ಬೆಂಗಳೂರಿಗೆ ಬಂದಿಳಿದ ರಣಬೇಟೆಗಾರ, ರಾಯಲ್ ಚಾಲೆಂಜರ್ಸ್ ಕ್ಯಾಂಪ್ ಸೇರಿದ ಕ್ಯಾಪ್ಟನ್ ಫಾಫ್

ಬೆಂಗಳೂರು: ಐಪಿಎಲ್ 16ನೇ ಆವೃತ್ತಿಯ ಟೂರ್ನಿಯಲ್ಲಿ (IPL 2023) ಆಡಲು ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡದ ನಾಯಕ ಫಾಫ್ ಡುಪ್ಲೆಸಿಸ್ (Battle Hunter FafDu Plessis) ಬೆಂಗಳೂರಿಗೆ ಆಗಮಿಸಿದ್ದಾರೆ. ದಕ್ಷಿಣ ಆಫ್ರಿಕಾದಿಂದ ನೇರವಾಗಿ ಬೆಂಗಳೂರಿಗೆ ಬಂದಿಳಿದ ಫಾಫ್ ಡುಪ್ಲೆಸಿಸ್ ಅವರಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಸ್ವಾಗತ ಕೋರಿದೆ. ಫಾಫ್ ಅವರ ಆಗಮನದ ಫೋಟೋವನ್ನು ಟ್ವಿಟರ್’ನಲ್ಲಿ ಪ್ರಕಟಿಸಿರುವ ಆರ್’ಸಿಬಿ ಫ್ರಾಂಚೈಸಿ, “ನಮ್ಮ ಊರಿನಲ್ಲಿ ನಿಮ್ಮನ್ನು ನೋಡುತ್ತಿರುವುದುಕ್ಕೆ ಖುಷಿಯಾಗುತ್ತಿದೆ” ಎಂದು ಪೋಸ್ಟ್ ಮಾಡಿದೆ.

ಐಪಿಎಲ್-16ನೇ ಆವೃತ್ತಿಯ ಟೂರ್ನಿ ಮಾರ್ಚ್ 31ರಂದು ಆರಂಭವಾಗಲಿದ್ದು, ಅಹ್ಮದಾಬಾದ್’ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ತಂಡ ನಾಲ್ಕು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ. ಫಾಫ್ ಡುಪ್ಲೆಸಿಸ್ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಏಪ್ರಿಲ್ 2ರಂದು ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ತನ್ನ ಮೊದಲ ಪಂದ್ಯದಲ್ಲಿ 5 ಬಾರಿಯ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ.

ಐಪಿಎಲ್ ಆರಂಭಕ್ಕೂ ಮುನ್ನ ರಾಯಲ್ ಚಾಲೆಂಜರ್ಸ್ ಆಟಗಾರರು ಮಾರ್ಚ್ 26ರಂದು ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಭ್ಯಾಸ ಪಂದ್ಯವಾಡಲಿದ್ದಾರೆ. ಅಂತರಾಷ್ಟ್ರೀಯ ಸರಣಿಯನ್ನಾಡುತ್ತಿರುವ ಆಟಗಾರರೆಲ್ಲಾ ಮಾರ್ಚ್ 25ರೊಳಗೆ ಆರ್’ಸಿಬಿ ಕ್ಯಾಂಪ್ ಸೇರುವ ನಿರೀಕ್ಷೆಯಿದ್ದು, ಸಂಪೂರ್ಣ ತಂಡ ಮಾರ್ಚ್ 26ರ ಅಭ್ಯಾಸ ಪಂದ್ಯದಲ್ಲಿ ಆಡಲಿದೆ. ಅದೇ ದಿನ ಆರ್’ಸಿಬಿ ತಂಡದ ಮಾಜಿ ದಿಗ್ಗಜರಾದ ಎಬಿ ಡಿವಿಲಿಯರ್ಸ್ ಮತ್ತು ಕ್ರಿಸ್ ಗೇಲ್ ಅವರಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಹಾಲ್ ಆಫ್ ಫೇಮ್ ಗೌರವ ನೀಡಲಿದೆ. ಇಬ್ಬರ ಜರ್ಸಿ ನಂಬರ್’ಗಳನ್ನು ರಿಟೈರ್ಡ್ ಮಾಡಿಸುವ ಮೂಲಕ ದಿಗ್ಗಜರಿಗೆ ಗೌರವ ಸಲ್ಲಿಸಲು ಆರ್’ಸಿಬಿ ಫ್ರಾಂಚೈಸಿ ಮುಂದಾಗಿದೆ. ಕ್ರಿಸ್ ಗೇಲ್ ಅವರ 333 ಜರ್ಸಿ ನಂಬರ್ ಹಾಗೂ ಡಿವಿಲಿಯರ್ಸ್ ಅವರ ನಂ.17 ಜರ್ಸಿ ಸಂಖ್ಯೆಯನ್ನು ಇನ್ನು ಮುಂದೆ ರಾಯಲ್ ಚಾಲೆಂಜರ್ಸ್’ನ ಯಾವ ಆಟಗಾರ ಕೂಡ ಬಳಸುವುದಿಲ್ಲ.

ಇದನ್ನೂ ಓದಿ : Shreyas Iyer out: ಐಪಿಎಲ್‌ನಿಂದ ಶ್ರೇಯಸ್ ಅಯ್ಯರ್ ಔಟ್, ವರ್ಲ್ಡ್ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ಗೂ ಡೌಟ್

ಇದನ್ನೂ ಓದಿ : Smriti Mandhana: ಒಂದು ರನ್’ಗೆ 2,28,187 ಲಕ್ಷ; 3.40 ಕೋಟಿಗೆ ಸ್ಮೃತಿ ಮಂಧನ ಗಳಿಸಿದ ರನ್ ಎಷ್ಟು ಗೊತ್ತಾ?

ಇದನ್ನೂ ಓದಿ : RCB Women: ಸೋಲಿನೊಂದಿಗೆ ಅಂತ್ಯವಾಯ್ತು ಆರ್‌ಸಿಬಿ ವನಿತೆಯರ WPL ಅಭಿಯಾನ

Battle Hunter FafDu Plessis: Battle Hunter Landed in Bangalore, Captain Faf Joins Royal Challengers Camp

Comments are closed.