Rishabh Pant Vs Urvashi Rautela: ಡಗೌಟ್’ನಲ್ಲಿ ರಿಷಭ್ ಪಂತ್,ಪ್ರೇಕ್ಷಕರ ಗ್ಯಾಲರಿಯಲ್ಲಿ ಊರ್ವಶಿ ರೌಟೇಲ, ವಿಕೆಟ್ ಕೀಪರ್ ಫುಲ್ ಟ್ರೋಲ್

ದುಬೈ: (Rishabh Pant Vs Urvashi Rautela) ಭಾರತ ಮತ್ತು ಪಾಕಿಸ್ತಾನ ನಡುವಿನ ಏಷ್ಯಾ ಕಪ್ ಪಂದ್ಯ ಕುತೂಹಲಕಾರಿ ಸಂಗತಿಯೊಂದಕ್ಕೆ ಸಾಕ್ಷಿಯಾಗಿದೆ. ಸಾಂಪ್ರದಾಯಿಕ ಎದುರಾಳಿ ವಿರುದ್ಧದ ಹೈವೋಲ್ಟೇಜ್ ಪಂದ್ಯದಲ್ಲಿ (India Vs Pakistan Asia Cup 2022) ಎಡಗೈ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ರಿಷಭ್ ಪಂತ್ ಟೀಮ್ ಇಂಡಿಯಾದ ಪ್ಲೇಯಿಂಗ್ XIನಲ್ಲಿ ಸ್ಥಾನ ಪಡೆಯಲಿಲ್ಲ. ಪಂತ್ ಬದಲು ಅನುಭವಿ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ದಿನೇಶ್ ಕಾರ್ತಿಕ್ ಆಡುವ ಬಳಗದಲ್ಲಿ ಅವಕಾಶ ಪಡೆದರು.

ಇತ್ತ ರಿಷಭ್ ಪಂತ್ ಡಗೌಟ್’ನಲ್ಲಿ ಬೆಂಚ್ ಕಾಯಿಸುತ್ತಿದ್ದರೆ, ಅತ್ತ ಪ್ರೇಕ್ಷಕರ ಗ್ಯಾಲರಿಯಲ್ಲಿ ವಿಶೇಷ ಅತಿಥಿಯೊಬ್ಬರು ಕಾಣಿಸಿಕೊಂಡರು. ಅವರು ಬೇರಾರೂ ಅಲ್ಲ, ಇತ್ತೀಚೆಗೆ ರಿಷಭ್ ಪಂತ್ ಜೊತೆ ಸಾಮಾಜಿಕ ಜಾಲತಾಣದಲ್ಲಿ ಜಗಳ ಮಾಡಿಕೊಂಡಿದ್ದ ಬಾಲಿವುಡ್ ನಟಿ ಊರ್ವಶಿ ರೌಟೇಲ. (Rishabh Pant Vs Urvashi Rautela) ಊರ್ವಶಿ ರೌಟೇಲ ಅವರನ್ನು ಕ್ರೀಡಾಂಗಣದ ಬಿಗ್ ಸ್ಕ್ರೀನ್’ನಲ್ಲಿ ತೋರಿಸುತ್ತಿದ್ದಂತೆ ರಿಷಭ್ ಪಂತ್ ಫುಲ್ ಟ್ರೋಲ್ ಆಗಿದ್ದಾರೆ.

https://twitter.com/akshatom10/status/1563905382401343489?s=21

ರಿಷಭ್ ಪಂತ್ ಮತ್ತು ಊರ್ವಶಿ ರೌಟೇಲ ಕಳೆದ ಕೆಲ ತಿಂಗಳಿಂದ ಡೇಟಿಂಗ್ ನಡೆಸುತ್ತಿದ್ದರು. ಆದರೆ ಇತ್ತೀಚೆಗೆ ಸಂದರ್ಶನವೊಂದರಲ್ಲಿ ರಿಷಭ್ ಪಂತ್ ಬಗ್ಗೆ ಊರ್ವಶಿ ರೌಟೇಲ ನೀಡಿದ ಹೇಳಿಕೆ ಇಬ್ಬರ ಮಧ್ಯೆ ಮನಸ್ತಾಪಕ್ಕೆ ಕಾರಣವಾಗಿತ್ತು.

