T20 World Cup 2022 schedule : ಎಷ್ಟು ತಂಡ, ಎಷ್ಟು ಪಂದ್ಯ, ಮ್ಯಾಚ್ ಟೈಮಿಂಗ್, Live telecast, Live ಸ್ಟ್ರೀಮಿಂಗ್‌ನ ಸಂಪೂರ್ಣ ವಿವರ

ಮೆಲ್ಬೋರ್ನ್: T20 World Cup 2022 schedule : ಐಸಿಸಿ ಟಿ20 ವಿಶ್ವಕಪ್ 8ನೇ ಆವೃತ್ತಿಯ ಟೂರ್ನಿಗೆ ಚಾಲನೆ ಸಿಕ್ಕಿದ್ದು, ಭಾನುವಾರ ಅರ್ಹತಾ ಸುತ್ತಿನ ಪಂದ್ಯಗಳು ಆರಂಭವಾಗಿವೆ. ಆಸ್ಟ್ರೇಲಿಯಾದ ಆತಿಥ್ಯದಲ್ಲಿ ನಡೆಯಲಿರುವ ಟೂರ್ನಿಯ ಉದ್ಘಾಟನಾ ಪಂದ್ಯ ಅಕ್ಟೋಬರ್ 22ರಂದು ಮೆಲ್ಬೋರ್ನ್’ನಲ್ಲಿ ನಡೆಯಲಿದ್ದು, ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ಮತ್ತು ಕಳೆದ ಬಾರಿಯ ರನ್ನರ್ಸ್ ಅಪ್ ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗಲಿವೆ. ಚೊಚ್ಚಲ ಆವೃತ್ತಿಯ ಚಾಂಪಿಯನ್ ಭಾರತ ತಂಡದ ಅಭಿಯಾನ ಅಕ್ಟೋಬರ್ 23ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧದ ಪಂದ್ಯದೊಂದಿಗೆ ಆರಂಭವಾಗಲಿದೆ. ಈ ಹೈವೋಲ್ಟೇಜ್ ಪಂದ್ಯಕ್ಕೆ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ ಆತಿಥ್ಯ ವಹಿಸಲಿದೆ.

ವಿಶ್ವಕಪ್’ನ ಪ್ರಧಾನ ಸುತ್ತಿನಲ್ಲಿ ಸೆಮಿಫೈನಲ್ಸ್ ಹಾಗೂ ಫೈನಲ್ ಸೇರಿ ಒಟ್ಟು 33 ಪಂದ್ಯಗಳು ನಡೆಯಲಿದ್ದು, ಫೈನಲ್ ಪಂದ್ಯ ನವೆಂಬರ್ 13ರಂದು ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್’ನಲ್ಲಿ ನಡೆಯಲಿದೆ.

