David Warner : ಏಕದಿನ, ಟೆಸ್ಟ್ 100ರಲ್ಲಿ 100 : ಅಪರೂಪದ ದಾಖಲೆ ಬರೆದ ಆಸೀಸ್ ಓಪನರ್ ವಾರ್ನರ್

ಮೆಲ್ಬೋರ್ನ್: ಆಸ್ಟ್ರೇಲಿಯಾದ ಸ್ಫೋಟಕ ಎಡಗೈ ಓಪನರ್ ಡೇವಿಡ್ ವಾರ್ನರ್ (David Warner) ತಮ್ಮ 100ನೇ ಟೆಸ್ಟ್ ಪಂದ್ಯದಲ್ಲಿ ಅಮೋಘ ಶತಕ ಬಾರಿಸಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್’ನಲ್ಲಿ (Melbourne cricket ground) ನಡೆಯುತ್ತಿರುವ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ (Boxing day test macth) ಭರ್ಜರಿ ಶತಕ ಬಾರಿಸಿದ ವಾರ್ನರ್, ತಮ್ಮ 100ನೇ ಟೆಸ್ಟ್ ಪಂದ್ಯವನ್ನು ಸ್ಮರಣೀಯವಾಗಿಸಿಕೊಂಡರು. 100ನೇ ಟೆಸ್ಟ್ ಪಂದ್ಯದಲ್ಲಿ ಶತಕ ಬಾರಿಸಿದ ಆಸ್ಟ್ರೇಲಿಯಾದ 2ನೇ ಆಟಗಾರನೆಂಬ ಹಿರಿಮೆಗೆ ವಾರ್ನರ್ ಪಾತ್ರರಾದರು. ಇದು ಟೆಸ್ಟ್ ವೃತ್ತಿಜೀವನದಲ್ಲಿ ವಾರ್ನರ್ ಬಾರಿಸಿದ 25ನೇ ಶತಕ.

ಇದಕ್ಕೂ ಮೊದಲು ಆಸೀಸ್ ಮಾಜಿ ನಾಯಕ ರಿಕಿ ಪಾಂಟಿಂಗ್ ಈ ಸಾಧನೆ ಮಾಡಿದ್ದರು. 2006ರಲ್ಲಿ ಸಿಡ್ನಿಯಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ರಿಕಿ ಪಾಂಟಿಂಗ್ ಎರಡೂ ಇನ್ನಿಂಗ್ಸ್’ಗಳಲ್ಲಿ ಶತಕ ಬಾರಿಸಿದ್ದರು. 100ನೇ ಟೆಸ್ಟ್ ಪಂದ್ಯದಲ ಎರಡೂ ಇನ್ನಿಂಗ್ಸ್’ಗಳಲ್ಲಿ ಶತಕ ಸಿಡಿಸಿದ ಜಗತ್ತಿನ ಮೊದಲ ಮತ್ತು ಏಕೈಕ ಆಟಗಾರನೆಂಬ ವಿಶ್ವದಾಖಲೆ ರಿಕಿ ಪಾಂಟಿಂಗ್ ಅವರ ಹೆಸರಲ್ಲಿದೆ.

