ಸೋಮವಾರ, ಏಪ್ರಿಲ್ 28, 2025
HomeSportsCricketVirat Kohli: ಲಂಡನ್‌ನಲ್ಲಿ ವಿರಾಟ್ ಕೊಹ್ಲಿಯನ್ನು ನೋಡಿ ಹೌಹಾರಿದ ಪತ್ನಿಯ ಜೊತೆಗಿದ್ದ ಬಾಲಿವುಡ್ ನಟಿ !

Virat Kohli: ಲಂಡನ್‌ನಲ್ಲಿ ವಿರಾಟ್ ಕೊಹ್ಲಿಯನ್ನು ನೋಡಿ ಹೌಹಾರಿದ ಪತ್ನಿಯ ಜೊತೆಗಿದ್ದ ಬಾಲಿವುಡ್ ನಟಿ !

- Advertisement -

ಲಂಡನ್: ಕ್ರಿಕೆಟ್ ಜಗತ್ತಿನ ರನ್ ಮಷಿನ್ ವಿರಾಟ್ ಕೊಹ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ..? ವಿರಾಟ್ ಕೊಹ್ಲಿ(Virat Kohli) ಅವರನ್ನು ಪ್ರೀತಿಸುವ, ಆರಾಧಿಸುವ ಕೋಟಿ ಕೋಟಿ ಅಭಿಮಾನಿಗಳಿದ್ದಾರೆ. ಅಂತಹ ಕೊಹ್ಲಿ ಅಭಿಮಾನಿಗಳ ಮುಂದೆ ಬಂತು ನಿಂತು ಬಿಟ್ಟರೆ ಹೇಗಾಗಬೇಡ..? ಲಂಡನ್’ನಲ್ಲಿ ಅಂಥದ್ದೇ ಒಂದು ಘಟನೆ ನಡೆದಿದೆ. ವಿರಾಟ್ ಕೊಹ್ಲಿ ಅವರನ್ನು ನೋಡಿ ಪತ್ನಿ ಜೊತೆಗಿನ ಬಾಲಿವುಡ್ ನಟಿಯೊಬ್ಬಳು ಹೌಹಾರಿ ಬಿಟ್ಟಿದ್ದಾಳೆ.

ಇತ್ತೀಚೆಗಷ್ಟೇ ಏಷ್ಯಾ ಕಪ್ ಟೂರ್ನಿ ಮುಗಿಸಿಕೊಂಡು ವಿರಾಟ್ ಕೊಹ್ಲಿ (Virat Kohli)ದುಬೈನಿಂದ ನೇರವಾಗಿ ಲಂಡನ್’ಗೆ ಹಾರಿದ್ದರು. ಲಂಡನ್’ನಲ್ಲಿ “ಚಕ್ಡಾ ಎಕ್ಸ್’ಪ್ರೆಸ್” ಸಿನಿಮಾ ಶೂಟಿಂಗ್’ ನಲ್ಲಿದ್ದ ಪತ್ನಿ ಅನುಷ್ಕಾ ಶರ್ಮಾ (Anushka Sharma) ಅವರನ್ನು ಭೇಟಿಯಾಗಲು ಕೊಹ್ಲಿ ಲಂಡನ್’ಗೆ ತೆರಳಿದ್ದರು. ಅನುಷ್ಕಾ ಶರ್ಮಾ ಜೊತೆ ಬಾಲಿವುಡ್ ನಟಿ ಅನ್ಷುಲ್ ಚೌಹಾಣ್ (Anshul Chauhan) ಕೂಡ “ಚಕ್ಡಾ ಎಕ್ಸ್’ಪ್ರೆಸ್” (Chakda Express) ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಅನ್ಷುಲ್ ಚೌಹಾಣ್, ಕಿಂಗ್ ಕೊಹ್ಲಿ ಅವರ ದೊಡ್ಡ ಅಭಿಮಾನಿ. ಅವರನ್ನು ಪ್ರತ್ಯಕ್ಷವಾಗಿ ನೋಡದ್ದೇ ತಡ, ಬಾಲಿವುಡ್ ನಟಿ ತಮ್ಮ ಕಣ್ಣುಗಳನ್ನು ತಾವೇ ನಂಬದಂತೆ ಮೂಕವಿಸ್ಮಿತರಾಗಿ ನಿಂತು ಬಿಟ್ಟಿದ್ದಾರೆ. ಈ ವೀಡಿಯೊವನ್ನು ಇನ್’ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿರುವ ನಟಿ ಅನ್ಷುಲ್ ಚೌಹಾಣ್, ನನ್ನ ಹುಟ್ಟುಹಬ್ಬಕ್ಕೆ ಸಿಕ್ಕಿದ ಅತೀ ದೊಡ್ಡ ಗಿಫ್ಟ್ ಇದು ಎಂದು ಬರೆದುಕೊಂಡಿದ್ದಾರೆ. ಅಷ್ಟೇ ಅಲ್ಲ, ಇಂತಹ ಒಂದು ಕ್ಷಣವನ್ನು ಕಟ್ಟಿಕೊಟ್ಟದ್ದಕ್ಕಾಗಿ ಅನುಷ್ಕಾ ಶರ್ಮಾ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.

https://www.instagram.com/p/CifwiiyKEkF/?utm_source=ig_web_copy_link

ಏಷ್ಯಾ ಕಪ್ ಟೂರ್ನಿಯಲ್ಲಿ ಅಬ್ಬರಿಸಿದ್ದ ವಿರಾಟ್ ಕೊಹ್ಲಿ ಅಫ್ಘಾನಿಸ್ತಾನ ವಿರುದ್ಧದ ಸೂಪರ್-4 ಪಂದ್ಯದಲ್ಲಿ ಶತಕ ಬಾರಿಸುವ ಮೂಲಕ, 34 ತಿಂಗಳುಗಳ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ಶತಕದ ಬರ ನೀಗಿಸಿಕೊಂಡಿದ್ದರು. ಏಷ್ಯಾ ಕಪ್’ನಲ್ಲಿ ಆಡದ್ದ 5 ಪಂದ್ಯಗಳಲ್ಲಿ 1 ಶತಕ ಮತ್ತು 2 ಅರ್ಧಶತಕಗಳ ಸಹಿತ 276 ರನ್ ಕಲೆ ಹಾಕಿದ್ದ ಕಿಂಗ್ ಕೊಹ್ಲಿ, ಮತ್ತೆ ತಮ್ಮ ಹಳೇ ಫಾರ್ಮ್’ಗೆ ಮರಳಿದ್ದಾರೆ.

ಇದನ್ನೂ ಓದಿ : 10 ದಿನಗಳ ನಂತರ ಬೆಡ್‌ನಿಂದ ಮೇಲೆದ್ದು ನಿಂತ ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜ

ಇದನ್ನೂ ಓದಿ : ಭಾರತ Vs ದಕ್ಷಿಣ ಆಫ್ರಿಕಾ ಟಿ20 ಪಂದ್ಯದಲ್ಲಿ ಬಿಸಿಸಿಐ ವಿರುದ್ಧ ಪ್ರತಿಭಟನೆ ನಡೆಸಲಿದ್ದಾರೆ ಸಂಜು ಸ್ಯಾಮ್ಸನ್ ಫ್ಯಾನ್ಸ್

ಇದೀಗ ಲಂಡನ್’ನಲ್ಲಿ ಪತ್ನಿ ಹಾಗೂ ಪುತ್ರಿಯನ್ನು ಭೇಟಿಯಾಗಿ ಭಾರತಕ್ಕೆ ಮರಳಿರುವ ವಿರಾಟ್ ಕೊಹ್ಲಿ, ಆಸ್ಟ್ರೇಲಿಯಾ ವಿರುದ್ಧ ಸೆಪ್ಟೆಂಬರ್ 20ರಿಂದ ಆರಂಭವಾಗಲಿರುವ ಟಿ20 ಸರಣಿಯನ್ನು ಎದುರು ನೋಡುತ್ತಿದ್ದಾರೆ. ಆಸೀಸ್ ವಿರುದ್ಧದ 3 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ಸೆಪ್ಟೆಂಬರ್ 20ರಂದು ಪಂಜಾಬ್’ನ ಮೊಹಾಲಿಯಲ್ಲಿ ನಡೆಯಲಿದೆ.

Bollywood actress who was accompanied by his wife who saw Virat Kohli in London!

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular