ಬುಧವಾರ, ಜೂನ್ 18, 2025
HomeSportsCricketKumble to be sacked as Punjab coach: ಅನಿಲ್ ಕುಂಬ್ಳೆಗೆ ಶಾಕಿಂಗ್ ನ್ಯೂಸ್: ಪಂಜಾಬ್...

Kumble to be sacked as Punjab coach: ಅನಿಲ್ ಕುಂಬ್ಳೆಗೆ ಶಾಕಿಂಗ್ ನ್ಯೂಸ್: ಪಂಜಾಬ್ ಕಿಂಗ್ಸ್ ಕೋಚ್ ಸ್ಥಾನದಿಂದ ಜಂಬೋಗೆ ಗೇಟ್‌ಪಾಸ್

- Advertisement -

ಬೆಂಗಳೂರು: ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆಯವರಿಗೆ (Anil Kumble) ಇದು ಅಘಾತಕಾರಿ ಸುದ್ದಿ. ಐಪಿಎಲ್’ನಲ್ಲಿ ಪಂಜಾಬ್ ಕಿಂಗ್ಸ್ ತಂಡದ ಪ್ರಧಾನ ಕೋಚ್ ಆಗಿರುವ ಕುಂಬ್ಳೆಯವರನ್ನು ಕೋಚ್ ಸ್ಥಾನದಿಂದ ತೆಗೆದು ಹಾಕಲು ಪಂಜಾಬ್ ಫ್ರಾಂಚೈಸಿ ನಿರ್ಧರಿಸಿದೆ. ಈ ಕುರಿತ ಅಧಿಕೃತ ನಿರ್ಧಾರ ಕೆಲವೇ ದಿನಗಳಲ್ಲಿ ಹೊರ ಬೀಳಲಿದೆ.

2020ರಲ್ಲಿ ಅನಿಲ್ ಕುಂಬ್ಳೆ ಪಂಜಾಬ್ ಕಿಂಗ್ಸ್ ತಂಡದ ಹೆಡ್ ಕೋಚ್ (Punjab Kings Coach) ಆಗಿ ನೇಮಕಗೊಂಡಿದ್ದರು. ಕುಂಬ್ಳೆ ಗರಡಿಯಲ್ಲಿ ಪಂಜಾಬ್ ತಂಡ ಮೂರು ವರ್ಷಗಳಲ್ಲಿ ಒಟ್ಟು 42 ಪಂದ್ಯಗಳನ್ನು ಆಡಿದ್ದು ಕೇವಲ 19 ಪಂದ್ಯಗಳಲ್ಲಿ ಮಾತ್ರ ಗೆದ್ದಿದೆ. ಕುಂಬ್ಳೆಯವರ ಅವಧಿಯಲ್ಲಿ ಇಬ್ಬರು ನಾಯಕರು ಪಂಜಾಬ್ ತಂಡವನ್ನು ಮುನ್ನಡೆಸಿದ್ರೂ, ಒಮ್ಮೆಯೂ ಪ್ಲೇ ಆಫ್ ತಲುಪಲು ಸಾಧ್ಯವಾಗಿಲ್ಲ. 2020 ಮತ್ತು 2021ರಲ್ಲಿ ಕನ್ನಡಿಗ ಕೆ.ಎಲ್ ರಾಹುಲ್ (KL Rahul) ಪಂಜಾಬ್ ತಂಡದ ನಾಯಕರಾಗಿದ್ರೆ, 2022ರಲ್ಲಿ ಮತ್ತೊಬ್ಬ ಕನ್ನಡಿಗ ಮಯಾಂಕ್ ಅಗರ್ವಾಲ್ (Mayank Agarwal) ಪಂಜಾಬ್ ಕಿಂಗ್ಸ್ ತಂಡವನ್ನು ಮುನ್ನಡೆಸಿದ್ದರು.

