Dhoni retirement secret : ಐಪಿಎಲ್ ಬಳಿಕ ರಿಟೈರ್ಡ್ ಆಗ್ತಾರಾ ಧೋನಿ..? “ನಿವೃತ್ತಿಯ ಸುಳಿವು ಕೊಟ್ಟ ಚೆನ್ನೈ “ತಲಾ”

ಚೆನ್ನೈ : ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತಂಡದ ನಾಯಕ, ಕ್ಯಾಪ್ಟನ್ ಕೂಲ್ ಎಂ.ಎಸ್ ಧೋನಿ (MS Dhoni) ಈ ಐಪಿಎಲ್ ಬಳಿಕ ಕ್ರಿಕೆಟ್’ನಿಂದ ನಿವೃತ್ತಿಯಾಗ್ತಾರಾ..? ಇದು ಧೋನಿ ಅವರ ಕೋಟ್ಯಂತರ ಅಭಿಮಾನಿಗಳನ್ನು ಇನ್ನಿಲ್ಲದಂತೆ ಕಾಡುತ್ತಿರುವ ಪ್ರಶ್ನೆ. ಈ ಎಲ್ಲಾ ಪ್ರಶ್ನೆಗಳಿಗೆ ಸ್ವತಃ ಧೋನಿ (Dhoni retirement secret) ಅವರೇ ಉತ್ತರ ಕೊಟ್ಟಿದ್ದಾರೆ.

ಚೆನ್ನೈನ ಚೆಪಾಕ್ ಮೈದಾನದಲ್ಲಿ ಶುಕ್ರವಾರ ನಡೆದ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದ ನಂತರ ಧೋನಿ ಆಡಿರುವ ಮಾತು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಹೈದರಾಬಾದ್ ವಿರುದ್ಧದ ಪಂದ್ಯವನ್ನು 7 ವಿಕೆಟ್’ಗಳಿಂದ ಸುಲಭವಾಗಿ ಗೆದ್ದಿದ್ದ ಧೋನಿ ಸಾರಥ್ಯದ ಚೆನ್ನೈ ಸೂಪರ್ ಕಿಂಗ್ಸ್, 4ನೇ ಗೆಲುವು ದಾಖಲಿಸಿ ಪಾಯಿಂಟ್ ಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದೆ.

ಪಂದ್ಯದ ನಂತರ ಮಾತನಾಡಿದ ಧೋನಿ ನಿವೃತ್ತಿಯ ಸುಳಿವನ್ನು ಪರೋಕ್ಷವಾಗಿ ಬಿಚ್ಚಿಟ್ಟಿದ್ದಾರೆ. “ವಯಸ್ಸಾದಂತೆ ನಿಮ್ಮ ಅನುಭವವೂ ಹೆಚ್ಚುತ್ತದೆ. ನನಗೆ ನಿಜಕ್ಕೂ ವಯಸ್ಸಾಗುತ್ತಿದೆ. ಅದರಲ್ಲಿ ಮುಚ್ಚುಮರೆ ಏನಿಲ್ಲ. ಯಾರು ಏನೇ ಹೇಳಿದರೂ ನಾನು ನನ್ನ ಕ್ರಿಕೆಟ್ ಜೀವನದ ಅಂತಿಮ ಹಂತದಲ್ಲಿದ್ದೇನೆ. ಹೀಗಾಗಿ ಇದನ್ನು ಸಂಭ್ರಮಿಸಬೇಕು. ಚೆನ್ನೈನಲ್ಲಿ ಮತ್ತೆ ಆಡುತ್ತಿರುವುದು ಖುಷಿ ತಂದಿದೆ. ಇಲ್ಲಿನ ಪ್ರೇಕ್ಷಕರು ನನಗೆ ಸಾಕಷ್ಟು ಪ್ರೀತಿ ನೀಡಿದ್ದಾರೆ” ಎಂದು ಧೋನಿ ತಿಳಿಸಿದ್ದಾರೆ.

42 ವರ್ಷದ ಎಂ.ಎಸ್ ಧೋನಿ 2020ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್’ಗೆ ನಿವೃತ್ತಿ ಘೋಷಿಸಿದ್ದರು. ನಂತರ ಐಪಿಎಲ್’ನಲ್ಲಿ ಮಾತ್ರ ಆಡುತ್ತಾ ಬಂದಿರುವ ಧೋನಿ ಈ ಬಾರಿಯ ಐಪಿಎಲ್ ನಂತರ ಎಲ್ಲಾ ಮಾದರಿಯ ಕ್ರಿಕೆಟ್’ಗೆ ವಿದಾಯ ಹೇಳುವ ಸಾಧ್ಯತೆಯಿದೆ.

ಇದನ್ನೂ ಓದಿ : Mohammad Siraj : ಐಪಿಎಲ್‌ನಲ್ಲಿ ಸಿರಾಜ್ ಬೆಂಕಿ ಬೌಲಿಂಗ್, ಟ್ರೋಲ್ ಆಗಿದ್ದ ಆಟಗಾರ ಈಗ ಖತರ್ನಾಕ್ ಬೌಲರ್

ಇದನ್ನೂ ಓದಿ : Twitter Blue tick : 657 ರೂ.ಗಾಗಿ ಟ್ವಿಟರ್ ಬ್ಲೂ ಟಿಕ್ ಕಳೆದುಕೊಂಡ ಕೊಹ್ಲಿ, ಧೋನಿ, ರೋಹಿತ್, ರಾಹುಲ್

ಸತತ 16 ವರ್ಷಗಳಿಂದ ಐಪಿಎಲ್ ಆಡುತ್ತಿರುವ ಎಂ.ಎಸ್ ಧೋನಿ, 14 ವರ್ಷ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸಿದ್ದಾರೆ. 2016 ಮತ್ತು 2017ರಲ್ಲಿ ಚೆನ್ನೈ ತಂಡ ಐಪಿಎಲ್‘ನಿಂದ ಬ್ಯಾನ್ ಆದಾಗ ಧೋನಿ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ಪರ ಆಡಿದ್ದರು. 2018ರಲ್ಲಿ ಮತ್ತೆ ಚೆನ್ನೈ ನಾಯಕತ್ವ ವಹಿಸಿದ್ದ ಧೋನಿ, ತಂಡವನ್ನು 3ನೇ ಬಾರಿ ಚಾಂಪಿಯನ್ ಪಟ್ಟಕ್ಕೇರಿಸಿದ್ದರು. 2021ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಧೋನಿ ನಾಯಕತ್ವದಲ್ಲಿ 4ನೇ ಬಾರಿ ಐಪಿಎಲ್ ಚಾಂಪಿಯನ್ ಆಗಿ ಹೊರ ಹೊಮ್ಮಿತ್ತು.

ಇದನ್ನೂ ಓದಿ : Shreyas Iyer surgery success : ಶ್ರೇಯಸ್ ಅಯ್ಯರ್‌ಗೆ ಲಂಡನ್‌ನಲ್ಲಿ ಸಕ್ಸಸ್‌ಫುಲ್ ಸರ್ಜರಿ, ಮುಂಬೈಕರ್ ಕಂಬ್ಯಾಕ್ ಯಾವಾಗ ಗೊತ್ತಾ?

Dhoni retirement secret: Will Dhoni retire after IPL? “Chennai “Thala” hinted at retirement

Comments are closed.