ಬ್ರಿಸ್ಬೇನ್: (Rohit Sharma t20 world cup) ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತವನ್ನು ಚಾಂಪಿಯನ್ ಪಟ್ಟಕ್ಕೇರಿಸಲು ಪಣ ತೊಟ್ದಿದ್ದಾರೆ. ಕಾಂಗರೂನಾಡಿನಲ್ಲಿ ಭರ್ಜರಿ ಅಭ್ಯಾಸ ನಡೆಸಿರುವ ಟೀಮ್ ಇಂಡಿಯಾ, ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧ ಸೋಮವಾರ ಬ್ರಿಸ್ಬೇನ್ ಮೈದಾನದಲ್ಲಿ ಅಭ್ಯಾಸ ಪಂದ್ಯವನ್ನಾಡಲಿದೆ. ಆಸೀಸ್ ವಿರುದ್ಧದ ಪಂದ್ಯಕ್ಕೂ ಮುನ್ನ ಭಾರತ ತಂಡ ಪರ್ತ್’ನಲ್ಲಿ ಅಭ್ಯಾಸ ನಡೆಸುವ ಸಂದರ್ಭದಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರಿಗೆ 11 ವರ್ಷ ಬಾಲಕನೊಬ್ಬ ಬೌಲಿಂಗ್ ಮಾಡಿದ್ದು ಗಮನ ಸೆಳೆಯಿತು. ಆ ಹುಡುಗನ ಹೆಸರು ದ್ರುಶೀಲ್ ಚೌಹಾಣ್ (Drushil Chauhan).
ಭಾರತೀಯ ಮೂಲದ ದ್ರುಶೀಲ್ ಚೌಹಾಣ್ ಎಡಗೈ ಮಧ್ಯಮ ವೇಗದ ಬೌಲರ್. ಬ್ರಿಸ್ಬೇನ್ ಮೈದಾನದಲ್ಲಿ ಉತ್ತಮವಾಗಿ ಬೌಲಿಂಗ್ ಮಾಡುತ್ತಿದ್ದ ಹುಡುಗನನ್ನು ಕಂಡ ರೋಹಿತ್ ಶರ್ಮಾ, ಆತನನ್ನು ಟೀಮ್ ಇಂಡಿಯಾ ನೆಟ್ಸ್’ಗೆ ಕರೆದುಕೊಂಡು ಹೋಗಿ ತಮಗೆ ಬೌಲಿಂಗ್ ಮಾಡುವಂತೆ ಹೇಳಿದ್ದಾರೆ. ಅದೃಷ್ಟವಂತ ಬಾಲಕ ಟೀಮ್ ಇಂಡಿಯಾ ನಾಯಕನಿಗೆ ಕೆಲ ಹೊತ್ತು ಬೌಲಿಂಗ್ ಮಾಡಿದ್ದಾರೆ. ನಂತರ ಭಾರತ ತಂಡದ ಡ್ರೆಸ್ಸಿಂಗ್ ರೂಮ್’ಗೆ ಹುಡುಗನನ್ನು ಕರೆದೊಯ್ದ ರೋಹಿತ್ ಎಲ್ಲಾ ಆಟಗಾರರನ್ನು ಭೇಟಿ ಮಾಡಿಸಿದ್ದಾರೆ.
ರೋಹಿತ್ ಶರ್ಮಾ (Rohit Sharma t20 world cup) ಅವರಿಗೆ ಬೌಲಿಂಗ್ ಮಾಡಿದ ಅನುಭವದ ಬಗ್ಗೆ ಪ್ರತಿಕ್ರಿಯಿಸಿದ ದ್ರುಶೀಲ್ ಚೌಹಾಣ್, “ರೋಹಿತ್ ಶರ್ಮಾ ನನ್ನನ್ನು ನೋಡಿದರು ಮತ್ತು ಬೌಲಿಂಗ್ ಮಾಡಲು ಹೇಳಿದರು. ನನಗೆ ಅಚ್ಟರಿಯಾಯಿತು. ರೋಹಿತ್’ಗೆ ಕೆಲ ಇನ್’ಸ್ವಿಂಗ್ ಯಾರ್ಕರ್’ಗಳನ್ನು ಎಸೆದೆ. ‘ನೀನು ಪರ್ತ್’ನಲ್ಲಿರುವೆ ಭಾರತ ತಂಡದ ಪರ ಹೇಗೆ ಆಡುತ್ತೀಯಾ’ ಎಂದು ರೋಹಿತ್ ಪ್ರಶ್ನಿಸಿದರು” ಎಂದು ದ್ರುಶೀಲ್ ಚೌಹಾಣ್ ಹೇಳಿದ್ದಾನೆ.
