ದುಬೈ : ಏಷ್ಯಾಕಪ್‌ನಲ್ಲಿ (Asia Cup 2022) ಭಾರತ ಗೆಲುವಿನ ಅಭಿಯಾನವನ್ನು ಆರಂಭಿಸಿದೆ. ಪಾಕಿಸ್ತಾನ ವಿರುದ್ದ(Ind vs Pak ) ಮೊದಲ ಪಂದ್ಯದಲ್ಲಿಯೇ ಟೀಂ ಇಂಡಿಯಾ ಭರ್ಜರಿ ಆಟದ ಪ್ರದರ್ಶನವನ್ನು ನೀಡಿದ್ದು, ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು 5 ವಿಕೆಟ್‌ಗಳಿಂದ (India beat Pakistan) ಸೋಲಿಸಿದೆ. ವಿಜೇತ ಭಾರತ ತಂಡವನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ.
ಟಾಸ್ ಗೆದ್ದ ಭಾರತ ತಂಡ ಪಾಕಿಸ್ತಾನವನ್ನು ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಿದೆ. ಪಾಕ್ ನಾಯಕ ಬಾಬರ್ ಅಜಮ್ ಮತ್ತು ಮೊಹಮ್ಮದ್ ರಿಜ್ವಾನ್ ಬ್ಯಾಟಿಂಗ್ ಆರಂಭಿಸಿದರು. ಆದ್ರೆ ಭರ್ಜರಿ ಫಾರ್ಮ್‌ನಲ್ಲಿದ್ದ ಬಾಬರ್ ಅಜಮ್ 10 ರನ್ ಗಳಿಸಿ ಆಡುತ್ತಿದ್ದಾಗ ಭುವನೇಶ್ವರ್ ಕುಮಾರ್ ಎಸೆತದಲ್ಲಿ ದಿನೇಶ್ ಕಾರ್ತಿಕ್ ಗೆ ಕ್ಯಾಚ್ ನೀಡಿ ಔಟಾದರು. ನಂತರ ಬಂದ ಫಾಖರ್ ಜಮಾನ್ 2 ಬೌಂಡರಿಗಳೊಂದಿಗೆ 10 ರನ್ ಗಳಿಸಿ ಔಟಾದರು.
ಆರಂಭಿಕ ಮೊಹಮ್ಮದ್ ರಿಜ್ವಾನ್ ಇನ್ನಿಂಗ್ಸ್ ಕಟ್ಟುವ ಕಾರ್ಯವನ್ನು ಮಾಡಿದ್ರು. ಇಫ್ತಿಕರ್ ಅಹ್ಮದ್ 28 ರನ್, ಮೊಹಮ್ಮದ್ ರಿಜ್ವಾನ್ 43 ರನ್, ಕುಶ್ದಿಲ್ 2 ರನ್, ಆಸಿಫ್ ಅಲಿ 9 ರನ್, ಮೊಹಮ್ಮದ್ ನವಾಜ್ 1 ರನ್, ಶಾನವಾಜ್ ತಹಾನಿ 16 ರನ್, ಹ್ಯಾರಿಸ್ ರೌಫ್ 13 ರನ್ ಗಳಿಸಿ ಅಜೇಯರಾಗಿ ಉಳಿದರು. ಪಾಕಿಸ್ತಾನ 19.5 ಓವರ್‌ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 147 ರನ್ ಗಳಿಸಲಷ್ಟೇ ಶಕ್ತವಾಯಿತು.
Brilliant start 👏👏👏 Memorable game of cricket 🇮🇳 pic.twitter.com/drA0Fryc6d
— Jasprit Bumrah (@Jaspritbumrah93) August 28, 2022
ಪಾಕಿಸ್ತಾನ ನೀಡಿದ್ದ 148 ರನ್‌ಗಳ ಗುರಿಯೊಂದಿಗೆ ಬ್ಯಾಟಿಂಗ್‌ಗೆ ಇಳಿದ ಭಾರತ ತಂಡಕ್ಕೆ ಪಾಕಿಸ್ತಾನ 2ನೇ ಎಸೆತದಲ್ಲಿಯೇ ಆಘಾತ ನೀಡಿತು. ನಶೀಮ್ ಶಾ ಎಸೆತದಲ್ಲಿ ಆರಂಭಿಕ ಕೆ.ಎಲ್. ರಾಹುಲ್ ಬೌಲ್ಡ್ ಆಗುವ ಮೂಲಕ ವಿಕೆಟ್ ಒಪ್ಪಿಸಿದ್ರು. ನಂತರ ರೋಹಿತ್ ಶರ್ಮಾ 12 ರನ್, ವಿರಾಟ್ ಕೊಹ್ಲಿ 35 ರನ್, ಸೂರ್ಯಕುಮಾರ್ ಯಾದವ್ 18 ರನ್ ಮತ್ತು ರವೀಂದ್ರ ಜಡೇಜಾ 35 ರನ್ ಗಳಿಸಿದರು.
For his match-winning knock of 33* off 17 deliveries, @hardikpandya7 is our Top Performer from the second innings.
— BCCI (@BCCI) August 28, 2022
A look at his batting summary here 👇👇#INDvPAK #AsiaCup2022 pic.twitter.com/DEHo3wPM1N
ಅಂತಿಮ ಹಂತದಲ್ಲಿ ಹಾರ್ದಿಕ್ ಪಾಂಡ್ಯ ಹಾಗೂ ರವೀಂದ್ರ ಜಡೇಜಾ ಉತ್ತಮ ಆಟದ ಪ್ರದರ್ಶನ ನೀಡಿದ್ರು. ಹಾರ್ದಿಕ್ ಪಾಂಡ್ಯ 35 ರನ್ ಬಾರಿಸುವ ಮೂಲಕ ತಂಡಕ್ಕೆ ಗೆಲುವನ್ನು ತಂದು ಕೊಟ್ರು. ಹಾರ್ದಿಕ್ ಪಾಂಡ್ಯ ಪಂದ್ಯ ಶ್ರೇಷ್ಠರಾಗಿ ಆಯ್ಕೆಯಾದರು. ಪ್ರಧಾನಿ ಮೋದಿ ಭಾಷಣದಲ್ಲಿ ವಿಜೇತ ಭಾರತ ತಂಡವನ್ನು ಅಭಿನಂದಿಸಿದ್ದಾರೆ.
ಇದನ್ನೂ ಓದಿ : India Vs Pakistan: “ವಿರಾಟ್, ರಾಹುಲ್ ಹೃದಯವಂತಿಕೆ ಹೃದಯಕ್ಕೇ ತಟ್ಟಿತು..” ಪಾಕ್ ನಾಯಕ ಬಾಬರ್ ಹೀಗಂದಿದ್ದೇಕೆ ?
ಇದನ್ನೂ ಓದಿ : Rishabh Pant Vs Urvashi Rautela: ಡಗೌಟ್’ನಲ್ಲಿ ರಿಷಭ್ ಪಂತ್,ಪ್ರೇಕ್ಷಕರ ಗ್ಯಾಲರಿಯಲ್ಲಿ ಊರ್ವಶಿ ರೌಟೇಲ, ವಿಕೆಟ್ ಕೀಪರ್ ಫುಲ್ ಟ್ರೋಲ್
Asia Cup 2022 Ind vs Pak India beat Pakistan by 5 wickets pm modi congratulates the indian team