T20 World Cup 2022 schedule): ಪ್ರಧಾನ ಸುತ್ತಿನ ಪಂದ್ಯಗಳ ಸಂಪೂರ್ಣ ವೇಳಾಪಟ್ಟಿ

ಅಕ್ಟೋಬರ್ 22: ಆಸ್ಟ್ರೇಲಿಯಾ Vs ನ್ಯೂಜಿಲೆಂಡ್ (ಸಿಡ್ನಿ, 12.30 pm)
ಅಕ್ಟೋಬರ್ 22: ಇಂಗ್ಲೆಂಡ್ Vs ಅಫ್ಘಾನಿಸ್ತಾನ (ಪರ್ತ್, 4.30 pm)
ಅಕ್ಟೋಬರ್ 23: TBA Vs TBA (ಹೊಬಾರ್ಟ್, 9.30 am)
ಅಕ್ಟೋಬರ್ 23: ಭಾರತ Vs ಪಾಕಿಸ್ತಾನ (ಮೆಲ್ಬೋರ್ನ್, 1.30 pm)
ಅಕ್ಟೋಬರ್ 24: ಬಾಂಗ್ಲಾದೇಶ Vs TBA (ಹೊಬಾರ್ಟ್, 9.30 am)
ಅಕ್ಟೋಬರ್ 24: ದಕ್ಷಿಣ ಆಫ್ರಿಕಾ Vs TBA (ಹೊಬಾರ್ಟ್, 1.30 pm)
ಅಕ್ಟೋಬರ್ 25: ಆಸ್ಟ್ರೇಲಿಯಾ Vs TBA (ಪರ್ತ್, 4.30 pm)
ಅಕ್ಟೋಬರ್ 26: ಇಂಗ್ಲೆಂಡ್ Vs TBA (ಮೆಲ್ಬೋರ್ನ್, 9.30 am)
ಅಕ್ಟೋಬರ್ 26: ಅಫ್ಘಾನಿಸ್ತಾನ Vs ನ್ಯೂಜಿಲೆಂಡ್ (ಮೆಲ್ಬೋರ್ನ್, 1.30 pm)
ಅಕ್ಟೋಬರ್ 27: ಬಾಂಗ್ಲಾದೇಶ Vs ದಕ್ಷಿಣ ಆಫ್ರಿಕಾ (ಸಿಡ್ನಿ, 8.30 am)
ಅಕ್ಟೋಬರ್ 27: ಭಾರತ Vs TBA (ಸಿಡ್ನಿ, 12.30 pm)
ಅಕ್ಟೋಬರ್ 27: ಪಾಕಿಸ್ತಾನ Vs TBA (ಪರ್ತ್, 4.30 pm)
ಅಕ್ಟೋಬರ್ 28: ಅಫ್ಘಾನಿಸ್ತಾನ Vs TBA (ಮೆಲ್ಬೋರ್ನ್, 9.30 am)
ಅಕ್ಟೋಬರ್ 28: ಆಸ್ಟ್ರೇಲಿಯಾ Vs ಇಂಗ್ಲೆಂಡ್ (ಮೆಲ್ಬೋರ್ನ್, 1.30 pm)
ಅಕ್ಟೋಬರ್ 29: ನ್ಯೂಜಿಲೆಂಡ್ Vs TBA (ಸಿಡ್ನಿ, 1.30 pm)
ಅಕ್ಟೋಬರ್ 30: ಬಾಂಗ್ಲಾದೇಶ Vs TBA (ಬ್ರಿಸ್ಬೇನ್, 8.30 am)
ಅಕ್ಟೋಬರ್ 30: ಪಾಕಿಸ್ತಾನ Vs TBA (ಪರ್ತ್, 12.30 pm)
ಅಕ್ಟೋಬರ್ 30: ಭಾರತ Vs ದಕ್ಷಿಣ ಆಫ್ರಿಕಾ (ಪರ್ತ್, 4.30 pm)
ಅಕ್ಟೋಬರ್ 31: ಆಸ್ಟ್ರೇಲಿಯಾ Vs TBA (ಬ್ರಿಸ್ಬೇನ್, 1.30 pm)
ನವೆಂಬರ್ 01: ಅಫ್ಘಾನಿಸ್ತಾನ Vs TBA (ಬ್ರಿಸ್ಬೇನ್, 9.30 am)
ನವೆಂಬರ್ 01: ಇಂಗ್ಲೆಂಡ್ Vs ನ್ಯೂಜಿಲೆಂಡ್ (ಬ್ರಿಸ್ಬೇನ್, 1.30 pm)
ನವೆಂಬರ್ 02: TBA Vs TBA (ಅಡಿಲೇಡ್, 9.30 am)
ನವೆಂಬರ್ 02: ಭಾರತ Vs ಬಾಂಗ್ಲಾದೇಶ (ಅಡಿಲೇಡ್, 1.30 pm)
ನವೆಂಬರ್ 03: ಪಾಕಿಸ್ತಾನ Vs ದಕ್ಷಿಣ ಆಫ್ರಿಕಾ (ಸಿಡ್ನಿ, 1.30 pm)
ನವೆಂಬರ್ 04: ನ್ಯೂಜಿಲೆಂಡ್ Vs TBA (ಅಡಿಲೇಡ್, 9.30 am)
ನವೆಂಬರ್ 04: ಆಸ್ಟ್ರೇಲಿಯಾ Vs ಅಫ್ಘಾನಿಸ್ತಾನ (ಅಡಿಲೇಡ್, 1.30 pm)
ನವೆಂಬರ್ 05: ಇಂಗ್ಲೆಂಡ್ Vs TBA (ಸಿಡ್ನಿ, 1.30 pm)
ನವೆಂಬರ್ 06: ದಕ್ಷಿಣ ಆಫ್ರಿಕಾ Vs TBA (ಅಡಿಲೇಡ್, 5.30 am)
ನವೆಂಬರ್ 06: ಬಾಂಗ್ಲಾದೇಶ Vs ಪಾಕಿಸ್ತಾನ (ಅಡಿಲೇಡ್, 9.30 am)
ನವೆಂಬರ್ 06: ಭಾರತ Vs TBA (ಮೆಲ್ಬೋರ್ನ್, 1.30 pm)
ನವೆಂಬರ್ 09: ಮೊದಲ ಸೆಮಿಫೈನಲ್ (ಸಿಡ್ನಿ, 1.30 pm)
ನವೆಂಬರ್ 10: 2ನೇ ಸೆಮಿಫೈನಲ್ (ಅಡಿಲೇಡ್, 1.30 pm)
ನವೆಂಬರ್ 13: ಫೈನಲ್ (ಮೆಲ್ಬೋರ್ನ್, 1.30 pm)

ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್’ವರ್ಕ್
ಲೈವ್ ಸ್ಟ್ರೀಮಿಂಗ್: ಡಿಸ್ನಿ+ಹಾಟ್ ಸ್ಟಾರ್
(ಎಲ್ಲಾ ಪಂದ್ಯಗಳ ಆರಂಭ: ಭಾರತೀಯ ಕಾಲಮಾನ)

ಇದನ್ನೂ ಓದಿ : Ganguly to contest CAB president post: ಬಿಸಿಸಿಐನಿಂದ ಔಟ್, ಬಂಗಾಳ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಸ್ಥಾನಕ್ಕೆ ಸೌರವ್ ಗಂಗೂಲಿ ಸ್ಪರ್ಧೆ

ಇದನ್ನೂ ಓದಿ : Rohit Sharma t20 world Cup : ಆಸ್ಟ್ರೇಲಿಯಾದಲ್ಲಿ ರೋಹಿತ್‌ಗೆ 11 ವರ್ಷದ ಹುಡುಗನ ಬೌಲಿಂಗ್, ಯಾರು ಈ ಅದೃಷ್ಟವಂತ ಬಾಲಕ ?

T20 World Cup 2022 schedule Place Team Live telecast Complete Details

Comments are closed.