Border-Gavaskar test series : ಭಾರತ Vs ಆಸ್ಟ್ರೇಲಿಯಾ ಟೆಸ್ಟ್ ಸರಣಿಯಲ್ಲಿ ರಿಷಭ್ ಪಂತ್ ಸ್ಥಾನ ತುಂಬುವವರು ಈ ತ್ರಿಮೂರ್ತಿಗಳಲ್ಲಿ ಯಾರು?

ಬೆಂಗಳೂರು : ರಸ್ತೆ ಅಪಘಾತದಲ್ಲಿ ಗಾಯಗೊಂಡಿರುವ ಟೀಮ್ ಇಂಡಿಯಾ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ರಿಷಭ್ ಪಂತ್ (Rishabh Pant) ಮುಂಬರುವ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಗೆ (Border-Gavaskar test series) ಅಲಭ್ಯರಾಗಲಿದ್ದಾರೆ. ಅಷ್ಟೇ ಅಲ್ಲ, ಐಪಿಎಲ್ 2023 ಟೂರ್ನಿಯನ್ನೂ ರಿಷಭ್ ಪಂತ್ ತಪ್ಪಿಸಿಕೊಳ್ಳಲಿದ್ದಾರೆ.

ರಿಷಬ್ ಪಂತ್ ಭಾರತ ಟೆಸ್ಟ್ ತಂಡದ ಅವಿಭಾಜ್ಯ ಅಂಗ. ಕಳೆದ ಆಸ್ಟ್ರೇಲಿಯಾ ಪ್ರವಾಸದಲ್ಲಿ ಭಾರತ ಐತಿಹಾಸಿಕ ಟೆಸ್ಟ್ ಸರಣಿ ಗೆಲ್ಲುವಲ್ಲಿ ಪಂತ್ ಮಹತ್ವದ ಪಾತ್ರ ವಹಿಸಿದ್ದರು. ಅಷ್ಟೇ ಅಲ್ಲ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ನೆಲದಲ್ಲಿ ಟೆಸ್ಟ್ ಶತಕ ಬಾರಿಸಿದವರು. ಹೀಗಾಗಿ ಆಸ್ಟ್ರೇಲಿಯಾ ವಿರುದ್ಧದ ತವರು ಟೆಸ್ಟ್ ಸರಣಿಯಲ್ಲಿ ವಿಕೆಟ್ ಕೀಪರ್ ರಿಷಬ್ ಪಂತ್ ಪಾತ್ರ ನಿರ್ಣಾಯಕವಾಗಿತ್ತು. ಭಾರತಕ್ಕೂ ಈ ಟೆಸ್ಟ್ ಸರಣಿ ಮಹತ್ವದ್ದಾಗಿದ್ದು, ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್’ಷಿಪ್’ನಲ್ಲಿ ಫೈನಲ್ ತಲುಪಬೇಕಾದರೆ 4 ಪಂದ್ಯಗಳ ಸರಣಿಯಲ್ಲಿ ಕನಿಷ್ಠ 3 ಪಂದ್ಯಗಳನ್ನು ಗೆಲ್ಲಲೇಬೇಕಿದೆ.

ಹಾಗಾದ್ರೆ ಆಸೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ರಿಷಭ್ ಪಂತ್ ಅವರ ಸ್ಥಾನವನ್ನು ತುಂಬುವವರು ಯಾರು? ಒಟ್ಟು ಮೂವರು ವಿಕೆಟ್ ಕೀಪರ್’ಗಳು ರೇಸ್’ನಲ್ಲಿದ್ದಾರೆ. ಒಬ್ಬರು ಜಾರ್ಖಂಡ್’ನ ಎಡಗೈ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ಇಶಾನ್ ಕಿಶನ್ (Ishan Kishan), ಮತ್ತೊಬ್ಬರು ರಿಷಭ್ ಪಂತ್’ಗೆ ಬ್ಯಾಕಪ್ ವಿಕೆಟ್ ಕೀಪರ್ ಆಗಿದ್ದ ಆಂಧ್ರದ ಕೆ.ಎಸ್ ಭರತ್ (KS Bharat), ಇನ್ನೊಬ್ಬರು ಉತ್ತರ ಪ್ರದೇಶದ ಯುವ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ಉಪೇಂದ್ರ ಯಾದವ್ (Upendra Yadav). ಕೇರಳದ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ಸಂಜು ಸ್ಯಾಮ್ಸನ್ (Sanju Samson) ಕೂಡ ರೇಸ್’ನಲ್ಲಿದ್ದಾರೆ.

