Beware Pizza Buyers:ಪಿಜ್ಝಾ ತಿನ್ನುವವರೇ ಹುಷಾರ್ ! ನಿಮ್ಮನ್ನು ಕಾಡಬಹುದು ಈ ಗಂಭೀರ ಸಮಸ್ಯೆ

(Beware Pizza Buyers)ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರು ಪಾಸ್ಟ್‌ ಫುಡ್‌ ತಿನ್ನಲು ಇಷ್ಟ ಪಡುತ್ತಾರೆ. ಪಾಸ್ಟ್‌ ಪುಡ್‌ ಗಳಲ್ಲಿ ಪಿಜ್ಜಾವನ್ನು ಅತಿ ಹೆಚ್ಚು ಇಷ್ಟ ಪಡುತ್ತಾರೆ. ಪಿಜ್ಜಾ ನೋಡಲು ಬಹಳ ಸುಂದರ ಮತ್ತು ರುಚಿಯು ಕೂಡ ಇರುತ್ತದೆ ಹೆಚ್ಚಿನ ಜನರು ಇದಕ್ಕೆ ಆಕರ್ಷಿತರಾಗುತ್ತಾರೆ. ಇತ್ತೀಚಿನ ದಿನಗಳಲ್ಲಿ ಮೊಬೈಲ್‌ ಮೇಲೆ ಒಂದು ಟಚ್‌ ಮಾಡಿದರೆ ಸಾಕು ತಿಂಡಿ ಆರ್ಡರ್‌ ಮಾಡಬಹುದು. ಆರ್ಡರ್ ಮಾಡಿದ ಅರ್ಧ ಗಂಟೆಯಲ್ಲೇ ನಮಗೆ ಅಗತ್ಯವಿರುವ ತಿಂಡಿ ಮನೆಗೆ ಬರುತ್ತದೆ. ಚಿಕ್ಕ ಮಕ್ಕಳು ಅತಿ ಹೆಚ್ಚು ಪಿಜ್ಜಾ ತಿನ್ನಲು ಇಷ್ಟ ಪಡುತ್ತಾರೆ, ಪಿಜ್ಜಾ ತಿನ್ನಲು ರುಚಿಕರ ಆದರೆ ಆದರೆ ಇದನ್ನು ಸೇವನೆ ಮಾಡಿದರೆ ಆರೋಗ್ಯಕ್ಕೆ ಸಾಕಷ್ಟು ಹಾನಿಮಾಡುತ್ತದೆ. ನೀವೂ ಪಿಜ್ಜಾ ಪ್ರಿಯರಾಗಿದ್ದರೆ ಇದನ್ನು ತಿನ್ನುವ ಮುನ್ನ ಇದರಿಂದ ಆಗುವ ಹಾನಿಯ ಬಗ್ಗೆಯೂ ತಿಳಿದುಕೊಳ್ಳಿ.

(Beware Pizza Buyers)ತೂಕ ಹೆಚ್ಚಿಸುತ್ತದೆ
ಪಿಜ್ಜಾ ತಯಾರಿಸಲು ಬಳಸುವಂತಹ ಹಿಟ್ಟು ನಿಮ್ಮ ಆರೋಗ್ಯಕ್ಕೆ ಬಹಳಷ್ಟು ಹಾನಿ ಮಾಡುತ್ತದೆ. ಇದರಲ್ಲಿ ಜೀವಸತ್ವಗಳು, ನಾರಿನಂಶದಂತಹ ಪೋಷಕಾಂಶಗಳ ಅಂಶಗಳು ಇರುವುದಿಲ್ಲ ಹಾಗಾಗಿ ಇದನ್ನು ತಿಂದರೆ ನಿಮ್ಮ ದೇಹಕ್ಕೆ ಬೇಕಾದ ಪೋಷಕಾಂಶಗಳು ಸಿಗದೆ ನಿಮ್ಮ ತೂಕ ಹೆಚ್ಚಿಗೆ ಆಗುತ್ತದೆ. ಆದಷ್ಟು ಅಪರೂಪಕ್ಕೆ ಪಿಜ್ಜಾ ತಿನ್ನುವುದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಹೃದಯ ರೋಗ
ಪಿಜ್ಜಾದ ರುಚಿಯನ್ನು ಹೆಚ್ಚಿಸುವುದಕ್ಕಾಗಿ ಅದರಲ್ಲಿ ಬಹಳಷ್ಟು ಚೀಸ್ ಅನ್ನು ಬಳಸಲಾಗುತ್ತದೆ. ಈ ಚೀಸ್‌ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗುವಂತೆ ಮಾಡುತ್ತದೆ. ಪಿಜ್ಜಾವನ್ನು ನಿರಂತರವಾಗಿ ತಿನ್ನುವುದರಿಂದ ಹೃದಯಕ್ಕೆ ಅಪಾಯ ಮಾಡುತ್ತದೆ. ಹಾಗಾಗಿ ಸಾಧ್ಯವಾದಷ್ಟು ಪಿಜ್ಜಾ ಸೇವನೆಯನ್ನು ಕಡಿಮೆ ಮಾಡುವುದು ಉತ್ತಮ.

