Dexa test : ಟೀಮ್ ಇಂಡಿಯಾ ಆಟಗಾರರಿಗೆ ಇನ್ನು ಡೆಕ್ಸಾ ಪರೀಕ್ಷೆ ಕಡ್ಡಾಯ, ಏನಿದು ಡೆಕ್ಸಾ ಟೆಸ್ಟ್?

ಮುಂಬೈ: ಟೀಮ್ ಇಂಡಿಯಾ ಆಟಗಾರರಿನ್ನು ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ವಾಪಸ್ ಆಗಬೇಕು ಅಂದ್ರೆ ಡೆಕ್ಸಾ ಪರೀಕ್ಷೆಯಲ್ಲಿ (Dexa test) ಉತ್ತೀರ್ಣರಾಗಲೇಬೇಕು. ಭಾರತ ತಂಡಕ್ಕೆ ಆಯ್ಕೆಯಾಗಲು ಈಗ ಯೋ-ಯೋ ಟೆಸ್ಟ್ ಜೊತೆ ಡೆಕ್ಸಾ (DEXA) ಪರೀಕ್ಷೆಯನ್ನು ಬಿಸಿಸಿಐ ಕಡ್ಡಾಯಗೊಳಿಸಿದೆ. ಭಾನುವಾರ ನಡೆದ ಬಿಸಿಸಿಐ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಗಾಯಗೊಂಡ ಆಟಗಾರರು ಟೀಮ್ ಇಂಡಿಯಾಗೆ ಮರಳಬೇಕಾದರೆ ಡೆಕ್ಸಾ (DEXA) ಪರೀಕ್ಷೆಗೊಳಪಡಲೇಬೇಕು. ಡೆಕ್ಸಾ ಪರೀಕ್ಷೆಯ ಜೊತೆಗೆ ಯೋ-ಯೋ ಪರೀಕ್ಷೆಯಲ್ಲಿ ಪಾಸ್ ಆದವರಿಗೆ ಮಾತ್ರ ಇನ್ನುಮುಂದೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಸಿಗಲಿದೆ.

ಏನಿದು ಡೆಕ್ಸಾ ಟೆಸ್ಟ್?
ಡೆಕ್ಸಾ ಅಂದ್ರೆ ಡ್ಯುಯಲ್ ಎನರ್ಜಿ ಎಕ್‌ರೇ ಅಬ್ಸಾರ್ಪ್ಟಿಯೋಮೆಟ್ರಿ ಟೆಸ್ಟ್ (Dual-energy X-ray absorptiometry Test) .

ಡೆಕ್ಸಾ ಟೆಸ್ಟ್ ಹೇಗೆ ನಡೆಯುತ್ತದೆ?
ಡೆಕ್ಸಾ ಟೆಸ್ಟ್‌ನಲ್ಲಿ ಸ್ಪೆಕ್ಟ್ರಲ್ ಇಮೇಜಿಂಗ್ ಎಂಬ ವಿಶೇಷ ತಂತ್ರಜ್ಞಾನದ ನೆರವಿನಿಂದ ಆಟಗಾರನ ಮೂಳೆ ಖನಿಜ ಸಾಂಧ್ರತೆಯನ್ನು ನಿರ್ಧರಿಸಲಾಗುತ್ತದೆ. ಎಕ್ಸ್‌ರೇ ಅಥವಾ ಎಂಆರ್ ಐ ಸ್ಕ್ಯಾನ್’ನಂತೆ ಈ ಟೆಸ್ಟ್ ನಡೆಯುತ್ತದೆ. ಡೆಕ್ಸಾ ಟೆಸ್ಟ್‌ನಲ್ಲಿ ಮೂಳೆಯ ಸಾಂಧ್ರತೆ ಬಗ್ಗೆ ಸ್ಪಷ್ಟ ಚಿತ್ರಣ ಸಿಗುವುದರಿಂದ, ಫಿಟ್ನೆಸ್ ಮತ್ತು ಗಾಯದ ಬಗ್ಗೆ ಸ್ಪಷ್ಟ ಮಾಹಿತಿ ಸಿಗುತ್ತದೆ.