ಪರ್ತ್’ನಲ್ಲಿ ಒಂದು ವಾರದ ಅಭ್ಯಾಸ ಶಿಬಿರ ಮುಗಿಸಿ, ವೆಸ್ಟರ್ಸ್ ಆಸ್ಟ್ರೇಲಿಯಾ ವಿರುದ್ಧ ಎರಡು ಅಭ್ಯಾಸ ಪಂದ್ಯಗಳನ್ನಾಡಿ ಬಂದಿರುವ ರೋಹಿತ್ ಶರ್ಮಾ ಬಳಗ, ಐಸಿಸಿ ಆಯೋಜಿಸಿರುವ ಅಧಿಕೃತ ಅಭ್ಯಾಸ ಪಂದ್ಯಗಳನ್ನು ಗೆದ್ದು ವಿಶ್ವಕಪ್ ಟೂರ್ನಿಗೆ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುವ ಗುರಿಯಲ್ಲಿದೆ. ವೆಸ್ಟರ್ಸ್ ಆಸ್ಟ್ರೇಲಿಯಾ ವಿರುದ್ಧದ 2 ಅಭ್ಯಾಸ ಪಂದ್ಯಗಳಲ್ಲಿ ಮೊದಲ ಪಂದ್ಯವನ್ನು ಗೆದ್ದಿದ್ದ ಟೀಮ್ ಇಂಡಿಯಾ, 2ನೇ ಪಂದ್ಯವನ್ನ ಸೋತಿತ್ತು.
ಪರ್ತ್’ನಿಂದ ಬ್ರಿಸ್ಬೇನ್’ಗೆ ಬಂದಿಳಿದಿರುವ ಟೀಮ್ ಇಂಡಿಯಾ ಸೋಮವಾರ ನಡೆಯಲಿರುವ ತನ್ನ ಮೊದಲ ಅಧಿಕೃತ ಅಭ್ಯಾಸ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ (India Vs Australia) ತಂಡವನ್ನು ಎದುರಿಸಲಿದೆ. ಅಕ್ಟೋಬರ್ 19ರಂದು ನಡೆಯುವ 2ನೇ ಅಭ್ಯಾಸ ಪಂದ್ಯದಲ್ಲಿ ಟೀಮ್ ಇಂಡಿಯಾ, ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ.
ಆಸ್ಟ್ರೇಲಿಯಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಭಾರತ ತನ್ನ ಫುಲ್ ಸ್ಟ್ರೆಂತ್ ತಂಡದೊಂದಿಗೆ ಕಣಕ್ಕಿಳಿಯಲಿದೆ. ವಿಶ್ವಕಪ್’ನಲ್ಲಿ ಪ್ಲೇಯಿಂಗ್ XIನಲ್ಲಿ ಕಾಣಿಸಿಕೊಳ್ಳಲಿರುವ ಆಟಗಾರರು ಆಸ್ಟ್ರೇಲಿಯಾ ವಿರುದ್ಧ ಕಣಕ್ಕಿಳಿಯಲಿದ್ದಾರೆ. ಗಾಯಾಳು ಜಸ್ಪ್ರೀತ್ ಬುಮ್ರಾ ಬದಲು ಟೀಮ್ ಇಂಡಿಯಾವನ್ನು ಸೇರಿಕೊಂಡಿರುವ ಅನುಭವಿ ವೇಗಿ ಮೊಹಮ್ಮದ್ ಶಮಿ ಅಭ್ಯಾಸ ಪಂದ್ಯದಲ್ಲಿ ಆಡುವ ನಿರೀಕ್ಷೆಯಿದೆ.
ಇದನ್ನೂ ಓದಿ : Ganguly to contest CAB president post: ಬಿಸಿಸಿಐನಿಂದ ಔಟ್, ಬಂಗಾಳ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಸ್ಥಾನಕ್ಕೆ ಸೌರವ್ ಗಂಗೂಲಿ ಸ್ಪರ್ಧೆ
An 11-year-old boy Drushil Chauhan bowled to India captain Rohit Sharma ICC t20 world cup 2022