ರಕ್ತದೊತ್ತಡದಲ್ಲಿ ಹೆಚ್ಚಳವಾಗುತ್ತದೆ
ಹೆಚ್ಚು ಪಿಜ್ಜಾವನ್ನು ನಿರಂತರವಾಗಿ ತಿನ್ನುವುದರಿಂದ ನಿಮಗೆ ಅಧಿಕ ರಕ್ತದೊತ್ತಡ ಸಮಸ್ಯೆ ಉಂಟಾಗುತ್ತದೆ. ಪಿಜ್ಜಾ ತಿನ್ನುವುದರಿಂದ ನಿಮ್ಮ ದೇಹದಲ್ಲಿ ಸೋಡಿಯಂ ಪ್ರಮಾಣವನ್ನು ಹೆಚ್ಚಾಗುವಂತೆ ಮಾಡುತ್ತದೆ.ಪಿಜ್ಜಾವನ್ನು ಅತಿಯಾಗಿ ತಿನ್ನಲು ರೂಡಿ ಮಾಡಿಕೊಂಡರೆ ನಿಮ್ಮ ಆರೋಗ್ಯವನ್ನು ಕೆಡಿಸುತ್ತದೆ.

ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗುತ್ತದೆ
ಪಿಜ್ಜಾವನ್ನು ನಿರಂತರವಾಗಿ ತಿನ್ನುವುದರಿಂದ ನಿಮ್ಮ ದೇಹದಲ್ಲಿನ ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗುವಂತೆ ಮಾಡುತ್ತದೆ.

ಇದನ್ನೂ ಓದಿ:Hot or Cold Water Bath In Winter:ಚಳಗಾಲದಲ್ಲಿ ಬಿಸಿ ನೀರಿನಿಂದ ಸ್ನಾನ ಮಾಡುವುದು ಒಳಿತೋ, ಕೆಡಕೋ?

ಇದನ್ನೂ ಓದಿ:Omicron BF.7: ಕೋವಿಡ್ ಹೊಸ ರೂಪಾಂತರ : ಈ ಲಕ್ಷಣ ಕಾಣಿಸಿಕೊಂಡ್ರೆ ಕೂಡಲೇ ವೈದ್ಯರಲ್ಲಿ ಪರೀಕ್ಷಿಸಿ

ಅಸಿಡಿಟಿ ಸಮಸ್ಯೆ ಕಾಡಬಹುದು
ಪಿಜ್ಜಾ ತಯಾರಿಕೆಯಲ್ಲಿ ಚೀಸ್, ಸಾಸ್, ಹಿಟ್ಟು ಇತ್ಯಾದಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸುವುದರಿಂದ ಇದನ್ನು ತಿಂದರೆ ದೇಹದಲ್ಲಿ ಅಸಿಡಿಟಿ ಸಮಸ್ಯೆ ಹೆಚ್ಚಾಗುವಂತೆ ಮಾಡುತ್ತದೆ. ಆದಷ್ಟು ಪಿಜ್ಜಾ ತಿನ್ನುವುದನ್ನು ಕಡಿಮೆ ಮಾಡಿದರೆ ಉತ್ತಮ

Beware Pizza Buyers Pizza eaters beware! This serious problem can bother you

Comments are closed.