ಡೆಕ್ಸಾ ಪರೀಕ್ಷೆ ಯಾಕೆ ಬೇಕು?
ಮೂಳೆಯ ಶಕ್ತಿ ಮತ್ತು ಮೂಳೆ ಖನಿಜ ಸಾಂಧ್ರತೆಯ (Bone Mineral Density) ಪ್ರಮಾಣವನ್ನು ನಿರ್ಧರಿಸಲು ಡೆಕ್ಸಾ ಟೆಸ್ಟ್ ನಡೆಸಲಾಗುತ್ತದೆ. ಆಟಗಾರರು ಗಾಯಗೊಂಡ ಸಂದರ್ಭಗಳಲ್ಲಿ ಮೂಳೆಯ ಬಲ ಮತ್ತು ಖನಿಜ ಸಾಂದ್ರತೆಯ ಮೇಲೆ ಹೆಚ್ಚಿನ ಹೊಡೆತ ಬೀಳುತ್ತದೆ. ಆಟಗಾರರು ತರಬೇತಿಯಲ್ಲಿದ್ದಾಗ ಮೂಳೆಯ ಆರೋಗ್ಯ ಕೂಡ ಉತ್ತಮವಾಗಿರುತ್ತದೆ. ಆದರೆ ಗಾಯಗೊಂಡು ವಿಶ್ರಾಂತಿಯಲ್ಲಿರುವ ಸಂದರ್ಭಗಳಲ್ಲಿ ಮೂಳೆ ಖನಿಜ ಸಾಂಧ್ರತೆ ಕಡಿಮೆಯಾಗುತ್ತದೆ.

ಇದನ್ನೂ ಓದಿ : India Vs Sri Lanka T20 : ಹೊಸ ವರ್ಷ ಹೊಸ ಸವಾಲು, ನಾಳೆ ಭಾರತ Vs ಶ್ರೀಲಂಕಾ ಮೊದಲ ಟಿ20; ಇಲ್ಲಿದೆ ಪ್ಲೇಯಿಂಗ್ XI, ಮ್ಯಾಚ್ ಟೈಮ್, live ಟೆಲಿಕಾಸ್ಟ್ ಡೀಟೇಲ್ಸ್

ಇದನ್ನೂ ಓದಿ : Border-Gavaskar test series : ಭಾರತ Vs ಆಸ್ಟ್ರೇಲಿಯಾ ಟೆಸ್ಟ್ ಸರಣಿಯಲ್ಲಿ ರಿಷಭ್ ಪಂತ್ ಸ್ಥಾನ ತುಂಬುವವರು ಈ ತ್ರಿಮೂರ್ತಿಗಳಲ್ಲಿ ಯಾರು?

ಇದನ್ನೂ ಓದಿ : Virat Kohli 50 ODI hundreds: 2023 ವಿರಾಟ್ ಕೊಹ್ಲಿ ವರ್ಷ, ಈ ವರ್ಷವೇ 50 ಏಕದಿನ ಶತಕ ಬಾರಿಸಲಿದ್ದಾರೆ ಕಿಂಗ್ ಕೊಹ್ಲಿ

ಇದನ್ನು ಪರೀಕ್ಷೆ ಮಾಡುವ ಸಲುವಾಗಿ ಡೆಕ್ಸಾ ಪರೀಕ್ಷೆಯನ್ನು ಬಿಸಿಸಿಐ ಕಡ್ಡಾಯ ಮಾಡಿದೆ.ಗಾಯದಿಂದ ಚೇತರಿಸಿಕೊಂಡ ಆಟಗಾರರು ತಂಡಕ್ಕೆ ಮರಳುವಾಗ ಅವರು ದೈಹಿಕವಾಗಿ ಎಷ್ಟರ ಮಟ್ಟಿಗೆ ಫಿಟ್ ಆಗಿದ್ದಾರೆ ಎಂಬುದು ಡೆಕ್ಸಾ ಟೆಸ್ಟ್’ನಲ್ಲಿ ನಿಖರವಾಗಿ ತಿಳಿದು ಬರುತ್ತದೆ.

Dexa test is now mandatory for Team India players, what is Dexa test?

Comments are closed.