100ನೇ ಟೆಸ್ಟ್ ಪಂದ್ಯವನ್ನು ಶತಕದೊಂದಿಗೆ ಸ್ಮರಣೀಯವಾಗಿಸಿಕೊಂಡಿರುವ ಡೇವಿಡ್ ವಾರ್ನರ್ ತಮ್ಮ 100ನೇ ಏಕದಿನ ಪಂದ್ಯದಲ್ಲೂ ಶತಕ ಬಾರಿಸಿದ್ದರು. 2017ರಲ್ಲಿ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಭಾರತ ವಿರುದ್ಧ ವಾರ್ನರ್ ಅಮೋಘ ಶತಕ ಬಾರಿಸಿದ್ದರು. ಇದೀಗ 100ನೇ ಟೆಸ್ಟ್ ಪಂದ್ಯದಲ್ಲೂ ಸೆಂಚುರಿ ಸಿಡಿಸಿ ಗಮನ ಸೆಳೆದಿದ್ದಾರೆ. 100ನೇ ಏಕದಿನ ಹಾಗೂ 100ನೇ ಟೆಸ್ಟ್ ಪಂದ್ಯದಲ್ಲಿ ಶತಕ ಬಾರಿಸಿದ್ದವರ ಪೈಕಿ ವೆಸ್ಟ್ ಇಂಡೀಸ್’ನ ದಿಗ್ಗಜ ಆರಂಭಿಕ ಬ್ಯಾಟ್ಸ್’ಮನ್ ಗಾರ್ಡನ್ ಗ್ರೀನಿಡ್ಜ್ ಮೊದಲಿಗರು. ವಿಂಡೀಸ್ ದೈತ್ಯನ ನಂತರ ಡೇವಿಡ್ ವಾರ್ನರ್ ಈ ಸಾಧನೆ ಮಾಡಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಅಬ್ಬರಿಸಿದ ವಾರ್ನರ್ 3 ವರ್ಷಗಳ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ಶತಕದ ಬರವನ್ನು ನೀಗಿಸಿಕೊಂಡರು. 2020ರ ಜನವರಿಯಲ್ಲಿ ಇಂಗ್ಲೆಂಡ್ ವಿರುದ್ಧ ಶತಕ ಬಾರಿಸಿದ ನಂತರ ವಾರ್ನರ್ ಅವರ ಬ್ಯಾಟ್’ನಿಂದ ಸೆಂಚುರಿ ಸಿಡಿದಿರಲಿಲ್ಲ. ತಮ್ಮ 100ನೇ ಟೆಸ್ಟ್ ಪಂದ್ಯದಲ್ಲೇ ಶತಕದ ಬರವನ್ನು ನೀಗಿಸಿಕೊಳ್ಳುವಲ್ಲಿ ವಾರ್ನರ್ ಯಶಸ್ವಿಯಾಗಿದ್ದಾರೆ. ಶತಕದ ಜೊತೆ ವಾರ್ನರ್ ಟೆಸ್ಟ್ ವೃತ್ತಿಜೀವನದಲ್ಲಿ 8000 ರನ್’ಗಳ ಗಡಿ ದಾಟಿದ್ದಾರೆ.

ಇದನ್ನೂ ಓದಿ :Ranji Trophy: ನಾಳೆ ಕರ್ನಾಟಕಕ್ಕೆ ಗೋವಾ ಎದುರಾಳಿ, ಸಚಿನ್ ಪುತ್ರ ಅರ್ಜುನ್ ಮೇಲೆ ಎಲ್ಲರ ಕಣ್ಣು

ಇದನ್ನೂ ಓದಿ : Rohit Sharma : ಗಾಯದಿಂದ ಚೇತರಿಸಿಕೊಂಡ ಹಿಟ್ ಮ್ಯಾನ್, ಬಿಕೆಸಿಯಲ್ಲಿ ರೋಹಿತ್ ಬ್ಯಾಟಿಂಗ್ ಅಭ್ಯಾಸ

ಇದನ್ನೂ ಓದಿ : World Test Championship : 2ನೇ ಸ್ಥಾನದಲ್ಲಿ ಟೀಮ್ ಇಂಡಿಯಾ, ಹೇಗಿದೆ ಭಾರತದ ಫೈನಲ್ ಹಾದಿ? ಇಲ್ಲಿದೆ ಕಂಪ್ಲೀಟ್ ಮಾಹಿತಿ

100ನೇ ಟೆಸ್ಟ್ ಪಂದ್ಯದಲ್ಲಿ ಶತಕ ಬಾರಿಸಿದವರು:

  1. ಕಾಲಿನ್ ಕೌಡ್ರಿ (ಇಂಗ್ಲೆಂಡ್)
  2. ಜಾವೆದ್ ಮಿಯಾಂದಾದ್ (ಪಾಕಿಸ್ತಾನ)
  3. ಗಾರ್ಡನ್ ಗ್ರೀನಿಡ್ಜ್ (ವೆಸ್ಟ್ ಇಂಡೀಸ್)
  4. ಅಲೆಕ್ಸ್ ಸ್ಟಿವರ್ಟ್ (ಇಂಗ್ಲೆಂಡ್)
  5. ಇಂಜಮಾಮ್ ಉಲ್ ಹಕ್ (ಪಾಕಿಸ್ತಾನ)
  6. ರಿಕಿ ಪಾಂಟಿಂಗ್ (ಆಸ್ಟ್ರೇಲಿಯಾ)
  7. ಗ್ರೇಮ್ ಸ್ಮಿತ್ (ದಕ್ಷಿಣ ಆಫ್ರಿಕಾ)
  8. ಹಶೀಮ್ ಆಮ್ಲಾ (ದಕ್ಷಿಣ ಆಫ್ರಿಕಾ)
  9. ಜೋ ರೂಟ್ (ಇಂಗ್ಲೆಂಡ್)
  10. ಡೇವಿಡ್ ವಾರ್ನರ್ (ಆಸ್ಟ್ರೇಲಿಯಾ)

David Warner: ODI, 100 in Test 100: Aussie opener Warner sets rare record

Comments are closed.