ಋಷಿಕೇಶದ ಸ್ವಾಮಿ ದಯಾನಂದ ಆಶ್ರಮಕ್ಕೆ ಭೇಟಿ ಕೊಟ್ಟ ವಿರಾಟ್ ಕೊಹ್ಲಿ ದಂಪತಿ

ಋಷಿಕೇಶ: ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತು ಪತ್ನಿ ಅನುಷ್ಕಾ ಶರ್ಮಾ ದಂಪತಿ (Virat Kohli and Anushka Sharma)ಋಷಿಕೇಶದ ಸ್ವಾಮಿ ದಯಾನಂದ ಆಶ್ರಮಕ್ಕೆ (Rishikesh Swami Dayananda Ashram) ಭೇಟಿ ಕೊಟ್ಟಿದ್ದಾರೆ .

ಋಷಿಕೇಶದಲ್ಲಿ ವಿರಾಟ್ ಕೊಹ್ಲಿ ದಂಪತಿ ಸ್ವಾಮಿ ದಯಾನಂದ ಮಹಾರಾಜರ ಸಮಾಧಿಗೆ ನಮಿಸಿದ್ದಾರೆ. ಇತ್ತೀಚೆಗೆ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಆಧ್ಯಾತ್ಮಿಕ ಧರ್ಮಗುಂಪುಗಳನ್ನು ಹೆಚ್ಚು ಹೆಚ್ಚು ಭೇಟಿ ಮಾಡಿದ್ದಾರೆ. ಕೆಲ ತಿಂಗಳ ಹಿಂದಷ್ಟೇ ಕೊಹ್ಲಿ ದಂಪತಿ ನಯೀಮ್ ಕರೋಲಿ ಬಾಬಾ ಆಶ್ರಮಕ್ಕೆ ಭೇಟಿ ನೀಡಿದ್ದರು. ಅಷ್ಟೇ ಅಲ್ಲ, ಮಥುರಾದಲ್ಲಿರುವ ವೃಂದಾವನಕ್ಕೂ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಭೇಟಿ ಕೊಟ್ಟಿದ್ದರು.

34 ವರ್ಷದ ವಿರಾಟ್ ಕೊಹ್ಲಿ ವೈಟ್ ಬಾಲ್ ಕ್ರಿಕೆಟ್’ನಲ್ಲಿ ಅಮೋಘ ಫಾರ್ಮ್’ನಲ್ಲಿದ್ದಾರೆ. ಕಳೆದ ಬಾಂಗ್ಲಾದೇಶ ಮತ್ತು ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ಕೊಹ್ಲಿ ಒಟ್ಟು 3 ಶತಕಗಳನ್ನು ಬಾರಿಸಿದ್ದರು. 2023ರಲ್ಲಿ ಈಗಾಗ್ಲೇ 2 ಶತಕ ಬಾರಿಸಿರುವ ಕಿಂಗ್ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲೂ (India Vs Australia test series) ಅಬ್ಬರಿಸುವ ನಿರೀಕ್ಷೆಯಲ್ಲಿದ್ದಾರೆ.

ಟೀಮಾ ಇಂಡಿಯಾ ಟಿ20 ತಂಡದಿಂದ ವಿರಾಟ್ ಕೊಹ್ಲಿ ಜೊತೆ ಹಿರಿಯ ಆಟಗಾರರಾದ ರೋಹಿತ್ ಶರ್ಮಾ ಮತ್ತು ಕೆ.ಎಲ್ ರಾಹುಲ್ ಅವರನ್ನು ಹೊರಗಿಡಲಾಗಿದೆ. ಈ ಮೂವರೂ ಆಟಗಾರರು ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಮೂಲಕ ಟೀಮ್ ಇಂಡಿಯಾಗೆ ಕಂಬ್ಯಾಕ್ ಮಾಡಲಿದ್ದಾರೆ.ಆಸೀಸ್ ವಿರುದ್ಧದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಪಂದ್ಯ ಫೆಬ್ರವರಿ 9ರಂದು ನಾಗ್ಪುರದ ವಿದರ್ಭ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ಆರಂಭವಾಗಲಿದೆ. ಪ್ರಥಮ ಟೆಸ್ಟ್ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾ ಆಟಗಾರರು ನಾಗ್ಪುರದಲ್ಲಿ ವಿಶೇಷ ಟ್ರೈನಿಂಗ್ ಕ್ಯಾಂಪ್’ನಲ್ಲಿ ಪಾಲ್ಗೊಳ್ಳಲಿದ್ದಾರೆ.

ಇದನ್ನೂ ಓದಿ : Murali Vijay retirement: ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್ ಬೈ ಹೇಳಿದ ಟೀಮ್ ಇಂಡಿಯಾದ ಮಾಜಿ ಓಪನರ್ ಮುರಳಿ ವಿಜಯ್

ಇದನ್ನೂ ಓದಿ : KL Rahul : ಕಾಂಗರೂ ಬೇಟೆಗೆ ಕನ್ನಡಿಗನ ಭರ್ಜರಿ ಸಮರಾಭ್ಯಾಸ; ಮುಂಬೈನಲ್ಲಿ 3 ದಿನ ಅಭ್ಯಾಸ ನಡೆಸಿದ ರಾಹುಲ್

ಇದನ್ನೂ ಓದಿ : Ranji Trophy QF : ಉತ್ತರಾಖಂಡ್ ವಿರುದ್ಧ ಗೆದ್ದರೆ ಕರ್ನಾಟಕಕ್ಕೆ ಮನೆಯಂಗಳದಲ್ಲೇ ಸೆಮಿಫೈನಲ್, ಇಲ್ಲಿದೆ ಮ್ಯಾಚ್ ಡೀಟೇಲ್ಸ್, ಲೈವ್ ಟೆಲಿಕಾಸ್ಟ್ ಮಾಹಿತಿ

ಈ ಬಾರಿಯ ಬಾರ್ಡರ್- ಗವಾಸ್ಕರ್ ಟೆಸ್ಟ್ ಸರಣಿ (India Vs Australia Border Gavaskar test series) ಭಾರತಕ್ಕೆ ಮಹತ್ವದ್ದಾಗಿದೆ. ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್’ಷಿಪ್’ನಲ್ಲಿ ಫೈನಲ್ (ICC world test championship final) ಪ್ರವೇಶಿಸಬೇಕಾದರೆ ಆಸೀಸ್ ವಿರುದ್ಧದ 4 ಪಂದ್ಯಗಳ ಟೆಸ್ಟ್ ಸರಣಿಯನ್ನು ಭಾರತ ಕನಿಷ್ಠ 2-0 ಅಂತರದಲ್ಲಿ ಗೆಲ್ಲಲೇಬೇಕಿದೆ. ಆಸ್ಟ್ರೇಲಿಯಾ ಈಗಾಗಲೇ ವರ್ಲ್ಡ್ ಟೆಸ್ಟ್ ಚಾಂಪಿಯನ್’ಷಿಪ್’ನಲ್ಲಿ ಫೈನಲ್ ತಲುಪಿದೆ.

Rishikesh Swami Dayananda Ashram : Virat Kohli couple visited Swami Dayananda Ashram in Rishikesh

Comments are closed.