Shreyas Iyer out: ಐಪಿಎಲ್‌ನಿಂದ ಶ್ರೇಯಸ್ ಅಯ್ಯರ್ ಔಟ್, ವರ್ಲ್ಡ್ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ಗೂ ಡೌಟ್

ಬೆಂಗಳೂರು: (Shreyas Iyer out) ಟೀಮ್ ಇಂಡಿಯಾದ ಮಧ್ಯಮ ಕ್ರಮಾಂಕದ ಬ್ಯಾಟ್ಸ್’ಮನ್, ಕೋಲ್ಕತಾ ನೈಟ್ ರೈಡರ್ಸ್ (Kolkata Knight Riders) ತಂಡದ ನಾಯಕ ಶ್ರೇಯಸ್ ಅಯ್ಯರ್ (Shreyas Iyer) ಐಪಿಎಲ್-16ನೇ ಆವೃತ್ತಿಯ ಟೂರ್ನಿಯಿಂದ ಹೊರ ಬಿದ್ದಿದ್ದಾರೆ. ಬೆನ್ನು ನೋವಿನಿಂದ ಬಳಲುತ್ತಿರುವ ಶ್ರೇಯಸ್ ಅಯ್ಯರ್ ಸದ್ಯದಲ್ಲೇ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದು, ಜೂನ್ 7ರಿಂದ 11ರವರೆಗೆ ಇಂಗ್ಲೆಂಡ್’ನ ಓವಲ್ ಮೈದಾನದಲ್ಲಿ ನಡೆಯಲಿರುವ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್’ಷಿಪ್ ಫೈನಲ್ (ICC World test championship final 2023) ಪಂದ್ಯಕ್ಕೂ ಅಲಭ್ಯರಾಗಲಿದ್ದಾರೆ.

ಅಹ್ಮದಾಬಾದ್’ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ (Border-Gavaskar test series) 4ನೇ ಪಂದ್ಯದ 4 ಹಾಗೂ 5ನೇ ದಿನ ಶ್ರೇಯಸ್ ಅಯ್ಯರ್ ಮೈದಾನಕ್ಕಿಳಿದಿಲ್ಲ. ಅಷ್ಟೇ ಅಲ್ಲ, ಆಸ್ಟ್ರೇಲಿಯಾ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯಲ್ಲೂ ಅಯ್ಯರ್ ಆಡಿರಲಿಲ್ಲ. ಇದೀಗ ಬೆನ್ನು ನೋವಿಗೆ ಶ್ರೇಯಸ್ ಅಯ್ಯರ್ ಶಸ್ತ್ರಚಿಕಿತ್ಸೆಗೊಳಗಾಗಲಿದ್ದು, 3ರಿಂದ 4 ತಿಂಗಳು ಕ್ರಿಕೆಟ್ ಮೈದಾನದಿಂದ ಹೊರಗುಳಿಯಲಿದ್ದಾರೆ. ಹೀಗಾಗಿ ಮಾರ್ಚ್ 31ರಿಂದ ಆರಂಭವಾಗಲಿರುವ ಐಪಿಎಲ್-2023 ಟೂರ್ನಿಯಲ್ಲಿ ಮತ್ತು ವಿಶ್ವ ಟೆಸ್ಟ್ ಚಾಂಪಿಯನ್’ಷಿಪ್’ನಲ್ಲಿ ಶ್ರೇಯಸ್ ಅಯ್ಯರ್ ಆಡುವುದಿಲ್ಲ ಎಂದು ತಿಳಿದು ಬಂದಿದೆ.

“ಬೆನ್ನು ನೋವಿಗೆ ಶಸ್ತ್ರಚಿಕಿತ್ಸೆಗೊಳಗಾಗುವಂತೆ ಶ್ರೇಯಸ್ ಅಯ್ಯರ್ ಅವರಿಗೆ ಸೂಚನೆ ನೀಡಲಾಗಿದೆ. ಲಂಡನ್’ನಲ್ಲಿ ಶಸ್ತ್ರಚಿಕಿತ್ಸೆಗೊಳಗಾಗಲು ಅಯ್ಯರ್ ಉತ್ಸುಕರಾಗಿದ್ದಾರೆ. ಭಾರತದಲ್ಲೇ ಉತ್ತಮ ವ್ಯವಸ್ಥೆ ದೊರೆತರೆ ಇಲ್ಲೇ ಆಪರೇಷನ್ ನಡೆಯಲಿದೆ” ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಐಪಿಎಲ್ ಟೂರ್ನಿಯಲ್ಲಿ ಶ್ರೇಯಸ್ ಅಯ್ಯರ್ ಕೋಲ್ಕತಾ ನೈಟ್ ರೈಡರ್ಸ್ ತಂಡದ ನಾಯಕರಾಗಿದ್ದು, ಏಪ್ರಿಲ್ 1ರಂದು ಮೊಹಾಲಿಯಲ್ಲಿ ನಡೆಯಲಿರುವ ತನ್ನ ಮೊದಲ ಪಂದ್ಯದಲ್ಲಿ ಕೆಕೆಆರ್ ತಂಡ ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸಲಿದೆ. ಶ್ರೇಯಸ್ ಅಯ್ಯರ್ ಅವರ ಅನುಪಸ್ಥಿತಿ ಕೋಲ್ಕತಾ ನೈಟ್ ರೈಡರ್ಸ್ ತಂಡಕ್ಕೆ ದೊಡ್ಡ ಹೊಡೆತವಾಗಿ ಪರಿಣಮಿಸಿದೆ. ಅಯ್ಯರ್ ಕೆಕೆಆರ್ ತಂಡದ ನಾಯಕನಷ್ಟೇ ಅಲ್ಲದೆ ಸ್ಟಾರ್ ಆಟಗಾರ ಕೂಡ ಹೌದು. 2021ರ ಐಪಿಎಲ್ ಹರಾಜಿನಲ್ಲಿ ಶ್ರೇಯಸ್ ಅಯ್ಯರ್ ಅವರನ್ನು ಕೋಲ್ಕತಾ ನೈಟ್ ರೈಡರ್ಸ್ ಫ್ರಾಂಚೈಸಿ 12.25 ಕೋಟಿ ರೂ. ಮೊತ್ತಕ್ಕೆ ಖರೀದಿಸಿತ್ತು.

ಇದನ್ನೂ ಓದಿ : Smriti Mandhana: ಒಂದು ರನ್’ಗೆ 2,28,187 ಲಕ್ಷ; 3.40 ಕೋಟಿಗೆ ಸ್ಮೃತಿ ಮಂಧನ ಗಳಿಸಿದ ರನ್ ಎಷ್ಟು ಗೊತ್ತಾ?

ಇದನ್ನೂ ಓದಿ : RCB Women: ಸೋಲಿನೊಂದಿಗೆ ಅಂತ್ಯವಾಯ್ತು ಆರ್‌ಸಿಬಿ ವನಿತೆಯರ WPL ಅಭಿಯಾನ

ಇದನ್ನೂ ಓದಿ : India Vs Australia 3rd ODI : ಆಸ್ಟ್ರೇಲಿಯಾ ವಿರುದ್ಧದ “ಫೈನಲ್” ಪಂದ್ಯಕ್ಕೆ ಹೀಗಿದೆ ಟೀಮ್ ಇಂಡಿಯಾ ಪ್ಲೇಯಿಂಗ್ XI, ಸೂರ್ಯನಿಗೆ ಇದೇ ಲಾಸ್ಟ್ ಚಾನ್ಸ್

Shreyas Iyer out: Shreyas Iyer out of IPL, doubt for World Test Championship final

Comments are closed.