ಮೆಲ್ಬೋರ್ನ್; Alien in India Vs Pakistan : ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಟಿ20 ವಿಶ್ವಕಪ್ ಪಂದ್ಯದಲ್ಲಿ (T20 World Cup 2022) ಏಲಿಯನ್ ಒಂದು ಕಾಣಿಸಿಕೊಂಡಿದೆ. ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಕಾಣಿಸಿಕೊಂಡ ಆ ಏಲಿಯನ್ ಇಡೀ ಪಂದ್ಯದ ಆಕರ್ಷಣೆಯ ಕೇಂದ್ರಬಿಂದುವಾಗಿತ್ತು. ಅಂದ ಹಾಗೆ ಆ ಏಲಿಯನ್ ಹೆಸರು ವಿರಾಟ್ ಕೊಹ್ಲಿ. ಪಾಕಿಸ್ತಾನ ವಿರುದ್ಧ ಅತ್ಯಮೋಘ ಇನ್ನಿಂಗ್ಸ್ ಆಡಿ ಭಾರತಕ್ಕೆ ಅವಿಸ್ಮರಣೀಯ ಗೆಲುವು ತಂದುಕೊಟ್ಟ ರನ್ ಮಷಿನ್ ವಿರಾಟ್ ಕೊಹ್ಲಿ (Virat Kohli) ಅವರನ್ನು ಪಾಕಿಸ್ತಾನದ ಮಾಜಿ ದಿಗ್ಗಜ ವೇಗದ ಬೌಲರ್ ವಸೀಮ್ ಅಕ್ರಮ್ (Wasim Akram) ಅನ್ಯಗ್ರಹದ ಏಲಿಯನ್’ಗೆ ಹೋಲಿಸಿದ್ದಾರೆ.
“ನಮ್ಮ ಮಧ್ಯೆ ಏಲಿಯನ್’ಗಳು ನಡೆದಾಡುತ್ತವೆ. ವಿರಾಟ್ ಕೊಹ್ಲಿ ಅನ್ಯಗ್ರಹದ ಏಲಿಯನ್ ರೀತಿ ನನಗೆ ಕಾಣುತ್ತಿದ್ದಾನೆ. ಆತ ಆಧುನಿಕ ಕ್ರಿಕೆಟ್’ನ ಗ್ರೇಟೆಸ್ಟ್ ಬ್ಯಾಟ್ಸ್’ಮನ್. ಈಗಷ್ಟೇ ಅಲ್ಲ, ಕಳೆದ 15 ವರ್ಷಗಳಿಂದ ವಿರಾಟ್ ಭಾರತಕ್ಕಾಗಿ ರನ್ ಗಳಿಸುತ್ತಿದ್ದಾನೆ. ರನ್ ಚೇಸಿಂಗ್ ಸಂದರ್ಭದಲ್ಲಿ ಶ್ರೇಷ್ಠ ಸರಾಸರಿ ಹೊಂದಿದ್ದಾನೆ” ಎಂದು ವಸೀಮ್ ಅಕ್ರಮ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ ವಿರಾಟ್ ಕೊಹ್ಲಿ ಅವರಿಗೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ (Sachn Tendulkar) ಅವರ ಶಹಬ್ಬಾಸ್’ಗಿರಿಯೂ ಸಿಕ್ಕಿದೆ. “ವಿರಾಟ್, ಇದು ನಿನ್ನ ವೃತ್ತಿಜೀವನದ ಬೆಸ್ಟ್ ಇನ್ನಿಂಗ್ಸ್. ನಿನ್ನ ಆಟವನ್ನು ಸಂಪೂರ್ಣ ಆನಂದಿಸಿದೆ. 19ನೇ ಓವರ್’ನಲ್ಲಿ ನೀನು ಬ್ಯಾಕ್’ಫೂಟ್ ಪಂಚ್ ಮೂಲಕ ಹ್ಯಾರಿಸ್ ರೌಪ್’ಗೆ ಬಾರಿಸಿದ ಸಿಕ್ಸರ್ ಅಂತೂ ಅತ್ಯದ್ಭುತ” ಎಂದು ಸಚಿನ್ ಟ್ವೀಟ್ ಮಾಡಿದ್ದಾರೆ.
