ಭಾನುವಾರ, ಏಪ್ರಿಲ್ 27, 2025
HomeSportsCricketಸಾಮಾನ್ಯರಂತೆ ಉಜ್ಜಯನಿ ಮಹಾಕಾಲೇಶ್ವರ ದರ್ಶನ ಪಡೆದ ಅನುಷ್ಕಾ ಶರ್ಮಾ- ವಿರಾಟ್ ಕೊಹ್ಲಿ

ಸಾಮಾನ್ಯರಂತೆ ಉಜ್ಜಯನಿ ಮಹಾಕಾಲೇಶ್ವರ ದರ್ಶನ ಪಡೆದ ಅನುಷ್ಕಾ ಶರ್ಮಾ- ವಿರಾಟ್ ಕೊಹ್ಲಿ

- Advertisement -

ಸಿನಿಮಾ ನಟ-ನಟಿಯರು ಮಾತ್ರವಲ್ಲ ಕ್ರಿಕೆಟಿಗರು ಕೂಡ ಸೋಷಿಯಲ್ ಮೀಡಿಯಾದ ಪ್ರಮುಖ ಆಕರ್ಷಣೆ ಅನ್ನೋದು ಸುಳ್ಳಲ್ಲ. ಹೀಗಾಗಿ ಕ್ರಿಕೇಟಿಗರು ಕೂಡ ಎಲ್ಲಿ ಹೋದರೂ ವಿಡಿಯೋ ವೈರಲ್ ಆಗೋದು ಕಾಮನ್. ಈಗ ಈ ಸಾಲಿಗೆ ಕ್ರಿಕೆಟಿಗ ಹಾಗೂ ನಟಿ ದಂಪತಿ ವಿರಾಟ್ ಹಾಗೂ ಅನುಷ್ಕಾ ಸೇರ್ಪಡೆಗೊಂಡಿದ್ದಾರೆ. ಇದುವರೆಗೂ ಕ್ರಿಕೇಟ್ ಗ್ರೌಂಡ್ ನಲ್ಲಿ ಒಟ್ಟಿಗೆ ಕಾಣಿಸಿಕೊಳ್ತಿದ್ದ ಈ ಜೋಡಿ ದೇವಾಲಯದಲ್ಲಿ ಪೂಜೆ ಮಾಡೋ ಮೂಲಕ ಗಮನ ಸೆಳೆದಿದೆ. ಕ್ರಿಕೇಟಿಗ ವಿರಾಟ್ ಕೊಹ್ಲಿ ಹಾಗೂ ನಟಿ ಅನುಷ್ಕಾ ಶರ್ಮಾ ಇತ್ತೀಚಿಗೆ ಉಜ್ಜಯನೀಯ ಮಹಾಕಾಳೇಶ್ವರ (Ujjayani Mahakaleshwar) ದೇವಾಲಯಕ್ಕೆ ಭೇಟಿ ನೀಡಿದ ವಿಡಿಯೋ ಈಗ ವೈರಲ್ ಆಗಿದೆ.

ಉಜ್ಜಯನಿಯ ದೇವಾಲಯದಲ್ಲಿ ಅನುಷ್ಕಾ ಹಾಗೂ ವಿರಾಟ್ ಭಕ್ತಿಭಾವದಿಂದ ಮಹಾಕಾಳೇಶ್ವರನ ಲಿಂಗ ಸ್ಪರ್ಶಿಸಿ ಪೂಜೆ ಮಾಡ್ತಿರೋ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ‌. ಅಲ್ಲದೇ ವಿರಾಟ್ ಹಾಗೂ ಅನುಷ್ಕಾ ದಂಪತಿ ದೇವಾಲಯದ ಅರ್ಚಕರ ಬಳಿ ಜನಸಾಮಾನ್ಯರಂತೆ ಕೂತು ಮಾತನಾಡುತ್ತಿರುವ ದೃಶ್ಯವೂ ಅಭಿಮಾನಿಗಳನ್ನು ಸೆಳೆದಿದೆ. ವಿರಾಟ್ ನಾಸ್ತಿಕರಾಗಿದ್ದು, ಅನುಷ್ಕಾ ಮದುವೆಯಾದ ಬಳಿಕ ದೇವರ ಮೇಲೆ ಶೃದ್ಧೆ ಬೆಳೆಸಿಕೊಂಡಿದ್ದಾರೆ ಎನ್ನಲಾಗ್ತಿದೆ. ಈ ಬಗ್ಗೆ ಇತ್ತೀಚಿಗೆ ವಿರಾಟ್ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದು, ಅನುಷ್ಕಾ ಭೇಟಿ ನನ್ನ ಜೀವನದಲ್ಲಿ ಹೊಸ ದೃಷ್ಟಿಕೋನವೊಂದನ್ನು ನೀಡಿದೆ ಎಂದಿದ್ದರು.

ಅಲ್ಲದೇ ಎಲ್ಲವನ್ನು ಸ್ವೀಕರಿಸುವ ಭಾವನೆಯನ್ನು ಬೆಳೆಸಿದೆ ಎಂದು ವಿರಾಟ್ ಹೇಳಿಕೊಂಡಿದ್ದರು. ನನ್ನ ಜೀವನು ವಿಭಿನ್ನ ದೃಷ್ಟಿಕೋನವನ್ನು ಹೊಂದಿತ್ತು. ನೀವು ಒಬ್ಬ ವ್ಯಕ್ತಿಯೊಂದಿಗೆ ಪ್ರೀತಿಯಲ್ಲಿ ಬಿದ್ದಾಗ ನಿಮ್ಮೊಳಗು ಬದಲಾವಣೆಗಳಾಗಲು ಪ್ರಾರಂಭವಾಗುತ್ತದೆ. ಅನುಷ್ಕಾ ಭೇಟಿ ಬಳಿಕವೂ ಹಾಗೇ ಬದಲಾವಣೆ ಆಯ್ತು. ಅವಳ‌ಜೀವನ ದೃಷ್ಟಿಕೋನವೂ ಉತ್ತಮವಾಗಿತ್ತು. ಅದರಿಂದ ಉತ್ತಮ ವಿಷಯಗಳನ್ನು ಹೆಚ್ಚು ಒಪ್ಪಿಕೊಳ್ಳುವಂತೆ ಮಾಡಿತು ಎಂದು ವಿರಾಟ್ ಮುಕ್ತವಾಗಿ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ : ಉಜ್ಜಯಿನಿ ಮಹಾಕಾಶೇಳ್ವರನಿಗೆ ಭಸ್ಮಾರತಿ ಪೂಜೆ ಸಲ್ಲಿಸಿದ ವಿರಾಟ್ ಕೊಹ್ಲಿ-ಅನುಷ್ಕಾ ದಂಪತಿ

ಇದನ್ನೂ ಓದಿ : WPL 2023 : ಇಂದಿನಿಂದ ಮಹಿಳಾ ಪ್ರೀಮಿಯರ್‌ ಲೀಗ್‌ ಆರಂಭ, ತಂಡಗಳ ಬಲಾಬಲ, ವೇಳಾಪಟ್ಟಿ, ನೇರಪ್ರಸಾರ; ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್‌

ಇದನ್ನೂ ಓದಿ : RCB New Sponsor : ಆರ್‌ಸಿಬಿ 75 ಕೋಟಿಯ ಮೆಗಾ ಡೀಲ್‌ಗೆ ಸಹಿ ಹಾಕಿದ ರಾಯಲ್ ಚಾಲೆಂಜರ್ಸ್ ಫ್ರಾಂಚೈಸಿ

ಈ ವರ್ಷದ ಆರಂಭದಲ್ಲಿ ವಿರಾಟ್ ಹಾಗೂ ಅನುಷ್ಕಾ ಉತ್ತರಾಖಂಡದ ಆಶ್ರಮವೊಂದಕ್ಕೆ ಭೇಟಿ ನೀಡಿದ್ದರು. ಈ ವೇಳೆ ಅನುಷ್ಕಾ ಹಾಗೂ ವಿರಾಟ್ ಬಾಬಾ ನೀಮ್ ಕರೋಲಿಯ ಅನುಯಾಯಿಗಳು ಎನ್ನಲಾಗಿದೆ. ಸದ್ಯ ವಿರಾಟ್ ಹಾಗೂ ಅನುಷ್ಕಾ ದೇವರ ದರ್ಶನ ಪಡೆದ ವಿಡಿಯೋಗಳು ಸಖತ್ ವೈರಲ್ ಆಗ್ತಿದ್ದು, ಜನರು ಈ ಜೋಡಿಯ ವಿಡಿಯೋ ನೋಡಿ ಸರಳತೆಯನ್ನು ಕೊಂಡಾಡುತ್ತಿದ್ದಾರೆ. ಆದರೆ ಈ ಜೋಡಿ ದೇವಾಲಯದ ಭೇಟಿ ವೇಳೆ ಮಗುವನ್ನು ಮಾತ್ರ ಕರೆದುಕೊಂಡು ಬಂದಿಲ್ಲ. ಇದು ಟೀಕೆಗೂ ಗುರಿಯಾಗಿದೆ.

Anushka Sharma and Virat Kohli visited Ujjayani Mahakaleshwar like normal people

RELATED ARTICLES

Most Popular