ನಾನು ಯಾವುದೋ ಶೂಟಿಂಗ್’ಗಾಗಿ ದೆಹಲಿಗೆ ಹೋಗಿದ್ದಾಗ ಹೋಟೆಲ್ ಒಂದರಲ್ಲಿ ತಂಗಿದ್ದೆ. ಆಗ ಅಲ್ಲಿಗೆ ಬಂದಿದ್ದ RP ನನ್ನನ್ನು ಭೇಟಿ ಮಾಡಲು ಹೋಟೆಲ್ ಲಾಬಿಯಲ್ಲಿ ಇಡೀ ರಾತ್ರಿ ಕಾದು ಕೂತಿದ್ದ. ಆದರೆ ನಾನು ಶೂಟಿಂಗ್’ನಲ್ಲಿ ಸುಸ್ತಾಗಿದ್ದ ಕಾರಣ ಅವನನ್ನು ಅಲ್ಲಿ ಭೇಟಿ ಮಾಡಲಿಲ್ಲ. ಬೆಳಗ್ಗೆ ಎದ್ದು ನೋಡಿದಾಗ ನನ್ನ ಫೋನ್’ನಲ್ಲಿ 16-17 ಮಿಸ್ ಕಾಲ್’ಗಳಿದ್ದವು. ನನಗೆ ತುಂಬಾ ಬೇಸರವಾಯಿತು. ನಂತರ ಆತನಿಗೆ ಕರೆ ಮಾಡಿ ಮುಂಬೈಗೆ ಬಂದಾಗ ನಿನ್ನನ್ನು ಭೇಟಿ ಮಾಡುವುದಾಗಿ ಆತನಿಗೆ ತಿಳಿಸಿದೆ” ಎಂದು ರಿಷಭ್ ಪಂತ್ (Rishabh Pant) ಅವರ ಹೆಸರನ್ನು ಹೇಳದೆ RP ಎಂದು ಸಂದರ್ಶನದಲ್ಲಿ ನಟಿ ಊರ್ವಶಿ ರೌಟೇಲಾ ಹೇಳಿದ್ದರು.

ಆ ಹೇಳಿಕೆಯ ನಂತರ ಊರ್ವಶಿಯನ್ನು ‘’ಅಕ್ಕಾ’’ ಎಂದು ಕರೆದಿದ್ದ ರಿಷಭ್ ಪಂತ್ ‘’ನನ್ನ ಹಿಂದೆ ಯಾಕೆ ಬಿದ್ದಿದ್ದೀಯಾ’’ ಎಂದಿದ್ದರು. ಇದಕ್ಕೆ ಪ್ರತಿಯಾಗಿ ಊರ್ವಶಿ ರೌಟೇಲ ‘’ಚೋಟು ಭೈಯಾ ಬ್ಯಾಟ್ ಮತ್ತು ಬಾಲ್ ಮಾತ್ರ ಆಡಬೇಕೆಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದರು.

ಇದನ್ನೂ ಓದಿ : ABD Congratulates Virat Kohli : ಟಿ20ಯಲ್ಲಿ “ಶತಕ” ಬಾರಿಸಿದ ವಿರಾಟ್ ಕೊಹ್ಲಿಗೆ ಅಭಿನಂದನೆ ಸಲ್ಲಿಸಿದ ಆಪ್ತಮಿತ್ರ ಎಬಿಡಿ

ಇದನ್ನೂ ಓದಿ : India Vs Pakistan: “ವಿರಾಟ್, ರಾಹುಲ್ ಹೃದಯವಂತಿಕೆ ಹೃದಯಕ್ಕೇ ತಟ್ಟಿತು..” ಪಾಕ್ ನಾಯಕ ಬಾಬರ್ ಹೀಗಂದಿದ್ದೇಕೆ ?

Rishabh Pant Vs Urvashi Rautela Pant in dugout Rautela in audience gallery full troll in India Vs Pakistan Asia Cup 2022

Comments are closed.