ವಿಶ್ವಕಪ್ ಬೆನ್ನಲ್ಲೇ ಐಪಿಎಲ್ ( IPL 2023 ) ಚಟುವಟಿಕೆಗಳು ಆರಂಭಗೊಳ್ಳುವ ಸಾಧ್ಯತೆಯಿದೆ. ಕಳೆದ ಬಾರಿ ಮೆಗಾ ಹರಾಜು ಪ್ರಕ್ರಿಯೆ ನಡೆದಿದ್ದರೂ ಕೂಡ ಈ ಬಾರಿ ಹಲವು ಆಟಗಾರರು ಬೇರೆ ತಂಡಗಳನ್ನು ಪ್ರತಿನಿಧಿಸುವ ಸಾಧ್ಯತೆಯಿದೆ. ಅದ್ರಲ್ಲೂ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮಾಜಿ ನಾಯಕ ರವೀಂದ್ರ ಜಡೇಜಾ (Ravindra Jadeja will join RCB) ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸುವ ಸಾಧ್ಯತೆಯಿದೆ.
ಇಂಡಿಯನ್ ಪ್ರೀಮಿಯರ್ ಲೀಗ್‌ನ 2023ರ ಹರಾಜು ಪ್ರಕ್ರಿಯೆ ಡಿಸೆಂಬರ್-ಜನವರಿ ಅಥವಾ ಫೆಬ್ರವರಿಯಲ್ಲಿ ನಡೆಯುವ ಸಾಧ್ಯತೆಯಿದೆ. ಕಳೆದ ಬಾರಿಯ ಐಪಿಎಲ್ ಪಂದ್ಯಾವಳಿಯ ವೇಳೆಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಜೊತೆ ಮುನಿಸಿಕೊಂಡಿದ್ದ ರವೀಂದ್ರ ಜಡೇಜಾ ಪಂದ್ಯಾವಳಿಯ ಅರ್ಧದಲ್ಲಿಯೇ ತಂಡವನ್ನು ತೊರೆದಿದ್ದರು. ಮಹೇಂದ್ರ ಸಿಂಗ್ ಧೋನಿ ಜೊತೆಗಿನ ಮುನಿಸಿನಿಂದಾಗಿ ಮುಂದಿನ ಬಾರಿಯ ಐಪಿಎಲ್‌ನಲ್ಲಿ ಚೆನ್ನೈ ತಂಡದ ಜೊತೆ ಮುಂದುವರಿಯುವ ಸಾಧ್ಯತೆ ತೀರಾ ಕಡಿಮೆ ಎನ್ನಲಾಗುತ್ತಿದೆ.
ಜಡೇಜಾ ಚೆನ್ನೂ ಸೂಪರ್ ಕಿಂಗ್ಸ್ ತಂಡದಲ್ಲಿ ಕಾಣಿಸಿಕೊಳ್ಳದೇ ಇದ್ರೆ ಯಾವ ತಂಡದಲ್ಲಿ ಆಡುತ್ತಾರೆ ಅನ್ನೋ ಕುರಿತು ಚರ್ಚೆ ಶುರುವಾಗಿದೆ. ಇದುವರೆಗೂ ಐಪಿಎಲ್ ಟ್ರೋಫಿಯನ್ನೇ ಗೆಲ್ಲದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸ್ಟಾರ್ ಆಲ್‌ರೌಂಡರ್ ಕೊರತೆಯನ್ನು ಅನುಭವಿಸುತ್ತಿದೆ. ಹೀಗಾಗಿ ರವೀಂದ್ರ ಜಡೇಜಾ ಅವರನ್ನು ತಂಡಕ್ಕೆ ಕರೆತರುವ ನಿಟ್ಟಿನಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ರಮುಖ ಸ್ಪಿನ್ನರ್ ಆಗಿರುವ ರವೀಂದ್ರ ಜಡೇಜಾ ಬೆಂಗಳೂರು ತಂಡಕ್ಕೆ ಸೇರ್ಪಡೆಯಾದ್ರೆ ತಂಡಕ್ಕೆ ಸಾಕಷ್ಟು ಲಾಭವಾಗಲಿದೆ. ಕೇವಲ ಬೌಲಿಂಗ್ ಮಾತ್ರವಲ್ಲದೇ ಬ್ಯಾಟಿಂಗ್ ಮೂಲಕ ಮ್ಯಾಚ್ ಫಿನಿಶ್ ಮಾಡುವ ಸಾಮರ್ಥ್ಯವನ್ನು ಹೊಂದಿರುವ ಜಡೇಜಾ ಆರ್‌ಸಿಬಿ ತಂಡಕ್ಕೂ ನೆರವಾಗಲಿದ್ದಾರೆ.
ಒಂದೊಮ್ಮೆ ಜಡೇಜಾ ತಂಡಕ್ಕೆ ಸೇರ್ಪಡೆಯಾದ್ರೆ ಆರ್‌ಸಿಬಿ ತಂಡ ಆಲ್‌ರೌಂಡರ್‌ಗಳಾಗಿರುವ ಡೇವಿಡ್ ವಿಲ್ಲಿ ಅಥವಾ ಶಹಬಾಜ್ ಅಹ್ಮದ್ ಸ್ಥಾನ ತೊರೆಯಬೇಕಾಗುತ್ತದೆ. ಡೇವಿಡ್ ವಿಲ್ಲಿ ಅವರನ್ನು ದೊಡ್ಡ ಮೊತ್ತಕ್ಕೆ ಖರೀದಿ ಮಾಡಿದ್ದರೂ ಕೂಡ ಕಳೆದ ಸಾಲಿನಲ್ಲಿ ಅವರು ಆಡಿದ್ದು ಕೇವಲ ನಾಲ್ಕು ಪಂದ್ಯಗಳನ್ನು ಮಾತ್ರ. ಇನ್ನೊಂದೆಡೆಯಲ್ಲಿ ಶಹಬಾಜ್ ಕೂಡ ಹೇಳಿಕೊಳ್ಳುವಂತಹ ಪ್ರದರ್ಶನವನ್ನು ನೀಡಿಲ್ಲ. ಹೀಗಾಗಿ ಇಬ್ಬರಲ್ಲಿ ಒಬ್ಬರು ಸ್ಥಾನ ಕಳೆದುಕೊಳ್ಳುವುದು ಬಹುತೇಕ ಖಚಿತ.
ಸದ್ಯ ರವೀಂದ್ರ ಜಡೇಜಾ ಅವರು ಸಿಎಸ್‌ಕೆ ಅವರೊಂದಿಗೆ ಯಾವುದೇ ಸಂಪರ್ಕ ಹೊಂದಿಲ್ಲ. ಹೀಗಾಗಿ ಮುಂದಿನ ಐಪಿಎಲ್‌ನಲ್ಲಿ ಚೆನ್ನೈ ತಂಡದಿಂದ ದೂರವಾಗುವುದು ಬಹುತೇಕ ಖಚಿತ. ಭಾರತ ತಂಡದ ಖಾಯಂ ಆಟಗಾರನಾಗಿ ವಿಶ್ವದ ಶ್ರೇಷ್ಠ ಆಲ್ ರೌಂಡರ್ ಎಂದು ಪರಿಗಣಿಸಲ್ಪಟ್ಟಿರುವ ಜಡೇಜಾ ಹರಾಜಿಗೆ ಬಂದರೆ ಅತ್ಯಧಿಕ ಮೊತ್ತಕ್ಕೆ ಬಿಡ್ ಮಾಡಿದರೂ ಅಚ್ಚರಿಯಿಲ್ಲ. ಜಡೇಜಾ ಅವರನ್ನು ತಂಡಕ್ಕೆ ಕರೆತರುವಂತೆ ಆರ್‌ಸಿಬಿ ಅಭಿಮಾನಿಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಟೀಮ್ ಮ್ಯಾನೇಜ್‌ಮೆಂಟ್‌ಗೆ ಮನವಿ ಮಾಡುತ್ತಿದ್ದಾರೆ.
ಇದನ್ನೂ ಓದಿ : KL Rahul advice his young Fan: “ಶಾಲೆಗೆ ಹೋಗು, ಉಳಿದದ್ದೆಲ್ಲಾ ಆಮೇಲೆ..” ಆಟೋಗ್ರಾಫ್ ಕೇಳಲು ಬಂದ ಅಭಿಮಾನಿಗೆ ರಾಹುಲ್ ಬುದ್ಧಿಮಾತು
CSK former captain Ravindra Jadeja will join RCB for IPL 2023