ಮಂಗಳವಾರ, ಏಪ್ರಿಲ್ 29, 2025
HomeSportsCricketVirat Kohli form : ವಿರಾಟ್ ಕೊಹ್ಲಿ ಫಾರ್ಮ್ ಕಂಡುಕೊಳ್ಳಲು ಬಿಸಿಸಿಐ ಬಳಿಯಿದೆ ಜಬರ್ದಸ್ತ್ ಪ್ಲಾನ್

Virat Kohli form : ವಿರಾಟ್ ಕೊಹ್ಲಿ ಫಾರ್ಮ್ ಕಂಡುಕೊಳ್ಳಲು ಬಿಸಿಸಿಐ ಬಳಿಯಿದೆ ಜಬರ್ದಸ್ತ್ ಪ್ಲಾನ್

- Advertisement -

ಬೆಂಗಳೂರು: ಔಟ್ ಆಫ್ ಫಾರ್ಮ್ ವಿರಾಟ್ ಕೊಹ್ಲಿ(Virat Kohli form) ಮತ್ತೆ ತಮ್ಮ ಹಳೇ ಬ್ಯಾಟಿಂಗ್ ಖದರ್ ಅನ್ನು ತೋರಿಸುವುದು ಯಾವಾಗ ? ಸದ್ಯಕ್ಕಂತೂ ಇದು ಉತ್ತರ ಸಿಗದ ಯಕ್ಷಪ್ರಶ್ನೆ. ವಿರಾಟ್ ಕೊಹ್ಲಿ ಅವರ ಕೋಟ್ಯಂತರ ಅಭಿಮಾನಿಗಳಂತೂ ಕೊಹ್ಲಿ ಮತ್ತೆ ಶತಕ ಗಳಿಸುವುದನ್ನು ನೋಡಲು ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ಆದರೆ ವಿರಾಟ್ ಶತಕ ಬಾರಿಸುತ್ತಿಲ್ಲ, ಅಭಿಮಾನಿಗಳ ಕಾಯುವಿಕೆಗೆ ಅಂತ್ಯ ಬೀಳುತ್ತಿಲ್ಲ.

ಹಾಗಾದರೆ ಆಧುನಿಕ ಬ್ಯಾಟಿಂಗ್ ದಿಗ್ಗಜ ವಿರಾಟ್ ಕೊಹ್ಲಿ ಮತ್ತೆ ತಮ್ಮ ಗತವೈಭವವನ್ನು ಮೆರೆಯುವುದು ಯಾವಾಗ? ವಿರಾಟ್ ತಮ್ಮ ಬ್ಯಾಟಿಂಗ್ ಫಾರ್ಮನ್ನು ಮರಳಿ ಪಡೆಯುವುದು ಯಾವಾಗ? ಈ ಪ್ರಶ್ನೆಗೆ ಬಿಸಿಸಿಐ ಬಳಿಯೊಂದು ಉತ್ತರವಿದೆ. ಅದು ಬರೀ ಉತ್ತರವಲ್ಲ, ಕೊಹ್ಲಿ ತಮ್ಮ ಫಾರ್ಮನ್ನು ಮತ್ತೆ ಪಡೆಯಲು ಬಿಸಿಸಿಐ ಹೆಣೆದಿರುವ ತಂತ್ರಗಾರಿಕೆಯೂ ಹೌದು.