.@imVkohli, it was undoubtedly the best innings of your life. It was a treat to watch you play, the six off the back foot in the 19th over against Rauf over long on was spectacular! 😮
— Sachin Tendulkar (@sachin_rt) October 23, 2022
Keep it going. 👍 #INDvPAK #T20WorldCup pic.twitter.com/FakWPrStMg
ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಭಾನುವಾರ ನಡೆದ ಪಾಕಿಸ್ತಾನ ವಿರುದ್ಧದ ಪಂದ್ಯವನ್ನು 4 ವಿಕೆಟ್’ಗಳಿಂದ ಗೆದ್ದುಕೊಂಡ ಭಾರತ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಗೆಲುವಿನೊಂದಿಗೆ ತನ್ನ ಅಭಿಯಾನ ಆರಂಭಿಸಿತ್ತು. ಹೈವೋಲ್ಟೇಜ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ನಿಗದಿತ 20 ಓವರ್’ಗಳಲ್ಲಿ 8 ವಿಕೆಟ್ ನಷ್ಟಕ್ಕೆ 159 ರನ್’ಗಳ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕಿತ್ತು. ಪಾಕ್ ಪರ ಇಫ್ತಿಕಾರ್ ಅಹ್ಮದ್ 34 ಎಸೆತಗಳಲ್ಲಿ 51 ರನ್ ಗಳಿಸಿದ್ರೆ, 3ನೇ ಕ್ರಮಾಂಕದ ದಾಂಡಿಗ ಶಾನ್ ಮಸೂದ್ 42 ಎಸೆತಗಳಲ್ಲಿ 52 ರನ್ ಗಳಿಸಿದ್ದರು. ನಂತರ ಗುರಿ ಬೆನ್ನಟ್ಟಿದ್ದ ಭಾರತ ಒಂದು ಹಂತದಲ್ಲಿ ಮೊದಲ 10 ಓವರ್’ಗಳಲ್ಲಿ ಕೇವಲ 45 ರನ್ ಗಳಿಸಿ 4 ವಿಕೆಟ್ ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿತ್ತು. ಆದರೆ ನಂತರದ 10 ಓವರ್’ಗಳಲ್ಲಿ 115 ರನ್ ಕಲೆ ಹಾಕಿದ ಭಾರತದ ಸಾಂಪ್ರದಾಯಿಕ ಎದುರಾಳಿ ವಿರುದ್ಧ ಐತಿಹಾಸಿಕ ಗೆಲುವು ದಾಖಲಿಸಿತ್ತು.
ಕೊನೆಯ 2 ಓವರ್’ನಲ್ಲಿ ಗೆಲ್ಲಲು 31 ರನ್’ಗಳ ಅವಶ್ಯಕತೆಯಿದ್ದಾಗ ಹ್ಯಾರಿಸ್ ರೌಫ್ ಎಸೆದ 19ನೇ ಓವರ್’ನ ಕೊನೆಯ ಎರಡೂ ಎಸೆತಗಳನ್ನು ಸಿಕ್ಸರ್’ಗಟ್ಟಿದ ವಿರಾಟ್ ಕೊಹ್ಲಿ (Virat Kohli), ಮೊಹಮ್ಮದ್ ನವಾಜ್ ಎಸೆದ ಅಂತಿಮ ಓವರ್’ನಲ್ಲಿ ಮತ್ತೊಂದು ಸಿಕ್ಸರ್ ಸಿಡಿಸಿದ್ದರು. ಅಂತಿಮವಾಗಿ 53 ಎಸೆತಗಳಲ್ಲಿ 6 ಬೌಂಡರಿ ಹಾಗೂ 4 ಸಿಕ್ಸರ್’ಗಳೊಂದಿಗೆ ಅಬ್ಬರಿಸಿದ್ದ ಕಿಂಗ್ ಕೊಹ್ಲಿ, ಅಜೇಯ 82 ರನ್ ಬಾರಿಸಿ ಭಾರತವನ್ನು ರೋಚಕವಾಗಿ ಗೆಲುವಿನ ದಡ ಸೇರಿಸಿದ್ದರು. ಗುರುವಾರ (ಅಕ್ಟೋೂಬರ್ 27) ಸಿಡ್ನಿ ಕ್ರಿಕೆಟ್ ಗ್ರೌಂಡ್’ನಲ್ಲಿ ನಡೆಯುವ ಸೂಪರ್-12 ಹಂತದ ತನ್ನ 2ನೇ ಲೀಗ್ ಪಂದ್ಯದಲ್ಲಿ ಭಾರತ ತಂಡ, ನೆದರ್ಲೆಂಡ್ಸ್ ತಂಡವನ್ನು ಎದುರಿಸಲಿದೆ.
ಇದನ್ನೂ ಓದಿ : Rohit Sharma gets emotional: 90 ಸಾವಿರ ಪ್ರೇಕ್ಷಕರ ಮುಂದೆ ರಾಷ್ಟ್ರಗೀತೆ ಹಾಡುವಾಗ ಕಣ್ಣೀರಿಟ್ಟ ರೋಹಿತ್ ಶರ್ಮಾ
Alien in India Vs Pakistan match says Wasim Akram T20 worl cup