ಭಾರತ ಟೆಸ್ಟ್ ತಂಡದಲ್ಲಿ ರಿಷಭ್ ಪಂತ್ ಅವರ ಸ್ಥಾನವನ್ನು ತುಂಬುವುದು ಸಣ್ಣ ವಿಚಾರವಲ್ಲ. ಯಾಕಂದ್ರೆ ಪಂತ್ ಔಟ್ & ಔಟ್ ಮ್ಯಾಚ್ ವಿನ್ನರ್. ಒಂದೇ ಸೆಷನ್’ನಲ್ಲಿ ಇಡೀ ಟೆಸ್ಟ್ ಪಂದ್ಯದ ಗತಿಯನ್ನೇ ಬದಲಿಸುವ ಸಾಮರ್ಥ್ಯವಿರುವ ಆಟಗಾರ. ಹೀಗಾಗಿ ಭಾರತಕ್ಕೆ ಅತ್ಯಂತ ಮಹತ್ವದ್ದಾಗಿರುವ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಪಂತ್ ಅವರ ಸ್ಥಾನವನ್ನು ತುಂಬುವವರು ಯಾರು ಎಂಬುದೇ ಮಿಲಿಯನ್ ಡಾಲರ್ ಪ್ರಶ್ನೆ.

ಕೆ.ಎಸ್ ಭರತ್ ಮತ್ತು ಉಪೇಂದ್ರ ಯಾದವ್’ಗೆ ಭಾರತ ‘ಎ’ ತಂಡದ ಪರ ನಾಲ್ಕು ದಿನಗಳ ಪಂದ್ಯಗಳನ್ನಾಡಿದ ಅನುಭವವಿದೆ. ಆದರೆ ಇಬ್ಬರೂ ರಿಷಭ್ ಪಂತ್’ಗೆ ಸರಿಸಾಟಿಯಾಗುವ ಆಟಗಾರರಲ್ಲ. ಹಾಗೊಂದು ವೇಳೆ ಪಂತ್ ಅವರಷ್ಟೇ ಸಾಮರ್ಥ್ಯವಿರುವ ವಿಕೆಟ್ ಕೀಪರ್ ಯಾರಾದ್ರೂ ಇದ್ರೆ ಅದು ಜಾರ್ಖಂಡ್’ನ ಇಶಾನ್ ಕಿಶನ್. ರಿಷಭ್ ಪಂತ್ ಅವರಂತೆ ಎಡಗೈ ಬ್ಯಾಟ್ಸ್’ಮನ್ ಆಗಿರುವ ಇಶಾನ್ ಕಿಶನ್ ಇತ್ತೀಚೆಗಷ್ಟೇ ಬಾಂಗ್ಲಾದೇಶ ವಿರುದ್ಧದ ಏಕದಿನ ಪಂದ್ಯದಲ್ಲಿ ಭರ್ಜರಿ ದ್ವಿಶತಕ ಬಾರಿಸಿ ಗಮನ ಸೆಳೆದಿದ್ದಾರೆ.

ಇದನ್ನೂ ಓದಿ : India Vs Sri Lanka T20 : ಹೊಸ ವರ್ಷ ಹೊಸ ಸವಾಲು, ನಾಳೆ ಭಾರತ Vs ಶ್ರೀಲಂಕಾ ಮೊದಲ ಟಿ20; ಇಲ್ಲಿದೆ ಪ್ಲೇಯಿಂಗ್ XI, ಮ್ಯಾಚ್ ಟೈಮ್, live ಟೆಲಿಕಾಸ್ಟ್ ಡೀಟೇಲ್ಸ್

ಇದನ್ನೂ ಓದಿ : ರಿಷಬ್ ಪಂತ್ ಆರೋಗ್ಯದಲ್ಲಿ ಚೇತರಿಕೆ : ಖಾಸಗಿ ವಾರ್ಡ್‌ಗೆ ಶಿಫ್ಟ್

ಇದನ್ನೂ ಓದಿ : Virat Kohli 50 ODI hundreds: 2023 ವಿರಾಟ್ ಕೊಹ್ಲಿ ವರ್ಷ, ಈ ವರ್ಷವೇ 50 ಏಕದಿನ ಶತಕ ಬಾರಿಸಲಿದ್ದಾರೆ ಕಿಂಗ್ ಕೊಹ್ಲಿ

ಇಶಾನ್ ಕಿಶನ್ ಕೂಡ ಪಂತ್ ಅವರಂತೆ ಸ್ಫೋಟಕ ದಾಂಡಿಗ. ಹೀಗಾಗಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಪಂತ್’ಗೆ ಇಶಾನ್ ಉತ್ತಮ ಬದಲಿ ಆಟಗಾರನಾಗಬಲ್ಲರು. ಕೇರಳದ ಪ್ರತಿಭಾವಂತ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್’ಗೆ ಕೂಡ ರಿಷಬ್ ಪಂತ್ ಅವರ ಸ್ಥಾನವನ್ನು ಸಮರ್ಥವಾಗಿ ತುಂಬುವ ಸಾಮರ್ಥ್ಯವಿದೆ. ಒಟ್ಟಿನಲ್ಲಿ ಪಂತ್ ಸ್ಥಾನಕ್ಕೆ ಬಿಸಿಸಿಐ ಆಯ್ಕೆ ಯಾರು ಎಂಬ ಪ್ರಶ್ನೆಗೆ ಇನ್ನು ಕೆಲವೇ ದಿನಗಳಲ್ಲಿ ಉತ್ತರ ಸಿಗಲಿದೆ.

Border-Gavaskar test series : Who among these trio will replace Rishabh Pant in India vs Australia test series?

Comments are closed.