Delhi Capitals : ಮಹಿಳೆಯೊಂದಿಗೆ ಅನುಚಿತ ಡೆಲ್ಲಿ ಆಟಗಾರನ ವರ್ತನೆ, ಸ್ಟ್ರಿಕ್ಟ್ ರೂಲ್ಸ್ ಜಾರಿ ಮಾಡಿದ ಕ್ಯಾಪಿಟಲ್ಸ್ ಫ್ರಾಂಚೈಸಿ

ದೆಹಲಿ : ಐಪಿಎಲ್’ನಲ್ಲಿ ನೀರಸ ಪ್ರದರ್ಶನ ತೋರುತ್ತಿರುವ ಡೇವಿಡ್ ವಾರ್ನರ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡ, ಆಡಿರುವ 7 ಪಂದ್ಯಗಳಲ್ಲಿ ಕೇವಲ 2 ರಲ್ಲಿ ಗೆದ್ದು ಐದು ಪಂದ್ಯಗಳಲ್ಲಿ ಸೋತು ಪಾಯಿಂಟ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.

ನೀರಸ ಆಟದಿಂದ ನಿರಾಸೆ ಮೂಡಿಸಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಬೇಡದ ವಿಚಾರಕ್ಕೆ ಈಗ ಸುದ್ದಿಯಲ್ಲಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಟಗಾರನೊಬ್ಬ ನೈಟ್ ಪಾರ್ಟಿ ಒಂದರಲ್ಲಿ ಮಹಿಳೆಯೊಂದಿಗೆ ಅನುಚಿತ ವರ್ತನೆ ತೋರಿರುವುದಾಗಿ ವರದಿಯಾಗಿದೆ. ಘಟನೆಯ ಬಗ್ಗೆ ವರದಿಯಾಗುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ. ರಾತ್ರಿ 10 ಗಂಟೆಯ ನಂತರ ಆಟಗಾರರು ತಮ್ಮ ರೂಮ್’ನಲ್ಲಿ ಹೊರಗಿನ ವ್ಯಕ್ತಿಗಳನ್ನು ಭೇಟಿಯಾಗುವಂತಿಲ್ಲ. ಒಂದು ವೇಳೆ ಭೇಟಿ ಮಾಡಲೇಬೇಕೆಂದಿದ್ದರೆ ಅತಿಥಿಯ ಫೋಟೋ ಐಡೆಂಟಿಟಿ ಜೊತೆಗೆ ಸಂಬಂಧ ಪಟ್ಟ ಅಧಿಕಾರಿಯ ಅನುಮತಿ ಪಡೆಯಲೇಬೇಕು.

ಡೆಲ್ಲಿ ಕ್ಯಾಪಿಟಲ್ಸ್ ಜಾರಿಗೆ ತಂದಿರುವ ಸ್ಟ್ರಿಕ್ಸ್ ರೂಲ್ಸ್ ಹೀಗಿದೆ:

  • ರಾತ್ರಿ 10 ಗಂಟೆಯ ನಂತರ ಆಟಗಾರರು ತಾವು ತಂಗಿರುವ ಹೋಟೆಲ್ ರೂಮ್’ನಲ್ಲಿ ಯಾರನ್ನೂ ಭೇಟಿ ಮಾಡುವಂತಿಲ್ಲ.
  • ಆಟಗಾರರು ತಮ್ಮ ಅತಿಥಿಗಳನ್ನು ಹೋಟೆಲ್’ನ ರೆಸ್ಟೋರೆಂಟ್ ಅಥವಾ ಕಾಫಿ ಶಾಪ್’ನಲ್ಲಷ್ಟೇ ಭೇಟಿಯಾಗಬಹುದು.
  • ಭೇಟಿಗೂ ಮುನ್ನ ಅತಿಥಿಯ ಫೋಟೋ ಐಡೆಂಟಿಟಿ ಮತ್ತು ಐಪಿಎಲ್ ಸೆಕ್ಯುರಿಟಿ ಆಫೀಸರ್ ಅನುಮತಿ ಪಡೆಯುವುದು ಕಡ್ಡಾಯ.
  • ಆಟಗಾರರು ಹೋಟೆಲ್’ನಿಂದ ಹೊರಗೆ ತೆರಳುವ ಮುನ್ನ ಫ್ರಾಂಚೈಸಿಗೆ ಕಡ್ಡಾಯವಾಗಿ ತಿಳಿಸಲೇಬೇಕು.
  • ಆಟಗಾರರು ತಮ್ಮ ಪತ್ನಿ ಮತ್ತು ಗೆಳತಿಯರನ್ನು ತಮ್ಮದೇ ಖರ್ಚಿನಲ್ಲಿ ಹೋಟೆಲ್’ಗೆ ಕರೆಸಿಕೊಳ್ಳಬಹುದು.
  • ಕುಟುಂಬ ಸದಸ್ಯರು ತಂಡದ ಆಟಗಾರರನ್ನು ಸೇರಿಕೊಳ್ಳುವ ಮುನ್ನ ಆಟಗಾರರು ಈ ಬಗ್ಗೆ ಫ್ರಾಂಚೈಸಿ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು.
  • ಎಲ್ಲಾ ಆಟಗಾರರು ಫ್ರಾಂಚೈಸಿಯ ಎಲ್ಲಾ ಕಾರ್ಯಕ್ರಮಗಳಲ್ಲಿ ಕಡ್ಡಾಯವಾಗಿ ಭಾಗವಹಿಸಲೇಬೇಕು.
  • ಈ ನಿಯಮಗಳನ್ನು ಉಲ್ಲಂಘಿಸುವ ಆಟಗಾರರ ಮೇಲೆ ದಂಡ ಅಥವಾ ನಿಷೇಧ ಹೇರುವ ಬಗ್ಗೆ ಫಾಂಚೈಸಿ ಎಚ್ಚರಿಕೆ.

ಇದನ್ನೂ ಓದಿ : RCB : ಕರ್ನಾಟಕದ ಸ್ಟಾರ್‌ಗಳನ್ನು ಆರ್‌ಸಿಬಿ ಕಡೆಗಣಿಸಲು ತಮಿಳುನಾಡಿನ ಈ “ಮಹಾನುಭಾವ”ನೇ ಕಾರಣ..!

ಇದನ್ನೂ ಓದಿ : Virat Kohli: ಐಪಿಎಲ್‌ನಲ್ಲಿ ನಾಯಕನಾಗಿ ಅತೀ ಹೆಚ್ಚು ರನ್; ಧೋನಿ, ರೋಹಿತ್‌ಗಿಂತ ಕಿಂಗ್ ಕೊಹ್ಲಿಯೇ ಬೆಸ್ಟ್

ಡೇವಿಡ್ ವಾರ್ನರ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಶನಿವಾರ ದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆಯಲಿರುವ ತನ್ನ 8ನೇ ಲೀಗ್ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ರಿಕಿ ಪಾಟಿಂಗ್ ಹೆಡ್ ಕೋಚ್ ಆಗಿದ್ದರೆ, ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಡೆಲ್ಲಿ ತಂಡದ ನಿರ್ದೇಶಕರಾಗಿದ್ದಾರೆ.

Delhi Capitals: Delhi player’s inappropriate behavior with woman, Capitals franchise enforces strict rules

Comments are closed.