MS Dhoni: ಐಪಿಎಲ್‌ನಲ್ಲಿ “ಎಲ್ಲಾ” ಮೈದಾನಗಳು “ಯೆಲ್ಲೋ” ಆಗಿ ಬದಲಾಗುತ್ತಿರುವುದನ್ನು ಕಂಡಿರಾ..?

ಚೆನ್ನೈ : ಐಪಿಎಲ್-2023 (IPL 2023) ಟೂರ್ನಿಯಲ್ಲಿ ಅಚ್ಚರಿಯೊಂದು ನಡೆಯುತ್ತಿದೆ. ನೀವು ಐಪಿಎಲ್ ಪಂದ್ಯಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಆ ಅಚ್ಚರಿ ನಿಮಗೆ ಗೋಚರವಾಗಿರುತ್ತದೆ. ಐಪಿಎಲ್ ಟೂರ್ನಿಯಲ್ಲಿ (IPL 2023 – CSK) ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತಂಡದ ಆಡುವ ವೇಳೆ ಎಲ್ಲಾ ಮೈದಾನಗಳು ಹಳದಿ ಬಣ್ಣದಲ್ಲಿ ಕಂಗೊಳಿಸುತ್ತವೆ.

ಚೆನ್ನೈನ ಚೆಪಾಕ್’ನಲ್ಲಿರುವ ಎಂ.ಎ ಚಿದಂಬರಂ ಕ್ರೀಡಾಂಗಣ ಚೆನ್ನೈ ಸೂಪರ್ ಕಿಂಗ್ಸ್ ತಂಡದ ತವರು ಮೈದಾನ. ಹೀಗಾಗಿ ಚೆಪಾಕ್ ಮೈದಾನದಲ್ಲಿ ಸಿಎಸ್’ಕೆ ಅಭಿಮಾನಿಗಳು ಕಿಕ್ಕಿರಿದು ತುಂಬುವ ಕಾರಣ ಇದೇ ಕ್ರೀಡಾಂಗಣ ಹಳದಿ ಬಣ್ಣದಲ್ಲಿ ಮಿಂಚುತ್ತಿರುತ್ತದೆ. ಇಂಟ್ರೆಸ್ಟಿಂಗ್ ಸಂಗತಿ ಏನಂದ್ರೆ ಚೆಪಾಕ್ ಮೈದಾನವಲ್ಲದೆ ಬೇರೆ ಮೈದಾನಗಳೂ ಕೂಡ ಹಳದಿ ಬಣ್ಣದಲ್ಲಿ ಕಂಗೊಳಿಸುತ್ತಿರುವುದು ವಿಶೇಷ. ಇದಕ್ಕೆಲ್ಲಾ ಕಾರಣ ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ (MS Dhoni).

ಚೆನ್ನೈ ಸೂಪರ್ ಕಿಂಗ್ಸ್ ತಂಡ ಈ ಬಾರಿ ಎಲ್ಲೇ ಐಪಿಎಲ್ ಪಂದ್ಯಗಳನ್ನಾಡಲಿ. ಧೋನಿ ಕಾರಣಕ್ಕೆ ಕ್ರಿಕೆಟ್ ಪ್ರಿಯರು ಸಿಎಸ್’ಕೆ ತಂಡವನ್ನು ಭಾರೀ ಸಂಖ್ಯೆಯಲ್ಲಿ ಮೈದಾನಕ್ಕೆ ಬಂದು ಬೆಂಬಲಿಸುತ್ತಿದೆ. ಸಾಮಾನ್ಯವಾಗಿ ಆರ್’ಸಿಬಿ ಅಭಿಮಾನಿಗಳ ಆರ್ಭಟಕ್ಕೆ ಸಾಕ್ಷಿಯಾಗುವ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ, ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯ ವೇಳೆ ಸಿಎಸ್’ಕೆ ಅಭಿಮಾನಿಗಳ ಅಬ್ಬರದಲ್ಲಿ ಮಿಂದೆದ್ದಿತ್ತು.

ಇದಕ್ಕೂ ಮೊದಲು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲೂ ಚೆನ್ನೈ ಅಭಿಮಾನಿಗಳೇ ದೊಡ್ಡ ಸಂಖ್ಯೆಯಲ್ಲಿ ಮೈದಾನಕ್ಕೆ ಆಗಮಿಸಿದ್ದರು. ಇನ್ನು ಭಾನುವಾರ ಕೋಲ್ಕತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಆತಿಥೇಯ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲೂ ತವರು ತಂಡಕ್ಕಿಂತ ಸಿಎಸ್’ಕೆ ಅಭಿಮಾನಿಗಳೇ ದೊಡ್ಡ ಸಂಖ್ಯೆಯಲ್ಲಿ ಮೈದಾನಕ್ಕೆ ಆಗಮಿಸಿದ್ದರು. ಇನ್ನು ಅಹ್ಮದಾಬಾದ್’ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಚೆನ್ನೈ Vs ಗುಜರಾತ್ ಟೈಟನ್ಸ್ ನಡುವಿನ ಐಪಿಎಲ್ ಉದ್ಘಾಟನಾ ಪಂದ್ಯದಲ್ಲೂ ಇಡೀ ಮೈದಾನ ಹಳದಿಮಯವಾಗಿತ್ತು.

ದೇಶದ ಯಾವುದೇ ಮೂಲೆಗೆ ಹೋದರೂ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಅಭಿಮಾನಿಗಳ ಭಾರೀ ಬೆಂಬಲ ವ್ಯಕ್ತವಾಗುತ್ತಿದೆ. ಎಂ.ಎಸ್ ಧೋನಿ ಅವರ ಪಾಲಿಗೆ ಇದೇ ಕೊನೆಯ ಐಪಿಎಲ್ ಟೂರ್ನಿಯಾಗುವ ಸಾಧ್ಯತೆಯಿರುವುದರಿಂದ ಅಭಿಮಾನಿಗಳು ತಮ್ಮ ನೆಚ್ಚಿನ ಆಟಗಾರನಿಗೆ ವಿದಾಯ ಹೇಳಲು ದೊಡ್ಡ ಸಂಖ್ಯೆಯಲ್ಲಿ ಕ್ರೀಡಾಂಗಣಗಳಿಗೆ ಆಗಮಿಸುತ್ತಿದ್ದಾರೆ.

ಇದನ್ನೂ ಓದಿ : April 23 Phobia for Virat Kohli : ಕಿಂಗ್ ಕೊಹ್ಲಿಗೆ “ಏಪ್ರಿಲ್ 23” ಫೋಬಿಯಾ : ಮೂರು ವರ್ಷ, ಮೂರು ಗೋಲ್ಡನ್ ಡಕ್

ಇದನ್ನೂ ಓದಿ : IPL 2023 Injuries : ಐಪಿಎಲ್‌ನಲ್ಲಿ ಗಾಯಗೊಂಡು ಹೊರ ನಡೆದ ಖ್ಯಾತ ಆಟಗಾರರು

IPL 2023 – CSK : Chennai Super Kings : MS Dhoni: Did you see “all” grounds turning “yellow” in IPL..?

Comments are closed.