ಕೊಲಂಬೊ : ಭಾರತ ಹಾಗೂ ಶ್ರೀಲಂಕಾ (India Vs Srilanka) ನಡುವೆ ನಡೆದ ಏಷ್ಯಾಕಪ್ ಫೈನಲ್ (Asia Cup 2023 Final) ಕ್ರಿಕೆಟ್ ಪಂದ್ಯದಲ್ಲಿ (Cricket Match) ಭಾರತ ತಂಡದ (Indian Cricket Team) ಮೊಹಮ್ಮದ್ ಸಿರಾಜ್ (mohammed siraj) ಹಿರೋ ಆಗಿ ಮೆರೆದಿದ್ದಾರೆ. ಒಂದೇ ಓವರ್‌ನಲ್ಲಿ ಶ್ರೀಲಂಕಾದ 4 ವಿಕೆಟ್ ಪಡೆಯುವ ಮೂಲಕ ಭಾರತಕ್ಕೆ ಗೆಲುವನ್ನು ತಂದುಕೊಡುವುದರ ಜೊತೆಗೆ ವಿಶಿಷ್ಟ ದಾಖಲೆ ( Siraj World Record) ನಿರ್ಮಿಸಿದ್ದಾರೆ.

ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ತಂಡ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಮಳೆಯಿಂದಾಗಿ ಪಂದ್ಯ ಕೊಂಚ ತಡವಾಗಿಯೇ ಆರಂಭಗೊಂಡಿತ್ತು. ಫೈನಲ್ ಪಂದ್ಯದಲ್ಲಿ ಭಾರತಕ್ಕೆ ದಾಖಲೆಯ ಟಾರ್ಗೇಟ್ ಗುರಿ ನೀಡುವ ಕನಸು ಕಂಡಿದ್ದ ಶ್ರೀಲಂಕಾ ತಂಡ ಏಷ್ಯಾಕಪ್‌ನಲ್ಲಿ ಹೀನಾಯ ಸೋಲು ಕಂಡಿದೆ.

ಜಸ್ಪ್ರಿತ್ ಬೂಮ್ರಾ ಆರಂಭಿಕ ವಿಕೆಟ್ ಕಿತ್ತು ಶ್ರೀಲಂಕಾ ತಂಡಕ್ಕೆ ಆಘಾತ ನೀಡಿದ ಬೆನ್ನಲ್ಲೇ ಬೌಲಿಂಗ್‌ಗೆ ಇಳಿದ ಮೊಹಮ್ಮದ್ ಸಿರಾಜ್ ಮಾರಕ ದಾಳಿಗೆ ಶ್ರೀಲಂಕಾ ತಂಡ ತತ್ತರಿಸಿ ಹೋಗುವಂತೆ ಮಾಡಿದ್ರು. ಅದರಲ್ಲೂ ಒಂದೇ ಓವರ್‌ನಲ್ಲಿ ನಾಲ್ಕು ವಿಕೆಟ್ ಪಡೆಯುವ ಮೂಲಕ ಈ ಸಾಧನೆ ಮಾಡಿದ ಭಾರತದ ಮೊದಲ ಬೌಲರ್ ಅನ್ನೋ ಖ್ಯಾತಿಗೆ ಪಾತ್ರರಾಗಿದ್ದಾರೆ.
ಇದನ್ನೂ ಓದಿ : ಸಿರಾಜ್ ಮಾರಕ ದಾಳಿಗೆ ಶ್ರೀಲಂಕಾ ತತ್ತರ, 8ನೇ ಬಾರಿಗೆ ಏಷ್ಯಾಕಪ್ ಗೆದ್ದ ಭಾರತ

ಮೊಹಮ್ಮದ್ ಸಿರಾಜ್ ಶ್ರೀಲಂಕಾ ವಿರುದ್ದದ ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಒಟ್ಟು 6 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಶ್ರೀಲಂಕಾ ತಂಡವನ್ನು 15.2 ಓವರ್‌ಗಳಲ್ಲಿ ಕೇವಲ 50 ರನ್‌ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದೆ. ಅದ್ರಲ್ಲೂ ಸಿರಾಜ್ ಎರಡನೇ ಬಾರಿಗೆ ಏಷ್ಯಾಕಪ್ ನಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.

ಮೊಹಮ್ಮದ್ ಸಿರಾಜ್ ಆರಂಭದಲ್ಲಿ ಸಿರಾಜ್ ಪಾತುಮ್ ನಿಸ್ಸಾಂಕ (2ರನ್ ) ಅವರನ್ನು ಔಟ್ ಮಾಡಿದ್ರು. ನಂತರ ಬಂದ ಸದೀರ ಸಮರವಿಕ್ರಮ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದಾರೆ. ತದನಂತರ ಚರಿತ್ ಅಸ್ಲಂಕಾ ಕೂಡ ಔಟಾದ್ರು ಕೂಡ ಸಿರಾಜ್ ಹ್ಯಾಟ್ರಿಕ್ ಅವಕಾಶವನ್ನು ಮಿಸ್ ಮಾಡಿಕೊಂಡಿದ್ರು. ಆದರೆ ನಂತರದಲ್ಲಿ ಎಸೆತದಲ್ಲಿಯೇ ನಾಲ್ಕು ರನ್ ಗಳಿಸಿ ಆಡುತ್ತಿದ್ದ ಧನಂಜಯ ಡಿಸಿಲ್ವಾ ಕೂಡ ಸಿರಾಜ್ ಎಸೆತದಲ್ಲಿ ಔಟಾದ್ರು.
ಇದನ್ನೂ ಓದಿ :Times Emerging Leaders ಪಟ್ಟಿಯಲ್ಲಿ ಹರ್ಮನ್ ಪ್ರೀತ್ ಕೌರ್, ಆದರೆ ವಿರಾಟ್ ಕೊಹ್ಲಿಗಿಲ್ಲ ಸ್ಥಾನ
ಮೊಹಮ್ಮದ್ ಸಿರಾಜ್ 2003ರ ನಂತರ ಅಂತರಾಷ್ಟ್ರೀಯ ಏಕದಿನ ಪಂದ್ಯದಲ್ಲಿ ಒಂದೇ ಓವರ್‌ನಲ್ಲಿ ನಾಲ್ಕು ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಒಂದೇ ಓವರ್‌ನಲ್ಲಿ ನಾಲ್ಕು ವಿಕೆಟ್ ಪಡೆದ ಭಾರತದ ಮೊದಲ ಬೌಲರ್ ಹಾಗೂ ವಿಶ್ವದ ಮೂರನೇ ಬೌಲರ್ ಅನ್ನೋ ಖ್ಯಾತಿಗೆ ಪಾತ್ರರಾಗಿದ್ದಾರೆ.
Apne Hyderabadi bacche ku bahut bahut mubarak, kya daala nai @mdsirajofficial 👏👍👌💐
But, Team India , not impressed at all ! U need to do more , prove it in the World Cup next month https://t.co/jA7myqcHgM pic.twitter.com/GUHzosHqTN
— CV Anand IPS (@CVAnandIPS) September 17, 2023
2003ರಲ್ಲಿ ಶ್ರೀಲಂಕಾದ ಖ್ಯಾತ ಮಾಜಿ ಬೌಲರ್ ಚಾಮಿಂಡಾ ವಾಸ್ ಬಾಂಗ್ಲಾದೇಶದ ವಿರುದ್ದ ಒಂದೇ ಓವರ್‌ನಲ್ಲಿ ನಾಲ್ಕು ವಿಕೆಟ್ ಕಬಳಿಸಿದ್ದರು. ಇನ್ನು 2003 ರಲ್ಲಿ ಪಾಕಿಸ್ತಾನದ ಬೌಲರ್ ಮೊಹಮ್ಮದ್ ಸಮಿ ನ್ಯೂಜಿಲೆಂಡ್ ತಂಡದ ವಿರುದ್ದ ಈ ಸಾಧನೆ ಮಾಡಿದ್ದಾರೆ. ಜೊತೆಗೆ ಇಂಗ್ಲೆಂಡ್ ತಂಡದ ಆದಿಲ್ ರಶೀದ್ ಕೂಡ ವೆಸ್ಟ್ ಇಂಡಿಸ್ ವಿರುದ್ದ ಪಂದ್ಯದಲ್ಲಿ ಈ ವಿಶಿಷ್ಟ ಸಾಧನೆಯನ್ನು ತಮ್ಮ ಹೆಸರಿಗೆ ಬರೆಯಿಸಿಕೊಂಡಿದ್ದರು.
