CSK new captain: ಚೆನ್ನೈ ಸೂಪರ್ ಕಿಂಗ್ಸ್‌ಗೆ ಸಿಕ್ಕಿಯೇ ಬಿಟ್ಟ ಹೊಸ ಕ್ಯಾಪ್ಟನ್, ಈತನೇ ಧೋನಿ ಉತ್ತರಾಧಿಕಾರಿ

ಚೆನ್ನೈ: CSK new captain : ಚೆನ್ನೈ ಸೂಪರ್ ಕಿಂಗ್ಸ್ ತಂಡದ ದಿಗ್ಗಜ ನಾಯಕ ಮಹೇಂದ್ರ ಸಿಂಗ್ ಧೋನಿಯವವರಿಗೆ (MS Dhoni) 2023ರ ಐಪಿಎಲ್ ಕೊನೆಯ ಟೂರ್ನಿ. ಮುಂದಿನ ವರ್ಷದ ಐಪಿಎಲ್ ನಂತರ ಎಂ.ಎಸ್ ಧೋನಿ ಕ್ರಿಕೆಟ್’ನ ಎಲ್ಲಾ ಪ್ರಕಾರಗಳಿಂದ ನಿವೃತ್ತಿಯಾಗಲಿದ್ದಾರೆ. 2020ರಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್’ಗೆ ನಿವೃತ್ತಿ ಘೋಷಿಸಿದ್ದ ಧೋನಿ ಮುಂದಿನ ವರ್ಷ ಐಪಿಎಲ್’ಗೂ ಗುಡ್ ಬೈ ಹೇಳಲಿದ್ದಾರೆ. ಧೋನಿ ನಂತರ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತಂಡವನ್ನು ಮುನ್ನಡೆಸುವವರು ಯಾರು? ಈ ಪ್ರಶ್ನೆ ಸಾಕಷ್ಟು ಕುತೂಹಲ ಕೆರಳಿಸಿತ್ತು. 2022ರ ಟೂರ್ನಿಯಲ್ಲೇ ಧೋನಿ ನಾಯಕತ್ವವನ್ನು ರವೀಂದ್ರ ಜಡೇಜ ಅವರಿಗೆ ಬಿಟ್ಟುಕೊಟ್ಟಿದ್ದರು. ಆದರೆ ನಾಯಕತ್ವದಲ್ಲಿ ಜಡೇಜ ವಿಫಲರಾದ ಕಾರಣ ಟೂರ್ನಿಯ ಮಧ್ಯದಲ್ಲೇ ಕ್ಯಾಪ್ಟನ್ ಜವಾಬ್ದಾರಿಯನ್ನು ತೊರೆದಿದ್ದರು. ಹೀಗಾಗಿ ಮತ್ತೆ ಧೋನಿಯವರೇ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸುವಂತಾಗಿತ್ತು.

ಮುಂದಿನ ವರ್ಷ ಧೋನಿ ಐಪಿಎಲ್’ನಿಂದ ನಿವೃತ್ತಿಯಾದರೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮುಂದಿನ ನಾಯಕ ಯಾರು? ಈ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಐಪಿಎಲ್ ಆಟಗಾರರ ಹರಾಜಿನಲ್ಲಿ 16.25 ಕೋಟಿ ಮೊತ್ತಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸೇರಿರುವ ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಬೆನ್ ಸ್ಟೋಕ್ಸ್ (Ben Stokes) CSK ತಂಡದ ಮುಂದಿನ ನಾಯಕರಾಗುವ ಸಾಧ್ಯತೆಯಿದೆ. ಸ್ಟೋಕ್ಸ್ ನಾಯಕತ್ವದಲ್ಲಿ ಇಂಗ್ಲೆಂಡ್ ಟೆಸ್ಟ್ ತಂಡದ ಅದ್ಭುತ ಪ್ರದರ್ಶನ ತೋರುತ್ತಿದ್ದು, ಇತ್ತೀಚೆಗಷ್ಟೇ ಪಾಕಿಸ್ತಾನದಲ್ಲಿ ಅಂತ್ಯಗೊಂಡ ಆತಿಥೇಯ ಪಾಕಿಸ್ತಾನ ವಿರುದ್ಧದ 3 ಪಂದ್ಯಗಳ ಟೆಸ್ಟ್ ಸರಣಿಯನ್ನು 3-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿತ್ತು.

ಧೋನಿ ಉತ್ತರಾಧಿಕಾರಿಯಾಗಿ ಬೆನ್ ಸ್ಟೋಕ್ಸ್ ಅವರೇ ಚೆನ್ನೈ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ನ್ಯೂಜಿಲೆಂಡ್’ನ ಮಾಜಿ ಕ್ರಿಕೆಟಿಗ ಸ್ಕಾಟ್ ಸ್ಟೈರಿಸ್ ಸುಳಿವು ನೀಡಿದ್ದಾರೆ. “ನನ್ನ ಪ್ರಕಾರ ಬೆನ್ ಸ್ಟೋಕ್ಸ್ ಅವರೇ ಚೆನ್ನೈ ತಂಡದ ಹೊಸ ನಾಯಕನಾಗಲಿದ್ದಾರೆ. CSK ತಂಡದ ನಾಯಕತ್ವದ ದಂಡವನ್ನು ಹಸ್ತಾಂತರಿಸಲು ಧೋನಿ ಸಿದ್ಧವಾಗಿದ್ದಾರೆ. ಬೆನ್ ಸ್ಟೋಕ್ಸ್ ಅವರೇ ಧೋನಿ ಉತ್ತರಾಧಿಕಾರಿಯಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸಲಿದ್ದಾರೆ” ಎಂದು ಸ್ಟೈರಿಸ್ ಹೇಳಿದ್ದಾರೆ.

2008 ರಿಂದ 2022ರವರೆಗೆ (2016, 2017 ಹೊರತು ಪಡಿಸಿ) 12 ವರ್ಷಗಳ ಕಾಲ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕತ್ವ ವಹಿಸಿರುವ ಎಂ.ಎಸ್ ಧೋನಿ 9 ಬಾರಿ ತಂಡವನ್ನು ಫೈನಲ್’ಗೆ ಮುನ್ನಡೆಸಿದ್ದು, 4 ಬಾರಿ ಚಾಂಪಿಯನ್ ಪಟ್ಟಕ್ಕೇರಿಸಿದ್ದಾರೆ.

ಇದನ್ನೂ ಓದಿ : KL Rahul Out : ಕಳಪೆ ಫಾರ್ಮ್‌ಗೆ ಸಿಗಲಿದೆ ಗೇಟ್ ಪಾಸ್ ಶಿಕ್ಷೆ, ಶ್ರೀಲಂಕಾ ವಿರುದ್ಧದ ಟಿ20 ಸರಣಿಗೆ ಕೆ.ಎಲ್ ರಾಹುಲ್ ಔಟ್ ?

ಇದನ್ನೂ ಓದಿ : Ind vs ban 2nd test : 2ನೇ ಟೆಸ್ಟ್‌ನಲ್ಲಿ ಬಾಂಗ್ಲಾ ವಿರುದ್ಧ ರೋಚಕ ಜಯ, ಸರಣಿ 2-0 ಕ್ಲೀನ್ ಸ್ವೀಪ್

Chennai Super Kings got the new captain Ben Stokes CSK new captain he is the successor of Dhoni

Comments are closed.