ಭಾರತ ಕ್ರಿಕೆಟ್ ತಂಡ ಮುಂದಿನ ತಿಂಗಳು ಮೂರು ಪಂದ್ಯಗಳ ಏಕದಿನ ಸರಣಿಯನ್ನಾಡಲು ಜಿಂಬಾಬ್ವೆಗೆ ಪ್ರಯಾಣ ಬೆಳೆಸಲಿದೆ. ಈ ಸರಣಿಗೆ ವಿರಾಟ್ ಕೊಹ್ಲಿ ಅವರನ್ನು ಆಯ್ಕೆ ಮಾಡಲು ಬಿಸಿಸಿಐ ಚಿಂತನೆ ನಡೆಸುತ್ತಿದೆ. ಸದ್ಯ ವೆಸ್ಟ್ ಇಂಡೀಸ್ ಪ್ರವಾಸದಿಂದ ವಿಶ್ರಾಂತಿ ಪಡೆದಿರುವ ಕೊಹ್ಲಿ, ಕ್ರಿಕೆಟ್”ನಿಂದ ತಾತ್ಕಾಲಿಕ ಬ್ರೇಕ್ ಪಡೆದಿದ್ದಾರೆ. ಮುಂದಿನ ತಿಂಗಳು ನಡೆಯುವ ಏಷ್ಯಾಕಪ್ ಹಾಗೂ ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗಳ ದೃಷ್ಠಿಯಿಂದ ವಿರಾಟ್ ಕೊಹ್ಲಿ ಅವರ ಫಾರ್ಮ್ ಭಾರತ ತಂಡಕ್ಕೆ ನಿರ್ಣಾಯಕ. ಹೀಗಾಗಿ ಈ ಎರಡೂ ಸರಣಿಗಳಿಗೆ ಮುನ್ನ ನಡೆಯುವ ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಗೆ ವಿರಾಟ್ ಕೊಹ್ಲಿ ಅವರನ್ನು ಬಿಸಿಸಿಐ ಆಯ್ಕೆ ಮಾಡುವ ಸಾಧ್ಯತೆಯಿದೆ. ದುರ್ಬಲ ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಯಲ್ಲಿ ವಿರಾಟ್ ಕೊಹ್ಲಿ ತಮ್ಮ ಬ್ಯಾಟಿಂಗ್ ಲಯ ಕಂಡುಕೊಳ್ಳಲಿ ಎಂಬ ಬಗ್ಗೆ ಬಿಸಿಸಿಐ ಆಯ್ಕೆ ಸಮಿತಿಯಲ್ಲಿ ಚರ್ಚೆ ನಡೆಯುತ್ತಿದೆ.

“ಕ್ರಿಕೆಟ್”ನಿಂದ ವಿರಾಮ ಪಡೆದಿರುವುದು ವಿರಾಟ್ ಕೊಹ್ಲಿಗೆ ಮಾನಸಿಕವಾಗಿ ಒಂದಷ್ಟು ವಿಶ್ರಾಂತಿ ನೀಡಿ ಕಳೆದುಕೊಂಡಿರುವ ಫಾರ್ಮನ್ನು ಮರಳಿ ಪಡೆಯಲು ನೆರವಾಗಲಿದೆ ಎಂದು ಭಾವಿಸುತ್ತೇನೆ. ಆದರೆ ಯಾವುದೇ ಸ್ಪರ್ಧಾತ್ಮಕ ಕ್ರಿಕೆಟ್ ಆಡದೆ ಮತ್ತೆ ಫಾರ್ಮ್ ಕಂಡುಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಜಿಂಬಾಬ್ವೆ ವಿರುದ್ಧ ವಿರಾಟ್ ಕೊಹ್ಲಿ ಆಡಲಿ ಎಂದು ನಾವು ಬಯಸುತ್ತೇವೆ. ಏಕದಿನ ಕ್ರಿಕೆಟ್ ವಿರಾಟ್ ಕೊಹ್ಲಿಯ ನೆಚ್ಚಿನ ಫಾರ್ಮ್ಯಾಟ್. ಹೀಗಾಗಿ ಏಷ್ಯಾ ಕಪ್ ಟೂರ್ನಿಗೂ ಮುನ್ನ ಬ್ಯಾಟಿಂಗ್ ಫಾರ್ಮ್ ಕಂಡುಕೊಳ್ಳಲು ಜಿಂಬಾಬ್ವೆ ವಿರುದ್ಧದ ಸರಣಿ ಸಹಕಾರಿಯಾಗಲಿದೆ. ಈ ಬಗ್ಗೆ ನಾವು ತಂಡವನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇವೆ” ಎಂದು ಬಿಸಿಸಿಐ ಆಯ್ಕೆ ಸಮಿತಿಯ ಸದಸ್ಯರೊಬ್ಬರು ತಿಳಿಸಿದ್ದಾರೆ.

