MS Dhoni world record : 42ನೇ ವಯಸ್ಸಿನಲ್ಲಿ ವಿಶ್ವದಾಖಲೆ ಪುಡಿಗಟ್ಟಿದ ಕ್ಯಾಪ್ಟನ್ ಕೂಲ್ ಎಂ.ಎಸ್ ಧೋನಿ

ಚೆನ್ನೈ: ಕ್ರಿಕೆಟ್ ಜಗತ್ತಿನ ದಿಗ್ಗಜ ನಾಯಕ, ದಿಗ್ಗಜ ಆಟಗಾರ, ದಿಗ್ಗಜ ವಿಕೆಟ್ ಕೀಪರ್ ಬ್ಯಾಟ್ಸ್’ಮನ್, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸಾರಥಿ ಮಹೇಂದ್ರ ಸಿಂಗ್ ಧೋನಿ (MS Dhoni) ಅವರಿಗೀಗ 42 ವರ್ಷ. 42ನೇ ವರ್ಷದಲ್ಲಿ ಐಪಿಎಲ್ ಆಡುತ್ತಿರುವ ಎಂ.ಎಸ್ ಧೋನಿ, ಯುವಕರನ್ನೇ ನಾಚಿಸುವಂತಹ ಫಿಟ್ನೆಸ್ ಹೊಂದಿದ್ದಾರೆ. ಈಗಾಗಲೇ ಐಪಿಎಲ್’ನಲ್ಲಿ ಆಡಿದ 4 ಇನ್ನಿಂಗ್ಸ್’ಗಳಲ್ಲಿ ಧೋನಿ 6 ಸಿಕ್ಸರ್’ಗಳನ್ನು ಬಾರಿಸಿ ತಮ್ಮ ಸಾಮರ್ಥ್ಯ ಇನ್ನೂ ಕುಂದಿಲ್ಲ ಎಂಬುದನ್ನು ಸಾಬೀತು (MS Dhoni world record) ಪಡಿಸಿದ್ದಾರೆ. ಬ್ಯಾಟಿಂಗ್’ನಲ್ಲಿ ಆರ್ಭಟಿಸುತ್ತಿರುವ ಧೋನಿ ವಿಕೆಟ್ ಕೀಪಿಂಗ್’ನಲ್ಲೂ ಕಮಾಲ್ ಮಾಡುತ್ತಿದ್ದು, ವಿಶ್ವದಾಖಲೆಯೊಂದನ್ನು ಪುಡಿಗಟ್ಟಿದ್ದಾರೆ.

ಚೆನ್ನೈನ ಎಂ.ಎ ಚಿದಂಬರಂ ಕ್ರೀಡಾಂಗಣದಲ್ಲಿ (ಚೆಪಾಕ್ ಮೈದಾನ) ಶುಕ್ರವಾರ ನಡೆದ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಧೋನಿ, ಟಿ20 ಕ್ರಿಕೆಟ್’ನಲ್ಲಿ ಅತೀ ಹೆಚ್ಚು ಕ್ಯಾಚ್ ಪಡೆದ ವಿಕೆಟ್ ಕೀಪರ್ ಎಂಬ ವಿಶ್ವದಾಖಲೆ ನಿರ್ಮಿಸಿದರು. ಸನ್ ರೈಸರ್ಸ್ ಹೈದರಾಬಾದ್ ತಂಡದ ನಾಯಕ ಏಡನ್ ಮಾರ್ಕ್ರಮ್ ಅವರ ಕ್ಯಾಚ್ ಪಡೆಯುವ ಮೂಲಕ ಎಂ.ಎಸ್ ಧೋನಿ ಟಿ20 ಕ್ರಿಕೆಟ್’ನಲ್ಲಿ ಅತೀ ಹೆಚ್ಚು ಕ್ಯಾಚ್ ಪಡೆದ ವಿಕೆಟ್ ಕೀಪರ್ ಎಂದ ವಿಶ್ವದಾಖಲೆಯನ್ನು ತಮ್ಮ ಹೆಸರಿಗೆ ಬರೆಸಿಕೊಂಡರು. ಇದು ಟಿ20 ಕ್ರಿಕೆಟ್’ನಲ್ಲಿ ಧೋನಿ ಅವರ 208ನೇ ಕ್ಯಾಚ್. ಈ ಮೂಲಕ ಧೋನಿ ದಕ್ಷಿಣ ಆಫ್ರಿಕಾದ ವಿಕೆಟ್ ಕೀಪರ್ ಕ್ವಿಂಟನ್ ಡಿ ಕಾಕ್ ಅವರ ವಿಶ್ವದಾಖಲೆಯನ್ನು ಪುಡಿಗಟ್ಟಿದ್ದಾರೆ.

ಎಂ.ಎಸ್ ಧೋನಿ ಐಪಿಎಲ್ ಹಾಗೂ ಅಂತರಾಷ್ಟ್ರೀಯ ಪಂದ್ಯಗಳು ಸೇರಿ 367 ಟಿ20 ಪಂದ್ಯಗಳಲ್ಲಿ 208 ಕ್ಯಾಚ್’ಗಳನ್ನು ಪಡೆದಿದ್ದಾರೆ. ದಕ್ಷಿಣ ಆಫ್ರಿಕಾದ ಕ್ವಿಂಟನ್ ಡಿ ಕಾಕ್ 304 ಪಂದ್ಯಗಳಿಂದ 207 ಕ್ಯಾಚ್’ಗಳನ್ನು ಪಡೆದಿದ್ರೆ, ಭಾರತದ ಮತ್ತೊಬ್ಬ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ 379 ಪಂದ್ಯಗಳಿಂದ 205 ಕ್ಯಾಚ್ ಕಬಳಿಸಿದ್ದಾರೆ.

ಇದನ್ನೂ ಓದಿ : Mohammad Siraj : ಐಪಿಎಲ್‌ನಲ್ಲಿ ಸಿರಾಜ್ ಬೆಂಕಿ ಬೌಲಿಂಗ್, ಟ್ರೋಲ್ ಆಗಿದ್ದ ಆಟಗಾರ ಈಗ ಖತರ್ನಾಕ್ ಬೌಲರ್

ಇದನ್ನೂ ಓದಿ : Dhoni retirement secret : ಐಪಿಎಲ್ ಬಳಿಕ ರಿಟೈರ್ಡ್ ಆಗ್ತಾರಾ ಧೋನಿ..? “ನಿವೃತ್ತಿಯ ಸುಳಿವು ಕೊಟ್ಟ ಚೆನ್ನೈ “ತಲಾ”

ಟಿ20 ಕ್ರಿಕೆಟ್’ನಲ್ಲಿ ಅತೀ ಹೆಚ್ಚು ಕ್ಯಾಚ್ ಪಡೆದ ವಿಕೆಟ್ ಕೀಪರ್’ಗಳು (Most catches in t20 cricket):

  • ಎಂ.ಎಸ್ ಧೋನಿ (ಭಾರತ): 208 ಕ್ಯಾಚ್ (367 ಪಂದ್ಯ)
  • ಕ್ವಿಂಟನ್ ಡಿ ಕಾಕ್ (ದಕ್ಷಿಣ ಆಫ್ರಿಕಾ): 207 ಕ್ಯಾಚ್ (304 ಪಂದ್ಯ)
  • ದಿನೇಶ್ ಕಾರ್ತಿಕ್ (ಭಾರತ): 205 ಕ್ಯಾಚ್ (379 ಪಂದ್ಯ)
  • ಕಮ್ರಾನ್ ಅಕ್ಮಲ್ (ಪಾಕಿಸ್ತಾನ): 172 ಕ್ಯಾಚ್ (291 ಪಂದ್ಯ)
  • ದಿನೇಶ್ ರಾಮ್ದಿನ್ (ವೆಸ್ಟ್ ಇಂಡೀಸ್): 150 ಕ್ಯಾಚ್ (229 ಪಂದ್ಯ)

MS Dhoni world record: Captain Cool MS Dhoni broke the world record at the age of 42.

Comments are closed.