿರಾಟ್ ಕೊಹ್ಲಿ ಅವರಿಗೆ ಮುಂಬರುವ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ವಿಶ್ರಾಂತಿ ನೀಡಲಾಗಿದೆ. ವೆಸ್ಟ್ ಇಂಡೀಸ್ ವಿರುದ್ಧ ಭಾರತ 3 ಪಂದ್ಯಗಳ ಏಕದಿನ ಸರಣಿ ಹಾಗೂ 5 ಪಂದ್ಯಗಳ ಟಿ20 ಸರಣಿಯನ್ನಾಡಲಿದೆ.

ಇದನ್ನೂ ಓದಿ : Virat Kohli Rohit Sharma : ಟೀಮ್ ಇಂಡಿಯಾ ಅಭ್ಯಾಸದ ವೇಳೆ ಮಿಲಿಯನ್ ಡಾಲರ್ ಫೋಟೋ : ಕೊಹ್ಲಿ, ರೋಹಿತ್ ಫ್ಯಾನ್ಸ್ ಫುಲ್ ಖುಷ್

ಇದನ್ನೂ ಓದಿ : ICSE class 10th result 2022 : ICSE 10ನೇ ತರಗತಿ ಫಲಿತಾಂಶ 2022 ವೀಕ್ಷಿಸಲು ಇಲ್ಲಿ ಕ್ಲಿಕ್‌ ಮಾಡಿ

76 runs in 6 innings, a disappointing end to Virat Kohli England tour

Comments are closed.