Chennai Super Kings : ಕಟ್ಟ ಕಡೆಯ ಐಪಿಎಲ್’ಗೆ ಧೋನಿ ಜಬರ್ದಸ್ತ್ ಅಭ್ಯಾಸ, ‘’ತಲಾ’’ ಹೊಸ ಸ್ಟೈಲ್’ಗೆ ಫ್ಯಾನ್ಸ್ ಫಿದಾ

ಚೆನ್ನೈ: ‘’ತಲಾ’’ ಖ್ಯಾತಿಯ ಮಹೇಂದ್ರ ಸಿಂಗ್ ಧೋನಿ (MS Dhoni) ತಮ್ಮ ಕಟ್ಟ ಕಡೆಯ ಐಪಿಎಲ್ (IPL) ಟೂರ್ನಿಗೆ ಅಭ್ಯಾಸ (Dhoni starts practice for his last IPl) ಆರಂಭಿಸಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತಂಡದ ನಾಯಕರಾಗಿರುವ 41 ವರ್ಷದ ಎಂ.ಎಸ್ ಧೋನಿ ನೆಟ್ಸ್’ನಲ್ಲಿ ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಭ್ಯಾಸದ ವೇಳೆ ಧೋನಿ ಸಿಕ್ಸರ್ ಬಾರಿಸುತ್ತಿರುವ ಶೈಲಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

2023ರ ಐಪಿಎಲ್ ಟೂರ್ನಿ ಮಹೇಂದ್ರ ಸಿಂಗ್ ಧೋನಿಯವರ ಪಾಲಿಗೆ ಕಟ್ಟ ಕಡೆಯ ಟೂರ್ನಿ. ಮುಂದಿನ ಐಪಿಎಲ್ ಟೂರ್ನಿಯ ನಂತರ ಎಲ್ಲಾ ಮಾದರಿಯ ಕ್ರಿಕೆಟ್’ನಿಂದ ಧೋನಿ ನಿವೃತ್ತಿಯಾಗಲಿದ್ದಾರೆ. ಭಾರತಕ್ಕೆ ಎರಡು ವಿಶ್ವಕಪ್’ಗಳನ್ನು ಗೆದ್ದುಕೊಟ್ಟಿರುವ ಎಂ.ಎಸ್ ಧೋನಿ 2020ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್’ಗೆ ನಿವೃತ್ತಿ ಘೋಷಿಸಿದ್ದರು. ಆದರೆ ಐಪಿಎಲ್’ನಲ್ಲಿ ಆಟ ಮುಂದುವರಿಸಿದ್ದ ಧೋನಿ 2021ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 4ನೇ ಬಾರಿ ಐಪಿಎಲ್ ಚಾಂಪಿಯನ್ ಪಟ್ಟಕ್ಕೇರಿಸಿದ್ದರು. ಆದರೆ 2022ರ ಟೂರ್ನಿಯಲ್ಲಿ ಸಿಎಸ್’ಕೆ ತಂಡ ಪ್ಲೇ ಆಫ್ ಪ್ರವೇಶಿಸುವಲ್ಲಿ ವಿಫಲವಾಗಿತ್ತು. ಇದೀಗ ತಮ್ಮ ಕೊನೆಯ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 5ನೇ ಬಾರಿ ಚಾಂಪಿಯನ್ ಪಟ್ಟಕ್ಕೇರಿಸಿ ಕ್ರಿಕೆಟ್’ಗೆ ಗುಡ್ ಬೈ ಹೇಳುವ ಲೆಕ್ಕಾಚಾರದಲ್ಲಿದ್ದಾರೆ ಎಂ.ಎಸ್ ಧೋನಿ.

ಇದನ್ನೂ ಓದಿ : Exclusive: ಬೆಂಗಳೂರಿನಲ್ಲಿ ಅಶ್ವಿನ್-ಜಡೇಜಾ ಬೌಲಿಂಗ್, ಆಸ್ಟ್ರೇಲಿಯಾ ವಿರುದ್ಧ ಭಲೇ ಜೋಡಿಯ ಮ್ಯಾಜಿಕ್ ಪಕ್ಕಾ

ಇದನ್ನೂ ಓದಿ : Mayank Agarwal Double century: ರಣಜಿ ಟ್ರೋಫಿಯಲ್ಲಿ ಕೇರಳ ವಿರುದ್ಧ ಭರ್ಜರಿ ದ್ವಿಶತಕ ಬಾರಿಸಿದ ಮಯಾಂಕ್ ಅಗರ್ವಾಲ್

ಇದನ್ನೂ ಓದಿ : Gujarat all our for 54 runs : ಟಾರ್ಗೆಟ್ 73, ಗುಜರಾತ್ 54ಕ್ಕೆ ಆಲೌಟ್; ರಣಜಿ ಟ್ರೋಫಿಯಲ್ಲೊಂದು ಅಚ್ಚರಿಯ ಫಲಿತಾಂಶ

2008ರಿಂದಲೂ ಎಂ.ಎಸ್ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕತ್ವ ವಹಿಸಿದ್ದಾರೆ. ಧೋನಿ ನಾಯಕತ್ವದಲ್ಲಿ ಆಡಿದ 13 ಟೂರ್ನಿಗಳಲ್ಲಿ ಚೆನ್ನೈ ತಂಡ 9 ಬಾರಿ ಫೈನಲ್’ಗೇರಿದ್ದು 4 ಬಾರಿ ಚಾಂಪಿಯನ್ ಪಟ್ಟಕ್ಕೇರಿದೆ. 2010ರಲ್ಲಿ ಮೊದಲ ಬಾರಿ ಪ್ರಶಸ್ತಿ ಗೆದ್ದಿದ್ದ ಸಿಎಸ್’ಕೆ ನಂತರ 2011, 2018 ಮತ್ತು 2021ರಲ್ಲಿ ಐಪಿಎಲ್ ಚಾಂಪಿಯನ್ ಆಗಿತ್ತು. ಐಪಿಎಲ್’ನಲ್ಲಿ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ 2ನೇ ಅತ್ಯಂತ ಯಶಸ್ವಿ ತಂಡ. 2013ರಿಂದ ಐದು ಬಾರಿ ಪ್ರಶಸ್ತಿ ಗೆದ್ದಿರುವ ಮುಂಬೈ ಇಂಡಿಯನ್ಸ್ ತಂಡ ಐಪಿಎಲ್’ನ ಅತ್ಯಂತ ಯಶಸ್ವಿ ತಂಡ ಎನಿಸಿದೆ.

Dhoni starts practice for his last IPl : Chennai Super Kings: Dhoni’s jabardast practice for the last IPL, fans are excited for the new style of “Tala”.

Comments are closed.