ಏಷ್ಯಾಕಪ್ ಪಂದ್ಯಾವಳಿಯಲ್ಲಿ ಶ್ರೀಲಂಕಾ ತಂಡ ನಾಲ್ವರು ಪ್ರಮುಖ ಬೌಲರ್‌ಗಳ ಅನುಪಸ್ಥಿತಿಯನ್ನು ಪಂದ್ಯಾವಳಿಯನ್ನು ಆಡಿತ್ತು. ಆದ್ರೆ ಶ್ರೀಲಂಕಾದ ಆಟಗಾರರ ಅದ್ಬುತ ಬ್ಯಾಟಿಂಗ್‌ನಿಂದಲೇ ಏಷ್ಯಾಕಪ್‌ಗೆ ಫೈನಲ್‌ಗೆ ಎಂಟ್ರಿ ಕೊಟ್ಟಿತ್ತು.
ಆದ್ರೆ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ಖ್ಯಾತ ಬೌಲರ್ ಮಹೇಶ್ ತೀಕ್ಷಣಾ ಗಾಯಗೊಂಡಿರುವುದು ಶ್ರೀಲಂಕಾ ತಂಡಕ್ಕೆ ಶಾಕ್ ಕೊಟ್ಟಿತ್ತು. ಅಲ್ಲದೇ ಭಾರತದ ಮೊಹಮ್ಮದ್ ಸಿರಾಜ್ ದಾಳಿಗೆ ಶ್ರೀಲಂಕಾ ತತ್ತರಿಸಿದ್ದು, ಕನಿಷ್ಠ ಮೊತ್ತಕ್ಕೆ ಆಲೌಟ್ ಆಗುವ ಮೂಲಕ ಹೀನಾಯ ಸೋಲು ಕಂಡಿದೆ.
ತಂಡಗಳು:
ಭಾರತ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಜಸ್ಪ್ರೀತ್ ಬುಮ್ರಾ, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್
ಶ್ರೀಲಂಕಾ: ಪಾತುಮ್ ನಿಸ್ಸಾಂಕ, ಕುಸಲ್ ಪೆರೆರಾ, ಕುಸಲ್ ಮೆಂಡಿಸ್, ಸದೀರ ಸಮರವಿಕ್ರಮ, ಚರಿತ್ ಅಸಲಂಕಾ, ಧನಂಜಯ ಡಿ ಸಿಲ್ವಾ, ದಸುನ್ ಶನಕ (ನಾಯಕ), ದುನಿತ್ ವೆಲ್ಲಲಾಗೆ, ದುಶನ್ ಹೇಮಂತ, ಪ್ರಮೋದ್ ಮದುಶನ್, ಮಥೀಶ ಪತಿರಣ.
A sensational bowling performance, a comprehensive win and the #AsiaCup2023 title triumph 🏆
Recap #TeamIndia's memorable Sunday in Colombo 📽️🔽#INDvSL pic.twitter.com/Eym1a66jiX
— BCCI (@BCCI) September 17, 2023
Asia Cup 2023 Final Ind Vs SL Match Mohammed Siraj Becomes first Indian Bowler to bag 4 wickets in One Over