WPLಗೆ ಕೌಂಟ್ ಡೌನ್; ಇಲ್ಲಿದೆ RCB ಮಹಿಳಾ ತಂಡದ ಸಂಭಾವ್ಯ ಪ್ಲೇಯಿಂಗ್ XI, ವೇಳಾಪಟ್ಟಿ, ಕೀ ಪ್ಲೇಯರ್ಸ್ ಡೀಟೇಲ್ಸ್

WPL RCB Women Team: ಬೆಂಗಳೂರು: ಚೊಚ್ಚಲ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್ (Women’s Premier League 2023) ಆರಂಭಕ್ಕಿನ್ನು 3 ದಿನ ಬಾಕಿ. ಬಿಸಿಸಿಐನ ಮಹತ್ವಾಕಾಂಕ್ಷೆಯ ಮಹಿಳಾ ಪ್ರೀಮಿಯರ್ ಲೀಗ್ ಟೂರ್ನಿ ಮಾರ್ಚ್ 4ರಂದು ಆರಂಭವಾಗಲಿದ್ದು, ಟೂರ್ನಿಯಲ್ಲಿ ಒಟ್ಟು 22 ಪಂದ್ಯಗಳು ನಡೆಯಲಿವೆ.

ಆಟಗಾರ್ತಿಯರ ಹರಾಜಿನಲ್ಲಿ 3.4 ಕೋಟಿಗೆ ಖರೀದಿಸಿರುವ ಭಾರತ ತಂಡದ ಉಪನಾಯಕಿ ಸ್ಮೃತಿ ಮಂಧನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸಾರಥ್ಯ ವಹಿಸಲಿದ್ದಾರೆ. ಮಾರ್ಚ್ 5ರಂದು ಮುಂಬೈನ ಬ್ರೆಬೋರ್ನ್ ಕ್ರೀಡಾಂಗಣದಲ್ಲಿ ನಡೆಯುವ ತನ್ನ ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ತಂಡ, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆಡುವ ಮೂಲಕ WPL ಟೂರ್ನಿಯಲ್ಲಿ ತನ್ನ ಅಭಿಯಾನ ಆರಂಭಿಸಲಿದೆ.

WPL RCB Women Team : RCB ಮಹಿಳಾ ತಂಡದ ಕೀ ಪ್ಲೇಯರ್ಸ್:

ಸ್ಮೃತಿ ಮಂಧನ: ಓಪನಿಂಗ್ ಬ್ಯಾಟರ್
ಎಲೀಸ್ ಪೆರಿ: ಆಲ್ರೌಂಡರ್
ರಿಚಾ ಘೋಷ್: ವಿಕೆಟ್ ಕೀಪರ್
ರೇಣುಕಾ ಸಿಂಗ್ ಠಾಕೂರ್: ಮಧ್ಯಮ ವೇಗದ ಬೌಲರ್

WPL ಟೂರ್ನಿಗೆ RCB ತಂಡದ ಸಂಭಾವ್ಯ ಪ್ಲೇಯಿಂಗ್ XI :
1.ಸ್ಮೃತಿ ಮಂಧನ (ನಾಯಕಿ), 2.ಸೋಫಿ ಡಿವೈನ್, 3.ಎಲೀಸ್ ಪೆರಿ, 4.ರಿಚಾ ಘೋಷ್ (ವಿಕೆಟ್ ಕೀಪರ್), 5.ಡೇನ್ ವಾನ್ ನೀಕರ್ಕ್, 6.ಕನ್ನಿಕಾ ಅಹುಜ, 7.ಪೂನಮ್ ಖೇಮ್ನರ್, 8.ಸಹನಾ ಪವಾರ್, 9.ರೇಣುಕಾ ಸಿಂಗ್ ಠಾಕೂರ್, 10.ಮೆಗಾನ್ ಶುಟ್, 11.ಕೋಮಲ್ ಜನ್ಜಾದ್.

WPL ಟೂರ್ನಿ: RCB ತಂಡದ ವೇಳಾಪಟ್ಟಿ :
ಮಾರ್ಚ್ 5: Vs ಡೆಲ್ಲಿ ಕ್ಯಾಪಿಟಲ್ಸ್ (ಬ್ರೆಬೋರ್ನ್ ಕ್ರೀಡಾಂಗಣ, ಮುಂಬೈ; 3.30 pm)
ಮಾರ್ಚ್ 6: Vs ಮುಂಬೈ ಇಂಡಿಯನ್ಸ್ (ಬ್ರೆಬೋರ್ನ್ ಕ್ರೀಡಾಂಗಣ, ಮುಂಬೈ; 7.30 pm)
ಮಾರ್ಚ್ 8: Vs ಗುಜರಾತ್ ಜೈಂಟ್ಸ್ (ಬ್ರೆಬೋರ್ನ್ ಕ್ರೀಡಾಂಗಣ, ಮುಂಬೈ; 7.30 pm)
ಮಾರ್ಚ್ 10: Vs ಯುಪಿ ವಾರಿಯರ್ಸ್ (ಬ್ರೆಬೋರ್ನ್ ಕ್ರೀಡಾಂಗಣ, ಮುಂಬೈ; 7.30 pm)
ಮಾರ್ಚ್ 13: Vs ಡೆಲ್ಲಿ ಕ್ಯಾಪಿಟಲ್ಸ್ (ಡಿ.ವೈ ಪಾಟೀಲ್ ಕ್ರೀಡಾಂಗಣ, ಮುಂಬೈ; 7.30 pm)
ಮಾರ್ಚ್ 15: Vs ಯುಪಿ ವಾರಿಯರ್ಸ್ (ಡಿ.ವೈ ಪಾಟೀಲ್ ಕ್ರೀಡಾಂಗಣ, ಮುಂಬೈ; 7.30 pm)
ಮಾರ್ಚ್ 18: Vs ಗುಜರಾತ್ ಜೈಂಟ್ಸ್ (ಬ್ರೆಬೋರ್ನ್ ಕ್ರೀಡಾಂಗಣ, ಮುಂಬೈ; 7.30 pm)
ಮಾರ್ಚ್ 21: Vs ಮುಂಬೈ ಇಂಡಿಯನ್ಸ್ (ಡಿ.ವೈ ಪಾಟೀಲ್ ಕ್ರೀಡಾಂಗಣ, ಮುಂಬೈ; 3.30 pm)

ಇದನ್ನೂ ಓದಿ : New Zeeland vs England test : ಫಾಲೋ ಆನ್‌ಗೆ ತುತ್ತಾದರೂ ಇಂಗ್ಲೆಂಡ್ ಸೊಕ್ಕಡಗಿಸಿ ಗೆದ್ದು ಬೀಗಿದ ನ್ಯೂಜಿಲೆಂಡ್

ಇದನ್ನೂ ಓದಿ : Meg Lanning : ಧೋನಿಯೂ ಅಲ್ಲ, ಪಾಂಟಿಂಗೂ ಅಲ್ಲ; ಕ್ರಿಕೆಟ್ ಜಗತ್ತಿನ ಸಾರ್ವಕಾಲಿಕ ಶ್ರೇಷ್ಠ ನಾಯಕಿ ಈ ಮಹಿಳೆ

Comments are closed.