2013ರ ನಂತರ ವಿರಾಟ್ ಕೊಹ್ಲಿ ಜಿಂಬಾಬ್ವೆ ನೆಲದಲ್ಲಿ ಏಕದಿನ ಸರಣಿಯನ್ನಾಡಿಲ್ಲ. ಇತ್ತೀಚಿನ ವರ್ಷಗಳಲ್ಲಿ ಜಿಂಬಾಬ್ವೆ ಪ್ರವಾಸಕ್ಕೆ ಬಿಸಿಸಿಐ ತನ್ನ 2ನೇ ದರ್ಜೆಯ ತಂಡಗಳನ್ನೇ ಕಳುಹಿಸುತ್ತಿದೆ. ಈ ಬಾರಿಯೂ ಶಿಖರ್ ಧವನ್ ನಾಯಕತ್ವದಲ್ಲಿ ಯುವ ಆಟಗಾರರನ್ನೊಳಗೊಂಡ ತಂಡವನ್ನು ಬಿಸಿಸಿಐ ಆಯ್ಕೆ ಸಮಿತಿ ಜಿಂಬಾಬ್ವೆಗೆ ಕಳುಹಿಸಲಿದ್ದು, ಫಾರ್ಮ್ ಕಳೆದುಕೊಂಡಿರುವ ವಿರಾಟ್ ಕೊಹ್ಲಿ ಕೂಡ ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಯಲ್ಲಿ ಆಡುವ ಸಾಧ್ಯತೆಗಳಿವೆ.

ಭಾರತ Vs ಜಿಂಬಾಬ್ವೆ: ಏಕದಿನ ಸರಣಿಯ ವೇಳಾಪಟ್ಟಿ
ಆಗಸ್ಟ್ 18: ಮೊದಲ ಏಕದಿನ ಪಂದ್ಯ (ಹರಾರೆ)
ಆಗಸ್ಟ್ 20: ಎರಡನೇ ಏಕದಿನ ಪಂದ್ಯ (ಹರಾರೆ)
ಆಗಸ್ಟ್ 22: ಮೂರನೇ ಏಕದಿನ ಪಂದ್ಯ (ಹರಾರೆ)

ಇತ್ತೀಚೆಗೆ ಮುಕ್ತಾಯಗೊಂಡ ಇಂಗ್ಲೆಂಡ್ ವಿರುದ್ಧದ ಟೆಸ್ಟ್, ಟಿ20 ಹಾಗೂ ಏಕದಿನ ಸರಣಿಯಲ್ಲೂ ವಿರಾಟ್ ಕೊಹ್ಲಿ ದಯನೀಯ ವೈಫಲ್ಯ ಎದುರಿಸಿದ್ದರು. ಇಂಗ್ಲೆಂಡ್ ಪ್ರವಾಸದಲ್ಲಿ ಆಡಿದ 6 ಇನ್ನಿಂಗ್ಸ್’ಗಳಲ್ಲಿ ಕೊಹ್ಲಿ 11, 20, 01, 11, 16 ಮತ್ತು 17 ರನ್ ಗಳಿಸಿದ್ದರು.

ಇದನ್ನೂ ಓದಿ : “ಜಸ್ಟ್ 20 ನಿಮಿಷದಲ್ಲಿ ಕೊಹ್ಲಿ ಸಮಸ್ಯೆಗೆ ಪರಿಹಾರ..” ಸುನೀಲ್ ಗವಾಸ್ಕರ್ ಕೈಯಲ್ಲಿದ್ಯಂತೆ ವಿರಾಟ್ ಯಶಸ್ಸಿನ ಮಂತ್ರ

ಇದನ್ನೂ ಓದಿ : I love Virat .. ಇಂಗ್ಲೆಂಡ್ ಟೆಸ್ಟ್ ಕ್ಯಾಪ್ಟನ್ ಬೆನ್ ಸ್ಟೋಕ್ಸ್ ಯಾಕೆ ಹೀಗಂದ್ರು ?

BCCI has Master plan to find Virat Kohli form

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular