KL Rahul : ಕಾಂಗರೂ ಬೇಟೆಗೆ ಕನ್ನಡಿಗನ ಭರ್ಜರಿ ಸಮರಾಭ್ಯಾಸ; ಮುಂಬೈನಲ್ಲಿ 3 ದಿನ ಅಭ್ಯಾಸ ನಡೆಸಿದ ರಾಹುಲ್

ಮುಂಬೈ: ಕನ್ನಡಿಗ ಕೆ.ಎಲ್ ರಾಹುಲ್ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಗೆ (India Vs Australia Border-Gavaskar test series) ಸಜ್ಜಾಗುತ್ತಿದ್ದಾರೆ. ಮದುವೆಯ ಬೆನ್ನಲ್ಲೇ ಮುಂಬೈನ ಎಂಐಜಿ ಮೈದಾನದಲ್ಲಿ ರಾಹುಲ್ ಸತತ 3 ದಿನಗಳ ಕಾಲ ರೆಡ್ ಬಾಲ್’ನಲ್ಲಿ ಬ್ಯಾಟಿಂಗ್ ಅಭ್ಯಾಸ ನಡೆಸಿದ್ದಾರೆ. ಮೂರೂ ದಿನಗಳ ಕಾಲ ತಲಾ ಎರಡು ಗಂಟೆಗಳ ಕಾಲ ಸ್ಥಳೀಯ ಬೌಲರ್’ಗಳನ್ನು ಎದುರಿಸುವ ಮೂಲಕ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿಗೆ ರಾಹುಲ್ ಸಿದ್ಧತೆ ನಡೆಸಿದ್ದಾರೆ.

ಆಸೀಸ್ ವಿರುದ್ಧದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಪಂದ್ಯ ಫೆಬ್ರವರಿ 9ರಂದು ನಾಗ್ಪುರದ ವಿದರ್ಭ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ಆರಂಭವಾಗಲಿದೆ. ಪ್ರಥಮ ಟೆಸ್ಟ್ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾ ಆಟಗಾರರು ನಾಗ್ಪುರದಲ್ಲಿ ವಿಶೇಷ ಟ್ರೈನಿಂಗ್ ಕ್ಯಾಂಪ್’ನಲ್ಲಿ ಪಾಲ್ಗೊಳ್ಳಲಿದ್ದಾರೆ.ಟೀಮ್ ಇಂಡಿಯಾ ಟೆಸ್ಟ್ ತಂಡದ ಉಪನಾಯಕರಾಗಿರುವ ಕೆ.ಎಲ್ ರಾಹುಲ್ ಟೆಸ್ಟ್ ಕ್ರಿಕೆಟ್’ನಲ್ಲಿ ಆಸ್ಟ್ರೇಲಿಯಾ ವಿರುದ್ಧ ತವರು ನೆಲದಲ್ಲಿ ಅಮೋಘ ದಾಖಲೆ ಹೊಂದಿದ್ದಾರೆ.

ಭಾರತದಲ್ಲಿ ಕಾಂಗರೂಗಳ ವಿರುದ್ಧ ಆಡಿರುವ 7 ಟೆಸ್ಟ್ ಇನ್ನಿಂಗ್ಸ್’ಗಳಲ್ಲಿ ರಾಹುಲ್ 6 ಅರ್ಧಶತಕಗಳನ್ನು ಬಾರಿಸಿದ್ದಾರೆ. ಈ ಆರೂ ಅರ್ಧಶತಕಗಳು 2016-17ನೇ ಸಾಲಿನ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ದಾಖಲಾಗಿದ್ದವು. ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಅಮೋಘ 90 ರನ್ ಬಾರಿಸಿದ್ದ ರಾಹುಲ್ ಭಾರತದ ಗೆಲುವಿಗೆ ಕಾರಣರಾಗಿದ್ದರು.

ಕೆ.ಎಲ್ ರಾಹುಲ್ ಟೆಸ್ಟ್ ಸಾಧನೆ Vs ಆಸ್ಟ್ರೇಲಿಯಾ (ಭಾರತದಲ್ಲಿ)
ಇನ್ನಿಂಗ್ಸ್: 07
ರನ್: 393
ಅರ್ಧಶತಕ: 06
ಸರಾಸರಿ: 65.50
ಬೆಸ್ಟ್ : 90

ಇದನ್ನೂ ಓದಿ : Murali Vijay retirement: ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್ ಬೈ ಹೇಳಿದ ಟೀಮ್ ಇಂಡಿಯಾದ ಮಾಜಿ ಓಪನರ್ ಮುರಳಿ ವಿಜಯ್

ಇದನ್ನೂ ಓದಿ : Ranji Trophy QF : ಉತ್ತರಾಖಂಡ್ ವಿರುದ್ಧ ಗೆದ್ದರೆ ಕರ್ನಾಟಕಕ್ಕೆ ಮನೆಯಂಗಳದಲ್ಲೇ ಸೆಮಿಫೈನಲ್, ಇಲ್ಲಿದೆ ಮ್ಯಾಚ್ ಡೀಟೇಲ್ಸ್, ಲೈವ್ ಟೆಲಿಕಾಸ್ಟ್ ಮಾಹಿತಿ

ಇದನ್ನೂ ಓದಿ : ಜ್ಯೂನಿಯರ್ ಮಹಿಳಾ ವಿಶ್ವಕಪ್ ಗೆದ್ದ ಭಾರತೀಯ ವನಿತೆಯರಿಗೆ ಬಿಸಿಸಿಐನಿಂದ 5 ಕೋಟಿ ರೂ. ಬಂಪರ್ ಗಿಫ್ಟ್

30 ವರ್ಷದ ರಾಹುಲ್ ಜನವರಿ 23ರಂದು (ಸೋಮವಾರ) ಹಿಂದಿ ಚಿತ್ರರಂಗದ ಹಿರಿಯ ನಟ ಸುನೀಲ್ ಶೆಟ್ಟಿಯವರ ಪುತ್ರಿ ಆತಿಯಾ ಶೆಟ್ಟಿ ಅವರನ್ನು ಖಂಡಾಲದಲ್ಲಿ ಮದುವೆಯಾಗಿದ್ದರಿ. ಮದುವೆಯ ಕಾರಣ ನ್ಯೂಜಿಲೆಂಡ್ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಗೆ ಅಲಭ್ಯರಾಗಿದ್ದ ಕೆ.ಎಲ್ ರಾಹುಲ್, ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ (India Vs Australia test series) ಮೂಲಕ ಟೀಮ್ ಇಂಡಿಯಾಗೆ ಕಂಬ್ಯಾಕ್ ಮಾಡಲಿದ್ದಾರೆ.‌

Border-Gavaskar test series: Kannadigas’ great practice for kangaroo hunting; KL Rahul practiced for 3 days in Mumbai

Comments are closed.