ಬೆಂಗಳೂರು : ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡದ ಸ್ಟಾರ್ ಬ್ಯಾಟ್ಸ್’ಮನ್ ವಿರಾಟ್ ಕೊಹ್ಲಿ (Virat Kohli) ಕ್ರಿಕೆಟ್ ಜಗತ್ತಿನಲ್ಲಿ ಬೌಲರ್’ಗಳನ್ನು ಚೆಂಡಾಡಿ “ಕಿಂಗ್” ಎಂದು ಕರೆಸಿಕೊಂಡವರು. ವಿರಾಟ್ ಕೊಹ್ಲಿ ಅವರನ್ನು ರನ್ ಮಷಿನ್ ಎಂದೇ ಕರೆಯಲಾಗುತ್ತದೆ. ಇಂಥಾ ರನ್ ಮಷಿನ್’ಗೆ ಏಪ್ರಿಲ್ 23ರ ಫೋಬಿಯಾ (April 23 Phobia for Virat Kohli ) ಕಾಡುತ್ತಿದೆ. ಐಪಿಎಲ್’ನಲ್ಲಿ ಏಪ್ರಿಲ್ 23ನೇ ದಿನ ವಿರಾಟ್ ಕೊಹ್ಲಿ ಅವರಿಗೆ ಬ್ಯಾಡ್ ಡೇ. ಇದು ಮೂರನೇ ಬಾರಿ ಸಾಬೀತಾಗಿದೆ.
ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ (ಏಪ್ರಿಲ್ 23) ನಡೆದ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಗೋಲ್ಡನ್ ಡಕ್’ಗೆ, ಅಂದ್ರೆ ಎದುರಿಸಿದ ಮೊದಲ ಎಸೆತದಲ್ಲೇ ಶೂನ್ಯಕ್ಕೆ ಔಟಾಗಿದ್ದರು. ರಾಯಲ್ಸ್ ಪರ ಆಡುತ್ತಿರುವ ಕಿವೀಸ್ ವೇಗಿ ಟ್ರೆಂಟ್ ಬೌಲ್ಟ್ ದಾಳಿಯಲ್ಲಿ ವಿರಾಟ್ ಇನ್ನಿಂಗ್ಸ್’ನ ಮೊದಲ ಎಸೆತದಲ್ಲೇ ಎಲ್ಬಿಡಬ್ಲ್ಯೂ ಬಲೆಗೆ ಬಿದ್ದಿದ್ದರು. ಅಂದ ಹಾಗೆ ಏಪ್ರಿಲ್ 23ರ ದಿನ ವಿರಾಟ್ ಕೊಹ್ಲಿ ಐಪಿಎಲ್’ನಲ್ಲಿ ಗೋಲ್ಡನ್ ಡಕ್’ಗೆ ಔಟಾಗುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಎರಡು ಬಾರಿ ಕಿಂಗ್ ಕೊಹ್ಲಿ ಏಪ್ರಿಲ್ 23ರಂದು ಎದುರಿಸಿದ ಮೊದಲ ಎಸೆತದಲ್ಲೇ ಔಟಾಗಿದ್ದಾರೆ.
2017ರ ಏಪ್ರಿಲ್ 23ರಂದು ಕೋಲ್ಕತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಎದುರಿಸಿದ ಮೊದಲ ಎಸೆತದಲ್ಲೇ ವಿರಾಟ್ ಕೊಹ್ಲಿ ಔಟಾಗಿದ್ದರು. 2022ರ ಏಪ್ರಿಲ್ 23ರಂದು ಮುಂಬೈನ ಬ್ರೆಬೋರ್ನ್ ಕ್ರೀಡಾಂಗಣದಲ್ ನಡೆದ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಎದುರಿಸಿದ ಮೊದಲ ಎಸೆತದಲ್ಲೇ ಕೊಹ್ಲಿ ಗೋಲ್ಡನ್ ಡಕ್’ಗೆ ವಿಕೆಟ್ ಒಪ್ಪಿಸಿದ್ದರು. 2023ರ ಏಪ್ರಿಲ್ 23ರಂದು ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಕೊಹ್ಲಿ ಮತ್ತೊಮ್ಮೆ ಗೋಲ್ಡನ್ ಡಕ್’ಗೆ ಔಟಾಗಿದ್ದಾರೆ. ಮೂರು ಬಾರಿಯೂ ಕಿಂಗ್ ಕೊಹ್ಲಿ ವೇಗದ ಬೌಲರ್’ಗಳಿಗೆ ಔಟಾಗಿರುವುದು ಮತ್ತೊಂದು ವಿಶೇಷ.
ವಿರಾಟ್ ಕೊಹ್ಲಿಗೆ “ಏಪ್ರಿಲ್ 23” ಫೋಬಿಯಾ
2017, ಏಪ್ರಿಲ್ 23 Vs ಕೋಲ್ಕತಾ ನೈಟ್ ರೈಡರ್ಸ್: 0 (1)
2022, ಏಪ್ರಿಲ್ 23 Vs ಸನ್ ರೈಸರ್ಸ್ ಹೈದರಾಬಾದ್: 0 (1)
2023, ಏಪ್ರಿಲ್ 23 Vs ರಾಜಸ್ಥಾನ್ ರಾಯಲ್ಸ್: 0 (1)
ಇದನ್ನೂ ಓದಿ : IPL 2023 Injuries : ಐಪಿಎಲ್‌ನಲ್ಲಿ ಗಾಯಗೊಂಡು ಹೊರ ನಡೆದ ಖ್ಯಾತ ಆಟಗಾರರು
ಭಾನುವಾರ ರಾಜಸ್ಥಾನ್ ರಾಯಲ್ಸ್ ವಿರುದ್ಧ ಗೋಲ್ಡನ್ ಡಕ್’ಗೆ ಔಟಾದರೂ ತಮ್ಮ ನಾಯಕತ್ವದಲ್ಲಿ ರಾಯಲ್ ಚಾಲೆಂಜರ್ಸ್’ಗೆ ಸತತ 2ನೇ ಗೆಲುವು ತಂದುಕೊಡುವಲ್ಲಿ ವಿರಾಟ್ ಕೊಹ್ಲಿ ಯಶಸ್ವಿಯಾಗಿದ್ದಾರೆ.
April 23 Phobia for Virat Kohli: “April 23” Phobia for King Kohli: Three Years, Three Golden Ducks