ಪಂಜಾಬ್ ಕಿಂಗ್ಸ್ ತಂಡದ ಕೋಚ್ ಆಗಿ ಅನಿಲ್ ಕುಂಬ್ಳೆಯವರ ಮೂರು ವರ್ಷಗಳ ಕಾಂಟ್ರಾಕ್ಟ್ ಈ ವರ್ಷಕ್ಕೆ ಮುಗಿದಿದೆ. ಕುಂಬ್ಳೆ ತರಬೇತಿಯಲ್ಲಿ ತಂಡ ಮೂರು ವರ್ಷಗಳಲ್ಲಿ ಒಮ್ಮೆಯೂ ಕನಿಷ್ಠ ಪ್ಲೇ ಆಫ್ ತಲುಪಲು ವಿಫಲವಾಗಿರುವ ಹಿನ್ನೆಲೆಯಲ್ಲಿ ಕುಂಬ್ಳೆಯವರನ್ನು ಕೋಚ್ ಆಗಿ ಮುಂದುವರಿಸದಿರಲು ಪಂಜಾಬ್ ಫ್ರಾಂಚೈಸಿ ನಿರ್ಧರಿಸಿದೆ.

ಹೊಸ ಕೋಚ್ ಹುಡುಕಾಟದಲ್ಲಿರುವ ಪಂಜಾಬ್ ಫ್ರಾಂಚೈಸಿ, ಇಂಗ್ಲೆಂಡ್ ತಂಡದ ಮಾಜಿ ನಾಯಕ ಐಯಾನ್ ಮಾರ್ಗನ್ (Eoin Morgan) ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡದ ಕೋಚ್ ಟ್ರೆವರ್ ಬೇಲಿಸ್ (Trevor Bayliss) ಮತ್ತು ಭಾರತ ತಂಡದ ಮಾಜಿ ಕೋಚ್ ರವಿ ಶಾಸ್ತ್ರಿ (Ravi Shastri) ಮೇಲೆ ಕಣ್ಣಿಟ್ಟಿದೆ. ಜೊತೆಗೆ ಒಬ್ಬರ ಮೇಲೂ ಪಂಜಾಬ್ ಕಿಂಗ್ಸ್ ಕಣ್ಣು ಬಿದ್ದಿದೆ. ಮಾತುಕತೆಗಳು ಅಂತಿಮ ಹಂತದಲ್ಲಿದ್ದು ಇನ್ನೆರಡು ವಾರಗಳಲ್ಲಿ ಪಂಜಾಬ್ ತಂಡಕ್ಕೆ ಹೊಸ ಕೋಚ್ ನೇಮಕವಾಗುವ ಸಾಧ್ಯತೆಯಿದೆ.

2016ರಲ್ಲಿ ಭಾರತ ತಂಡದ ಕೋಚ್ ಆಗಿ ನೇಮಕಗೊಂಡಿದ್ದ ಅನಿಲ್ ಕುಂಬ್ಳೆ ಕೇವಲ ಒಂದೇ ವರ್ಷದಲ್ಲಿ ರಾಜೀನಾಮೆ ನೀಡಿದ್ದರು. ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಆಟಗಾರರ ಜೊತೆ ಮನಸ್ತಾಪದ ಹಿನ್ನೆಲೆಯಲ್ಲಿ ಕುಂಬ್ಳೆ ರಾಜೀನಾಮೆ ನೀಡುವಂತಾಗಿತ್ತು. ಇದೀಗ ಪಂಜಾಬ್ ತಂಡವೂ ಕೋಚ್ ಸ್ಥಾನದಿಂದ ಕುಂಬ್ಳೆಗೆ ಕೊಕ್ ನೀಡಲು ನಿರ್ಧರಿಸಿದೆ.
2008ರಿಂದಲೂ ಐಪಿಎಲ್ ಆಡುತ್ತಿರುವ ಪಂಜಾಬ್ ಕಿಂಗ್ಸ್ ತಂಡ ಇಲ್ಲಿಯವರೆಗೆ ಒಮ್ಮೆಯೂ ಪ್ರಶಸ್ತಿ ಗೆದ್ದಿಲ್ಲ.

ಇದನ್ನೂ ಓದಿ : KL Rahul advice his young Fan: “ಶಾಲೆಗೆ ಹೋಗು, ಉಳಿದದ್ದೆಲ್ಲಾ ಆಮೇಲೆ..” ಆಟೋಗ್ರಾಫ್ ಕೇಳಲು ಬಂದ ಅಭಿಮಾನಿಗೆ ರಾಹುಲ್ ಬುದ್ಧಿಮಾತು

ಇದನ್ನೂ ಓದಿ : Ravindra Jadeja will join RCB : IPL 2023ನಲ್ಲಿ ಆರ್‌ಸಿಬಿ ಪರ ಆಡ್ತಾರಾ ರವೀಂದ್ರ ಜಡೇಜಾ

Bad news for Anil Kumble Gate pass from Punjab Kings coach to Jumbo

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular