ಭಾನುವಾರ, ಏಪ್ರಿಲ್ 27, 2025
HomeSportsCricketBorder-Gavaskar Test series: ಟೀಮ್ ಇಂಡಿಯಾ ಕ್ಯಾಂಪ್’ನಲ್ಲಿ 10 ಸ್ಪಿನ್ನರ್ಸ್, ಇದು ಕೋಚ್ ದ್ರಾವಿಡ್ ಸ್ಪಿನ್...

Border-Gavaskar Test series: ಟೀಮ್ ಇಂಡಿಯಾ ಕ್ಯಾಂಪ್’ನಲ್ಲಿ 10 ಸ್ಪಿನ್ನರ್ಸ್, ಇದು ಕೋಚ್ ದ್ರಾವಿಡ್ ಸ್ಪಿನ್ ಚಾಲೆಂಜ್

- Advertisement -

ನಾಗ್ಪುರ: ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಗೆ (Border-Gavaskar Test series) ಭಾರತ ತಂಡದ ಸಿದ್ಧತೆ ಭರ್ಜರಿಯಾಗಿ ನಡೆಯುತ್ತಿದೆ. ಆತಿಥೇಯ ಭಾರತ ತಂಡದ ಅಭ್ಯಾಸ ಶಿಬಿರ ಗುರುವಾರ ನಾಗ್ಪುರದ ಜಮ್ತಾದಲ್ಲಿರುವ ವಿದರ್ಭ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ಆರಂಭಗೊಂಡಿದ್ದು, ಒಟ್ಟು 10 ಮಂದಿ ಸ್ಪಿನ್ನರ್’ಗಳು ಟೀಮ್ ಇಂಡಿಯಾ ಟ್ರೈನಿಂಗ್ ಕ್ಯಾಂಪ್’ನಲ್ಲಿ ಕಾಣಿಸಿಕೊಂಡಿದ್ದಾರೆ.

ಅಭ್ಯಾಸ ಶಿಬಿರಕ್ಕೆ 10 ಮಂದಿ ಸ್ಪಿನ್ನರ್’ಗಳನ್ನು ಸೇರಿಸಿಕೊಂಡಿರುವುದರ ಹಿಂದೆ ರಣತಂತ್ರವೊಂದು ಅಡಗಿದೆ. ಇದು ಆಸ್ಟ್ರೇಲಿಯಾದ ಅನುಭವಿ ಸ್ಪಿನ್ನರ್ ನೇಥನ್ ಲಯಾನ್ ಸಹಿತ ಕಾಂಗರೂಗಳ ಸ್ಪಿನ್ ಸವಾಲನ್ನು ಸಮರ್ಥವಾಗಿ ಎದುರಿಸಲು ಕೋಚ್ ರಾಹುಲ್ ದ್ರಾವಿಡ್ ಹೆಣೆದಿರುವ ತಂತ್ರ. ಟೆಸ್ಟ್ ಕ್ರಿಕೆಟ್’ನಲ್ಲಿ 400ಕ್ಕೂ ಹೆಚ್ಚು ವಿಕೆಟ್ ಪಡೆದಿರುವ ಆಫ್ ಸ್ಪಿನ್ನರ್ ನೇಥನ್ ಲಯಾನ್ ಭಾರತದ ಬ್ಯಾಟ್ಸ್’ಮನ್’ಗಳಿಗೆ ಹೆಚ್ಚು ಚಾಲೆಂಜಿಂಗ್ ಆಗುವ ಸಾಧ್ಯತೆಯಿದೆ. ಹೀಗಾಗಿ ಟೀಮ್ ಇಂಡಿಯಾ ಕ್ಯಾಂಪ್’ನಲ್ಲಿ 10 ಸ್ಪಿನ್ನರ್’ಗಳ ಪೈಕಿ ರವಿಚಂದ್ರನ್ ಅಶ್ವಿನ್ ಸಹಿತ ಒಟ್ಟು 4 ಮಂದಿ ಆಫ್ ಸ್ಪಿನ್ನರ್’ಗಳು ಭಾರತದ ಬ್ಯಾಟ್ಸ್’ಮನ್’ಗಳಿಗೆ ಬೌಲಿಂಗ್ ಮಾಡುತ್ತಿದ್ದಾರೆ.

ನಾಗ್ಪುರದಲ್ಲಿ ನಡೆಯುತ್ತಿರುವ ಟೀಮ್ ಇಂಡಿಯಾ ಕ್ಯಾಂಪ್’ನಲ್ಲಿರುವ ಸ್ಪಿನ್ನರ್’ಗಳು:
0. ರವಿಚಂದ್ರನ್ ಅಶ್ವಿನ್ (ಆಫ್ ಸ್ಪಿನ್ನರ್)
0. ರವೀಂದ್ರ ಜಡೇಜ (ಎಡಗೈ ಸ್ಪಿನ್ನರ್)
0. ಅಕ್ಷರ್ ಪಟೇಲ್ (ಎಡಗೈ ಸ್ಪಿನ್ನರ್)
0. ಕುಲ್ದೀಪ್ ಯಾದವ್ (ಚೈನಾಮನ್ ಸ್ಪಿನ್ನರ್)
0. ಸೌರಭ್ ಕುಮಾರ್ (ಎಡಗೈ ಸ್ಪಿನ್ನರ್)
0. ಆರ್.ಸಾಯಿ ಕಿಶೋರ್ (ಎಡಗೈ ಸ್ಪಿನ್ನರ್)
0. ರಾಹುಲ್ ಚಹರ್ (ಲೆಗ್ ಸ್ಪಿನ್ನರ್)
0. ಜಯಂತ್ ಯಾದವ್ (ಆಫ್ ಸ್ಪಿನ್ನರ್)
0. ವಾಷಿಂಗ್ಟನ್ ಸುಂದರ್ (ಆಫ್ ಸ್ಪಿನ್ನರ್)
0. ಪುಲ್ಕಿತ್ ನಾರಂಗ್ (ಆಫ್ ಸ್ಪಿನ್ನರ್)

ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಮತ್ತು ಮಾಜಿ ನಾಯಕ ವಿರಾಟ್ ಕೊಹ್ಲಿ ಎಡಗೈ ಸ್ಪಿನ್ ಮತ್ತು ಲೆಗ್ ಸ್ಪಿನ್ನರ್’ಗಳ ವಿರುದ್ಧ ಅಷ್ಟೇನೂ ಉತ್ತಮ ದಾಖಲೆ ಹೊಂದಿಲ್ಲ. ಉಪನಾಯಕ ಕೆ.ಎಲ್ ರಾಹುಲ್ ಕೂಡ ಸ್ಪಿನ್ನರ್’ಗಳ ವಿರುದ್ಧ ಎಡವುತ್ತಿದ್ದಾರೆ. ಹೀಗಾಗಿ ಆಸೀಸ್ ಸ್ಪಿನ್ ಚಾಲೆಂಜನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ 10 ಮಂದಿ ಸ್ಪಿನ್ನರ್’ಗಳಿಂದ ಭಾರತ ತಂಡದ ಬ್ಯಾಟ್ಸ್’ಮನ್’ಗಳಿಗೆ ಬೌಲಿಂಗ್ ಮಾಡಿಸಲಾಗುತ್ತಿದೆ.

ಭಾರತ ತಂಡದ ಸ್ಪಿನ್ ಪ್ರಾಬ್ಲಮ್
• ರೋಹಿತ್ ಶರ್ಮಾ: 57 ಇನ್ನಿಂಗ್ಸ್’ಗಳಲ್ಲಿ 25 ಬಾರಿ ಸ್ಪಿನ್ ವಿರುದ್ಧ ಔಟ್
• ಚೇತೇಶ್ವರ್ ಪೂಜಾರ: 122 ಇನ್ನಿಂಗ್ಸ್’ಗಳಲ್ಲಿ 50 ಬಾರಿ ಸ್ಪಿನ್ ವಿರುದ್ಧ ಔಟ್
• ವಿರಾಟ್ ಕೊಹ್ಲಿ: 130 ಇನ್ನಿಂಗ್ಸ್’ಗಳಲ್ಲಿ 57 ಬಾರಿ ಸ್ಪಿನ್ ವಿರುದ್ಧ ಔಟ್
• ಕೆ.ಎಲ್ ರಾಹುಲ್: 38 ಇನ್ನಿಂಗ್ಸ್’ಗಳಲ್ಲಿ 19 ಬಾರಿ ಸ್ಪಿನ್ ವಿರುದ್ಧ ಔಟ್
• ಶುಭಮನ್ ಗಿಲ್: 16 ಇನ್ನಿಂಗ್ಸ್’ಗಳಲ್ಲಿ 8 ಬಾರಿ ಸ್ಪಿನ್ ವಿರುದ್ಧ ಔಟ್

ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ವೇಳಾಪಟ್ಟಿ (India Vs Australia (ೃBorder-Gavaskar Trophy test series):
ಪ್ರಥಮ ಟೆಸ್ಟ್: ಫೆಬ್ರವರಿ 9-13 (ವಿಸಿಎ ಕ್ರೀಡಾಂಗಣ, ಜಮ್ತಾ; ನಾಗ್ಪುರ)
2ನೇ ಟೆಸ್ಟ್: ಫೆಬ್ರವರಿ 17-21 (ಫಿರೋಜ್ ಶಾ ಕ್ರೀಡಾಂಗಣ, ದೆಹಲಿ)
3ನೇ ಟೆಸ್ಟ್: ಮಾರ್ಚ್ 1-5 (HPCA ಕ್ರೀಡಾಂಗಣ, ಧರ್ಮಶಾಲಾ)
4ನೇ ಟೆಸ್ಟ್: ಮಾರ್ಚ್ 9-13 (ನರೇಂದ್ರ ಮೋದಿ ಕ್ರೀಡಾಂಗಣ, ಅಹ್ಮದಾಬಾದ್)

ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೊದಲೆರಡು ಪಂದ್ಯಗಳಿಗೆ ಭಾರತ ತಂಡ:
ರೋಹಿತ್ ಶರ್ಮಾ (ನಾಯಕ), ಕೆ.ಎಲ್ ರಾಹುಲ್ (ಉಪನಾಯಕ), ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಕೆ.ಎಸ್ ಭರತ್ (ವಿಕೆಟ್ ಕೀಪರ್), ರವೀಂದ್ರ ಜಡೇಜ, ರವಿಚಂದ್ರನ್ ಅಶ್ವಿನ್, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಇಶಾನ್ ಕಿಶನ್, ಅಕ್ಷರ್ ಪಟೇಲ್, ಶುಭಮನ್ ಗಿಲ್, ಉಮೇಶ್ ಯಾದವ್, ಜೈದೇವ್ ಉನಾದ್ಕಟ್, ಶ್ರೇಯಸ್ ಅಯ್ಯರ್ (2ನೇ ಟೆಸ್ಟ್ ಪಂದ್ಯಕ್ಕೆ ಲಭ್ಯ).

ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಆಡಲಿರುವ ಆಸ್ಟ್ರೇಲಿಯಾ ತಂಡ:
ಪ್ಯಾಟ್ ಕಮಿನ್ಸ್ (ನಾಯಕ), ಸ್ಟೀವನ್ ಸ್ಮಿತ್ (ಉಪನಾಯಕ), ಡೇವಿಡ್ ವಾರ್ನರ್, ಮ್ಯಾಟ್ ರೆನ್’ಶಾ, ಮಾರ್ನಸ್ ಲಬುಶೇನ್, ಅಲೆಕ್ಸ್ ಕ್ಯಾರಿ, ಸ್ಕಾಟ್ ಬೊಲಾಂಡ್, ಕ್ಯಾಮರೂನ್ ಗ್ರೀನ್, ಪೀಟರ್ ಹ್ಯಾಂಡ್ಸ್’ಕಾಂಬ್, ಜೋಶ್ ಹೇಜಲ್’ವುಡ್, ಟ್ರಾವಿಸ್ ಹೆಡ್, ಉಸ್ಮಾನ್ ಖವಾಜ, ನೇಥನ್ ಲಯಾನ್, ಲ್ಯಾನ್ಸ್ ಮೋರಿಸ್, ಟಾಡ್ ಮರ್ಫಿ, ಮಿಚೆಲ್ ಸ್ಟಾರ್ಕ್, ಮಿಚೆಲ್ ಸ್ವೆಪ್ಸನ್.

ಇದನ್ನೂ ಓದಿ : Virat Kohl‌i : ಕಾಂಗರೂ ಬೇಟೆಗೆ ಕಿಂಗ್ ಕೊಹ್ಲಿ ಭರ್ಜರಿ ತಾಲೀಮು, ಜಿಮ್’ನಲ್ಲಿ ವಿರಾಟ್, biceps ವೈರಲ್

ಇದನ್ನೂ ಓದಿ : Border-Gavaskar Test series : ಟೀಮ್ ಇಂಡಿಯಾ ಕ್ಯಾಂಪ್’ನಲ್ಲಿ 10 ಸ್ಪಿನ್ನರ್ಸ್, ಇದು ಕೋಚ್ ದ್ರಾವಿಡ್ ಸ್ಪಿನ್ ಚಾಲೆಂಜ್

Border-Gavaskar Test series 10 spinners at Team India Camp Coach Rahul Dravid Spin Challenge

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular